ಕೀವ್: ಪೂರ್ವ ಉಕ್ರೇನ್‌ನಲ್ಲಿ(Ukraine) ರಷ್ಯಾದ (Russia) ಪಡೆಗಳು ಗುರುವಾರ ಶೆಲ್ ದಾಳಿ ನಡೆಸಿದ್ದು ಇದರಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ಗುರುವಾರ ಮುಂಜಾನೆ ಖಾರ್ಕಿವ್ ನಗರದ ಹೊರಗಿನ ಮೆರೆಫಾ ಪಟ್ಟಣದಲ್ಲಿರುವ ಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರದ ಮೇಲೆ ದಾಳಿ ನಡೆದಿದೆ ಎಂದು ಪ್ರಾದೇಶಿಕ ಪ್ರಾಸಿಕ್ಯೂಟರ್‌ಗಳು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ 10 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಸಿಕ್ಯೂಟರ್‌ಗಳ ಹೇಳಿಕೆಯ ಜೊತೆಯಲ್ಲಿರುವ ಫೋಟೋವು ಹಲವಾರು ಮಹಡಿಗಳ ಕಟ್ಟಡವನ್ನು ತೋರಿಸಿದೆ. ಆ ಕಟ್ಟಡದ ಮಧ್ಯದಲ್ಲಿ ಕಿಟಕಿಗಳು ಹಾರಿಹೋಗಿವೆ ಮತ್ತು ರಕ್ಷಣಾ ಕಾರ್ಯಕರ್ತರು ಅವಶೇಷಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಖಾರ್ಕಿವ್, ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ. ಇದು ಮೆರೆಫಾದಿಂದ ಉತ್ತರಕ್ಕೆ ಸುಮಾರು 30 ಕಿಲೋಮೀಟರ್ (18 ಮೈಲುಗಳು) ದೂರದಲ್ಲಿದ್ದು , ಇತ್ತೀಚಿನ ವಾರಗಳಲ್ಲಿ ರಷ್ಯಾದ ತೀವ್ರವಾದ ವೈಮಾನಿಕ ದಾಳಿಗೆ ಗುರಿಯಾಗಿದೆ.
ಮುತ್ತಿಗೆ ಹಾಕಿದ ನಗರವಾದ ಮಾರಿಯುಪೋಲ್‌ನಲ್ಲಿ ರಷ್ಯಾದ ವೈಮಾನಿಕ ದಾಳಿಯಿಂದ ಧ್ವಂಸಗೊಂಡ ಥಿಯೇಟರ್‌ನಲ್ಲಿ ನೂರಾರು ನಾಗರಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಮರಿಯುಪೋಲ್ ಸಿಟಿ ಕೌನ್ಸಿಲ್ ಬಿಡುಗಡೆ ಮಾಡಿದ ಫೋಟೋವು 3-ಅಂತಸ್ತಿನ ರಂಗಮಂದಿರದ ಸಂಪೂರ್ಣ ಕುಸಿದಿದ್ದು ಅಲ್ಲಿ ನಾಗರಿಕರು ಆಶ್ರಯ ಪಡೆದಿದ್ದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು “ಯುದ್ಧ ಅಪರಾಧಿ” ಎಂದು ಉಲ್ಲೇಖಿಸಿದ ಯುಎಸ್ ಅಧ್ಯಕ್ಷರ ಬಗ್ಗೆ ಪ್ರತಿಕ್ರಿಯಿಸಿದ ಕ್ರೆಮ್ಲಿನ್ ಪ್ರೆಸ್ ಸೆಕ್ರೆಟರಿ ಬಿಡೆನ್ ಅವರ ಹೇಳಿಕೆಗಳು “ಸ್ವೀಕಾರಾರ್ಹವಲ್ಲ ಮತ್ತು ಕ್ಷಮಿಸಲಾಗದ ಮಾತು” ಎಂದು ಹೇಳಿದರು. ಏತನ್ಮಧ್ಯೆ, ಉಕ್ರೇನಿಯನ್ ರಾಜಧಾನಿ ಕೀವ್ ನಲ್ಲಿರುವ ವಸತಿ ಕಟ್ಟಡಕ್ಕೆ ಉರುಳಿದ ಕ್ಷಿಪಣಿಯ ಅವಶೇಷಗಳು ಬಡಿದ ನಂತರ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ತುರ್ತು ಸೇವೆ ಗುರುವಾರ ತಿಳಿಸಿದೆ.
⚡️130 survivors saved so far from ruins of Mariupol Drama Theater, which Russians hit with massive bomb on March 16.
The theater was known to house hundreds of women and children. Its bomb shelter reportedly survived the attack. The rescue efforts continue.
— The Kyiv Independent (@KyivIndependent) March 17, 2022
ರಷ್ಯಾದಿಂದ ಬಾಂಬ್ ದಾಳಿಗೊಳಗಾದ ಮಾರಿಯುಪೋಲ್ ಥಿಯೇಟರ್‌ನಿಂದ 130 ನಾಗರಿಕರ ರಕ್ಷಣೆ
ಉಕ್ರೇನ್‌ನ ಮಾರಿಯುಪೋಲ್‌ನ ಥಿಯೇಟರ್‌ನಲ್ಲಿದ್ದ ಅವಶೇಷಗಳು ಮತ್ತು ಕಾಂಕ್ರೀಟ್‌ನಿಂದ 130 ನಾಗರಿಕರನ್ನು ಹೊರತೆಗೆಯಲಾಗಿದೆ ಎಂದು ಕೈವ್ ಇಂಡಿಪೆಂಡೆಂಟ್ ಗುರುವಾರ ಸಂಜೆ ಹೇಳಿದೆ. ಉಕ್ರೇನ್ ಅಧಿಕಾರಿಗಳು ಈ ಹಿಂದೆ ಸಾವಿರಾರು ಮಂದಿ ರಷ್ಯಾದ ಬಾಂಬ್ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಅಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದ್ದರು. ಉಳಿದವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಡೊನೆಟ್ಸ್ಕ್ ಆಡಳಿತದ ಮುಖ್ಯಸ್ಥ ಪಾವ್ಲೋ ಕೈರಿಲೆಂಕೊ, ರಂಗಮಂದಿರದ ಕೆಲವು ಭಾಗಗಳ ಪ್ರವೇಶದ್ವಾರವನ್ನು ಕಲ್ಲುಮಣ್ಣುಗಳು ಹೂತುಹಾಕಿವೆ ಎಂದು ಹೇಳಿದರು.
ಇದನ್ನೂ ಓದಿ: Russia-Ukraine war: ಭಾರತದ ನಿಲುವಿನಿಂದ ತುಂಬಾ ನಿರಾಶೆಯಾಗಿದೆ ಎಂದ ಬ್ರಿಟನ್ ಸಚಿವೆ
Published On - 9:07 pm, Thu, 17 March 22