ರಷ್ಯಾದ ಬೃಹತ್ ಯುದ್ಧನೌಕೆಯ ಮೇಲೆ ಅಪ್ಪಳಿಸಿದ ಉಕ್ರೇನ್ ಕ್ಷಿಪಣಿಗಳು: ಸಾವಿರಾರು ಸೈನಿಕರ ಸಾವಿನ ಶಂಕೆ

ಕಪ್ಪುಸಮುದ್ರ ಪ್ರದೇಶದಲ್ಲಿ ರಷ್ಯಾ ನೌಕಾದಳದ ಪ್ರಮುಖ ಶಕ್ತಿಯಾಗಿದ್ದ ‘ಮೊಸ್​ಕ್​ವಾ’ ಕ್ಷಿಪಣಿ ವಾಹನ ನೌಕೆಯ ಮೇಲೆ ಉಕ್ರೇನ್ ಕ್ಷಿಪಣಿ ದಾಳಿ ನಡೆಸಿದೆ.

ರಷ್ಯಾದ ಬೃಹತ್ ಯುದ್ಧನೌಕೆಯ ಮೇಲೆ ಅಪ್ಪಳಿಸಿದ ಉಕ್ರೇನ್ ಕ್ಷಿಪಣಿಗಳು: ಸಾವಿರಾರು ಸೈನಿಕರ ಸಾವಿನ ಶಂಕೆ
ರಷ್ಯಾ ನೌಕಾಪಡೆಯ ಮಹತ್ವದ ಯುದ್ಧನೌಕೆ ಮೊಸ್​ಕ್​ವಾ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 14, 2022 | 2:55 PM

ಕೀವ್: ಕಪ್ಪುಸಮುದ್ರ ಪ್ರದೇಶದಲ್ಲಿ ರಷ್ಯಾ ನೌಕಾದಳದ ಪ್ರಮುಖ ಶಕ್ತಿಯಾಗಿದ್ದ ‘ಮೊಸ್​ಕ್​ವಾ’ ಕ್ಷಿಪಣಿ ವಾಹನ ನೌಕೆಯ ಮೇಲೆ ಉಕ್ರೇನ್ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಯುದ್ಧನೌಕೆಗೆ ತೀವ್ರ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ. ಯುದ್ಧನೌಕೆಯ ಮೇಲೆ ಕ್ಷಿಪಣಿ ಸ್ಫೋಟಗೊಂಡಾಗ, ನೌಕೆಯಲ್ಲಿದ್ದ ಸ್ಫೋಟಕಗಳು ಸಹ ಸ್ಫೋಟಿಸಿದವು. ನೌಕೆಯಲ್ಲಿದ್ದ ಯಾವೊಬ್ಬ ಸಿಬ್ಬಂದಿಯೂ ಬದುಕಿ ಉಳಿದಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಆದರೆ ರಷ್ಯಾದ ರಕ್ಷಣಾ ಇಲಾಖೆಯು ಈವರೆಗೂ ಉಕ್ರೇನ್ ದಾಳಿಯಿಂದ ಯುದ್ಧನೌಕೆ ಹಾನಿಗೀಡಾಗಿದೆ ಎಂಬ ವರದಿಗಳನ್ನು ಪುಷ್ಟೀಕರಿಸಿಲ್ಲ. ‘ಸ್ಫೋಟದ ನಿಜವಾದ ಕಾರಣ ಏನು ಎಂಬ ಬಗ್ಗೆ ತನಿಖೆಯ ನಂತರ ಮಾಹಿತಿ ನೀಡಲಾಗುವುದು’ ಎಂದಷ್ಟೇ ಹೇಳುತ್ತಿದೆ.

ಉಕ್ರೇನ್​ನ ಒಡೆಸ್ಸಾ ತೀರದಿಂದ ಮರಿಯುಪೋಲ್​ವರೆಗಿನ ಸಾಗರ ಗಡಿಯನ್ನು ರಷ್ಯಾ ನಿರ್ಬಂಧಿಸಿತ್ತು. ಈ ನಿರ್ಬಂಧ ಆದೇಶ ಜಾರಿಗೊಳಿಸುವಲ್ಲಿ ಮೊಸ್​ಕ್​ವಾ ಯುದ್ಧನೌಕೆಯು ಮಹತ್ವದ ಪಾತ್ರ ನಿರ್ವಹಿಸಿತ್ತು. ಉಕ್ರೇನ್​ ಮೇಲೆ ರಷ್ಯಾ ದಾಳಿ ನಡೆಸಿದ ಆರಂಭದ ದಿನಗಳಲ್ಲಿ ಮೊಸ್​ಕ್​ವಾ ನೇತೃತ್ವದ ಇತರ ಯುದ್ಧನೌಕೆಗಳು ಉಕ್ರೇನ್​ನ ತೀರ ಪ್ರದೇಶಗಳ ಮೇಲೆ ಅವ್ಯಾಹತ ದಾಳಿ ನಡೆಸಿದ್ದವು. ಉಕ್ರೇನ್​ನ ಸ್ನೇಕ್ ಐಲ್ಯಾಂಡ್​ನಲ್ಲಿ ಶರಣಾಗಲು ನಿರಾಕರಿಸಿದ ಉಕ್ರೇನ್ ಯೋಧರ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಮಸ್​ಕ್​ವಾ ಯುದ್ಧ ನೌಕೆಯು ವಿಶ್ವದ ಗಮನ ಸೆಳೆದಿತ್ತು. ಈ ಮೊದಲು ರಷ್ಯಾ ಇದೇ ಯುದ್ಧನೌಕೆಯನ್ನು ಸಿರಿಯಾ ಮೇಲಿನ ದಾಳಿಗೂ ನಿಯೋಜಿಸಿತ್ತು. ಅಲ್ಲಿ ರಷ್ಯಾದ ಸಶಸ್ತ್ರಪಡೆಗಳಿಗೆ ಕಾವಲುನೌಕೆಯಾಗಿ ಕಾರ್ಯನಿರ್ವಹಿಸಿತ್ತು.

ರಷ್ಯಾದ ಭೂಗಡಿಯೊಳಗಿರುವ ತೈಲಸಂಗ್ರಹಾಗಾರದ ಮೇಲೆ ದಾಳಿ ನಡೆಸಿ ವ್ಯಾಪಕ ಹಾನಿ ಮಾಡಿದ್ದ ಉಕ್ರೇನ್, ಇದೀಗ ರಷ್ಯಾ ರಕ್ಷಣಾ ವ್ಯವಸ್ಥೆಯ ಅತಿ ಪ್ರಮುಖ ಯುದ್ಧನೌಕೆಯನ್ನು ಹಾಳುಗೆಡವಿದೆ. ಈ ಬೆಳವಣಿಗೆಗಳಿಂದ ಸಿಟ್ಟಿಗೆದ್ದಿರುವ ರಷ್ಯಾ, ಕೀವ್ ನಗರದ ಮೇಲೆ ಮತ್ತೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ರಷ್ಯಾ ಪಡೆಗಳು ಹಿಂದಿರುಗಿದ ನಂತರ ತುಸು ನೆಮ್ಮದಿಯಾಗಿದ್ದ ಕೀವ್ ನಿವಾಸಿಗಳಲ್ಲಿ ಈ ಬೆದರಿಕೆ ಹೊಸ ಆತಂಕಕ್ಕೆ ಕಾರಣವಾಗಿದೆ.

ಉಕ್ರೇನ್ ಮೇಲೆ ದಾಳಿ ಮಾಡಿ ಸುಮಾರು ಎರಡು ತಿಂಗಳಾದರೂ ಇಡೀ ದೇಶ ಇನ್ನೂ ಸಂಪೂರ್ಣವಾಗಿ ರಷ್ಯಾದ ಸುಪರ್ದಿಗೆ ಬಂದಿಲ್ಲ. ಜಾಗತಿಕ ಮಟ್ಟದಲ್ಲಿ ಮಿಲಿಟರಿ ಸೂಪರ್ ಪವರ್ ಎನಿಸಿಕೊಂಡಿರುವ ರಷ್ಯಾಗೆ ಇದು ದೊಡ್ಡ ಹಿನ್ನಡೆಯಾಗಿದೆ. ಕೆಲವೇ ದಿನಗಳಲ್ಲಿ ಮತ್ತಷ್ಟು ಪಡೆಗಳನ್ನು ಒಗ್ಗೂಡಿಸಿಕೊಂಡು ಉಕ್ರೇನ್ ಮೇಲೆ ರಷ್ಯಾ ಮುಗಿಬೀಳಬಹುದು ಎಂಬ ವಿಶ್ಲೇಷಣೆಗಳು ಜಾಗತಿಕ ಮಾಧ್ಯಮಗಳಲ್ಲಿ ಪ್ರಟವಾಗುತ್ತಿವೆ.

ಮತ್ತೊಂದು ಬೆಳವಣಿಗೆಯಲ್ಲಿ ಉಕ್ರೇನ್​ನ ನೆರವಿಗೆ ಅಮೆರಿಕ ಧಾವಿಸಿದ್ದು, ಸಶಸ್ತ್ರ ಪಡೆಗಳ ಗಸ್ತು ವಾಹನಗಳು, ಹೆಲಿಕಾಪ್ಟರ್​ ಒದಗಿಸಲು ಮುಂದಾಗಿದೆ. ಈ ಮೊದಲು ಉಕ್ರೇನ್​ಗೆ ನೀಡಲು ನಿರಾಕರಿಸಿದ್ದ ಕೆಲ ಯುದ್ಧೋಪಕರಣಗಳನ್ನು ಒದಗಿಸಲು ಇದೀಗ ಅಮೆರಿಕ ಸಮ್ಮತಿಸಿದ್ದು, ಉಕ್ರೇನ್ ಸಹ ರಷ್ಯಾದ ಹೊಸ ದಾಳಿಯನ್ನು ಎದುರಿಸಲು ಸಿದ್ಧತೆಯನ್ನು ಚುರುಕುಗೊಳಿಸಿದೆ.

ಇದನ್ನೂ ಓದಿ: ಉಕ್ರೇನ್​ಗೆ ಹೆಚ್ಚುವರಿ ನೆರವು ಒದಗಿಸುವ ಕುರಿತು ಬೈಡೆನ್ ಮತ್ತು ಝೆಲೆನ್​ಸ್ಕಿ ನಡುವೆ ಸುದೀರ್ಘ ಮಾತುಕತೆ: ಶ್ವೇತ ಭವನ

ಇದನ್ನೂ ಓದಿಅತ್ಯಾಚಾರವನ್ನೂ ಆಯುಧವಾಗಿಸಿಕೊಂಡ ರಷ್ಯಾ ಸೇನೆ: ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಗಂಭೀರ ಆರೋಪ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್