ನಾಗರಿಕನನ್ನು ಕೊಂದ ಆರೋಪದ ಮೇಲೆ ಕೈವ್ ನ್ಯಾಯಾಲಯಕ್ಕೆ ಹಾಜರಾದ ರಷ್ಯಾದ ಸೈನಿಕ

ಉಕ್ರೇನ್ ಮೇಲೆ ರಷ್ಯಾ ದಂಡೆತ್ತಿ ಹೋಗಿದ್ದ ಸಂದರ್ಭದಲ್ಲಿ ರಷ್ಯಾದ ಸೈನಿಕನೊಬ್ಬ ಉಕ್ರೇನ್ ನಾಯಕರಿನನ್ನು ಹತ್ಯೆಗೈದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಸಂಬಂಧ ಆರೋಪ ಎದುರಿಸುತ್ತಿರುವ ಸೈನಿಕ ಕೈವ್ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.

ನಾಗರಿಕನನ್ನು ಕೊಂದ ಆರೋಪದ ಮೇಲೆ ಕೈವ್ ನ್ಯಾಯಾಲಯಕ್ಕೆ ಹಾಜರಾದ ರಷ್ಯಾದ ಸೈನಿಕ
ನ್ಯಾಯಾಲಯಕ್ಕೆ ಹಾಜರಾದ ರಷ್ಯಾ ಸೈನಿಕ ವಾಡಿಮ್ ಶಿಶಿಮರಿನ್
Follow us
TV9 Web
| Updated By: Rakesh Nayak Manchi

Updated on:May 14, 2022 | 11:14 AM

ಇಡೀ ವಿಶ್ವವೇ ಬೆರಗಾಗುವಂತೆ ರಷ್ಯಾ ದೇಶವು ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಎರಡೂ ದೇಶಗಳ ಸೈನಿಕರು ಸಾವನ್ನಪ್ಪಿದ್ದಾರೆ. ಈ ನಡುವೆ ರಷ್ಯಾದ ಸೈನ್ಯವು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಅಲ್ಲದೆ, ರಷ್ಯಾ ಸೈನಿಕನೊಬ್ಬ 62 ವರ್ಷದ ಉಕ್ರೇನ್ ನಾಗರಿಕನನ್ನು ಹತ್ಯೆ ಗೈದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಆರೋಪ ಎದುರಿಸುತ್ತಿರುವ 21ವರ್ಷದ ರಷ್ಯಾ ಸೈನಿಕ ವಾಡಿಮ್ ಶಿಶಿಮರಿನ್, ಪ್ರಾರ್ಥಮಿಕ ವಿಚಾರಣೆಗಾಗಿ ಉಕ್ರೇನ್ ರಾಜಧಾನಿ ಕೈವ್​ನಲ್ಲಿರುವ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಉಕ್ರೇನ್ರಷ್ಯಾ ಬಿಕ್ಕಟ್ಟು ಬಿಗಡಾಯಿಸಿ ಫೆ.24ರಂದು ರಷ್ಯಾವು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತು. ಅಂದಿನಿಂದ ಸಿಕ್ಕಸಿಕ್ಕಲ್ಲಿ ದಾಳಿ ನಡೆಸಿದ ರಷ್ಯಾ ಪಡೆಗಳು, ನೂರಾರು ನಾಗರಿಕರನ್ನು ಕೊಂದ ಆರೋಪ ಎದುರಿಸುತ್ತಿದೆ. ಸದ್ಯ ವಾಡಿಮ್ ಶಿಶಿಮರಿನ್ ಯುದ್ಧ ಅಪರಾಧಗಳು ಮತ್ತು ಪೂರ್ವಯೋಜಿತ ಕೊಲೆಯ ಆರೋಪದ ಮೇಲೆ ಸಂಭವನೀಯ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.

ರಷ್ಯಾ ಸೈನಿಕ ಶಿಶಿಮರಿನ್ ಕಾರಿನ ಕಿಟಕಿಯಿಂದ ಸ್ವಯಂಚಾಲಿತ ರೈಫಲ್​ನಿಂದ ಗುಂಡು ಹಾರಿಸಿ 62 ವರ್ಷದ ನಾಗರಿಕನನ್ನು ಕೊಂದಿದ್ದಾಗಿ ಆರೋಪಿಸಲಾಗಿದೆ. ಅಲ್ಲದೆ, ಕಾರು ಕಳ್ಳತನಕ್ಕೆ ಸಾಕ್ಷಿ ಇರಬಾರದೆಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾಗಿ ಆರೊಪಿಸಲಾಗಿದೆ. ಈ ಬಗ್ಗೆ ಉಕ್ರೇನ್ಸ್ಕಾ ಪ್ರಾವ್ಡಾ ಸುದ್ದಿ ವೆಬ್​ಸೈಟ್​ಗೆ ಮಾಹಿತಿ ನೀಡಿದ ಪ್ರಾಸಿಕ್ಯೂಟರ್ ಯಾರೋಸ್ಲಾವ್ ಉಶ್ಚಾಪಿವ್ಸ್ಕಿ, ಶಿಶಿಮರಿನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಮತ್ತು ತನಿಖೆಗೆ ಸಹಕರಿಸಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಆರಂಭಿಸಿದ ನಾಲ್ಕನೇ ದಿನಕ್ಕೆ ಅಂದರೆ ಫೆ.28ರಂದು ಉತ್ತರ ಉಕ್ರೇನ್​ನಲ್ಲಿ ಶಿಶಿಮರಿನ್ ಮತ್ತು ಇರತ ನಾಲ್ವರು ಸೈನಿಕರು ಸೇರಿಕೊಂಡು ಚುಪಾಖಿವ್ಕಾ ಗ್ರಾಮದ ಹೊರಭಾಗದಿಂದ ಕಾರನ್ನು ಕದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ಒಂದೊಂದೇ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆಯುತ್ತಲೇ ಮುಂದೆ ಸಾಗಿ ಕೈವ್​ಗೆ ಪ್ರವೇಶಿಸಿತು. ರಷ್ಯಾದ ದಾಳಿಗೆ ಪ್ರತಿ ದಾಳಿ ನಡೆಸಿದ ಉಕ್ರೇನ್, ನೂರಾರು ರಷ್ಯಾ ಸೈನಿಕರನ್ನು ಕೊಂದಿತು. ರಷ್ಯಾ ದೇಶವು ಉಕ್ರೇನ್ ಸೈನಿಕರನ್ನು ಕೊಂದಿದೆ ಮತ್ತು ನಾಗಕರಿನನ್ನು ಹತ್ಯೆಗೈದ ಆರೋಪ ಎದುರಿಸುತತ್ತಿದೆ. ಜೊತೆಗೆ ಶಾಲಾ ಕಾಲೇಜು, ಪ್ರಮುಖ ಕಟ್ಟಡಗಳ ಮೇಲೆ ಬಾಂಬ್, ಶೆಲ್ ದಾಳಿ ನಡೆಸಿ ಧ್ವಂಸಗೊಳಿಸಿತ್ತು.

Published On - 11:12 am, Sat, 14 May 22