ಜಪಾನ್​ನಲ್ಲಿ ರಾಮಭಕ್ತಿ ಮೆರೆದ ಕನ್ನಡಿಗರು, ಸೊಗಸಾದ ರಾಮಾಯಣ ರೂಪಕ

|

Updated on: Jan 21, 2024 | 3:47 PM

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಪಾನಿನಲ್ಲಿರುವ ಕನ್ನಡಿಗರು ಕೂಡ ರಾಮ ಭಕ್ತಿ ಮೆರೆದಿದ್ದಾರೆ. ಜಪಾನಿನ ಭಾರತೀಯ ವಿದೇಶಾಂಗ ರಾಯಭಾರ ಕಚೇರಿಯಲ್ಲಿ ಇಂದು ರಾಮಾಯಣ ರೂಪಕವನ್ನು ಜಪಾನಿನಲ್ಲಿರುವ ಕನ್ನಡಿಗರು ಪ್ರದರ್ಶಿಸಿದರು.

ಅಯೋಧ್ಯೆ(Ayodhya)ಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಪಾನಿನಲ್ಲಿರುವ ಕನ್ನಡಿಗರು ಕೂಡ ರಾಮ ಭಕ್ತಿ ಮೆರೆದಿದ್ದಾರೆ. ಜಪಾನಿನ ಭಾರತೀಯ ವಿದೇಶಾಂಗ ರಾಯಭಾರ ಕಚೇರಿಯಲ್ಲಿ ಇಂದು ರಾಮಾಯಣ ರೂಪಕವನ್ನು ಜಪಾನಿನಲ್ಲಿರುವ ಕನ್ನಡಿಗರು ಪ್ರದರ್ಶಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಜಪಾನಿನಲ್ಲಿರುವ ಭಾರತೀಯ ವಿದೇಶಾಂಗ ರಾಯಭಾರ ಕಚೇರಿಯ ಅಂಬಾಸಿಡರ್ ಆದ ಶಿಬಿ ಜಾರ್ಜ್ ಅವರು, ಜಿ 20ಯ ಮುಖ್ಯ ವಿಷಯವು ವಸುದೈವ ಕುಟುಂಬಕಮ್ ಆಗಿದ್ದು ಅದರಂತೆ ಭಾರತದ ಎಲ್ಲ ಸಾಂಸ್ಕೃತಿಕ ಕಲೆಗಳಾದ

ಕಥಕ್, ಭರತನಾಟ್ಯ, ಮೋಹಿನಿಯಾಟ್ಟಂ, ಕುಚುಪಡಿ ಎಲ್ಲವೂ ವಿವಿಧತೆಯಲ್ಲಿ ಏಕತೆಯನ್ನು ತೋರಿಸುವಲ್ಲಿ ಸಹಾಯಕವಾಗಿದೆ. ಅದಕ್ಕೆ ಪೂರಕವಾಗಿ ನಮ್ಮಲ್ಲಿ ಎರಡು ಬಹುಮುಖ್ಯವಾದ ರಾಮಾಯಣ ಮತ್ತು ಮಹಾಭಾರತದ ಗ್ರಂಥಗಳು ಇವೆ ಎಂದರು.

ಮತ್ತಷ್ಟು ಓದಿ: Ram Mandir Inauguration: ರಾಮಲಲ್ಲಾ ಪ್ರಾಣಪ್ರತಿಷ್ಠೆ ದಿನ ಒಪಿಡಿ ಸೇವೆಗಳು ಮುಂದುವರೆಯುತ್ತೆ, ರಜೆ ಆದೇಶ ಹಿಂಪಡೆದ ಏಮ್ಸ್​

ಕಾರ್ಯಕ್ರಮದಲ್ಲಿ ಮಕ್ಕಳು ರಾಮನು ಪಿತೃ ವಾಕ್ಯ ಪರಿಪಾಲನೆಗಾಗಿ ಕಾಡಿಗೆ ಹೋಗುವಲ್ಲಿಂದ ಶುರುವಾಗಿ ರಾವಣನ ವಧೆ ಹಾಗೂವಿಭೀಷಣ ಪಟ್ಟಾಭಿಷೇಕ ದ ವರೆಗಿನ ರಾಮಾಯಣವನ್ನು ಮಕ್ಕಳು ವಿಭಿನ್ನ ರೀತಿಯಲ್ಲಿ ಪ್ರದರ್ಶನ ನೀಡಿದರು.
ಇದರ ಜೊತೆಗೆ ಕರ್ನಾಟಕದ ಪ್ರಸಿದ್ದ ಕಲೆ ಹುಲಿವೇಷವನ್ನು ಕನ್ನಡಿಗರು ಪ್ರಸ್ತುತ ಪಡಿಸಿದರು. ಅದರ ಜೊತೆಗೆ ರಾಮಾಯಣದ ಸಂಪೂರ್ಣ ಕನ್ನಡ ಶ್ಲೋಕ ಹಾಗು ರಾಮನ ಕುರಿತಾದ ಹಾಡನ್ನು ಪ್ರಸ್ತುತ ಪಡಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಕಲಾ ಬೊಳ್ಳಾಜೆ ಮತ್ತು ಅಮೋಗಾದಿತ್ಯ ನಿರ್ವಹಿಸಿದರು. ಕಾರ್ಯಕ್ರಮದ ಸಂಯೋಜನೆಯನ್ನು ವಿನಯ್ ನಿರ್ವಹಿಸಿದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ