Russia Ukraine Conflict | ರಷ್ಯಾದ ಮೇಲೆ ಹಲವು ರೀತಿಯ ನಿರ್ಬಂಧ ವಿಧಿಸುವುದರ ಮೂಲಕ ಯುದ್ಧದಿಂದ ಹಿಂದೆ ಸರಿಯವಂತೆ (Russia Ukraine War) ಜಾಗತಿಕ ರಾಷ್ಟ್ರಗಳು ಪ್ರಯತ್ನ ಮುಂದುವರೆಸುತ್ತಿವೆ. ಆದರೆ ಇದಕ್ಕೆ ರಷ್ಯಾ ಬಗ್ಗಿಲ್ಲ. ಬದಲಾಗಿ ಉಕ್ರೇನ್ ನಗರಗಳ ಮೇಲೆ ತನ್ನ ದಾಳಿ ಮುಂದುವರೆಸಿದೆ. ಉಕ್ರೇನ್‌ನ ಖೇರ್ಸನ್ ನಗರವನ್ನು ರಷ್ಯಾ ಪ್ರಸ್ತುತ ವಶಪಡಿಸಿಕೊಂಡಿದೆ. ಇದು ತಂತ್ರಾತ್ಮಕವಾಗಿ ಉಕ್ರೇನ್‌ಗೆ ಮುಖ್ಯವಾದ ನಗರವಾಗಿತ್ತು. ಇತ್ತ ಭಾರತ ಉಕ್ರೇನ್‌ನಲ್ಲಿರುವ ತನ್ನ ನಾಗರಿಕರನ್ನು ಕರೆತರು ‘ಆಪರೇಷನ್ ಗಂಗಾ’ ಮೂಲಕ ನಿರಂತರ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದಾರೆ. ರಷ್ಯಾ ಮೊದಲ ಬಾರಿಗೆ ತನ್ನ ಸೈನ್ಯದ ಸಾವು- ನೋವಿನ ಕುರಿತು ಮಾಹಿತಿ ನೀಡಿದೆ. ಅದು ನೀಡಿರುವ ಮಾಹಿತಿಯಂತೆ, ಉಕ್ರೇನ್‌ನಲ್ಲಿ 498 ರಷ್ಯನ್ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ. ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದಂತೆ, ಬುಧವಾರದಂದು 2,000 ಕ್ಕೂ ಹೆಚ್ಚು ನಾಗರಿಕರು (ಮಿಲಿಟರಿ ಸಿಬ್ಬಂದಿಗಳ ಸೇರಿ) ಸಾವನ್ನಪ್ಪಿದ್ದಾರೆ. ಆದರೆ ಉಕ್ರೇನ್ ರಷ್ಯನ್ ಸೈನಿಕರ ಸಾವಿನ ಪ್ರಮಾಣದ ಲೆಕ್ಕವನ್ನು ಬೇರೆಯದೇ ರೀತಿಯಲ್ಲಿ ನೀಡಿದೆ. ಆದ್ದರಿಂದ ಎರಡೂ ದೇಶಗಳ ಸಾವಿನ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ವಿಶ್ವಸಂಸ್ಥೆಯ ಪ್ರಕಾರ, ಯುದ್ಧದಲ್ಲಿ 227 ನಾಗರಿಕರು ಮೃತಪಟ್ಟಿದ್ದಾರೆ. ನಿರಾಶ್ರಿತರ ಸಂಖ್ಯೆ ಒಂದು ಮಿಲಿಯನ್ ದಾಟಿದೆ.
ಆಪರೇಷನ್ ಗಂಗಾ ಯೋಜನೆಯಡಿಯಲ್ಲಿ ಇಂದು 3726 ಭಾರತೀಯರು ಆಗಮಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಬುಕಾರೆಸ್ಟ್ನಿಂದ 8, ಸುಕೇವಾದಿಂದ 2, ಕೊಸೈಸ್ನಿಂದ 1, ಬುಡಾಪೆಸ್ಟ್ನಿಂದ 5, ರೊಮೇನಿಯಾದಿಂದ 3 ವಿಮಾನಗಳಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ದ ಹಿನ್ನೆಲೆಯಲ್ಲಿ ರಷ್ಯಾದಲ್ಲಿದ್ದ ವಿದ್ಯಾರ್ಥಿಗಳು ಕೂಡ ಭಾರತಕ್ಕೆ ಮರಳುತ್ತಿದ್ದಾರೆ. ಎರಡನೆ ಬ್ಯಾಚ್ ನಲ್ಲಿ 04 ಜನ ವಿದ್ಯಾರ್ಥಿಗಳು ವಾಪಸ್ಸಾಗಿದ್ದು, ಮುಂಜಾಗ್ರತಾ ಕ್ರಮವಾಗಿ ತವರಿಗೆ ಮರಳುತ್ತಿರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ರಾಯಭಾರ ಕಚೇರಿಯ ಅಧಿಕಾರಿಗಳ ಸೂಚನೆಯಂತೆ ಕನ್ನಡಿಗ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ವಿದ್ಯಾರ್ಥಿಗಳು ಕೋಲಾರ ಬೆಂಗಳೂರು ಮತ್ತು ದಾವಣಗೆರೆ ಮೂಲದವರಾಗಿದ್ದಾರೆ. ಸೂರಜ್, ಭರತ್, ನಿಧಿಶ್ರೀ, ಪುಷ್ವಂತಗೌಡ ಬೆಂಗಳೂರಿಗೆ ಆಗಮಿಸಿದ ವಿದ್ಯಾರ್ಥಿಗಳಾಗಿದ್ದಾರೆ.
ಖಾರ್ಕಿವ್‌ನಲ್ಲಿ ಭಾರತದ ವಿದ್ಯಾರ್ಥಿ ಸಾವು ವಿಚಾರಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರಷ್ಯಾವು, ಉಕ್ರೇನ್ ವಿದ್ಯಾರ್ಥಿಗಳನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಈ ಕುರಿತು ರಿಪಬ್ಲಿಕ್ ವರದಿ ಮಾಡಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ನಡುವೆಯೇ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತೇವೆ ಎಂದು ರಷ್ಯಾ ವಿದೇಶಾಂಗ ಇಲಾಖೆ ಸಚಿವ ಸೆರ್ಗೆ ಲಾವ್ರೊವ್ ಹೇಳಿಕೆ ನೀಡಿದ್ದಾರೆ.
ವರ್ಚುವಲ್ ಮೂಲಕ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಇಂಡೋ ಫೆಸಿಫಿಕ್ನಲ್ಲಿ ಉಕ್ರೇನ್ ಮೇಲೆ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯಾ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ನೆಲೆಸಬೇಕು. ಈ ವಿಚಾರವಾಗಿ ಕ್ವಾಡ್ ಗಮನಹರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಮಾತನಾಡಿದ್ದಾರೆ.
ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆ ಇಟ್ಟುಕೊಂಡಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಚೀನಾದವರನ್ನೂ ಉಕ್ರೇನ್ ಒತ್ತೆ ಇಟ್ಟುಕೊಂಡಿದೆ. ಒತ್ತೆ ಇಟ್ಟುಕೊಂಡ ಬಗ್ಗೆ ರಷ್ಯಾ ಬಳಿ ಸಾಕ್ಷ್ಯಾಧಾರವಿದೆ. ವಿದೇಶಿಯರು ಸುರಕ್ಷಿತ ಸ್ಥಳಕ್ಕೆ ತೆರಳುವುದಕ್ಕೆ ರಷ್ಯಾ ಅವಕಾಶ ನೀಡಿದೆ. ಆದ್ರೆ ಸುರಕ್ಷಿತ ಸ್ಥಳಕ್ಕೆ ತೆರಳಲು ಉಕ್ರೇನ್ ಅವಕಾಶ ನೀಡ್ತಿಲ್ಲ. ಖಾರ್ಕಿವ್‌ನಲ್ಲಿ 3000 ಭಾರತೀಯ ವಿದ್ಯಾರ್ಥಿಗಳ ಒತ್ತೆ ಇಟ್ಟುಕೊಳ್ಳಲಾಗಿದೆ. ಸುಮಿ ನಗರದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಒತ್ತೆ ಎಂದು ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಗಂಭೀರ ಆರೋಪ ಮಾಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು ರಷ್ಯಾ ದಾಳಿಗೆ ಉಕ್ರೇನ್‌ನಿಂದ ಕೌಂಟರ್ ಅಟ್ಯಾಕ್ ಮಾಡಿದೆ. ಉಕ್ರೇನ್ ಕೀವ್ನಲ್ಲಿ ರಷ್ಯಾದ ಕ್ರೂಸ್ ಕ್ಷಿಪಣಿ ಹೊಡೆದುರುಳಿಸಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆ ರಷ್ಯಾದ ಮೇಲೆ ಅಮೆರಿಕ ಮತ್ತಷ್ಟು ನಿರ್ಬಂಧ ಹೇರಿದೆ. ಪ್ರಯಾಣ ನಿಷೇಧ ಸೇರಿ ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧ ಹೇರಿದೆ.
ನೇರವಾಗಿ ರಷ್ಯಾ ಅಧ್ಯಕ್ಷ ಪುಟಿನ್ ಜತೆ ಮಾತಾಡಬೇಕು. ಪುಟಿನ್ ಜತೆ ಮಾತಾಡಿದ್ರೆ ಮಾತ್ರ ಈ ಯುದ್ಧ ನಿಲ್ಲುತ್ತೆ. ಅದೊಂದೇ ಯುದ್ಧ ನಿಲ್ಲಿಸಲು ಇರುವ ಏಕೈಕ ಮಾರ್ಗ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಭಿಪ್ರಾಯ ಪಟ್ಟಿದ್ದಾರೆ.
ಉಕ್ರೇನ್‌ನ ಚೆರ್ನಿಹಿವ್‌ನಲ್ಲಿ ರಷ್ಯಾ ದಾಳಿಯಿಂದ 22 ನಾಗರಿಕರ ಸಾವು. 22 ನಾಗರಿಕರ ಹತ್ಯೆ ಬಗ್ಗೆ ಉಕ್ರೇನ್ ಮಾಧ್ಯಮಗಳ ವರದಿ. ಇನ್ನು ಮತ್ತೊಂದೆಡೆ ಜೀವ ಉಳಿಸಿಕೊಳ್ಳಲು ಜನ ಉಕ್ರೇನ್ ತೊರೆಯುತ್ತಿದ್ದಾರೆ. ಉಕ್ರೇನ್ ನಿರಾಶ್ರಿತರಿಗೆ ಯುರೋಪಿಯನ್ ಒಕ್ಕೂಟ ರಕ್ಷಣೆ ನೀಡಲು ಮುಂದಾಗಿದೆ. ನಿರಾಶ್ರಿತರಿಗೆ ತಾತ್ಕಾಲಿಕ ರಕ್ಷಣೆ ನೀಡುವುದಾಗಿ EU ಘೋಷಿಸಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಗುರುವಾರ ಫ್ರೆಂಚ್ ನಾಯಕ ಎಮ್ಯಾನುಯೆಲ್ ಮ್ಯಾಕ್ರೋನ್ ಜೊತೆ ಕರೆ ಮೂಲಕ ಚರ್ಚೆ ನಡೆಸಿದ್ದು ಚರ್ಚೆ ವೇಳೆ ರಷ್ಯಾ ತನ್ನ ಗುರಿಯನ್ನ ಸಾಧಿಸಿಯೇ ತೀರುತ್ತದೆ ಎಂದು ತಿಳಿಸಿದ್ದಾರೆ. ಉಕ್ರೇನ್‌ನಲ್ಲಿ ಏನಿದ್ದರೂ ತನ್ನ ಮಿಲಿಟರಿ ಹಸ್ತಕ್ಷೇಪದ ಗುರಿಗಳನ್ನು ರಷ್ಯಾ ಸಾಧಿಸುತ್ತದೆ ಎಂದು ಹೇಳಿದ್ದಾರೆ.
ಉಕ್ರೇನ್, ರಷ್ಯಾ ನಿಯೋಗದ ಶಾಂತಿ ಮಾತುಕತೆ ಆರಂಭವಾಗಿದ್ದು ಬೆಲಾರಸ್-ಪೋಲೆಂಡ್ ಗಡಿಯಲ್ಲಿ ಎರಡನೇ ಸುತ್ತಿನ ರಷ್ಯಾ, ಉಕ್ರೇನ್ ಶಾಂತಿ ಮಾತುಕತೆ ಮುಂದುವರೆದಿದೆ. ಸದ್ಯದ ಈ ಪರಿಸ್ಥಿತಿ ಕೊನೆಗೊಳಿಸುವ ನಿರೀಕ್ಷೆ ಇದೆ. ಡಾನ್ಬಾಸ್ನಲ್ಲಿ ಶಾಂತಿಯ ಪುನಃಸ್ಥಾಪನೆಯಾಗುತ್ತೆ ಮತ್ತು ಉಕ್ರೇನ್‌ನಲ್ಲಿರುವ ಎಲ್ಲಾ ಜನರು ಶಾಂತಿಯುತ ಜೀವನಕ್ಕೆ ಮರಳಲು ಅನುವು ಮಾಡಿಕೊಡುತ್ತಾರೆ ಎಂದು ನಾವು ಭಾವಿಸುತ್ತೇವೆ:ರಷ್ಯಾದ ವಿದೇಶಾಂಗ ಸಚಿವಾಲಯ
ಚೆರ್ನಿಹಿವ್ ದಾಳಿಯಲ್ಲಿ ರಷ್ಯಾದ 9 ಸೈನಿಕರ ಹತ್ಯೆಯಾಗಿದೆ. ರಷ್ಯಾ ಸೈನಿಕರ ಹತ್ಯೆ ಬಗ್ಗೆ ಉಕ್ರೇನ್ ಮಾಧ್ಯಮಗಳ ವರದಿ.
ಉಕ್ರೇನ್ ಮತ್ತು ರಷ್ಯಾ ನಿಯೋಗದ ಶಾಂತಿ ಮಾತುಕತೆ ಆರಂಭಗೊಂಡಿದೆ. ಬೆಲಾರಸ್ ಗಡಿಯಲ್ಲಿ ಶಾಂತಿ ಮಾತುಕತೆ ನಡೆಯುತ್ತಿದೆ.
ಉಕ್ರೇನ್‌ನಲ್ಲಿ ಕೆಟ್ಟ ದಿನಗಳು ಬರಲಿವೆ ಎಂದು ಪುಟಿನ್ಗೆ ಕರೆ ಮಾಡಿದ ಬಳಿಕ ಫ್ರಾನ್ಸ್ ಅಧ್ಯಕ್ಷ ಅಭಿಪ್ರಾಯ ಪಟ್ಟಿದ್ದಾರೆ. ಕರೆ ಮಾಡಿದ್ದಾಗ ರಷ್ಯಾ ಅಧ್ಯಕ್ಷ ಪುಟಿನ್ ಸುಳ್ಳುಗಳನ್ನ ಮ್ಯಾಕ್ರನ್ ಖಂಡಿಸಿದ್ದಾರೆ. ಪುಟಿನ್ ಉಕ್ರೇನ್ ವಶಕ್ಕೆ ಪಡೆಯುವ ಗುರಿ ಹೊಂದಿದ್ದಾರೆ. ಪುಟಿನ್ಗೆ ಕರೆ ಬಳಿಕ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಈ ಹೇಳಿಕೆ ನೀಡಿದ್ದಾರೆ.
ಉಕ್ರೇನ್, ರಷ್ಯಾ ನಿಯೋಗದ ಶಾಂತಿ ಮಾತುಕತೆಗೆ ಕ್ಷಣಗಣನೆ ಆರಂಭವಾಗಿದೆ. ಉಕ್ರೇನ್ ನಿಯೋಗ ಹೆಲಿಕಾಪ್ಟರ್ನಲ್ಲಿ ಬೆಲಾರಸ್ಗೆ ಆಗಮಿಸಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಉಕ್ರೇನ್‌ನಲ್ಲಿರುವ ರಷ್ಯಾ ನಾಗರಿಕರ ಆಸ್ತಿ ಮುಟ್ಟುಗೋಲು ಹಾಕುವ ಕಾನೂನಿಗೆ ಉಕ್ರೇನ್ ಸಂಸತ್ನಲ್ಲಿ ಅನುಮೋದನೆ ನೀಡಲಾಗಿದೆ.
ಉಕ್ರೇನ್‌ನಲ್ಲಿ ಹಾವೇರಿ ವಿದ್ಯಾರ್ಥಿ ನವೀನ್ ಸಾವು ಘಟನೆ ಸಂಬಂಧಿಸಿ ನವೀನ್ ಮೃತ ದೇಹವನ್ನು ಭಾರತಕ್ಕೆ ತರಲು ಯತ್ನಿಸ್ತಿದ್ದೇವೆ. ನಾವು ಉಕ್ರೇನ್ ರಾಯಭಾರ ಕಚೇರಿಯನ್ನ ಸಂಪರ್ಕಿಸಿದ್ದೇವೆ. ನಮ್ಮ ಸರ್ಕಾರ ನವೀನ್ ಮೃತದೇಹ ತರಲು ಯತ್ನಿಸುತ್ತಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
‘ಆಪರೇಷನ್ ಗಂಗಾ’ ಹೆಸರಲ್ಲಿ ಭಾರತೀಯರ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಸುಮಾರು 15 ಸಾವಿರ ಭಾರತೀಯರ ಏರ್‌ಲಿಫ್ಟ್‌ಗೆ ಪ್ಲ್ಯಾನ್ ಮಾಡಲಾಗಿದೆ. ಸ್ಪೆಷಲ್ ಫ್ಲೈಟ್‌ಗಳಲ್ಲಿ ಈಗಾಗಲೇ 6,200 ಜನರು ವಾಪಸ್ ಆಗಿದ್ದಾರೆ. 2 ದಿನಗಳಲ್ಲಿ 7,400 ಭಾರತೀಯರನ್ನು ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದು ‘ಆಪರೇಷನ್ ಗಂಗಾ’ ಬಗ್ಗೆ ಕೇಂದ್ರ ಸರ್ಕಾರದ ಮಾಧ್ಯಮ ಪ್ರಕಟಣೆ ತಿಳಿಸಿದೆ. ‘ಆಪರೇಷನ್ ಗಂಗಾ’ ವಿದೇಶಾಂಗ & ನಾಗರಿಕ ವಿಮಾನಯಾನ ಇಲಾಖೆ ಮಿಷನ್ ಆಗಿದ್ದು ಫೆಬ್ರವರಿ 22ರಿಂದ ಆರಂಭವಾಗಿತ್ತು.
ಉಕ್ರೇನ್‌ನ ಬಂದರು ನಗರಗಳನ್ನ ದಿಗ್ಬಂಧನ ಮಾಡಲು ಯತ್ನ ನಡೆದಿದೆ. ರಷ್ಯಾದ ಸೇನಾ ಪಡೆಗಳು ‘ದಿಗ್ಬಂಧನ’ ಮಾಡಲು ಯತ್ನಿಸ್ತಿವೆ ಎಂದು ಉಕ್ರೇನ್‌ನ ಮಾರಿಯುಪೋಲ್ ಮೇಯರ್ ತಿಳಿಸಿದ್ದಾರೆ.
ಇಂದು ಸಂಜೆ 7.30ಕ್ಕೆ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಇಂಡೋ ಫೆಸಿಫಿಕ್ನಲ್ಲಿ ಉಕ್ರೇನ್ ಮೇಲೆ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕ್ವಾಡ್ನಲ್ಲಿರುವ ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯಾ ದೇಶಗಳು.
ಇದುವರೆಗೆ 18 ಸಾವಿರ ಭಾರತೀಯರು ಉಕ್ರೇನ್ ತೊರೆದಿದ್ದಾರೆ. ಉಕ್ರೇನ್‌ನ ಪಶ್ಚಿಮ ಭಾಗದಲ್ಲಿ ಗಡಿ ದಾಟಲು ಕಾಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಉಕ್ರೇನ್ ವಿದೇಶಾಂಗ ಕಾರ್ಯದರ್ಶಿ ಜೊತೆಗೆ ಮಾತುಕತೆ ನಡೆಸಿದ್ದಾರೆ. ಭಾರತೀಯರ ಸುರಕ್ಷತೆ ತೆರವು ಕಾರ್ಯಾಚರಣೆ ಬಗ್ಗೆ ಮಾತುಕತೆ ನಡೆದಿದೆ. ಭಾರತವು ರಷ್ಯಾ- ಉಕ್ರೇನ್ ಜೊತೆಗೆ ಸಂಪರ್ಕದಲ್ಲಿದೆ. ಭಾರತೀಯರ ರಕ್ಷಣಾ ಕಾರ್ಯಾಚರಣೆಗೆ ಉಕ್ರೇನ್ ಸಹಕಾರಕ್ಕೆ ಶ್ಲಾಘನೆ. ಮುಂದಿನ 24 ಗಂಟೆಯಲ್ಲಿ 18 ವಿಮಾನಗಳು ಭಾರತಕ್ಕೆ ಬರಲಿವೆ ಎಂದು ಕೇಂದ್ರದ ವಿದೇಶಾಂಗ ಇಲಾಖೆಯ ವಕ್ತಾರ ಅರವಿಂದ್ ಬಗುಚಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಉಕ್ರೇನ್‌ನಿಂದ ವಾಪಸಾದ ವಿದ್ಯಾರ್ಥಿಗಳ ಜತೆ ಮೋದಿ ಮಾತುಕತೆ ನಡೆಸಿದ್ದಾರೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿದ್ಯಾರ್ಥಿಗಳ ಜತೆ ಮಾತನಾಡಿದ್ದು ಉಕ್ರೇನ್‌ನಲ್ಲಿನ ಅನುಭವಗಳನ್ನ ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.
Prime Minister Narendra Modi interacted with students who returned from Ukraine in Varanasi today. These students shared their experiences with him. The students were from Varanasi as well as other parts of Uttar Pradesh. pic.twitter.com/iHpACjgAqf
— ANI UP/Uttarakhand (@ANINewsUP) March 3, 2022
ರಷ್ಯಾ ಅಧ್ಯಕ್ಷ ಪುಟಿನ್ಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಕರೆ ಮಾಡಿ 90 ನಿಮಿಷ ಮಾತನಾಡಿದ್ದಾರೆ.
ಖಾರ್ಕಿವ್ನ ಪ್ರಾದೇಶಿಕ ಆಡಳಿತ ಕಚೇರಿ ಕಟ್ಟಡ ನಿಯಂತ್ರಣಕ್ಕೆ ಪಡೆದ ರಷ್ಯಾ ಸೇನಾ ಪಡೆಗಳು.
Governor of Ukraine's Kherson Region says Russian Forces have control of Regional Administration Building (in Kharkiv): Reuters #RussiaUkraineConflict
— ANI (@ANI) March 3, 2022
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಹೀಗಾಗಿ ಲಾಟ್ವಿಯಾ ದೇಶ ಉಕ್ರೇನ್‌ಗೆ 90 ಡ್ರೋನ್ ಕಳಿಸಿದೆ.
ಉಕ್ರೇನ್‌ನ ಜನವಸತಿ ಪ್ರದೇಶಗಳನ್ನ ಗುರಿಯಾಗಿಸಿ ರಷ್ಯಾ ದಾಳಿ ಮುಂದುವರೆಸಿದೆ. ಮರಿಯುಪೋಲ್ ನಗರದಲ್ಲಿ ರಷ್ಯಾದಿಂದ ಶೆಲ್ ದಾಳಿ ನಡೆಯುತ್ತಿದೆ. ಖಾರ್ಕಿವ್, ಮರಿಯುಪೋಲ್, ಕೀವ್ನಲ್ಲಿ ರಷ್ಯಾ ದಾಳಿ ನಡೆಸುತ್ತಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಸದ್ಯ ಉಕ್ರೇನ್ ದೇಶಕ್ಕೆ ವಿಶ್ವಸಂಸ್ಥೆಯಿಂದ 1.5 ಬಿಲಿಯನ್ ಡಾಲರ್ ನೆರವು ನೀಡಲಾಗಿದೆ. ತುರ್ತು ಸಹಾಯಕ್ಕಾಗಿ ಉಕ್ರೇನ್‌ಗೆ ಯುಎನ್ ನೆರವು ನೀಡಿದೆ.
ಬೇಕೆಂದಲೇ ಉಕ್ರೇನ್ ಮಾತುಕತೆ ವಿಳಂಬ ಮಾಡ್ತಿದೆ. ಉಕ್ರೇನ್ ಜೊತೆ ಶಾಂತಿ ಮಾತುಕತೆಗೆ ರಷ್ಯಾ ಸಿದ್ಧವಿದೆ. ಶಾಂತಿ ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಸಿದ್ಧವಿದೆ ಎಂದು ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಆರೋಪಿಸಿದೆ.
ಉಕ್ರೇನ್‌ನಲ್ಲಿ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಮೃತಪಟ್ಟ ಹಿನ್ನೆಲೆ ನಾಳೆ ಸಂಜೆ ನವೀನ್ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ನವೀನ್ ಪೋಷಕರಿಗೆ ಸಾಂತ್ವನ ಹೇಳಲಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದ್ದು ಡ್ನಿಪ್ರೊ ನಗರ ಉಕ್ರೇನ್ ಸೇನೆಯ ಹಿಡಿತದಲ್ಲಿದೆ.
ವಿದೇಶಾಂಗ ಇಲಾಖೆಯ ಸಮಾಲೋಚನಾ ಸಭೆ ಮುಕ್ತಾಯಗೊಂಡಿದ್ದು ಸಮಾಲೋಚನಾ ಸಭೆಯಲ್ಲಿ ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ವಿದ್ಯಾರ್ಥಿಗಳ ಏರ್‌ಲಿಫ್ಟ್ ತಡವಾಗಿ ಆರಂಭವಾಯಿತು. ಈಗ ಭಾರತೀಯರ ಏರ್‌ಲಿಫ್ಟ್ ಮಾಡಲು ನಮ್ಮ ಆದ್ಯತೆ. ಚೀನಾ, ಪಾಕಿಸ್ತಾನ ದೇಶಗಳು ರಷ್ಯಾಕ್ಕೆ ಹತ್ತಿರವಾಗುತ್ತಿವೆ. ಭಾರತ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸ್ಪಂದನೆ ವಿಳಂಬವಾಗುತ್ತಿದೆ. ಉಕ್ರೇನ್ ಬಿಟ್ಟು ಬರುವಂತೆ ನೀಡಿದ್ದ ಸಲಹೆ ಗೊಂದಲಕಾರಿಯಾಗಿದೆ ಎಂದು ಸಮಾಲೋಚನಾ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ಟ್ವೀಟ್ಗಳನ್ನು ಫೇಕ್ ಎಂದಿದ್ದಕ್ಕೆ ರಾಯಭಾರ ಕಚೇರಿ ಬಗ್ಗೆ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅಸಮಾಧಾನ ಹೊರ ಹಾಕಿದ್ದಾರೆ. ಹಾಗೂ ಸಭೆ ಅತ್ಯುತ್ತಮವಾಗಿ ನಡೆಯಿತು ಎಂದು ಶಶಿ ತರೂರ್ ತಿಳಿಸಿದ್ದಾರೆ.
ಉಕ್ರೇನ್ ಮೇಲಿನ ಯುದ್ಧವನ್ನು ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಘೋಷಣೆ ಮಾಡಿದೆ. ಈ ಬಗ್ಗೆ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿಕೆ ನೀಡಿದ್ದಾರೆ.
ಖಾರ್ಕಿವ್‌ನಲ್ಲಿ ಭಾರತದ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವು ವಿಚಾರಕ್ಕೆ ರಷ್ಯಾ ಮೊದಲ ಪ್ರತಿಕ್ರಿಯೆ ನೀಡಿದೆ. ವಿದ್ಯಾರ್ಥಿಗಳನ್ನು ಮಾನವ ಗುರಾಣಿಯಾಗಿ ಉಕ್ರೇನ್ ಬಳಸಿಕೊಳ್ಳುತ್ತಿದೆ ಎಂದು ರಷ್ಯಾ ಆರೋಪಿಸಿದೆ. ನವೀನ್ ಸಾವು ಸಂಬಂಧ ಪುಟಿನ್ ಜೊತೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆ ಚರ್ಚೆ ನಡೆದಿದ್ದು, ಭಾರತೀಯರ ಸುರಕ್ಷತೆ ಬಗ್ಗೆ ಪುಟಿನ್ ಭರವಸೆ ನೀಡಿದ್ದಾರೆ ಎಂದು ರಷ್ಯಾ ತಿಳಿಸಿದೆ.
ರಷ್ಯಾ ಸೇನೆಯ ಮೇಜರ್ ಜನರಲ್‌ರನ್ನು ಹತ್ಯೆಗೈದಿದ್ದೇವೆ ಎಂದು ಉಕ್ರೇನ್ ಮಾಹಿತಿ ನೀಡಿದೆ. ಈ ಕುರಿತು ಆಜ್ತಕ್ ವರದಿ ಮಾಡಿದೆ.
ವಿದೇಶಾಂಗ ಇಲಾಖೆಯ ಸಮಾಲೋಚನಾ ಸಭೆ ಮುಕ್ತಾಯವಾಗಿದ್ದು, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಭಾರತೀಯರ ಏರ್‌ಲಿಫ್ಟ್ ಬಗ್ಗೆ ಸರ್ವ ಸಮ್ಮತ ನಿರ್ಧಾರಕ್ಕೆ ಬರಲಾಗಿದ್ದು, ಉಕ್ರೇನ್‌ನಲ್ಲಿ ಯುದ್ಧ ಹಿನ್ನೆಲೆ ಭಾರತದ ಕಾರ್ಯತಂತ್ರ ಮತ್ತು ಮಾನವೀಯ ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಭೆ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿಕೆ ನೀಡಿದ್ದಾರೆ.
ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಉಕ್ರೇನ್‌ನಲ್ಲಿನ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಎರಡೂ ದೇಶಗಳ ಮಾತುಕತೆಯ ನಡುವೆ ನಿರೀಕ್ಷೆಗಳು ಮೂಡಿವೆ. ರಷ್ಯಾದ ಬೇಡಿಕೆಗಳು ಬಹಳ ಕಡಿಮೆಯಿವೆ ಎಂದಿರುವ ಲಾವ್ರೊವ್, ಕೀವ್ನಿಂದ ರಷ್ಯಾಗೆ ಬೆದರಿಕೆ ಉಂಟಾಗುವುದನ್ನು ಅನುಮತಿಸುವುದಿಲ್ಲ ಎಂದಿದ್ದಾರೆ. ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವಿನ ಮುಂದಿನ ಸುತ್ತಿನ ಮಾತುಕತೆಗಳು ಗುರುವಾರದ ನಂತರ ನಡೆಯಲಿವೆ ಎಂದು ರಷ್ಯಾದ ವಿದೇಶಾಂಗ ಸಚಿವರು ಬಹಿರಂಗಪಡಿಸಿದ್ದಾರೆ.
ಕಳೆದ ವಾರದಲ್ಲಿ ಸುಮಾರು 9,000 ರಷ್ಯನ್ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ‘‘ಉಕ್ರೇನ್ ರಷ್ಯಾ ಸೈನಿಕರ ದೇಹದಿಂದ ಆವೃತವಾಗುವುದನ್ನು ಬಯಸುವುದಿಲ್ಲ. ಎಲ್ಲರೂ ಮರಳಿ’’ ಎಂದು ಝೆಲೆನ್ಸ್ಕಿ ಎಚ್ಚರಿಕೆ ನೀಡಿದ್ದಾರೆ.
ಖಾರ್ಕಿವ್‌ನಲ್ಲಿ ಭಾರತದ ವಿದ್ಯಾರ್ಥಿ ಸಾವು ವಿಚಾರಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರಷ್ಯಾವು, ಉಕ್ರೇನ್ ವಿದ್ಯಾರ್ಥಿಗಳನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಈ ಕುರಿತು ರಿಪಬ್ಲಿಕ್ ವರದಿ ಮಾಡಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ನಡುವೆಯೇ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತೇವೆ ಎಂದು ರಷ್ಯಾ ವಿದೇಶಾಂಗ ಇಲಾಖೆ ಸಚಿವ ಸೆರ್ಗೆ ಲಾವ್ರೊವ್ ಹೇಳಿಕೆ ನೀಡಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದು, ಎಂಬಿಬಿಎಸ್ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ. ಸಿಎಂಗೆ ಪರಿಸ್ಥಿತಿ ವಿವರಿಸಿದ ವಿದ್ಯಾರ್ಥಿಗಳು, ಸುಮಾರು 200 ಜನರು ಸಿಲುಕಿರುವುದಾಗಿ ಮಾಹಿತಿ ನೀಡಿದ್ದಾರೆ. ಖಾರ್ಕಿವ್ನಿಂದ 20 ಕಿ.ಮೀ. ನಡೆದು ಬಂದಿರುವ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳದಲ್ಲಿದ್ದಾರೆ. ರಾಜ್ಯದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಿಎಂ ಬೊಮ್ಮಾಯಿ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಅಲ್ಲಿರುವ ನಿಮಗೆ ಎಲ್ಲಾ ಸಹಕಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸುವೆ. ನಿಮ್ಮನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ರಷ್ಯಾದ ಸುಖೋಯ್ ಎಸ್‌ಯು-30 ಯುದ್ಧ ವಿಮಾನವನ್ನು ಉಕ್ರೇನ್ ಧ್ವಂಸಗೊಳಿಸಿದೆ ಎಂದು ರಿಪಬ್ಲಿಕ್ ವರದಿ ಮಾಡಿದೆ.
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ನ ಪ್ರಬಲ ಪ್ರತಿರೋಧದ ನಡುವೆಯೂ ದಿನದಿಂದ ದಿನಕ್ಕೆ ರಷ್ಯಾ ಸೇನೆ ಮುಂದುವರೆಯುತ್ತಿದೆ. ಇದನ್ನು ಸೂಚಿಸುವ ನಕ್ಷೆ ಇಲ್ಲಿದೆ.
Advance of Russian troops.#AFPgraphics maps of Ukraine comparing areas under Russian control as of February 24 to March 2 at 2000 GMT pic.twitter.com/YcAozvV9EE
— AFP News Agency (@AFP) March 3, 2022
ಫ್ರಾನ್ಸ್ ದೇಶವು ರಷ್ಯಾದಲ್ಲಿ ವಾಸಿಸುತ್ತಿರುವ ತನ್ನ ನಾಗರಿಕರಿಗೆ ಶೀಘ್ರ ಮರಳುವಂತೆ ಸೂಚಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ದ ಹಿನ್ನೆಲೆಯಲ್ಲಿ ರಷ್ಯಾದಲ್ಲಿದ್ದ ವಿದ್ಯಾರ್ಥಿಗಳು ಕೂಡ ಭಾರತಕ್ಕೆ ಮರಳುತ್ತಿದ್ದಾರೆ. ಎರಡನೆ ಬ್ಯಾಚ್ ನಲ್ಲಿ 04 ಜನ ವಿದ್ಯಾರ್ಥಿಗಳು ವಾಪಸ್ಸಾಗಿದ್ದು, ಮುಂಜಾಗ್ರತಾ ಕ್ರಮವಾಗಿ ತವರಿಗೆ ಮರಳುತ್ತಿರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ರಾಯಭಾರ ಕಚೇರಿಯ ಅಧಿಕಾರಿಗಳ ಸೂಚನೆಯಂತೆ ಕನ್ನಡಿಗ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ವಿದ್ಯಾರ್ಥಿಗಳು ಕೋಲಾರ ಬೆಂಗಳೂರು ಮತ್ತು ದಾವಣಗೆರೆ ಮೂಲದವರಾಗಿದ್ದಾರೆ. ಸೂರಜ್, ಭರತ್, ನಿಧಿಶ್ರೀ, ಪುಷ್ವಂತಗೌಡ ಬೆಂಗಳೂರಿಗೆ ಆಗಮಿಸಿದ ವಿದ್ಯಾರ್ಥಿಗಳಾಗಿದ್ದಾರೆ.
ರಷ್ಯಾ, ಉಕ್ರೇನ್ ಯುದ್ಧದಿಂದ ನಮಗೂ ಆತಂಕ ಕಾಡುತ್ತಿದೆ. ರಾಯಭಾರ ಕಚೇರಿ ಸೂಚನೆ ಮೇರೆಗೆ ತವರಿಗೆ ಹಿಂದಿರುಗಿದ್ದೇವೆ ಎಂದು ರಷ್ಯಾದಿಂದ ಬೆಂಗಳೂರಿಗೆ ಮರಳಿದ ವಿದ್ಯಾರ್ಥಿನಿ ನಿಧಿಶ್ರೀ ಹೇಳಿಕೆ ನೀಡಿದ್ದಾರೆ. ಕಾಲೇಜಿನಿಂದ ಆನ್ಲೈನ್ ಕ್ಲಾಸ್ ಮಾಡುತ್ತಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಬರಬಾರದು ಎಂದು ತವರಿಗೆ ಮರಳಿದ್ದೇವೆ. ಯುದ್ಧದಿಂದ ರಷ್ಯಾದಲ್ಲಿ ಎಲ್ಲ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾವು ತವರಿಗೆ ಬಂದಿದ್ದೇವೆ ಎಂದು ಟಿವಿ9ಗೆ ದಾವಣಗೆರೆ ಮೂಲದ ವಿದ್ಯಾರ್ಥಿನಿ ನಿಧಿಶ್ರೀ ಹೇಳಿದ್ದಾರೆ.
ರಷ್ಯನ್ ಮತ್ತು ಬೆಲಾರಸ್ನ ಕ್ರೀಡಾಪಟುಗಳನ್ನು ಚಳಿಗಾಲದ ಪ್ಯಾರಾಲಂಪಿಕ್ಸ್ನಿಂದ ಬ್ಯಾನ್ ಮಾಡಿ ಅಂತಾರಾಷ್ಟ್ರೀಯ ಪ್ಯಾರಾಲಂಪಿಕ್ ಕಮಿಟಿ ಆದೇಶ ಹೊರಡಿಸಿದೆ.
Russian and Belarus athletes banned from Winter Paralympics: International Paralympic Committee (IPC)
— ANI (@ANI) March 3, 2022
ಖಾರ್ಕಿವ್ ಹೊರವಲಯದಲ್ಲಿರುವ ಮಲ್ಲಿನಾಥ್ ಜಾಮಗೊಂಡ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾರೆ. 2021ರ ಡಿಸೆಂಬರ್ನಲ್ಲಿ ಕಲಬುರಗಿಯಿಂದ ಖಾರ್ಕಿವ್ಗೆ ತೆರಳಿದ್ದ ಅವರು, ಅಲ್ಲಿಂದ ಪಾರಾಗಲು 12 ಕಿ.ಮೀ. ನಡೆದುಕೊಂಡು ಬಂದಿದ್ದಾರೆ. ಖಾರ್ಕಿವ್ನಿಂದ ಕಾಲ್ನಡಿಗೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಅವರು ತೆರಳಿದ್ದಾರೆ. ರೈಲು ನಿಲ್ದಾಣಕ್ಕೆ ಹೋದರೂ ಸ್ಥಳೀಯರು ರೈಲು ಹತ್ತಲು ಬಿಡುತ್ತಿಲ್ಲ. ಹೀಗಾಗಿ ಸುರಕ್ಷಿತ ಸ್ಥಳಕ್ಕೆ ಬಂದಿರುವೆ ಎಂದು ಮಲ್ಲಿನಾಥ್ ಜಾಮಗೊಂಡ ಹೇಳಿದ್ದಾರೆ. ರಾಯಭಾರ ಕಚೇರಿಯ ಅಧಿಕಾರಿಗಳು ಸಹಾಯ ಮಾಡುತ್ತಿಲ್ಲ. ದೂತಾವಾಸಕ್ಕೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲವೆಂದು ಅವರು ಅಳಲು ತೋಡಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ, ರಾಜ್ಯ ಸರ್ಕಾರಕ್ಕೆ ಮಲ್ಲಿನಾಥ್ ತಂದೆ ಅರವಿಂದ್ ಮನವಿ ಮಾಡಿದ್ದಾರೆ.
ಉಕ್ರೇನ್-ರಷ್ಯಾ ಮಧ್ಯೆ 8ನೇ ದಿನವೂ ಯುದ್ಧ ಮುಂದುವರೆದಿದ್ದು, ರಷ್ಯಾದ 9,000 ಯೋಧರನ್ನ ಹತ್ಯೆಗೈದಿದ್ದಾಗಿ ಉಕ್ರೇನ್ ಹೇಳಿಕೆ ನೀಡಿದೆ. ರಷ್ಯಾದ 217 ಟ್ಯಾಂಕರ್, 30 ಫೈಟರ್ ಜೆಟ್, 31 ಹೆಲಿಕಾಪ್ಟರ್, 91 ಆರ್ಟಿಲರಿ ಸಿಸ್ಟಂ ಧ್ವಂಸಗೊಳಿಸಿದ್ದಾಗಿ ಉಕ್ರೇನ್ ಹೇಳಿಕೊಂಡಿದ್ದಾಗಿ ವರದಿಯಾಗಿದೆ.
ಉಕ್ರೇನ ಮತ್ತು ರಷ್ಯಾ ನಡುವೆ ವಾರ್ ಹಿನ್ನೆಲೆಯಲ್ಲಿ ರಷ್ಯಾ ಯೂನಿವರ್ಸಿಟಿಗಳಲ್ಲಿದ್ದ ವಿದ್ಯಾರ್ಥಿಗಳು ತವರಿಗೆ ವಾಪಸ್ ಆಗುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಜೆ ಮೇಲೆ ಅವರು ವಾಪಸ್ ಬರುತ್ತಿದ್ದಾರೆ. ಇಂದು ರಷ್ಯಾದಿಂದ ದೆಹಲಿಗೆ ಬಂದು ದೆಹಲಿಯಿಂದ ಬೆಂಗಳೂರಿಗೆ ಐವರು ವಿದ್ಯಾರ್ಥಿಗಳ ಆಗಮಿಸಲಿದ್ದಾರೆ.
ಉಕ್ರೇನ್‌ನ ಚೆರ್ನಿಹಿವ್‌ನ ತೈಲ ಡಿಪೋ ಮೇಲೆ ರಷ್ಯಾ ದಾಳಿ ಮಾಡಿದ್ದು, ಕ್ಷಿಪಣಿ ದಾಳಿಯಿಂದ ದೊಡ್ಡ ತೈಲ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಉಕ್ರೇನ್‌ನ ಖಾರ್ಕೀವ್ನಲ್ಲಿ ಅಪಾಯದಲ್ಲಿದ್ದ ವಿದ್ಯಾರ್ಥಿಗಳು ಸುರಕ್ಷಿತ ಜಾಗಕ್ಕೆ ತೆರಳಿದ್ದಾರೆ. ಬಾಗಲಕೋಟೆಯ ಜಿಲ್ಲೆಯ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ಬಹುತೇಕ ವಿದ್ಯಾರ್ಥಿಗಳು ಸದ್ಯ ಸೇಫ್ ಆಗಿದ್ದಾರೆ. ನಿನ್ನೆ ರಾತ್ರಿ ಉಕ್ರೇನ್‌ನ ಫೇಸೋಚಿನ್ಗೆ ವಿದ್ಯಾರ್ಥಿಗಳು ತಲುಪಿದ್ದಾರೆ. ಇಂದಿಗೂ ಊಟ, ಉಪಹಾರಕ್ಕಾಗಿ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. ಫೇಸೋಚಿನ್ ಪ್ರದೇಶದ ಖಾಸಗಿ ಹೋಟೆಲ್ನಲ್ಲಿರುವ ವಿದ್ಯಾರ್ಥಿಗಳು ಮಾಹಿತಿ ನೀಡಿ, ಸದ್ಯ ಸೇಫ್ ಪ್ರದೇಶಕ್ಕೆ ಬಂದಿದ್ದೇವೆ. ಆದರೆ ಊಟ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ದೂರವಾಣಿ ಮೂಲಕ ಸಮಸ್ಯೆ ತೋಡಿಕೊಂಡಿದ್ದಾರೆ. ನಿನ್ನೆ ರಾತ್ರಿಇಂದ ಊಟ ಉಪಹಾರವಿಲ್ಲ. ಬೆಳಿಗ್ಗೆ ಉಪಹಾರ ಕೊಡ್ತೀವಿ ಎಂದು ಭಾರತೀಯ ಎಂಬಸ್ಸಿಯವರು ಹೇಳಿದ್ದರು. ಇಲ್ಲಿಯವರೆಗೆ ಊಟ ಉಪಹಾರ ಸಿಗದೇ ಬಿಸ್ಕೇಟ್ ಬ್ರೆಡ್ ತಿಂದು ಜೀವಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಖಾರ್ಕೀವ್ ನಿಂದ 20ಕಿಲೋ ಮೀಟರ್ ದೂರದಲ್ಲಿರೋ ಫೆಸೊಚಿನ್ಗೆ ನಿನ್ನೆ 20 ಕಿಮಿ ನಡೆದುಕೊಂಡೇ ಬಂದು ಫೆಸೋಚಿನ್ ಅನ್ನು ಭಾರತೀಯ ವಿದ್ಯಾರ್ಥಿಗಳು ತಲುಪಿದ್ದಾರೆ. ಸುಮಾರು 600-800 ಭಾರತೀಯ ವಿದ್ಯಾರ್ಥಿಗಳು ಖಾರ್ಕಿವ್ನಿಂದ ಫೆಸೋಚಿನ್ ತಲುಪಿ ಸುರಕ್ಷಿತರಾಗಿದ್ದಾರೆ.
ಉಕ್ರೇನ್‌ನಿಂದ ಇಬ್ಬರು ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ. ರೊಮೇನಿಯಾದಿಂದ ಮುಂಬೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಕೆ.ಆರ್.ಪುರಂ ಮೂಲದ ಆಕಾಂಕ್ಷ, ಶೋಯಬ್ ಆಗಮಿಸಿದ್ದಾರೆ. ಕೀವ್ನಲ್ಲಿ 3ನೇ ವರ್ಷದ ಎಂಬಿಬಿಎಸ್ಅನ್ನು ವಿದ್ಯಾರ್ಥಿಗಳು ಓದುತ್ತಿದ್ದರು. ಫೆಬ್ರವರಿ 23ರಂದು ರಿಸ್ಕ್ ತೆಗೆದುಕೊಂಡು ಕೀವ್ನಿಂದ ಹೊರಟಿದ್ದರು. ಅನ್ನ ನೀರಿಲ್ಲದೆ ನಡೆದುಕೊಂಡು, ಟ್ಯಾಕ್ಸಿಯಲ್ಲಿ ಗಡಿ ತಲುಪಿದ್ದರು. ರೊಮೇನಿಯಾ ಗಡಿ ತಲುಪಲು 4 ದಿನ ತೆಗೆದುಕೊಂಡಿದ್ದರು. ಇದೀಗ ತವರಿಗೆ ಮರಳಿದ ಬಳಿಕ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸಲು ಅವರು ಮನವಿ ಮಾಡಿದ್ದಾರೆ.
ಉಕ್ರೇನ್‌ಗೆ ಮತ್ತೆ 2,700 ವಾಯುವಿರೋಧಿ ಕ್ಷಿಪಣಿಯನ್ನು ಜರ್ಮನಿ ನೀಡಲಿದೆ. ಈ ಕುರಿತು ಜರ್ಮನಿ ಘೋಷಿಸಿದೆ.
Germany to deliver 2,700 further anti-air missiles to Ukraine: AFP News Agency quotes Govt Source#RussiaUkraineConflict
— ANI (@ANI) March 3, 2022
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಲ್ಲಿ ಭಾರತ ಉಕ್ರೇನ್‌ಗೆ ಮಾನವೀಯ ನೆರವು ನೀಡಲು ಮುಂದಾಗಿದೆ. ಉಕ್ರೇನ್‌ಗೆ ಔಷಧ, ಬ್ಲಾಂಕೆಟ್, ಟಾರ್ಪಾಲಿನ್, ಪರಿಹಾರ ಸಾಮಗ್ರಿ ಸೇರಿ ಇತರ ವಸ್ತುಗಳನ್ನು ದೇಶವು ರವಾನಿಸಿದೆ.
ಉಕ್ರೇನ್‌ನಿಂದ ವಿದ್ಯಾರ್ಥಿ ನವೀನ್ ಮೃತದೇಹ ತರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ‘ವಿದೇಶಾಂಗ ಇಲಾಖೆ ಮೃತದೇಹ ತರುವ ಕೆಲಸ ಮಾಡುತ್ತಿದೆ. ಜೀವಂತವಾಗಿರುವವರನ್ನೇ ಏರ್‌ಲಿಫ್ಟ್ ಮಾಡುವುದು ಕಷ್ಟ. ಸಾಧ್ಯವಾದರೆ ನವೀನ್ ಮೃತದೇಹ ತರುವ ಕೆಲಸ ಆಗಲಿದೆ. ವಿಮಾನದಲ್ಲಿ ಮೃತದೇಹ ತರಲು ಹೆಚ್ಚು ಜಾಗ ಬೇಕು. ಮೃತದೇಹದ ಜಾಗದಲ್ಲಿ 8 ರಿಂದ 10 ಜನ ಬರಬಹುದು ಎಂದು ಅವರು ಹೇಳಿದ್ದಾರೆ.
ಉಕ್ರೇನ್ನಲ್ಲಿದ್ದ 20 ಸಾವಿರ ಭಾರತೀಯ ವಿದ್ಯಾರ್ಥಿಗಳಲ್ಲಿ 17 ಸಾವಿರ ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ. 3,000 ಭಾರತದ ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದಾರೆ ಎಂದು ನವದೆಹಲಿಯಲ್ಲಿ ವಿದೇಶಾಂಗ ಇಲಾಖೆ ವಕ್ತಾರ ಅರೀಂದಮ್ ಬಗಚಿ ಹೇಳಿಕೆ ನೀಡಿದ್ದಾರೆ. IAFನ C-17 ವಿಮಾನಗಳ ಮೂಲಕ ವಿದ್ಯಾರ್ಥಿಗಳ ಶಿಫ್ಟ್ ಮಾಡಲಾಗುತ್ತಿದೆ. ಈವರೆಗೆ 798 ವಿದ್ಯಾರ್ಥಿಗಳು ಹಂಗೇರಿ, ಪೋಲೆಂಡ್, ರೊಮೇನಿಯಾ ಮೂಲಕ ಭಾರತಕ್ಕೆ ವಾಪಸಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಉಕ್ರೇನ್-ರಷ್ಯಾ ಮಧ್ಯೆ 8ನೇ ದಿನವೂ ಯುದ್ಧ ಮುಂದುವರಿದಿದ್ದು, ರಷ್ಯಾದ ಸರಟೋವ್ ಯುನಿಟ್‌ನ ಶೇ.80ರಷ್ಟು ಸೈನಿಕರ ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಮಾರ್ಚ್ 2ರವರೆಗೆ ರಷ್ಯಾ ಸೇನಾ ಪಡೆಯ 5,840 ಸೈನಿಕರ ಹತ್ಯೆ ಮಾಡಲಾಗಿದೆ. ರಷ್ಯಾದ 30 ಜೆಟ್, 31 ಹೆಲಿಕಾಪ್ಟರ್, 211 ಯುದ್ಧ ಟ್ಯಾಂಕರ್, 862 ಸೇನಾ ವಾಹನ, 2 ಹಡಗು ಧ್ವಂಸ ಮಾಡಿದ್ದೇವೆ ಎಂದು ಉಕ್ರೇನ್ ಹೇಳಿದೆ. ಆದರೆ ರಷ್ಯಾ ನೀಡಿರುವ ಅಂಕಿಅಂಶಗಳು ಇದಕ್ಕೆ ವ್ಯತಿರಿಕ್ತವಾಗಿದ್ದು, ತನ್ನ ಸೇನೆಯ 498 ಸೈನಿಕರು ಮೃತಪಟ್ಟಿದ್ದಾಗಿ ಹೇಳಿಕೊಂಡಿತ್ತು.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಖಾರ್ಕಿವ್‌ನಲ್ಲಿ ರಷ್ಯಾ ಬಾಂಬ್ ದಾಳಿಯಲ್ಲಿ ಮಕ್ಕಳು ಸೇರಿದಂತೆ 8 ಜನರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ರಾಜ್ಯ ಸರ್ಕಾರದಿಂದ ಉಕ್ರೇನ್ ವಿದ್ಯಾರ್ಥಿಗಳಿಗೆ ಉಕ್ರೇನ್‌ನಲ್ಲಿ ಪರಿಸ್ಥಿತಿ ಸರಿಹೋಗುವವರೆಗೂ ಆನ್ಲೈನ್ ಕ್ಲಾಸ್ ನಡೆಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಗಿರೀಶ್ ಹೇಳಿಕೆ ನೀಡಿದ್ದಾರೆ. ಆನ್ಲೈನ್ ಕ್ಲಾಸ್ ಬಗ್ಗೆ ಇಂದು ಸಿಎಂ ಬೊಮ್ಮಾಯಿ ಜತೆ ಸಭೆ ಇದೆ. ಉಕ್ರೇನ್‌ನಿಂದ ಬಂದವರಿಗೆ ಇಲ್ಲಿ ಶಿಕ್ಷಣ ನೀಡೋದು ಕಷ್ಟ. ಇಲ್ಲಿ ನೀಟ್ ಪರೀಕ್ಷೆ ಬರೆದ ಮಕ್ಕಳಿಗೆ ಸೀಟ್ ನೀಡಲಾಗಿದೆ. ಉಕ್ರೇನ್ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ತರಗತಿಗೆ ಅವಕಾಶವಿದೆ. ಪಠ್ಯ ಕ್ರಮ ಸ್ವಲ್ಪ ಬದಲಾಗಿದ್ದರೂ ಆನ್ಲೈನ್ ತರಗತಿ ಸಾಧ್ಯವಿದೆ. ಆದರೆ ಉಕ್ರೇನ್ ವಿದ್ಯಾರ್ಥಿಗಳಿಗೆ ಇಲ್ಲಿಯೇ ಸೀಟ್ ನೀಡೋದು ಕಷ್ಟ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಗಿರೀಶ್ ಹೇಳಿಕೆ ನೀಡಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕುಟುಂಬಸ್ಥರ ಭೇಟಿ ಮಾಡಿ ಮಾಹಿತಿ ಪಡೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಾಜ್ಯದ ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳಿಕೆ ನೀಡಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರೂ ಆಗಿರುವ ಅವರು, ‘‘ಖಾರ್ಕಿವ್ನಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಸೂಚಿಸಿರುವ ಸ್ಥಳಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೆ. ಭಾರತದ ವಿದ್ಯಾರ್ಥಿಗಳು ಖಾರ್ಕಿವ್ನಿಂದ ಹೊರಬಂದಿದ್ದಾರೆ. ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಕೂಡ ಖಾರ್ಕಿವ್ನಿಂದ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ರಾಜ್ಯದ 693 ವಿದ್ಯಾರ್ಥಿಗಳ ಪೈಕಿ 149 ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಉಳಿದ 544 ವಿದ್ಯಾರ್ಥಿಗಳ ರಕ್ಷಣೆಗಾಗಿ ಪ್ರಯತ್ನ ನಡೆಯುತ್ತಿದೆ ಎಂದು ಮನೋಜ್ ರಾಜನ್ ಹೇಳಿಕೆ ನೀಡಿದ್ದಾರೆ. ಉಕ್ರೇನ್‌ನಿಂದ ನಾಳೆ 16 ವಿಮಾನಗಳು ಭಾರತಕ್ಕೆ ಬರಲಿವೆ. ನಾಳೆ ಬರುವ ವಿಮಾನಗಳಲ್ಲಿ ರಾಜ್ಯದ ವಿದ್ಯಾರ್ಥಿಗಳು ಬರುತ್ತಾರೆ ಎಂದು ಅವರು ಹೇಳಿದ್ದಾರೆ.
ಆಪರೇಷನ್ ಗಂಗಾ ಯೋಜನೆ ಮುಂದುವರೆದಿದ್ದು, ಇಂದು ದೆಹಲಿಗೆ 41 ಕನ್ನಡಿಗ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ದೆಹಲಿಗೆ ಇದುವರೆಗೆ 138 ಕನ್ನಡಿಗ ವಿದ್ಯಾರ್ಥಿಗಳ ಆಗಮಿಸಿದ್ದು, 76 ವಿದ್ಯಾರ್ಥಿಗಳು ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಸಂಜೆ ವೇಳೆಗೆ 62 ವಿದ್ಯಾರ್ಥಿಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾಗೆ ಸಂಬಂಧಿಸಿದ ಸಂಪರ್ಕಗಳನ್ನು ಹಿಂಪಡೆಯಲು ಎಲ್ಲಾ ದೇಶಗಳು ಮುಂದಾಗುತ್ತಿವೆ. ಇದೀಗ ಪ್ಯಾರಿಸ್‌ನ ಗ್ರೆವಿನ್ ಮ್ಯೂಸಿಯಂನಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಮೆಯನ್ನು ತೆರವು ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ 12 ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಉಕ್ರೇನ್‌ನಿಂದ ಜಿಲ್ಲೆಗೆ ವಾಪಸಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಆಯಾ ತಾಲೂಕುಗಳ ತಹಶೀಲ್ದಾರ್ಗಳಿಗೆ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಧೈರ್ಯ ತುಂಬುವ ಜವಾಬ್ದಾರಿ ನೀಡಲಾಗಿದೆ.
ಖಾರ್ಕಿವ್ ನಗರದಿಂದ ಮೃತ ನವೀನ್ ಸ್ನೇಹಿತ ರಾಯಚೂರಿನ ಲಕ್ಷ್ಮೀ ನಾರಾಯಣ್ ವಾಪಸಾಗಿದ್ದು, ಅಲ್ಲಿನ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ‘‘ಹಾವೇರಿಯ ನವೀನ್ ಜತೆ ಒಂದು ವರ್ಷ ಜೊತೆಗಿದ್ದೆ. ನವೀನ್ ಮೃತದೇಹವನ್ನು ಭಾರತಕ್ಕೆ ತರುವುದು ಸುಲಭವಿಲ್ಲ. ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ನನ್ನ ಸ್ನೇಹಿತರಿದ್ದಾರೆ. ಬಂಕರ್ಗಳಲ್ಲಿರುವ ನನ್ನ ಸ್ನೇಹಿತರನ್ನ ರಕ್ಷಿಸಬೇಕಾಗಿದೆ. ಉಕ್ರೇನ್‌ನ ಸೈನಿಕರು ನಮಗೆ ಸಹಾಯ ಮಾಡಿದ್ದಾರೆ. ಉಕ್ರೇನ್ ಸೈನಿಕರು ಭಾರತೀಯರನ್ನ ಒತ್ತೆಯಾಳಾಗಿ ಇಟ್ಟಿಲ್ಲ ಎಂದು ಲಕ್ಷ್ಮೀ ನಾರಾಯಣ್ ನುಡಿದಿದ್ದಾರೆ.
ಉಕ್ರೇನ್ನಲ್ಲಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ನಡೆಸಲಾಗುತ್ತಾ ಎಂಬ ಬಗ್ಗೆ ಪ್ರಶ್ನೆಗಳು ಮೂಡಿವೆ. 600ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ನಡೆಸುವ ಯೋಜನೆ ಇದೆಯಾ ಎಂಬ ಬಗ್ಗೆ ಹೇಳಲಾಗುತ್ತಿದೆ. ಉಕ್ರೇನ್‌ನಲ್ಲಿ ಪರಿಸ್ಥಿತಿ ಸರಿಹೋಗುವವರೆಗೂ ಆನ್ಲೈನ್ ಕ್ಲಾಸ್ ಎಂಬ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಗಿರೀಶ್ ಹೇಳಿಕೆ ನೀಡಿದ್ದಾರೆ.
ಆನ್ಲೈನ್ ಕ್ಲಾಸ್ ಬಗ್ಗೆ ಇಂದು ಸಿಎಂ ಬೊಮ್ಮಾಯಿ ಜತೆ ಸಭೆ ನಡೆಸಲಾಗುತ್ತದೆ. ಉಕ್ರೇನ್‌ನಿಂದ ಬಂದವರಿಗೆ ಇಲ್ಲಿ ಶಿಕ್ಷಣ ನೀಡೋದು ಕಷ್ಟ. ಇಲ್ಲಿ ನೀಟ್ ಪರೀಕ್ಷೆ ಬರೆದ ಮಕ್ಕಳಿಗೆ ಸೀಟ್ ನೀಡಲಾಗಿದೆ. ಉಕ್ರೇನ್ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ತರಗತಿಗೆ ಅವಕಾಶವಿದೆ. ಪಠ್ಯ ಕ್ರಮ ಸ್ವಲ್ಪ ಬದಲಾಗಿದ್ರೂ ಆನ್ಲೈನ್ ತರಗತಿ ಸಾಧ್ಯ. ಉಕ್ರೇನ್ ವಿದ್ಯಾರ್ಥಿಗಳಿಗೆ ಇಲ್ಲಿಯೇ ಸೀಟ್ ನೀಡೋದು ಕಷ್ಟ. ಇಂದು ಸಿಎಂ ಜೊತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಚರ್ಚೆ ನಡೆಸುತ್ತೇವೆ. ಆನ್ಲೈನ್ ತರಗತಿ ಸೇರಿ ಇತರೆ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಗಿರೀಶ್ ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕುಟುಂಬಸ್ಥರ ಭೇಟಿ ಮಾಡಿ ಮಾಹಿತಿ ಪಡೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಖಾರ್ಕಿವ್ನಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರ್ತಿದ್ದಾರೆ. ಕೇಂದ್ರ ಸರ್ಕಾರ ಸೂಚಿಸಿರುವ ಸ್ಥಳಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೆ. ಭಾರತದ ಎಲ್ಲ ವಿದ್ಯಾರ್ಥಿಗಳು ಖಾರ್ಕಿನ್ನಿಂದ ಹೊರಬಂದಿದ್ದಾರೆ. ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಖಾರ್ಕಿವ್ನಿಂದ ಬಂದಿದ್ದಾರೆ ಎಂದು ಕರ್ನಾಟಕ ರಾಜ್ಯದ ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳಿದ್ದಾರೆ.
ಉಕ್ರೇನ್ನಲ್ಲಿದ್ದ 20 ಸಾವಿರ ಭಾರತೀಯ ವಿದ್ಯಾರ್ಥಿಗಳ ಪೈಕಿ 17 ಸಾವಿರ ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. 3,000 ಭಾರತದ ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದಾರೆ. IAFನ C-17 ವಿಮಾನಗಳ ಮೂಲಕ ವಿದ್ಯಾರ್ಥಿಗಳ ಶಿಫ್ಟ್ ಮಾಡಲಾಗಿದೆ. ಈವರೆಗೆ 798 ವಿದ್ಯಾರ್ಥಿಗಳು ಭಾರತಕ್ಕೆ ವಾಪಸಾಗಿದ್ದಾರೆ. ಹಂಗೇರಿ, ಪೋಲೆಂಡ್, ರೊಮೇನಿಯಾ ಮೂಲಕ ವಾಪಸ್ ಆಗಿದ್ದಾರೆ ಎಂದು ನವದೆಹಲಿಯಲ್ಲಿ ವಿದೇಶಾಂಗ ಇಲಾಖೆ ವಕ್ತಾರ ಅರೀಂದಮ್ ಬಗಚಿ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ರಕ್ಷಣೆ ಕಾರ್ಯಾಚರಣೆ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತ ಮನೋಜ್ ರಾಜನ್ ಸುದ್ದಿಗೋಷ್ಠಿ ನಡೆಸಿದ್ದಾರೆ. ರಾಜ್ಯ ನೋಡೆಲ್ ಅಧಿಕಾರಿ ಆಗಿರುವ ಮನೋಜ್ ರಾಜನ್, ಈ ವರೆಗೂ ಉಕ್ರೇನ್ ನಲ್ಲಿ ಸಿಲುಕಿರುವ 693 ಜನರ ಪೈಕಿ ಒಟ್ಟು 149 ಜನ ಭಾರತಕ್ಕೆ ಬಂದಿದ್ದಾರೆ. ನಾಳೆ ಉಕ್ರೇನ್ ನಿಂದ 16 ವಿಮಾನಗಳು ಭಾರತಕ್ಕೆ ಬರಲಿದೆ, ಅದರಲ್ಲಿ ಕನ್ನಡಿಗರು ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಉಕ್ರೇನ್-ರಷ್ಯಾ ಮಧ್ಯೆ 8ನೇ ದಿನವೂ ಯುದ್ಧ ಮುಂದುವರಿದಿದೆ. ರಷ್ಯಾದ ಸರಟೋವ್ ಯುನಿಟ್‌ನ ಶೇ.80ರಷ್ಟು ಸೈನಿಕರ ಹತ್ಯೆ ಆಗಿದೆ. ಶೇಕಡಾ 80ರಷ್ಟು ಸೈನಿಕರನ್ನು ಹತ್ಯೆಗೈದಿದ್ದಾಗಿ ಉಕ್ರೇನ್ ಹೇಳಿಕೆ ನೀಡಿದೆ. ಮಾರ್ಚ್ 2ರವರೆಗೆ ರಷ್ಯಾ ಸೇನಾ ಪಡೆಯ 5,840 ಸೈನಿಕರ ಹತ್ಯೆ ಆಗಿದೆ. ರಷ್ಯಾದ 30 ಜೆಟ್, 31 ಹೆಲಿಕಾಪ್ಟರ್, 211 ಯುದ್ಧ ಟ್ಯಾಂಕರ್, 862 ಸೇನಾ ವಾಹನ, 2 ಹಡಗು ಧ್ವಂಸಗೊಳಿಸಿದ್ದಾಗಿ ಹೇಳಿಕೆ ನೀಡಲಾಗಿದೆ.
ಕೇಂದ್ರ ಸಚಿವ ಕಿರಣ್ ರಿಜಿಜು ಸ್ಲೊವೇಕಿಯಾದಿಂದ ವಿಮಾನ ಹೊರಡುವ ಮುನ್ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
#WATCH Union minister Kiren Rijiju interacts with a group of Indian students evacuated from Ukraine before their departure to India from Kosice, Slovakia
(Source: Kiren Rijiju) pic.twitter.com/ORy1kLcP71
— ANI (@ANI) March 3, 2022
ದೆಹಲಿಯಲ್ಲಿ ವಿದೇಶಾಂಗ ಇಲಾಖೆಯ ಸಮಾಲೋಚನಾ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ. ಉಕ್ರೇನ್ ಸ್ಥಿತಿಗತಿ, ವಿದ್ಯಾರ್ಥಿಗಳ ಏರ್ ಲಿಫ್ಟ್ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಏರ್ ಲಿಫ್ಟ್ ಕಾರ್ಯಾಚರಣೆ ಮಾಹಿತಿ ನೀಡುವಂತೆ ರಾಹುಲ್ ಗಾಂಧಿ ಆಗ್ರಹಿಸಿದ್ದು, ತ್ವರಿತ ಗತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಅವರು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಆಪರೇಷನ್ ಗಂಗಾ ಯೋಜನೆಯಡಿಯಲ್ಲಿ ಇಂದು 3726 ಭಾರತೀಯರು ಆಗಮಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಬುಕಾರೆಸ್ಟ್ನಿಂದ 8, ಸುಕೇವಾದಿಂದ 2, ಕೊಸೈಸ್ನಿಂದ 1, ಬುಡಾಪೆಸ್ಟ್ನಿಂದ 5, ರೊಮೇನಿಯಾದಿಂದ 3 ವಿಮಾನಗಳಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದಿದ್ದಾರೆ.
Under Operation Ganga, 3726 Indians will be brought back home today on 8 flights from Bucharest, 2 flights from Suceava, 1 flight from Kosice, 5 flights from Budapest and 3 flights from Rzeszow: Union Civil Aviation Minister Jyotiraditya M. Scindia
(file pic) pic.twitter.com/hQ7ViqUxx8
— ANI (@ANI) March 3, 2022
ಉಕ್ರೇನ್-ರಷ್ಯಾ ಯುದ್ಧದ ಮಧ್ಯೆ ಇಂದು QUAD ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಜತೆ ಕ್ವಾಡ್ ನಾಯಕರ ಸಭೆಯಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ. ವರ್ಚುವಲ್ ಆಗಿ QUAD ನಾಯಕರ ಸಭೆ ನಡೆಯಲಿದೆ.
ಉಕ್ರೇನ್ ನಲ್ಲಿ ಸಿಲುಕಿದ ಭಾರತದ ವಿದ್ಯಾರ್ಥಿಗಳ ರಕ್ಷಣೆಗೆ ಸರ್ಕಾರಕ್ಕೆ ನಿರ್ದೇಶನ ಕೊಡಿ ಎಂದು ಸುಪ್ರೀಂ ಕೋರ್ಟ್ಗೆ ಕಾಶ್ಮೀರದ ವ್ಯಕ್ತಿಯಿಂದ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಸಿಜೆ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಕೇಂದ್ರ ಸರ್ಕಾರ ಉಕ್ರೇನ್‌ನಿಂದ ವಿದ್ಯಾರ್ಥಿಗಳ ತೆರವಿಗೆ ಉತ್ತಮ ಪ್ರಯತ್ನ ಮಾಡುತ್ತಿದೆ ಎಂದು ಮಾಧ್ಯಮಗಳ ವರದಿ ಆಧಾರದ ಮೇಲೆ ನ್ಯಾಯಾಲಯ ಹೇಳಿದೆ. ನಾವು ಈಗ ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷರಿಗೆ ನಿರ್ದೇಶನ ನೀಡಲಾಗುತ್ತದೆಯೇ ಎಂದು ಪ್ರಶ್ನಿಸಿದ ಸಿಜೆಐ, ಉಕ್ರೇನ್‌ನಲ್ಲಿ ಸಿಲುಕಿದ ಭಾರತದ ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿ ಇದೆ ಎಂದಿದ್ದಾರೆ. ಈ ಬಗ್ಗೆ ಅಟಾರ್ನಿ ಜನರಲ್ ಅಭಿಪ್ರಾಯ ಏನು? ಎಂದೂ ಅವರು ಪ್ರಶ್ನಿಸಿದ್ದಾರೆ.
Thousands of Berlin residents showed up at the central train station with sign boards offering refugees fleeing Ukraine a place to stay pic.twitter.com/5hM45PXOg4
— Reuters (@Reuters) March 3, 2022
ರಷ್ಯಾ- ಉಕ್ರೇನ್ ಬಿಕ್ಕಟ್ಟಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಗುರುವಾರ ಬ್ರೆಂಟ್ ಪ್ರತಿ ಬ್ಯಾರೆಲ್‌ಗೆ 118 ಡಾಲರ್ಗಿಂತ ಹೆಚ್ಚಾಗಿದೆ. ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಬ್ಯಾರೆಲ್‌ಗೆ $ 118.22 ರಷ್ಟು ಏರಿಕೆಯಾಗಿದ್ದು, ಇದು ಫೆಬ್ರವರಿ 2013 ರಿಂದ ಅತ್ಯಧಿಕವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಅಮೆರಿಕನ್ ಮೂಲದ ವೆಲ್ಸ್ ಫಾರ್ಗೊ, ಬ್ಯಾಂಕ್ ಆಫ್ ಅಮೇರಿಕಾ ಕಂಪನಿಗಳು ಉಕ್ರೇನಿಯನ್ ನಿರಾಶ್ರಿತರಿಗೆ ಸಹಾಯ ಮಾಡುತ್ತಿರುವ ಅಮೇರಿಕನ್ ರೆಡ್ ಕ್ರಾಸ್ ಸಂಸ್ಥೆ ಹಾಗೂ ಇತರ ನಾನ್ ಪ್ರಾಫಿಟ್ ಸಂಸ್ಥೆಗಳಿಗೆ ಒಟ್ಟಾಗಿ 1 ಮಿಲಿಯನ್ ಡಾಲರ್ ಅನುದಾನ ನೀಡುತ್ತಿರುವುದಾಗಿ ಘೋಷಿಸಿವೆ.
ಕೀವ್ ಮತ್ತು ಖಾರ್ಕಿವ್‌ನಲ್ಲಿ ಸಿಲುಕಿರುವವರನ್ನು ಬೇಗ ಕರೆತನ್ನಿ ಎಂದು ಭಾರತಕ್ಕೆ ಮರಳಿದ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವವರನ್ನು ಕರೆತರಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಭಾರತೀಯರು ಎನ್ನುವುದಕ್ಕೆ ಹೆಮ್ಮೆ ಆಗುತ್ತಿದೆ. ಆದರೆ ಹಲವರು ಕೀವ್ ಮತ್ತು ಖಾರ್ಕಿವ್‌ನಲ್ಲಿ ಸಿಲುಕಿದ್ದಾರೆ. ಅವರನ್ನು ಆದಷ್ಟು ಬೇಗ ಕರೆತನ್ನಿ ಎಂದು ಇಂದು ದೆಹಲಿಗೆ ಬಂದಿಳಿದ ವಿದ್ಯಾರ್ಥಿಗಳು ಎಎನ್ಐ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
Indian govt took prompt action to evacuate the stranded Indian students in Ukraine. Proud to be an Indian. Indian students stranded in Kyiv & Kharkiv need to be evacuated as soon as possible, said the Indian students stranded in Ukraine reached Delhi airport earlier today pic.twitter.com/kZw6gLKshN
— ANI (@ANI) March 3, 2022
ರಷ್ಯಾ ಮತ್ತು ಉಕ್ರೇನ್ ನಡುವಣ ಸಂಘರ್ಷ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಉಕ್ರೇನ್ ಮೇಲೆ ಮಾಡಿರುವ ದಾಳಿ ಅಚಾನಕ್ ಆದುದಲ್ಲ, ಇದು ತುಂಬಾ ಯೋಚಿಸಿ ತೆಗೆದುಕೊಂಡ ನಿರ್ಧಾರ ಎಂದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ತಮ್ಮ ನಿರ್ಧಾನವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅಮೆರಿಕದೊಂದಿಗೆ ಗಡಿ ಹಂಚಿಕೊಂಡಿರುವ ಮೆಕ್ಸಿಕೊ ಅಥವಾ ಕೆನಡಾಗಳಲ್ಲಿ ನಾವು ಸೇನಾ ನೆಲೆ ಸ್ಥಾಪಿಸಿ, ನಮ್ಮ ಕ್ಷಿಪಣಿಗಳನ್ನು ನಿಯೋಜಿಸಿದರೆ ಅಮೆರಿಕ ಸುಮ್ಮನಿರುವುದೇ ಎನ್ನುವುದು ಅವರ ಪ್ರಶ್ನೆ. ಈ ಪ್ರಶ್ನೆಯನ್ನೇ ಅವರು ಉಕ್ರೇನ್ ಮೇಲಿನ ದಾಳಿಗೆ ಸಮರ್ಥನೆಯಾಗಿಯೂ ಬಳಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಸಂವಾದವೊಂದರಲ್ಲಿ ಪುಟಿನ್ ಮಡಿರುವ ಭಾಷಣದ ಕನ್ನಡ ಅನುವಾದ ಇಲ್ಲಿದೆ:
ಉಕ್ರೇನ್ ದೇಶದಲ್ಲಿ ಕರ್ನಾಟಕ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಲಭಿಸಿದೆ. ಖಾರ್ಕಿವ್, ಸುಮ್ಮಿ ನಗರದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದಿಂದ ಸೇಫ್ ಸಿಟಿಯಲ್ಲಿರುವವರ ರಕ್ಷಣೆ ಮಾಡಲಾಗುತ್ತಿದೆ. ಖಾರ್ಕಿವ್ನಲ್ಲಿರುವ ನಮಗೆ ಯಾರು ಸಹಾಯ ಮಾಡ್ತಿಲ್ಲ. ನೀವು ಬಾರ್ಡರ್ಗೆ ಬನ್ನಿ ಅಂತ ಮೆಸೇಜ್ ಕಳುಹಿಸುತ್ತಿದ್ದಾರೆ. ಖಾರ್ಕಿವ್ನಗರದಿಂದ ಹೊರಗೆ ತೆರಳಲು ಸಾಧ್ಯವಾಗುತ್ತಿಲ್ಲ. ಮೂರು ಪಟ್ಟು ಹಣ ಕೊಟ್ಟು ರೈಲಿನಲ್ಲಿ ಹೋಗ್ತಿದ್ದೀವಿ. ಭಾರತ ರಾಷ್ಟ್ರ ಧ್ವಜ ಇದ್ದರೆ ರೈಲಿನ ಒಳಗೆ ಬೀಡ್ತಿದ್ದಾರೆ. ರಾಷ್ಟ್ರ ಧ್ವಜ ತಯಾರಿಸಲು ಸಾಕಷ್ಟು ಕಷ್ಟಪಡುತ್ತಿದ್ದೇವೆ. ನಮ್ಮ ಬಟ್ಟೆಗಳಿಗೆ ತ್ರಿವರ್ಣ ಧ್ವಜ್ವ ಬಣ್ಣ ಹಚ್ಚುತ್ತಿದ್ದೇವೆ ಎಂದು ಟಿವಿ9ಗೆ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಯಿಂದ ಮಾಹಿತಿ ಲಭ್ಯವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿಯಾಗಲಿದ್ದಾರೆ. ಇಂದು ಕ್ವಾಡ್ ನಾಯಕರ ವರ್ಚುವಲ್ ಸಭೆ ವೇಳೆ ಭೇಟಿ ಮಾಡಲಿದ್ದಾರೆ. ಕ್ವಾಡ್ ನಾಯಕರ ಸಭೆ ವೇಳೆ ಜೋ ಬೈಡೆನ್ ಜತೆ ಮೋದಿ ಚರ್ಚೆ ನಡೆಸಲಿದ್ದಾರೆ.
ರಷ್ಯಾ ಕ್ಷಿಪಣಿ ದಾಳಿಯಲ್ಲಿ ಬಾಂಗ್ಲಾದೇಶದ ಹಡಗು ನಾಶವಾಗಿದೆ. ಈ ಬಗ್ಗೆ ಉಕ್ರೇನ್ ಮಾಹಿತಿ ನೀಡಿದೆ. ಉಕ್ರೇನ್ ಬಂದರಿನಲ್ಲಿ ನಿಂತಿದ್ದ ಬಾಂಗ್ಲಾದ ಹಡಗು ಧ್ವಂಸವಾಗಿದೆ. ಬಾಂಗ್ಲಾದ ಹಡಗಿನಲ್ಲಿದ್ದ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ರಷ್ಯಾವನ್ನು ತಕ್ಷಣವೇ ಉಕ್ರೇನ್‌ನಿಂದ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ನಿರ್ಣಯವನ್ನು ಬುಧವಾರ ಅಂಗೀಕರಿಸಲಾಗಿದೆ. ಉಕ್ರೇನ್‌ನ ಮೇಲೆ ಮಾಸ್ಕೋದ ಆಕ್ರಮಣವನ್ನು ಪ್ರಬಲ ಪದಗಳಲ್ಲಿ ಖಂಡಿಸುವ ಮತ್ತು ಪರಮಾಣು ಪಡೆಗಳನ್ನು ಎಚ್ಚರವಾಗಿಡುವ ವ್ಲಾಡಿಮಿರ್ ಪುಟಿನ್ ಅವರ ನಿರ್ಧಾರವನ್ನು ಖಂಡಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ 141 ರಾಷ್ಟ್ರಗಳು ಬೆಂಬಲಿಸಿದವು. ಭಾರತ ಮತದಾನದಿಂದ ದೂರ ಉಳಿದಿದೆ.
ಒಖ್ತಿರ್ಕಾ ಮತ್ತು ಖಾರ್ಕಿವ್ ಸೇರಿದಂತೆ ಉಕ್ರೇನ್‌ನ ಹಲವು ನಗರಗಳು ರಷ್ಯಾ ದಾಳಿಗೆ ತುತ್ತಾಗಿವೆ. ಇದರಲ್ಲಿ ಮೂರು ಶಾಲೆಗಳು, 12ಕ್ಕೂ ಹೆಚ್ಚು ಜನವಸತಿ ಕಟ್ಟಡಗಳು ಒಖ್ತಿರ್ಕಾದಲ್ಲಿ ನಾಶವಾಗಿವೆ ಎಂದು ದಿ ಕೈವ್ ಇಂಡಿಪೆಂಡೆಂಟ್ ವರದಿ ಮಾಡಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವುದನ್ನು ವಿರೋಧಿಸಿ ರಷ್ಯಾದಲ್ಲಿ ಪ್ರತಿಭಟನೆ ಜೋರಾಗಿದೆ. ಅಲೆಕ್ಸಿ ವೆವಲ್ನಿ ಅವರ ಮಾತಿನಂತೆ ಮಾಸ್ಕೋ ಹಾಗೂ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವು ಜನರನ್ನು ಪೊಲೀಸರು ಬಂಧಿಸಿದ್ದಾರೆ.
Dozens of anti-war demonstrators were detained in Moscow and Saint Petersburg Wednesday after jailed Kremlin critic Alexei Navalny called on Russians to protest President Vladimir Putin's invasion of Ukrainehttps://t.co/JssJePk0VV pic.twitter.com/kHjPFdgX25
— AFP News Agency (@AFP) March 3, 2022
ಉಕ್ರೇನ್‌ನಿಂದ 208 ಭಾರತೀಯ ನಾಗರಿಕರನ್ನು ಹೊತ್ತುತಂದ ಭಾರತೀಯ ವಾಯುಪಡೆಗೆ ಸೇರಿದ ಮೂರನೇ C-17 ವಿಮಾನವು ಪೋಲೆಂಡ್‌ನ ರ್ಜೆಸ್ಜೋವ್‌ನಿಂದ ಇಂದು ದೆಹಲಿಯನ್ನು ತಲುಪಿದೆ. ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ಭಾರತೀಯರನ್ನು ಸ್ವದೇಶಕ್ಕೆ ಕರೆತರುವಲ್ಲಿ ವಾಯುಪಡೆಯು ಸಹಾಯ ಮಾಡುತ್ತಿದೆ.
ಉಕ್ರೇನ್ ಮೇಕೆ ರಷ್ಯಾ ನಡೆಸುತ್ತಿರುವ ಯುದ್ಧದಿಂದ ಉಕ್ರೇನ್‌ನಲ್ಲಿ ಮಾ.1ರವರೆಗೆ 752 ನಾಗರಿಕರು ಮೃತಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.
ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ರಷ್ಯಾಗೆ ಸೂಚಿಸಿ. ಶೆಲ್, ಕ್ಷಿಪಣಿ ದಾಳಿಯಿಂದ ಭಾರತೀಯರ ಶಿಫ್ಟ್ಗೆ ಅಡ್ಡಿಯಾಗುತ್ತಿದೆ. ಖಾರ್ಕಿವ್, ಸುಮೇಯಲ್ಲಿ ದಾಳಿ ನಿಂತರೆ ಸ್ಥಳಾಂತರ ಸುಗಮವಾಗುತ್ತದೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯದಿಂದ ಹೇಳಿಕೆ ನೀಡಿದೆ.
ತುರ್ತಾಗಿ ಖಾರ್ಕಿವ್ನಿಂದ ಹೊರಡುವಂತೆ ಭಾರತ ತಿಳಿಸಿದ್ದಂತೆ ಅಲ್ಲಿರುವ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಬಾಗಲಕೋಟೆಯ ಕಿರಣ್ ಸವದಿ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ನಗರವನ್ನು ಖಾಲಿ ಮಾಡಲು ಹಲವು ಕಿಲೋ ಮೀಟರ್ ರೈಲ್ವೆ ನಿಲ್ದಾಣ ತಲುಪಿದ್ದೆವು. ಆದರೆ ಅಲ್ಲಿ ನಿರಾಶೆಯಾಯಿತು. ಮೊದಲು ಉಕ್ರೇನ್ ನಾಗರಿಕರಿಗೆ ಆದ್ಯತೆ ನೀಡಲಾಗಿದೆ. ನಂತರ ವಿದ್ಯಾರ್ಥಿನಿಯರಿಗೆ. ನಂತರ ವಿದ್ಯಾರ್ಥಿಗಳಿಗೆ. ಸೀಟ್ ಲಭ್ಯತೆಯ ಮೇಲೆ ಜನರನ್ನು ರೈಲಿನೊಳಗೆ ಬಿಡಲಾಗುತ್ತಿದೆ. ವಿದ್ಯಾರ್ಥಿಗಳು ಇದಕ್ಕೆ ಆಕ್ರೋಶ ಹೊರಹಾಕಿದರೆ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸುತ್ತಾರೆ ಎಂದು ಕಿರಣ್ ತಮ್ಮ ತಂದೆಗೆ ಕಳುಹಿಸಿದ ಮೆಸೇಜ್ನಲ್ಲಿ ತಿಳಿಸಿದ್ದಾರೆ. ಕೊನೆಗೆ ಭಾರತೀಯ ರಾಯಭಾರ ಕಚೇರಿಯ ಸೂಚನೆಯಂತೆ ರೈಲಿನಲ್ಲಿ ಕಿರಣ್ ಮತ್ತು ಸ್ನೇಹಿತರು ಹಳ್ಳಿಯೊಂದರತ್ತ ತೆರಳಿದ್ಧಾರೆ.
ಗ್ರಾಮಕ್ಕೆ ತಲುಪಲು ಕಿರಣ್ ಮತ್ತು ಸ್ನೇಹಿತರು ನಡೆಯುತ್ತಿದ್ದು, ಈಗಾಗಲೇ ಸುಮಾರು 10 ಕಿಮೀ ನಡೆದಿದ್ದಾರೆ. ಇನ್ನು 6 ಕಿಮೀ ನಡೆದರೆ ಗ್ರಾಮ ಸಿಗುತ್ತದೆ. ಅದು ಸುರಕ್ಷಿತವಾಗಿದೆ. 800-1000 ಜನರು ಹೀಗೆ ನಡೆಯುತ್ತಿದ್ದಾರೆ ಎಂದು ಕಿರಣ್ ಸ್ನೇಹಿತೆಯೋರ್ವರು ತಿಳಿಸಿದ್ದಾರೆ.
ತುಮಕೂರಿನ ರೂಪಶ್ರೀ ಎನ್ನುವವರು ಕೂಡ ರೈಲಿನಲ್ಲಿ ಸ್ಥಳ ದೊರಕದ ಕಾರಣ, ಸಮೀಪದ ಹಳ್ಳಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಮೈಸೂರಿನ ದೀಕ್ಷಾ ಎನ್ನುವವರು ತಮ್ಮ 50 ಸ್ನೇಹಿತರೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಖಾರ್ಕಿವ್ ಹಾಗೂ ಸುಮ್ಮಿ ನಗರದಲ್ಲಿರೋ ಕರ್ನಾಟಕದ ವಿದ್ಯಾರ್ಥಿಗಳ ಭಾರೀ ತೊಂದರೆ ಎದುರಾಗುತ್ತಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಸಚಿವರು ಸೇಫ್ ಸಿಟಿಯಲ್ಲಿರೋ ವಿದ್ಯಾರ್ಥಿಗಳನ್ನ ಕರೆದುಕೊಂಡು ಹೋಗುತ್ತಿದ್ದಾರೆ. ಖಾರ್ಕಿವ್ನಲ್ಲಿರೋ ನಮಗೆ ಯಾರೂ ಸಹಾಯ ಮಾಡುತ್ತಿಲ್ಲ. ನೀವು ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಎಂದು ಮೆಸೇಜ್ಗಳನ್ನು ಹಾಕುತ್ತಿದ್ದಾರೆ. ಖಾರ್ಕಿವ್ನಿಂದ ಹೊರಗೆ ಬರೋದಕ್ಕೆ ಆಗುತ್ತಿಲ್ಲ. ಒನ್ ಟು ತ್ರಿಬಲ್ ದುಡ್ಡು ಕೊಟ್ಟು ಟ್ರೇನ್ನಲ್ಲಿ ಹೋಗುತ್ತಿದ್ದೇವೆ. ಭಾರತ ರಾಷ್ಟ್ರ ಧ್ವಜ ಇದ್ದರೆ ಒಳಗೆ ಬಿಡುತ್ತಿದ್ದಾರೆ. ರಾಷ್ಟ್ರ ಧ್ವಜ ತಯಾರಿಸಲು ನಾವು ಸಾಕಷ್ಟು ಪ್ರಯತ್ನ ಪಡುತ್ತಿದ್ದೇವೆ. ನಮ್ಮ ಬಟ್ಟೆ ಗಳಿಗೆ ನಮ್ಮ ರಾಷ್ಟ್ರ ಧ್ವಜ ಬಣ್ಣ ಲೇಪನ ಮಾಡಿದ್ದೇವೆ ಎಂದು ಟಿವಿ9 ಗೆ ಖಾರ್ಕಿವ್ನಲ್ಲಿರೋ ವಿದ್ಯಾರ್ಥಿನಿ ಮಾಹಿತಿ ನೀಡಿದ್ದಾರೆ. ಖಾರ್ಕಿವ್ನಿಂದ ಏಕಕಾಲದಲ್ಲಿ ಹೊರ ಬಂದ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಂದ ನೂರಾರು ಕಿಮೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಉಕ್ರೇನ್‌ನಲ್ಲಿ ಮೃತಪಟ್ಟ ವಿದ್ಯಾರ್ಥಿಗಳಿಗೆ ಪರಿಹಾರ ನೀಡುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಲಿದೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರದಲ್ಲೂ ಚರ್ಚೆ ನಡೆಯುತ್ತಿದೆ ಎಂದ ಅವರು, ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ವಿಚಾರಕ್ಕೆ ಸಂಬಂಧಿಸಿದ ಸಚಿವರು ಮಾತನಾಡುತ್ತಾರೆ ಎಂದು ಆರಗ ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಯಾವುದೇ ಒತ್ತೆಯಾಳುಗಳ ವರದಿಯಾಗಿಲ್ಲ ಎಂದು ಭಾರತ ಸ್ಪಷ್ಟನೆ ನೀಡಿದೆ. ಈ ಹಿಂದೆ ರಷ್ಯಾವು ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಹೋದಾಗ ಉಕ್ರೇನ್ ಸೈನಿಕರು ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿತ್ತು. ಆದರೆ ಇದನ್ನು ಭಾರತ ಅಲ್ಲಗಳೆದಿದೆ.
ಉಕ್ರೇನ್‌ನಿಂದ ನಾಯಿ, ಬೆಕ್ಕುಗಳನ್ನು ತರಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಈ ಕುರಿತು ಇದ್ದ ನಿಯಮ ಸಡಿಲಿಸಿದ್ದು, ನಾಯಿ, ಬೆಕ್ಕುಗಳ ಆರೋಗ್ಯ ಪರೀಕ್ಷಿಸಿ ತರಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
27/02 :
ಮೊದಲ ಬ್ಯಾಚ್: 12 ಜನ ಬೆಳಗ್ಗೆ 09 ಗಂಟೆ.
2ನೇ ಬ್ಯಾಚ್: 06 ಜನ ರಾತ್ರಿ 7 ಗಂಟೆ.
3ನೇ ಬ್ಯಾಚ್: 13 ಜನ ರಾತ್ರಿ 09 ಗಂಟೆ.
28/02:
4ನೇ ಬ್ಯಾಚ್: 05 ಜನ ರಾತ್ರಿ 07:30
01/03:
5 ನೇ ಬ್ಯಾಚ್: ಬೆಳಗ್ಗೆ 10:45 – 7 ಜನ
6 ನೇ ಬ್ಯಾಚ್: ಮಧ್ಯಾಹ್ನ 04:10 – 5 ಜನ
7 ನೇ ಬ್ಯಾಚ್: ರಾತ್ರಿ 10 ಗಂಟೆ – 06 ವಿದ್ಯಾರ್ಥಿಗಳು
02/03:
8ನೇ ಬ್ಯಾಚ್: 12:00 ಗಂಟೆ 5 ಜನ
9 ನೇ ಬ್ಯಾಚ್: ಸಂಜೆ 06:30 – 15 ಜನ ದೆಹಲಿಯಿಂದ
10 ನೇ ಬ್ಯಾಚ್: 10:30 ಕ್ಕೆ 7 ಜನ
11ನೇ ಬ್ಯಾಚ್:ಱ ಮಧ್ಯರಾತ್ರಿ 2ಕ್ಕೆ 4 ವಿದ್ಯಾರ್ಥಿಗಳು ದೆಹಲಿಯಿಂದ ಬೆಂಗಳೂರಿಗೆ
ರಷ್ಯಾದ ಉದ್ಯಮಿ ಅಬ್ರಮೋವಿಚ್ ಪ್ರಖ್ಯಾತ ಫುಟ್ಬಾಲ್ ಕ್ಲಬ್ಗಳಲ್ಲಿ ಒಂದಾದ ಚೆಲ್ಸಾವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಅದರಿಂದ ಬಂದ ಹಣವನ್ನು ಉಕ್ರೇನ್‌ಗೆ ಸಹಾಯ ಮಾಡಲು ನೀಡುವುದಾಗಿ ಅವರು ಘೋಷಿಸಿದ್ದಾರೆ. ಈ ಕುರಿತು ಹಲವು ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್‌ಗೆ ಸಹಾಯ ನೀಡುವುದರ ಭಾಗವಾಗಿ ಸರ್ಕಾರ ಹಾಗೂ ನೆರವಿಗೆ ಧಾವಿಸುತ್ತಿರುವವರಿಗೆ ಸೈಬರ್ ಸೆಕ್ಯುರಿಟಿ ಹಾಗೂ ಇತರ ನೆರವನ್ನು ನೀಡುತ್ತಿರುವುದಾಗಿ ಅಮೆಜಾನ್ ಘೋಷಿಸಿದೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದೀಗ ಒಟಿಟಿ ದೈತ್ಯ ನೆಟ್ಫ್ಲಿಕ್ಸ್ ರಷ್ಯಾ ಮೂಲದ ತನ್ನೆಲ್ಲಾ ಪ್ರಾಜೆಕ್ಟ್ಗಳನ್ನು ನಿಲ್ಲಿಸಿದೆ. ಒಂದು ವರ್ಷದ ಹಿಂದೆ ನೆಟ್ಫ್ಲಿಕ್ಸ್ ರಷ್ಯಾದಲ್ಲಿ ಪ್ರಾರಮಭವಾಗಿತ್ತು. ಅಲ್ಲಿ ಸುಮಾರು 1 ಮಿಲಿಯನ್ಗೂ ಹೆಚ್ಚು ಚಂದಾದಾರರಿದ್ದಾರೆ. ಈ ಮೊದಲು ವಾರ್ನರ್ ಬ್ರದರ್ಸ್, ವಾಲ್ಟ್ ಡಿಸ್ನೆ ಹಾಗೂ ಸೋನಿ ಪಿಕ್ಚರ್ಸ್ ಕೂಡ ತಮ್ಮ ಚಿತ್ರಗಳು ರಷ್ಯಾದಲ್ಲಿ ತೆರೆ ಕಾಣುವುದಿಲ್ಲ ಎಂದು ತಿಳಿಸಿದ್ದವು.
ಸ್ವೀಡಿಷ್ ಮೂಲದ ಆಡಿಯೋ ಸ್ಟ್ರೀಮಿಂಗ್ ಕಂಪನಿ ಸ್ಪಾಟಿಫೈ ರಷ್ಯಾದಲ್ಲಿ ತನ್ನ ಕಚೇರಿ ಮುಚ್ಚುತ್ತಿರುವುದಾಗಿ ತಿಳಿಸಿದೆ. ಅಲ್ಲದೇ ತನ್ನ ವೇದಿಕೆಯಲ್ಲಿರುವ ರಷ್ಯಾ ಸರ್ಕಾರಿ ಬೆಂಬಲಿತ ಆರ್ಟಿ ಹಾಗೂ ಸ್ಪುಟ್ನಿಕ್ ಸೇರಿದಂತೆ ಹಲವು ಚಾನಲ್ಗಳ ಕಂಟೆಂಟ್ ಅನ್ನು ತೆಗೆಯಲಾಗಿದೆ.
ಉಕ್ರೇನ್ ಹಾಗೂ ರಷ್ಯಾ ಯುದ್ಧ ಹಿನ್ನೆಲೆ ಉಕ್ರೇನ್‌ನ ಖಾರ್ಕಿವ್ ಬಿಡುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ ಕೊಡಲಾಗಿದೆ. ಈ ಮಧ್ಯೆ, ಖಾರ್ಕಿವ್ ನಲ್ಲಿ ಸಿಲುಕಿರುವ ಕೆಲ ಕರ್ನಾಟಕ ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ. ಉಕ್ರೇನ್‌ನಲ್ಲಿ ಸಿಲುಕಿರುವ 694 ಕರ್ನಾಟಕದ ವಿದ್ಯಾರ್ಥಿಗಳ ಪೈಕಿ 86 ಜನ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಿದ್ದಾರೆ.
ಇತ್ತ ಭಾರತ ಸರ್ಕಾರ ಮತ್ತು ಎಂಬಸಿ ವಿರುದ್ದ ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಬಾರ್ಡರ್ನಿಂದ ನಾವೇ ರಿಸ್ಕ್ ತೆಗೆದುಕೊಂಡು ಬಂದಿದ್ದೇವೆ. ಒಳಗಡೆ ನಮಗೆ ಭಾರತ ಸರ್ಕಾರ ಹೆಲ್ಪ್ ಮಾಡುತ್ತಿಲ್ಲ. ನಮಗೆ ಬೇಕಾಗಿರೋದು ಬಾರ್ಡರ್ ಒಳಗಡೆ ಸಹಾಯ. ಡಬಲ್ ದುಡ್ಡು ಕೊಟ್ಟು 700 ಕಿಲೋಮೀಟರ್ ಬಂದಿದ್ದೇವೆ. 1.50 ಲಕ್ಷ ಹಣ ಖರ್ಚು ಮಾಡಿ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ.
694 ಕರ್ನಾಟಕದ ವಿದ್ಯಾರ್ಥಿಗಳ ಪೈಕಿ 86 ಜನ ಭಾರತಕ್ಕೆ ವಾಪಸ್, ಬೇಕಾಗಿರೋದು ಉಕ್ರೇನ್ ಒಳಗಡೆ ಸಹಾಯ ಎಂದು ಆಕ್ರೋಶ#Ukraine #RussianUkrainianWar #UkraineRussiaWar https://t.co/fB8Gz9Ay9M
— TV9 Kannada (@tv9kannada) March 3, 2022
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತನಾಡಿ, ರಷ್ಯಾ ವಿರುದ್ಧ ತಮ್ಮ ದೇಶ ತೋರುತ್ತಿರುವ ಪ್ರತಿರೋಧವನ್ನು ಹೊಗಳಿದ್ದಾರೆ. ಮಾಸ್ಕೋದ ಎಲ್ಲಾ ಯೋಜನೆಗಳನ್ನು ಕೀವ್ ತಲೆಕೆಳಗು ಮಾಡಿದೆ ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧದ ನಿರ್ಣಯಕ್ಕೆ ರಾಷ್ಟ್ರಗಳು ನೀಡಿರುವ ಬೆಂಬಲವು ಆ ದೇಶದ ಮೇಲಿನ ಜಾಗತಿಕ ತಿರಸ್ಕಾರವನ್ನು ತೋರಿಸುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ರಷ್ಯಾ ಮೊದಲ ಬಾರಿಗೆ ತನ್ನ ಸೈನ್ಯದ ಸಾವು- ನೋವಿನ ಕುರಿತು ಮಾಹಿತಿ ನೀಡಿದೆ. ಅದು ನೀಡಿರುವ ಮಾಹಿತಿಯಂತೆ, ಉಕ್ರೇನ್‌ನಲ್ಲಿ 498 ರಷ್ಯನ್ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ. ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದಂತೆ, ಬುಧವಾರದಂದು 2,000 ಕ್ಕೂ ಹೆಚ್ಚು ನಾಗರಿಕರು (ಮಿಲಿಟರಿ ಸಿಬ್ಬಂದಿಗಳ ಸೇರಿ) ಸಾವನ್ನಪ್ಪಿದ್ದಾರೆ.
ಆದರೆ ಉಕ್ರೇನ್ ರಷ್ಯನ್ ಸೈನಿಕರ ಸಾವಿನ ಪ್ರಮಾಣದ ಲೆಕ್ಕವನ್ನು ಬೇರೆಯದೇ ರೀತಿಯಲ್ಲಿ ನೀಡಿದೆ. ಆದ್ದರಿಂದ ಎರಡೂ ದೇಶಗಳ ಸಾವಿನ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ವಿಶ್ವಸಂಸ್ಥೆಯ ಪ್ರಕಾರ, ಯುದ್ಧದಲ್ಲಿ 227 ನಾಗರಿಕರು ಮೃತಪಟ್ಟಿದ್ದಾರೆ. ನಿರಾಶ್ರಿತರ ಸಂಖ್ಯೆ ಒಂದು ಮಿಲಿಯನ್ ದಾಟಿದೆ.
ಹಲವಾರು ರಷ್ಯನ್ ಸೈನಿಕರನ್ನು ಉಕ್ರೇನ್ ಸೆರೆಹಿಡಿದು ಯುದ್ಧ ಸಮಯದ ಕೈದಿಗಳ ಹಾಗೆ ಬಂಧನದಲ್ಲಿರಿಸಿದೆ. ಆದರೆ ಬುಧವಾರ ಉಕ್ರೇನ್ ತನ್ನ ವಶದಲ್ಲಿರುವ ಸೈನಿಕರ ತಾಯಂದಿರಿಗೆ ಅಪೀಲ್ ಮಾಡಿ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ತಿಳಿಸಿದೆ. ಈ ಕುರಿತು ರಕ್ಷಣಾ ಸಚಿವಾಲಯವು ಬುಧವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಪೂರ್ಣ ಬರಹ ಇಲ್ಲಿದೆ: ತನ್ನ ವಶದಲ್ಲಿರುವ ರಷ್ಯನ್ ಸೈನಿಕರನ್ನು ಬಂದು ಕರೆದೊಯ್ಯುವಂತೆ ಅವರ ತಾಯಂದಿರಿಗೆ ಉಕ್ರೇನ್ ಆಹ್ವಾನ ನೀಡಿದೆ!
ಖಾರ್ಕೀವ್ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಡಲಾಗಿದೆ. ದಾಳಿ ತೀವ್ರವಾಗಿರುವ ಖಾರ್ಕೀವ್ನಲ್ಲಿರುವ ಭಾರತೀಯರನ್ನು ಅಲ್ಲಿಂದ ಸ್ಥಳಾಂತರ ಮಾಡಲು ರಷ್ಯಾ ಮುಂದಾದಾಗ, ಉಕ್ರೇನ್ ಸೇನೆ ಅವರನ್ನು ತಡೆಯಿತು ಮತ್ತು ವಾಪಸ್ ಕರೆದುಕೊಂಡುಹೋಗಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತು ಎಂದು ರಷ್ಯಾ ಆರೋಪಿಸಿದೆ.
ಇನ್ನೊಂದೆಡೆ ಉಕ್ರೇನ್ ಕೂಡ ಇದೇ ಆರೋಪ ಮಾಡಿದೆ. ಭಾರತ, ಪಾಕಿಸ್ತಾನ, ಚೀನಾ ಮತ್ತು ಇನ್ನಿತರ ದೇಶಗಳ ವಿದ್ಯಾರ್ಥಿಗಳನ್ನು ಸೆರೆಯಾಳಗಳನ್ನಾಗಿ ಇಟ್ಟುಕೊಂಡಿದೆ ಎಂದು ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪೂರ್ಣ ಮಾಹಿತಿ ಇಲ್ಲಿದೆ: ಉಕ್ರೇನ್ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ, ನಾವು ಸ್ಥಳಾಂತರ ಮಾಡಲು ಹೋದಾಗ ಸೇನೆ ತಡೆಯಿತು: ರಷ್ಯಾ ಆರೋಪ
ಉಕ್ರೇನ್‌ನನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ. ಎಷ್ಟೇ ಶಸ್ತ್ರಾಸ್ತ್ರ ಇದ್ದರೂ ರಷ್ಯಾಗೆ ಉಕ್ರೇನ್ ಗೆಲ್ಲಲು ಆಗಲ್ಲ. NATO ಸಹಕಾರ ಸಿಕ್ಕರೆ ವಿನಾಶಕಾರಿ ಯುದ್ಧ ನಡೆಯಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
Published On - 7:47 am, Thu, 3 March 22