
ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್, ದಿಗ್ಗಜ ಕ್ರಿಕೆಟಿಗ ಅಬ್ದುಲ್ ಖಾದಿರ್ ಹೃದಯಾಘಾತದಿಂದ ಶುಕ್ರವಾರ ಲಾಹೋರ್ನಲ್ಲಿ ಮೃತಪಟ್ಟಿದ್ದಾರೆ. ಅಬ್ದುಲ್ ಖಾದಿರ್ಗೆ 63 ವರ್ಷ ವಯಸ್ಸಾಗಿತ್ತು.
ಪಾಕಿಸ್ತಾನದ ಪರ 67 ಟೆಸ್ಟ್ ಹಾಗು 104 ಏಕದಿನ ಪಂದ್ಯಗಳನ್ನು ಆಡಿದ್ದ ಅಬ್ದುಲ್, ಒಟ್ಟು 368 ವಿಕೆಟ್ಗಳನ್ನು ಪಡೆದಿದ್ದರು. ಅಲ್ಲದೆ 1979ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಭಾರತ ಮತ್ತು ಪಾಕ್ ನಡುವಿನ ಟೆಸ್ಟ್‌ನಲ್ಲಿ ಖಾದಿರ್ ಆಡಿದ್ದರು. ಮಾಜಿ ಕ್ರಿಕೆಟ್ ಆಟಗಾರನ ನಿಧನಕ್ಕೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.
Published On - 12:19 pm, Mon, 9 September 19