ರಷ್ಯಾದ ದಾಳಿಗೆ ಕೈವ್​​ನಲ್ಲಿ ಮಗು ಸೇರಿ ನಾಲ್ವರು ಬಲಿ

ಸ್ಥಳೀಯ ಅಧಿಕಾರಿಗಳ ಪ್ರಕಾರ, ನಿನ್ನೆ ರಾತ್ರೋರಾತ್ರಿ ಕೈವ್ ಪ್ರದೇಶದ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕೈವ್ ನಗರದ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು 6 ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ. ಉಕ್ರೇನ್ ಬಳಿ 'ಪ್ಯಾಟ್ರಿಯಾಟ್'ನಂತಹ ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಗಳ ತೀವ್ರ ಅಭಾವ ಉಂಟಾಗಿರುವುದರಿಂದ, ರಷ್ಯಾದ ಸರಣಿ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳನ್ನು ಪೂರ್ಣವಾಗಿ ತಡೆಹಿಡಿಯಲು ಉಕ್ರೇನ್‌ಗೆ ಸಾಧ್ಯವಾಗುತ್ತಿಲ್ಲ.

ರಷ್ಯಾದ ದಾಳಿಗೆ ಕೈವ್​​ನಲ್ಲಿ ಮಗು ಸೇರಿ ನಾಲ್ವರು ಬಲಿ
Representative Image
Image Credit source: PTI

Updated on: Aug 08, 2026 | 3:41 PM

ಕೈವ್, ಆಗಸ್ಟ್ 8: ಉಕ್ರೇನ್ ರಾಜಧಾನಿ ಕೈವ್ (Kyiv) ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ರಷ್ಯಾ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ 3 ವರ್ಷದ ಮಗು ಸೇರಿದಂತೆ 4 ಜನರು ಸಾವನ್ನಪ್ಪಿದ್ದಾರೆ. ಕೈವ್ ಪ್ರದೇಶದ ಬ್ರೋವರಿ ಜಿಲ್ಲೆಯಲ್ಲಿ ರಷ್ಯಾದ ಹಲವಾರು ಡ್ರೋನ್‌ಗಳು ಮನೆಯೊಂದನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ. ಈ ದಾಳಿಯಲ್ಲಿ ಅಜ್ಜ, ಅಜ್ಜಿ ಮತ್ತು ಅವರ 3 ವರ್ಷದ ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಕುಟುಂಬದ ಇನ್ನಿಬ್ಬರು ಸದಸ್ಯರು ಹಾಗೂ ನೆರವಿಗೆ ಬಂದ ನೆರೆಹೊರೆಯವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಕ್ರೇನ್‌ನ ಉತ್ತರ ಭಾಗದ ಚೆರ್ನಿಹಿವ್ ಪ್ರದೇಶದ ಮೇಲೆಯೂ ರಷ್ಯಾ ಡ್ರೋನ್ ದಾಳಿ ನಡೆಸಿದ್ದು, ಪ್ರಿಲುಕಿ ಜಿಲ್ಲೆಯ ಗೋದಾಮೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಇಲ್ಲಿ ಇಲ್ಲಿಯವರೆಗೆ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತೀಯರ ಸಾವು, ನಾಪತ್ತೆ: ಬಾಧಿತ ಕುಟುಂಬಗಳ ನೆರವಿಗೆ ನೋಡಲ್ ಅಧಿಕಾರಿ ನೇಮಕಕ್ಕೆ ಸುಪ್ರೀಂ ಆದೇಶ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೆರ್ಬಿಯಾಗೆ ಭೇಟಿ ನೀಡಿದ್ದು, ಸೆರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಮತ್ತು ಪ್ರಧಾನ ಮಂತ್ರಿ ಜುರೊ ಮಕುಟ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಇದಕ್ಕೂ ಮೊದಲು ಶುಕ್ರವಾರ ಅಮೆರಿಕದ ಸೆನೆಟ್, ರಷ್ಯಾದ ಮೇಲೆ ಹೊಸ ಹಾಗೂ ಕಠಿಣ ನಿರ್ಬಂಧಗಳನ್ನು ವಿಧಿಸುವ ಮಸೂದೆಯನ್ನು ಅಂಗೀಕರಿಸಿದೆ. ದಿವಂಗತ ಲಿಂಡ್ಸೆ ಗ್ರಹಾಂ ಅವರ ತೀವ್ರ ಪ್ರಯತ್ನದಿಂದ ರೂಪುಗೊಂಡಿದ್ದ ಈ ಮಸೂದೆಯು, ಮಾಸ್ಕೋ ಹಾಗೂ ರಷ್ಯಾದಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಖರೀದಿಸುವ ದೇಶಗಳಿಗೆ ಶಿಕ್ಷೆ ವಿಧಿಸುವ ಉದ್ದೇಶವನ್ನು ಹೊಂದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us