Ram Mandir Inauguration: ರಾಮಲಲ್ಲಾ ಪ್ರಾಣಪ್ರತಿಷ್ಠೆ ದಿನ ಒಪಿಡಿ ಸೇವೆಗಳು ಮುಂದುವರೆಯುತ್ತೆ, ರಜೆ ಆದೇಶ ಹಿಂಪಡೆದ ಏಮ್ಸ್​

ಅಯೋಧ್ಯೆ(Ayodhya)ಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರ(Ram Mandir)ದ ಪ್ರಾಣಪ್ರತಿಷ್ಠೆಯಂದು ಆಸ್ಪತ್ರೆಯ ಒಪಿಡಿಗಳು ತೆರೆದಿರಲಿವೆ ಎಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(AIIMS)ಹೇಳಿದ್ದು, ರಜೆ ಆದೇಶವನ್ನು ಹಿಂಪಡೆದಿದೆ. ರಾಮಲಲ್ಲಾ ಅವರ ಪಟ್ಟಾಭಿಷೇಕ ಸಮಾರಂಭವು ಪ್ರಧಾನಿಯವರ ಸಮ್ಮುಖದಲ್ಲಿ ಜನವರಿ 22ರಂದು ನಡೆಯಲಿದ್ದು, ಆಸ್ಪತ್ರೆಯು ಈ ಹಿಂದೆ ಮಧ್ಯಾಹ್ನ 2.30 ರವರೆಗೆ ಒಪಿಡಿ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿತ್ತು, ಆದರೆ ಈಗ ಆಸ್ಪತ್ರೆ ತನ್ನ ಆದೇಶವನ್ನು ಹಿಂಪಡೆದಿದೆ.

Ram Mandir Inauguration: ರಾಮಲಲ್ಲಾ ಪ್ರಾಣಪ್ರತಿಷ್ಠೆ ದಿನ ಒಪಿಡಿ ಸೇವೆಗಳು ಮುಂದುವರೆಯುತ್ತೆ, ರಜೆ ಆದೇಶ ಹಿಂಪಡೆದ ಏಮ್ಸ್​
ಏಮ್ಸ್​Image Credit source: India Today
Follow us
ನಯನಾ ರಾಜೀವ್
| Updated By: Digi Tech Desk

Updated on:Jan 22, 2024 | 11:28 AM

ಅಯೋಧ್ಯೆ(Ayodhya)ಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರ(Ram Mandir)ದ ಪ್ರಾಣಪ್ರತಿಷ್ಠೆಯಂದು ಆಸ್ಪತ್ರೆಯ ಒಪಿಡಿಗಳು ತೆರೆದಿರಲಿವೆ ಎಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(AIIMS)ಹೇಳಿದ್ದು, ರಜೆ ಆದೇಶವನ್ನು ಹಿಂಪಡೆದಿದೆ. ರಾಮಲಲ್ಲಾ ಅವರ ಪಟ್ಟಾಭಿಷೇಕ ಸಮಾರಂಭವು ಪ್ರಧಾನಿಯವರ ಸಮ್ಮುಖದಲ್ಲಿ ಜನವರಿ 22ರಂದು ನಡೆಯಲಿದ್ದು, ಆಸ್ಪತ್ರೆಯು ಈ ಹಿಂದೆ ಮಧ್ಯಾಹ್ನ 2.30 ರವರೆಗೆ ಒಪಿಡಿ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿತ್ತು, ಆದರೆ ಈಗ ಆಸ್ಪತ್ರೆ ತನ್ನ ಆದೇಶವನ್ನು ಹಿಂಪಡೆದಿದೆ.

ಇದರಿಂದ ನಾಳೆಯೂ ರೋಗಿಗಳು ಒಪಿಡಿ ಸೇವೆ ಪಡೆಯಬಹುದು ಎಂಬುದು ಸ್ಪಷ್ಟವಾಗಿದೆ. ಹೊಸ ಆದೇಶದಲ್ಲಿ, ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಯಾವುದೇ ರೀತಿಯ ಅನಾನುಕೂಲತೆ ಉಂಟಾಗದಂತೆ ರೋಗಿಗಳ ಆರೈಕೆಗಾಗಿ ಜನವರಿ 22 ರಂದು ಏಮ್ಸ್ ದಿನವಿಡೀ ತೆರೆದಿರುತ್ತದೆ ಎಂದು ಆಸ್ಪತ್ರೆ ತಿಳಿಸಿದೆ.

ಈ ಮೂಲಕ ನಾಳೆ ಸೋಮವಾರವೂ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯ ಹಾಗೂ ಚಿಕಿತ್ಸೆ ನೀಡಲಾಗುವುದು. ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಹಿನ್ನೆಲೆಯಲ್ಲಿ ಜನವರಿ 22 ರಂದು ಅರ್ಧ ದಿನ ರಜೆ ನೀಡಲಾಗುವುದು ಎಂದು ಆಸ್ಪತ್ರೆ ತನ್ನ ಹಿಂದಿನ ಆದೇಶದಲ್ಲಿ ತಿಳಿಸಿತ್ತು. ಆದರೆ ಈಗ ಈ ನಿರ್ಧಾರವನ್ನು ಹಿಂಪಡೆಯಲಾಗಿದೆ.

ಮತ್ತಷ್ಟು ಓದಿ: ರಾಮಸೇತು ನಿರ್ಮಾಣವಾದ ರಾಮೇಶ್ವರಂನಲ್ಲಿ ಶ್ರೀರಾಮನ ಪಾದದ ಗುರುತುಗಳಿಗೆ ಮೋದಿ ಪೂಜೆ

ಏಮ್ಸ್ ಹೊರತಾಗಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಕೂಡ ಇದೇ ನಿರ್ಧಾರ ಕೈಗೊಂಡಿತ್ತು. ದೆಹಲಿಯ ಲೋಹಿಯಾ ಆಸ್ಪತ್ರೆ ಈ ನಿರ್ಧಾರವನ್ನು ಹಿಂತೆಗೆದುಕೊಂಡಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಖಚಿತವಾದ ಮಾಹಿತಿ ಇನ್ನೂ ಹೊರಹೊಮ್ಮಿಲ್ಲ.

ಆದಾಗ್ಯೂ, ಎರಡೂ ಆಸ್ಪತ್ರೆಗಳು ಹಿಂದಿನ ನಿರ್ಧಾರದಲ್ಲೂ ತುರ್ತು ಸೇವೆಗಳನ್ನು ಒದಗಿಸುವ ಬಗ್ಗೆ ಮಾತನಾಡಿದ್ದವು. ರಾಮ ಮಂದಿರದ ಆಚರಣೆಯ ವಿಚಾರಕ್ಕೆ ಬಂದರೆ, ಮೈಸೂರಿನಿಂದ ಬಂದಿರುವ ಅರುಣ್ ಯೋಗಿರಾಜ್ ಅವರು ರಾಮಲಲ್ಲಾ ವಿಗ್ರಹವನ್ನು ಕೆತ್ತಿದ್ದಾರೆ, ರಾಮಲಲ್ಲಾ ವಿಗ್ರಹವು 51 ಇಂಚು ಎತ್ತರ ಮತ್ತು ಸುಮಾರು ಒಂದೂವರೆ ಟನ್ ತೂಕವಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:31 pm, Sun, 21 January 24