ಲಾರ್ ಸೆಟಾರ್ (Alor Setar, Kedah, Malaysia): ನಮ್ಮಲ್ಲಿ ಭರ್ಜರಿ ಊಟ ಮಾಡ್ಬಿಟ್ಟು ನಿದ್ದೆಗೆ ಜಾರಿದರೆ ಹೆಬ್ಬಾವಿನಂತೆ (python) ಬಿದ್ದುಕೊಂಡಿದ್ದಾರೆ ನೋಡಿ ಎಂದು ತಮಾಷೆ ಮಾಡುತ್ತಾರೆ. ಆದರೆ ಇದು ವಾಸ್ತವದಲ್ಲಿಯೂ ಸಾದರ ಪಟ್ಟಿದೆ. 140 ಕೆಜಿ ತೂಕದ ಹೆಬ್ಬಾವೊಂದನ್ನು ಹತ್ತಾರು ಮಂದಿ ಸಾಹಸಪಟ್ಟು, ಬಹಳ ಶ್ರಮವಹಿಸಿ, ಜೋಪಾನವಾಗಿ ಹಿಡಿದಿದ್ದಾರೆ. ಮೇಕೆ ಕೊಟ್ಟಿಗೆಯಲ್ಲಿ ಪತ್ತೆಯಾದ ಹೆಬ್ಬಾವನ್ನು ಹಿಡಿಯಲಾಗಿದೆ. ದೊಡ್ಡ ಮೇಕೆಯನ್ನು (goat) ಗುಳುಂ ಸ್ವಾಹಾ ಮಾಡಿದ ಹೆಬ್ಬಾವು ಒಡ್ಲಾಡುತ್ತಾ, ಕೊನೆಗೆ ಚಲನರಹಿತವಾಗಿದೆ. ಮಲೇಷ್ಯಾದ (Malaysia) ನಾಗರಿಕ ರಕ್ಷಣಾ ಪಡೆಗೆ (Civil Defence Force -APM) ಕೊನೆಗೂ ಆ 7 ಮೀ ಉದ್ದನೆಯ ಸರೀಸೃಪವನ್ನು ಹಿಡಿಯಲು ಸಾಧ್ಯವಾಗಿದೆ. ಇಲ್ಲಿನ ಕಂಪುಂಗ್ ಗೌರ್ ಬಟು ಹಿಟಮ್‌ನಲ್ಲಿ (Kampung Guar Batu Hitam) ದೊಡ್ಡ ಹೆಬ್ಬಾವು ಇದೆ ಎಂಬ ಮಾಹಿತಿ ಬಂದ ಮೇಲೆ ಸ್ಥಳಕ್ಕೆ ತೆರಳಿ, ಸಾಹಸದಿಂದ ಜೀವಂತವಾಗಿ ಹಿಡಿಯಲಾಯಿತು ಎಂದು ಕುಬಾಂಗ್ ಪಾಸು ಸಿವಿಲ್ ಡಿಫೆನ್ಸ್ ಫೋರ್ಸ್ ಗುರುವಾರ (ಅಕ್ಟೋಬರ್ 19) ಹೇಳಿಕೆಯೊಂದರಲ್ಲಿ ತಿಳಿಸಿದೆ.
ಹೆಬ್ಬಾವು ವಿಷಕಾರಿಯಲ್ಲದಿದ್ದರೂ, ಇದನ್ನು ವಿಶ್ವದ ಅತ್ಯಂತ ಪ್ರಮಾದಕರ ಮತ್ತು ಭಯಂಕರ ಹಾವು ಎಂದು ಪರಿಗಣಿಸಲಾಗಿದೆ. ಈ ಉರಗ ತನ್ನ ಬೇಟೆಯನ್ನು ಹಿಡಿದುಬಿಟ್ಟರೆ ಅದನ್ನು ಸಾಯಿಸದೆ ಬಿಡದು. ಮಲೇಷ್ಯಾದ ಕೇಡಾದಿಂದ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ. 23 ಅಡಿ ಉದ್ದದ ಹೆಬ್ಬಾವು ಮೇಕೆಯೊಂದನ್ನು ಜೀವಂತವಾಗಿ ನುಂಗಿತು. ಆದರೆ ಇದಾದ ನಂತರ ಹೆಬ್ಬಾವು ಕದಲದ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು.
ವರದಿಯ ಪ್ರಕಾರ, ಸುಮಾರು 140 ಕಿಲೋ ತೂಕದ ಈ ಹೆಬ್ಬಾವು ಸುತ್ತಮುತ್ತ ಪ್ರದೇಶದಲ್ಲಿ ಭೀತಿಯನ್ನು ಸೃಷ್ಟಿಸಿತ್ತು. ಕೊನೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಅದನ್ನು ಎಚ್ಚರಿಕೆಯಿಂದ ಹಿಡಿದು ಕಟ್ಟಿ ಹಾಕಿದರು. ಮೈಕ್ರೊ ಬ್ಲಾಗಿಂಗ್ ಸೈಟ್ ನಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ ಹೆಬ್ಬಾವು ಉದ್ದೋ ಉದ್ದ ತುಂಬಾ ಭಯಾನಕವಾಗಿದೆ.
ಮತ್ತಷ್ಟು ಓದಿ: ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು
ಸಜೀವ ಹಾವು ತಿರುಗಾಡುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಈ ಮಹಿಳೆ ತನ್ನ ಮನೆಯ ಸಮೀಪದ ಆವರಣದಲ್ಲಿರುವಾಗ ಕೊಂಡಚಿಲುವಾ ದಾಳಿ ನಡೆಸಿದ್ದಾಳೆ ಎಂದು ಹೇಳಲಾಗಿದೆ. ಆದರೆ ಅದನ್ನು ನೋಡಿದ ಕೂಡಲೇ ಕೊಂಡಚಿಲುವ ಅದರ ಮೇಲೆ ದಾಳಿ ಮಾಡಿತು.ಕೊಂಡಚೀಲುವು ಸಂಪೂರ್ಣವಾಗಿ ಚಲಿಸಲು ಸಾಧ್ಯವಾಗದ ಕಾರಣ ಅದನ್ನು ಹಿಡಿಯಲು ಶಾಖೆಯು ಸಾಕಷ್ಟು ಪ್ರಯತ್ನ ಮಾಡಬೇಕಾಯಿತು. ಕೊಂಡಚೀಲುವನ್ನು 25 ನಿಮಿಷಗಳಲ್ಲಿ ನಿಯಂತ್ರಿಸಲಾಯಿತು. ಕಾಡಿಗೆ ಬಿಡುವ ಮೊದಲು ಕೊಂಡಚಿಲುವಾವನ್ನು ಪೆನಿನ್ಸುಲರ್ ಮಲೇಷ್ಯಾ ವನ್ಯಜೀವಿ ಇಲಾಖೆ, ರಾಷ್ಟ್ರೀಯ ಉದ್ಯಾನವನಗಳಿಗೆ ಹಸ್ತಾಂತರಿಸಲಾಯಿತು.
ಆದರೆ, ಹೆಬ್ಬಾವುಗಳಲ್ಲಿ ಇದು ಅತ್ಯಂತ ಅಪಾಯಕಾರಿ ಪ್ರಭೇದ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಅವು ಮನುಷ್ಯರನ್ನೂ ಸ್ವಾಹಾ ಮಾಡುತ್ತವೆ ಎಂದು ಹೇಳಲಾಗುತ್ತದೆ. ಹಾವುಗಳಲ್ಲಿ ಇದು ಅತ್ಯಂತ ಉದ್ದದ ಜಾತಿಯ ಹಾವು ಎಂದು ಹೇಳಲಾಗುತ್ತದೆ. ಇಂತಹ ಹೆಬ್ಬಾವುಗಳು ಹೆಚ್ಚಾಗಿ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತವೆ ಎಂದು ಹೇಳಲಾಗುತ್ತದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ