
ನ್ಯೂಯಾರ್ಕ್, ಸೆಪ್ಟೆಂಬರ್ 27: ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA)ಯಲ್ಲಿ ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಬೆಂಬಲ ವ್ಯಕ್ತವಾಗಿದೆ. ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯಲ್ಲಿ ಶಾಶ್ವತ ಸದಸ್ಯತ್ವಕ್ಕಾಗಿ ಭಾರತದ ಉಮೇದುವಾರಿಕೆಯನ್ನು ಬಲವಾಗಿ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ಭದ್ರತಾ ಮಂಡಳಿಯ ಸುಧಾರಣೆ ವೇಳೆ ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎಂದು ರಷ್ಯಾ ಒತ್ತಾಯಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತಕ್ಕೆ ರಾಜತಾಂತ್ರಿಕ ಬೆಂಬಲ ವ್ಯಕ್ತವಾಗಿದೆ. ರಷ್ಯಾದ ವಿದೇಶಾಂಗ ಸಚಿವ ಸರ್ಗೆಯ್ ಲಾವ್ರೊವ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವಕ್ಕಾಗಿ ಭಾರತದ ಉಮೇದುವಾರಿಕೆಯನ್ನು ಬಲವಾಗಿ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಜತೆಗೆ ಭದ್ರತಾ ಮಂಡಳಿಯ ಸುಧಾರಣೆ ವೇಳೆ ಜಾಗತಿಕ ದಕ್ಷಣಿದ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿದ್ತ ಸಿಗಬೇಕು ಎಂದು ಒತ್ತಾಯಿಸಿದೆ.
ಯುಎನ್ಜಿಎ ಅಧಿವೇಶನದಲ್ಲಿ ಮಾತನಾಡಿದ ಲಾವ್ರೊವ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಇಂದಿನ ರಚನೆ ಈಗಿನ ಜಾಗತಿಕ ವಾಸ್ತವವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದರು. ಸುಧಾರಣೆ ಅಗತ್ಯವಿದೆ, ಆದರೆ ಹೊಸ ಶಾಶ್ವತ ಸ್ಥಾನಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ನೀಡಬಾರದು ಎಂದು ಸ್ಪಷ್ಟಪಡಿಸಿದರು.
ಭಾರತ ಮತ್ತು ಬ್ರೆಜಿಲ್ ಜಾಗತಿಕ ಮಟ್ಟದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ದೇಶಗಳಾಗಿದ್ದು, ಇವುಗಳಿಗೆ ಶಾಶ್ವತ ಸದಸ್ಯತ್ವ ನೀಡಬೇಕು ಎಂದು ರಷ್ಯಾ ತನ್ನ ನಿಲುವನ್ನು ಪುನರುಚ್ಚರಿಸಿದೆ. ಇದೇ ವೇಳೆ ಆಫ್ರಿಕಾ ಖಂಡಕ್ಕೂ ಶಾಶ್ವತ ಪ್ರಾತಿನಿಧ್ಯ ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ಲಾವ್ರೊವ್ ತಮ್ಮ ಭಾಷಣದಲ್ಲಿ ಜರ್ಮನಿ ಮತ್ತು ಜಪಾನ್ಗೆ ಹೆಚ್ಚುವರಿ ಶಾಶ್ವತ ಸ್ಥಾನ ನೀಡುವ ಪ್ರಸ್ತಾಪವನ್ನು ರಷ್ಯಾ ಬೆಂಬಲಿಸುವುದಿಲ್ಲ ಎಂದು ಹೇಳಿದರು. ಅವರ ಪ್ರಕಾರ, ಭದ್ರತಾ ಮಂಡಳಿಯ ವಿಸ್ತರಣೆ ಜಾಗತಿಕ ದಕ್ಷಿಣದ ಪ್ರತಿನಿಧಿತ್ವವನ್ನು ಹೆಚ್ಚಿಸಬೇಕು, ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಭಾವವನ್ನು ಮತ್ತಷ್ಟು ವಿಸ್ತರಿಸಬಾರದು.
ಭಾರತದ ಶಾಶ್ವತ ಸದಸ್ಯತ್ವದ ಪ್ರಯತ್ನಕ್ಕೆ ರಷ್ಯಾ ಮಾತ್ರವಲ್ಲ, ಮಾರಿಷಸ್ ಮತ್ತು ಪೋರ್ಚುಗಲ್ ಕೂಡ ಬೆಂಬಲ ವ್ಯಕ್ತಪಡಿಸಿವೆ. ಮಾರಿಷಸ್, ಜಿ4 ಮತ್ತು L69 ರಾಷ್ಟ್ರಗಳ ನಿಲುವಿಗೆ ಬೆಂಬಲ ಸೂಚಿಸಿದ್ದು, ಜಾಗತಿಕ ವ್ಯವಹಾರಗಳಲ್ಲಿ ಭಾರತದ ರಚನಾತ್ಮಕ ಪಾತ್ರವನ್ನು ಶ್ಲಾಘಿಸಿದೆ. ಪೋರ್ಚುಗಲ್ ಕೂಡ ಭಾರತ, ಬ್ರೆಜಿಲ್ ಹಾಗೂ ಆಫ್ರಿಕಾ ರಾಷ್ಟ್ರಗಳಿಗೆ ಶಾಶ್ವತ ಪ್ರಾತಿನಿಧ್ಯ ನೀಡುವ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಮತ್ತಷ್ಟು ಓದಿ: ಯುದ್ಧದ ನಡುವೆಯೇ ಪುಟಿನ್ಗೆ ಜನಾಶೀರ್ವಾದ: ರಷ್ಯಾದ ಡುಮಾದಲ್ಲಿ 355 ಸೀಟುಗಳೊಂದಿಗೆ ‘ಯುನೈಟೆಡ್ ರಷ್ಯಾ’ಗೆ ದಾಖಲೆಯ ಸೂಪರ್-ಮೆಜಾರಿಟಿ
ಪ್ರಸ್ತುತ ಯುಎನ್ ಭದ್ರತಾ ಮಂಡಳಿಯಲ್ಲಿ ಐದು ಶಾಶ್ವತ ಸದಸ್ಯರು – ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ – ವೀಟೋ ಅಧಿಕಾರ ಹೊಂದಿದ್ದಾರೆ. ಭಾರತ ಹಲವು ವರ್ಷಗಳಿಂದ ಈ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿ ತನ್ನಂತಹ ದೊಡ್ಡ ಪ್ರಜಾಪ್ರಭುತ್ವ ಮತ್ತು ಜಾಗತಿಕ ಆರ್ಥಿಕ ಶಕ್ತಿಗಳಿಗೆ ಶಾಶ್ವತ ಸ್ಥಾನ ನೀಡಬೇಕೆಂದು ಆಗ್ರಹಿಸುತ್ತಿದೆ.
ಆದರೆ ಭದ್ರತಾ ಮಂಡಳಿಯ ರಚನೆಯಲ್ಲಿ ಬದಲಾವಣೆ ತರಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೂರನೇ ಎರಡರಷ್ಟು ಬೆಂಬಲ, ಸದಸ್ಯ ರಾಷ್ಟ್ರಗಳ ಅನುಮೋದನೆ ಮತ್ತು ಐದು ಶಾಶ್ವತ ಸದಸ್ಯರ ಒಪ್ಪಿಗೆ ಅಗತ್ಯವಾಗಿರುವುದರಿಂದ ಈ ಪ್ರಕ್ರಿಯೆ ಸುಲಭವಲ್ಲ.
ವಿಡಿಯೋ
ರಷ್ಯಾದ ಈ ಹೇಳಿಕೆಯನ್ನು ಭಾರತದ ದೀರ್ಘಕಾಲದ ಯುಎನ್ಎಸ್ಸಿ ಶಾಶ್ವತ ಸದಸ್ಯತ್ವದ ಪ್ರಯತ್ನಕ್ಕೆ ಮತ್ತೊಂದು ರಾಜತಾಂತ್ರಿಕ ಬೆಂಬಲವಾಗಿ ನೋಡಲಾಗುತ್ತಿದೆ. ಬ್ರಿಕ್ಸ್ ಮತ್ತು ಜಾಗತಿಕ ದಕ್ಷಿಣದ ರಾಷ್ಟ್ರಗಳೊಂದಿಗೆ ಭಾರತ ತನ್ನ ಸಹಕಾರವನ್ನು ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ಯುಎನ್ ಸುಧಾರಣೆ ಕುರಿತ ಚರ್ಚೆಗೆ ಈ ಬೆಳವಣಿಗೆ ಹೊಸ ಮಹತ್ವವನ್ನು ನೀಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ