ಮಾಸ್ಕೋ: ಸುಮಾರು 13 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ವಿಮಾನವೊಂದು ಸೈಬೀರಿಯಾದ ಸಮೀಪದಲ್ಲಿ ನಾಪತ್ತೆಯಾದ ಘಟನೆ ನಡೆದಿದೆ. ರಷ್ಯಾದ 13 ಪ್ರಯಾಣಿಕರು ಸಹಿತ ವಿಮಾನ ಕಣ್ಮರೆ ಆಗಿರುವ ಬಗ್ಗೆ ರಾಯ್ಟರ್ಸ್ ಸುದ್ದಿಸಂಸ್ಥೆ ಮಾಹಿತಿ ನೀಡಿದೆ. ಆಂಟೊನೊವ್ An-28 ರಷ್ಯಾದ ಈ ವಿಮಾನದಲ್ಲಿ ಸುಮಾರು 17ರಷ್ಟು ಮಂದಿ ಇದ್ದರು ಎಂದೂ ಹೇಳಲಾಗುತ್ತಿದೆ.
ಇದೀಗ ರಾಡಾರ್ ವ್ಯಾಪ್ತಿಯಿಂದ ಹೊರಹೋಗಿದೆ. ಸೈಬೀರಿಯಾದ ತೋಮ್ಸ್ಕ್ ಎಂಬ ಪ್ರದೇಶದ ಮೇಲೆ ಹಾರಾಟ ನಡೆಸುತ್ತಿದ್ದಾಗ ಹೀಗಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹಾಗೂ ವರದಿಗಳಿಂದ ಹೆಚ್ಚಿನ ಮಾಹಿತಿ ತಿಳಿದುಬಂದಿದೆ. ವಿಮಾನದಲ್ಲಿ 13ರಿಂದ 17 ಜನರು ಇದ್ದರು ಎಂದು ಹೇಳಲಾಗುತ್ತಿದೆ.
ಆಂಟೊನೊವ್ An-26 ಎಂಬ ವಿಮಾನವು ಕಳೆದ ಎರಡು ವಾರಗಳ ಹಿಂದಷ್ಟೇ ಪತನವಾಗಿತ್ತು. ರಷ್ಯಾದ ಕಾಮ್ಚಟ್ಕಾ ಪೆನಿನ್ಸುಲಾ ಎಂಬಲ್ಲಿ ಈ ಅವಘಡ ಸಂಭವಿಸಿತ್ತು. ಈ ಅಪಘಾತದಿಂದಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 28 ಪ್ರಯಾಣಿಕರು ಕೂಡ ಮೃತಪಟ್ಟಿದ್ದರು.
ಆಂಟೊನೊವ್ An-28, ಅಂದರೆ ಇಂದು ಅವಘಡಕ್ಕೆ ಒಳಗಾಗಿರುವ ರೀತಿಯದೇ ವಿಮಾನವು 2012ರ ಅವಧಿಯಲ್ಲಿ ಕೂಡ ಇದೇ ಪ್ರದೇಶದಲ್ಲಿ ಕಣ್ಮರೆಯಾಗಿತ್ತು. ಬಳಿಕ, ಕಾಮ್ಚಟ್ಕಾ ಅರಣ್ಯ ಪ್ರದೇಶದಲ್ಲಿ ಪತನವಾಗಿದ್ದು ಪತ್ತೆಯಾಗಿತ್ತು. ಆ ಅಪಘಾತದಲ್ಲಿ 10 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು. ಬಳಿಕ ನಡೆದ ತನಿಖೆಯಲ್ಲಿ ವಿಮಾನದ ಇಬ್ಬರೂ ಪೈಲೆಟ್ಗಳು ಮದ್ಯಪಾನ ಮಾಡಿ ವಿಮಾನ ಚಲಾಯಿಸಿದ್ದರು ಎಂದು ತಿಳಿದುಬಂದಿತ್ತು.
ರಷ್ಯಾದ ವಿಮಾನಯಾನ ಸುರಕ್ಷತಾ ವಿಧಾನಗಳು ಇತ್ತೀಚೆಗೆ ಅಭಿವೃದ್ಧಿ ಹೊಂದಿದೆ. ಆದರೆ, ಈ ರೀತಿಯ ಅವಘಡಗಳು ಕೆಲವು ಬಾರಿ ಘಟಿಸುತ್ತಿದೆ.
ಇದನ್ನೂ ಓದಿ: ಹಾಸನ: ಮೂಲ ಯೋಜನೆಗೆ ವಿರುದ್ಧವಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯತ್ನ; ಹೆಚ್ ಡಿ ರೇವಣ್ಣ ಆಕ್ರೋಶ
Adani Group: ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಸುಪರ್ದಿಗೆ ಪಡೆದ ಅದಾನಿ ಸಮೂಹ
Published On - 4:41 pm, Fri, 16 July 21