ಸೆಕ್ಯೂರಿಟಿ ಗಾರ್ಡ್​ ಕೆಲಸ ಕೊಡಿಸ್ತೀವಿ ಎಂದು ರಷ್ಯಾ ಯುದ್ಧದಲ್ಲಿ ಬಿಟ್ರು, ಉತ್ತರ ಪ್ರದೇಶದ ವ್ಯಕ್ತಿ ನಾಪತ್ತೆ

ರಷ್ಯಾ-ಉಕ್ರೇನ್​ ಯುದ್ಧದ ವೇಳೆ ಭಾರತೀಯರನ್ನು ಸೆಕ್ಯೂರಿಟಿ ಗಾರ್ಡ್​ಕೆಲಸ ಕೊಡಿಸುವುದಾಗಿ ಕರೆದೊಯ್ದು ಯುದ್ಧದಲ್ಲಿ ಬಿಡಲಾಯಿತು ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಕಳೆದ ವರ್ಷ ಅಜಂಗಢ ಹಾಗೂ ಮೌ ಜಿಲ್ಲೆಗಳಿಂದ ಎರಡು ಡಜನ್ ಮಂದಿ ಸೆಕ್ಯೂರಿಟಿ ಕೆಲಸಕ್ಕಾಗಿ ರಷ್ಯಾಗೆ ಹೋಗಿದ್ದರು. ರಷ್ಯಾಕ್ಕೆ ತೆರಳಿದ 13 ಜನರಲ್ಲಿ ಮೂವರು ಯುದ್ಧಭೂಮಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಜಂಗಢದ ಕನ್ಹಯ್ಯಾ ಯಾದವ್ ಮತ್ತು ಮೌವಿನ ಶ್ಯಾಮಸುಂದರ್ ಮತ್ತು ಸುನೀಲ್ ಯಾದವ್ ಪ್ರಾಣ ಕಳೆದುಕೊಂಡಿದ್ದಾರೆ.

ಸೆಕ್ಯೂರಿಟಿ ಗಾರ್ಡ್​ ಕೆಲಸ ಕೊಡಿಸ್ತೀವಿ ಎಂದು ರಷ್ಯಾ ಯುದ್ಧದಲ್ಲಿ ಬಿಟ್ರು, ಉತ್ತರ ಪ್ರದೇಶದ ವ್ಯಕ್ತಿ ನಾಪತ್ತೆ
ರಷ್ಯಾ ಯುದ್ಧ
Image Credit source: cfr.org

Updated on: Jan 20, 2025 | 8:59 AM

ಉಕ್ರೇನ್-ರಷ್ಯಾ ಯುದ್ಧ ನಡೆದು ಮೂರು ವರ್ಷಗಳು ಕಳೆದಿವೆ, ಆದರೆ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅಚ್ಚರಿ ಎಂದರೆ ನೂರಾರು ಮೈಲು ದೂರದಲ್ಲಿ ನಡೆಯುತ್ತಿರುವ ಈ ಯುದ್ಧವೂ ಉತ್ತರ ಪ್ರದೇಶಕ್ಕೆ ಸಂಬಂಧಿಸಿದೆ. ಕಳೆದ ವರ್ಷ ಅಜಂಗಢ ಹಾಗೂ ಮೌ ಜಿಲ್ಲೆಗಳಿಂದ ಎರಡು ಡಜನ್ ಮಂದಿ ಸೆಕ್ಯೂರಿಟಿ ಕೆಲಸಕ್ಕಾಗಿ ರಷ್ಯಾಗೆ ಹೋಗಿದ್ದರು.

ರಷ್ಯಾಕ್ಕೆ ತೆರಳಿದ 13 ಜನರಲ್ಲಿ ಮೂವರು ಯುದ್ಧಭೂಮಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇಬ್ಬರು ಯುದ್ಧದಲ್ಲಿ ಗಾಯಗೊಂಡು ಹಿಂದಿರುಗಿದ್ದಾರೆ. ಆದರೆ, ಉಳಿದ ಎಂಟು ಮಂದಿ ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಈ ಜನರಿಗೆ ರಷ್ಯಾದಲ್ಲಿ ಭದ್ರತಾ ಸಿಬ್ಬಂದಿ, ಸಹಾಯಕರು ಮತ್ತು ಅಡುಗೆಯವರಂತೆ ಕೆಲಸ ನೀಡಲಾಗುವುದು ಮತ್ತು ಪ್ರತಿ ತಿಂಗಳು 2 ಲಕ್ಷ ರೂ.ಗಳ ಭರವಸೆ ನೀಡಲಾಯಿತು, ಆದರೆ ಪ್ರತಿಯಾಗಿ ಅವರನ್ನು ಬಲವಂತವಾಗಿ ಯುದ್ಧಭೂಮಿಗೆ ಕಳುಹಿಸಲಾಯಿತು. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಜಂಗಢದ ಕನ್ಹಯ್ಯಾ ಯಾದವ್ ಮತ್ತು ಮೌವಿನ ಶ್ಯಾಮಸುಂದರ್ ಮತ್ತು ಸುನೀಲ್ ಯಾದವ್ ಪ್ರಾಣ ಕಳೆದುಕೊಂಡಿದ್ದಾರೆ.

ಅಜಂಗಢದ ರಾಕೇಶ್ ಯಾದವ್ ಮತ್ತು ಮೌವಿನ ಬ್ರಿಜೇಶ್ ಯಾದವ್ ಯುದ್ಧದಲ್ಲಿ ಗಾಯಗೊಂಡು ಈಗ ಮನೆಗೆ ಮರಳಿದ್ದಾರೆ. ಏತನ್ಮಧ್ಯೆ, ವಿನೋದ್ ಯಾದವ್, ಯೋಗೇಂದ್ರ ಯಾದವ್, ಅರವಿಂದ್ ಯಾದವ್, ರಾಮಚಂದ್ರ, ಅಜರುದ್ದೀನ್ ಖಾನ್, ಹುಮೇಶ್ವರ್ ಪ್ರಸಾದ್, ದೀಪಕ್ ಮತ್ತು ಧೀರೇಂದ್ರ ಕುಮಾರ್ ಎಂಬ ಎಂಟು ಜನರ ಸುದ್ದಿ ಇಲ್ಲ. ಅವರ ಬಗ್ಗೆ ತಿಳಿಯಲು ಕುಟುಂಬ ಸದಸ್ಯರು ಇನ್ನೂ ಕಾಯುತ್ತಿದ್ದಾರೆ.

ಮತ್ತಷ್ಟು ಓದಿ: ನಾನು ಯುಕ್ರೇನ್ ಯುದ್ಧ ಕೊನೆಗೊಳಿಸುತ್ತೇನೆ, ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಘೋಷಣೆ

ಅಜಂಗಢ ಜಿಲ್ಲೆಯ ಖೋಜಾಪುರ ಗ್ರಾಮದಲ್ಲಿ ಯೋಗೇಂದ್ರ ಯಾದವ್ ಅವರ ತಾಯಿ, ಪತ್ನಿ ಮತ್ತು ಮಕ್ಕಳು ಆಘಾತಕ್ಕೊಳಗಾಗಿದ್ದಾರೆ. ಯೋಗೇಂದ್ರ ಯಾದವ್ ಅವರ ಕಿರಿಯ ಸಹೋದರ ಆಶಿಶ್ ಯಾದವ್, “ಮೌವಿನಲ್ಲಿರುವ ಏಜೆಂಟ್ ವಿನೋದ್ ಯಾದವ್ ನನ್ನ ಸಹೋದರನನ್ನು ಬಲೆಗೆ ಬೀಳಿಸಿದ್ದಾರೆ, ಅವರು ಭದ್ರತಾ ಸಿಬ್ಬಂದಿ ಹುದ್ದೆಗೆ ಕೆಲಸ ಎಂದು ಹೇಳಿದರು, ಆದರೆ ಅವರನ್ನು ರಷ್ಯಾದ ಗಡಿಗೆ ಕಳುಹಿಸಲಾಗಿದೆ” ಎಂದು ಹೇಳಿದರು.

ತನ್ನ ಸಹೋದರ ಜನವರಿ 15, 2024 ರಂದು ಮೂವರು ಏಜೆಂಟ್‌ಗಳಾದ ವಿನೋದ್, ಸುಮಿತ್ ಮತ್ತು ದುಶ್ಯಂತ್ ಅವರೊಂದಿಗೆ ಮನೆಯಿಂದ ಹೊರಟಿದ್ದಾಗಿ ಅವರು ಹೇಳಿದರು. ರಷ್ಯಾ ತಲುಪಿದ ಬಳಿಕ ಸಹೋದರನಿಗೆ ಬಲವಂತವಾಗಿ ತರಬೇತಿ ನೀಡಿ ನಂತರ ಸೇನೆಗೆ ಸೇರಿಸಿಕೊಳ್ಳಲಾಗಿದೆ ಎಂದು ಯಾದವ್ ಹೇಳಿದ್ದಾರೆ. ಅವರು ತಮ್ಮ ಸಹೋದರನನ್ನು ಪತ್ತೆಹಚ್ಚಲು ಮಧ್ಯಪ್ರವೇಶಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದರು, “ನಾವು ಮೇ 2024 ರಲ್ಲಿ ಕೊನೆಯದಾಗಿ ಅವರೊಂದಿಗೆ ಮಾತನಾಡಿದ್ದೇವೆ.

ಏಜೆಂಟರೊಬ್ಬರು ಹೆಚ್ಚಿನ ಸಂಬಳದ ಉದ್ಯೋಗದ ಆಮಿಷವೊಡ್ಡಿ ತನ್ನ ಮಗನನ್ನು ಕೊಂಡೊಯ್ದಿರುವ ಬಗ್ಗೆ ಅಜಂಗಢ ಗುಲಾಮಿ ಕಾ ಪುರದ ಅಜರುದ್ದೀನ್ ಖಾನ್ ತಾಯಿ ನಸ್ರೀನ್ ಕಣ್ಣೀರು ಹಾಕಿದ್ದಾರೆ. ಕಳೆದ ಹತ್ತು ತಿಂಗಳಿಂದ ಅವರ ಜತೆ ಮಾತನಾಡಿಲ್ಲ ಎಂದರು. ಅಜರುದ್ದೀನ್ ಖಾನ್ ಅವರ ಕುಟುಂಬದ ಮುಖ್ಯ ಆಧಾರಸ್ತಂಭ ಈತ.

ಅಜರುದ್ದೀನ್ ಅವರ ತಂದೆ ತನ್ನ ಮಗ ರಷ್ಯಾದ ಸೈನ್ಯಕ್ಕೆ ಸೇರುವ ಬಗ್ಗೆ ತಿಳಿದಾಗ, ಅವರು ಏಪ್ರಿಲ್ 1 ರಂದು ಪಾರ್ಶ್ವವಾಯುವಿಗೆ ಒಳಗಾಗಿದ್ದರು ಮತ್ತು ಏಳು ದಿನಗಳ ನಂತರ ಏಪ್ರಿಲ್ 8 ರಂದು ನಿಧನರಾದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:59 am, Mon, 20 January 25

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us