AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಕೊರೊನಾ ಬರಲಿದೆಯೇ? ಚೀನಾದ ಖ್ಯಾತ ವೈರಾಲಜಿಸ್ಟ್ ಬ್ಯಾಟ್​​ವುಮನ್ ಹೇಳಿದ್ದೇನು?

ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಶಿ ಮತ್ತು ಅವರ ತಂಡವು 40 ವಿವಿಧ ಕೊರೊನಾವೈರಸ್ ಪ್ರಭೇದಗಳ ಮೌಲ್ಯಮಾಪನವನ್ನು ನಡೆಸಿದ್ದು, ಇದರಲ್ಲಿ ಅರ್ಧದಷ್ಟು "ಅತ್ಯಂತ ಅಪಾಯಕಾರಿ" ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಆರು ಈಗಾಗಲೇ ಮಾನವರಲ್ಲಿ ರೋಗಗಳನ್ನು ಉಂಟುಮಾಡಿದೆ. ಆದರೆ ಪುರಾವೆಗಳನ್ನು ನೋಡಿದರೆ ಮೂರು ಇತರ ಪ್ರಾಣಿ ಪ್ರಭೇದಗಳಿಗೆ ಸೋಂಕು ತಗುಲಿವೆ ಎಂದು ಸೂಚಿಸಿವೆ.

ಮತ್ತೊಂದು ಕೊರೊನಾ ಬರಲಿದೆಯೇ? ಚೀನಾದ ಖ್ಯಾತ ವೈರಾಲಜಿಸ್ಟ್ ಬ್ಯಾಟ್​​ವುಮನ್ ಹೇಳಿದ್ದೇನು?
ಕೊರೊನಾವೈರಸ್
Follow us
ರಶ್ಮಿ ಕಲ್ಲಕಟ್ಟ
|

Updated on: Sep 25, 2023 | 2:24 PM

ಬೀಜಿಂಗ್ ಸೆಪ್ಟೆಂಬರ್ 25: ಪ್ರಾಣಿಗಳಿಂದ ಹುಟ್ಟುವ ವೈರಸ್‌ಗಳ ಕುರಿತು ತನ್ನ ವ್ಯಾಪಕ ಸಂಶೋಧನೆಯಿಂದಾಗಿ “ಬ್ಯಾಟ್‌ವುಮನ್” (batwoman) ಎಂದು ಪ್ರಸಿದ್ಧವಾಗಿರುವ ಚೀನಾದ ಪ್ರಮುಖ ವೈರಾಲಜಿಸ್ಟ್ (Chinese virologist) ಶಿ ಝೆಂಗ್ಲಿ (Shi Zhengli) ಆತಂಕಕಾರಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಭವಿಷ್ಯದಲ್ಲಿ ಮತ್ತೊಂದು ಕೊರೊನಾವೈರಸ್ (Coronavirus) ಬರುವ ಸಾಧ್ಯತೆಯಿದೆ ಎಂದು ತಮ್ಮ ಸಹೋದ್ಯೋಗಿಗಳೊಂದಿಗೆ ಸೇರಿ ಬರೆದ ಸಂಶೋಧನಾ ಲೇಖನದಲ್ಲಿ ಶಿ ಒತ್ತಿ ಹೇಳಿದ್ದಾರೆ. ಈ ಎಚ್ಚರಿಕೆಯ ಟಿಪ್ಪಣಿಯು ಆಕೆಯ ಪರಿಣತಿಯನ್ನು ಆಧರಿಸಿದೆ.  ಏಕೆಂದರೆ ಕೊರೊನಾವೈರಸ್ ಈ ಹಿಂದೆ 2003 ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (SARS) ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗಗಳಂತಹ ಪ್ರಮುಖ ರೋಗ ಹರಡುವಿಕೆಗೆ ಕಾರಣವಾಗಿವೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಶಿ ಮತ್ತು ಅವರ ತಂಡವು 40 ವಿವಿಧ ಕೊರೊನಾವೈರಸ್ ಪ್ರಭೇದಗಳ ಮೌಲ್ಯಮಾಪನವನ್ನು ನಡೆಸಿದ್ದು, ಇದರಲ್ಲಿ ಅರ್ಧದಷ್ಟು “ಅತ್ಯಂತ ಅಪಾಯಕಾರಿ” ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಆರು ಈಗಾಗಲೇ ಮಾನವರಲ್ಲಿ ರೋಗಗಳನ್ನು ಉಂಟುಮಾಡಿದೆ. ಆದರೆ ಪುರಾವೆಗಳನ್ನು ನೋಡಿದರೆ ಮೂರು ಇತರ ಪ್ರಾಣಿ ಪ್ರಭೇದಗಳಿಗೆ ಸೋಂಕು ತಗುಲಿವೆ ಎಂದು ಸೂಚಿಸಿವೆ.

ಮತ್ತೊಂದು ಕೊರೊನಾವೈರಸ್ ಸಂಬಂಧಿತ ಸಾಂಕ್ರಾಮಿಕ ಹೆಚ್ಚಿನ ಸಂಭವನೀಯತೆಯೊಂದಿಗೆ “ಭವಿಷ್ಯದ ಕಾಯಿಲೆಯ ಹೊರಹೊಮ್ಮುವಿಕೆ” ಬಹುತೇಕ ಖಚಿತವಾಗಿದೆ ಎಂದು ಸಂಶೋಧನೆ ಹೇಳಿದೆ. ಜನಸಂಖ್ಯೆಯ ಡೈನಾಮಿಕ್ಸ್, ಆನುವಂಶಿಕ ವೈವಿಧ್ಯತೆ, ರೋಗ ತಗಲುವ ಪ್ರಬೇಧಗಳು ಮತ್ತು ಝೂನೋಟಿಕ್ ಪ್ರಸರಣದ ಇತಿಹಾಸ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳು) ಸೇರಿದಂತೆ ವಿವಿಧ ವೈರಲ್ ಗುಣಲಕ್ಷಣಗಳ ವಿಶ್ಲೇಷಣೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ.

ಶಿ ಅವರ ಕೆಲಸದ ಸುತ್ತ ವಿವಾದ

ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಸಂಭಾವ್ಯ ಲ್ಯಾಬ್ ಸೋರಿಕೆಯಿಂದ ಕೋವಿಡ್ -19 ಹುಟ್ಟಿಕೊಂಡಿದೆ ಎಂಬ ಅನುಮಾನಗಳೊಂದಿಗೆ, ವಿಶೇಷವಾಗಿ ಕೆಲವು ಅಮೆರಿಕದ ರಾಜಕಾರಣಿಗಳಲ್ಲಿ, ಶಿ ಝೆಂಗ್ಲಿ ಅವರ ಕೆಲಸದ ಬಗ್ಗೆ ವಿವಾದವುಂಟಾಗಿತ್ತು.

ಪ್ರಯೋಗಾಲಯ-ಸೋರಿಕೆ ಸಿದ್ಧಾಂತವು ವಿವಾದಾಸ್ಪದವಾಗಿಯೇ ಉಳಿದಿದೆ, ಅನೇಕ ವಿಜ್ಞಾನಿಗಳು ವೈರಸ್ ಮಧ್ಯವರ್ತಿ ವಾಹಕ ಮೂಲಕ ಮನುಷ್ಯರಿಗೆ ಹರಡುವ ಮೊದಲು ಪ್ರಾಣಿಗಳಲ್ಲಿ, ಬಹುಶಃ ಬಾವಲಿಗಳಿಂದಾಗಿ ಹುಟ್ಟಿಕೊಂಡಿರಬಹುದು ಎಂಬ ಊಹೆಯನ್ನು ಬೆಂಬಲಿಸುತ್ತಾರೆ. ಜೂನ್‌ನಲ್ಲಿ ಬಿಡುಗಡೆಯಾದ ಡಿಕ್ಲಾಸಿಫೈಡ್ US ಗುಪ್ತಚರ ದಾಖಲೆಗಳು ಲ್ಯಾಬ್ ಸೋರಿಕೆ ಸಿದ್ಧಾಂತವನ್ನು ಬೆಂಬಲಿಸುವ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲದಿದ್ದರೂ, ಅದನ್ನು ಖಚಿತವಾಗಿ ತಳ್ಳಿಹಾಕಲಾಗುವುದಿಲ್ಲ ಎಂದು ಗಮನಿಸಿದರು.

ಇದನ್ನೂ ಓದಿ:ನೀವು ಇಂಡಿಯನ್ಸ್ ಮೂರ್ಖರು; ಸಿಂಗಾಪುರದಲ್ಲಿ ಮಹಿಳೆಯನ್ನು ನಿಂದಿಸಿದ ಚೀನಾದ ಕ್ಯಾಬ್ ಡ್ರೈವರ್

ಪ್ರತ್ಯೇಕವಾಗಿ, ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಅನಾಮಧೇಯ ವಿಜ್ಞಾನಿಯೊಬ್ಬರು ಚೀನಾದ ಕೋವಿಡ್-19 ನಿರ್ವಹಣೆಯಲ್ಲಿ ಗ್ರಹಿಸಬಹುದಾದ ಬದಲಾವಣೆಯನ್ನು ಗಮನಿಸಿದ್ದು, ಚೀನಾದ ಅಧಿಕಾರಿಗಳು ವೈರಸ್‌ನ ಮಹತ್ವವನ್ನು ಕಡಿಮೆ ಮಾಡುತ್ತಿರಬಹುದು ಎಂದು ಸೂಚಿಸಿದ್ದಾರೆ. ಕೆಲವು ನಗರಗಳು ಸೋಂಕಿನ ಡೇಟಾವನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿವೆ. ಇದು ಸಾರ್ವಜನಿಕ ಆರೋಗ್ಯದ ಆದ್ಯತೆಗಳಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್