ಪಹಲ್ಗಾಮ್ ದಾಳಿ ರೂವಾರಿ ಸೈಫುಲ್ಲಾ ಕಸೂರಿಯಿಂದ ಪಾಕ್ನಲ್ಲಿ ಭಾರತ ವಿರೋಧಿ ರ್‍ಯಾಲಿ
ಪಹಲ್ಗಾಮ್(Pahalgam) ದಾಳಿ ಬಳಿಕ ತಲೆ ಮರೆಸಿಕೊಂಡಿದ್ದ ದಾಳಿ ರೂವಾರಿ ಸೈಫುಲ್ಲಾ ಕಸೂರಿ ಈಗ ಮತ್ತೆ ಬಾಲ ಬಿಚ್ಚಿದ್ದು, ಭಾರತ ವಿರೋಧಿ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನಾವಂತೂ ಉಗ್ರರನ್ನು ಸಲಹುತ್ತಿಲ್ಲ, ನಮಗೆ ಅವರಿಗೆ ಸಂಬಂಧವಿಲ್ಲ ಎಂದು ಹೇಳುತ್ತಲೇ ಪಾಕಿಸ್ತಾನದ ಅಧಿಕಾರಿಗಳು ಉಗ್ರರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಹತ್ಯೆ ಮಾಡಲಾಗಿತ್ತು.

ಇಸ್ಲಾಮಾಬಾದ್, ಮೇ 29: ಪಹಲ್ಗಾಮ್(Pahalgam) ದಾಳಿ ಬಳಿಕ ತಲೆ ಮರೆಸಿಕೊಂಡಿದ್ದ ದಾಳಿ ರೂವಾರಿ ಸೈಫುಲ್ಲಾ ಕಸೂರಿ ಈಗ ಮತ್ತೆ ಬಾಲ ಬಿಚ್ಚಿದ್ದು, ಭಾರತ ವಿರೋಧಿ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನಾವಂತೂ ಉಗ್ರರನ್ನು ಸಲಹುತ್ತಿಲ್ಲ, ನಮಗೆ ಅವರಿಗೆ ಸಂಬಂಧವಿಲ್ಲ ಎಂದು ಹೇಳುತ್ತಲೇ ಪಾಕಿಸ್ತಾನದ ಅಧಿಕಾರಿಗಳು ಉಗ್ರರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಹತ್ಯೆ ಮಾಡಲಾಗಿತ್ತು. ಲಷ್ಕರ್ ಎ ತೊಯ್ಬಾದ ಕಮಾಂಡರ್ ಸೈಫುಲ್ಲಾ ಸಾರ್ವಕನಿಕವಾಗಿ ಕಾಣಸಿಕೊಂಡಿದ್ದಾರೆ. ಪಾಕಿಸ್ತಾನಿ ರಾಜಕೀಯ ನಾಯಕರು ಮತ್ತು ಇತರ ವಾಂಟೆಡ್ ಭಯೋತ್ಪಾದಕರೊಂದಿಗೆ ರಾಜಕೀಯ ರ್‍ಯಾಲಿಯಲ್ಲಿ ವೇದಿಕೆಯನ್ನು ಹಂಚಿಕೊಂಡರು.
ಕಸೂರ್‌ನಲ್ಲಿ ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈತ ಭಾಗವಹಿಸಿದ್ದ. ಈ ರ್‍ಯಾಲಿಯಲ್ಲಿ ಭಾರತ ವಿರೋಧಿ ಘೋಷಣೆಗಳು ಕೂಡ ಇದ್ದವು. ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್ ಅವರ ಪುತ್ರ ಮತ್ತು ತಲ್ಹಾ ಸಯೀದ್ ಕೂಡ ಇದ್ದ.
ಮತ್ತಷ್ಟು ಓದಿ: ಪಹಲ್ಗಾಮ್ ದಾಳಿಗೆ ಒಂದು ತಿಂಗಳು, ಆಪರೇಷನ್ ಸಿಂಧೂರ್ನಿಂದ ಸರ್ವಪಕ್ಷ ಸಂಸದರ ನಿಯೋಗ ರಚನೆವರೆಗೆ ಇಲ್ಲಿದೆ ಮಾಹಿತಿ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ನನ್ನನ್ನು ದೂಷಿಸಲಾಯಿತು, ಈಗ ನನ್ನ ಹೆಸರು ಇಡೀ ಜಗತ್ತಿನಲ್ಲಿ ಪ್ರಸಿದ್ಧವಾಗಿದೆ ಎಂದು ಪಂಜಾಬ್ ಪ್ರಾಂತ್ಯದ ಕಸೂರ್‌ನಲ್ಲಿ ಕಸೂರಿ ಹೇಳಿದ್ದಾರೆ. ಅಲಹಾಬಾದ್‌ನಲ್ಲಿ ಮುದಸ್ಸಿರ್ ಶಹೀದ್ ಹೆಸರಿನಲ್ಲಿ ಕೇಂದ್ರ, ರಸ್ತೆ ಮತ್ತು ಆಸ್ಪತ್ರೆಯನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿದ್ದಾನೆ.
Lashkar-e-Taiba terrorist deputy chief Saifullah Kasuri, who had been in hiding, appeared at the Youm-e-Takbeer public gathering in Kasur, Punjab, Pakistan, under heavy security. pic.twitter.com/sOlp86k5FJ
— Faraz Pervaiz (@FarazPervaiz3) May 29, 2025
ಮೂಲಗಳ ಪ್ರಕಾರ, ಪಹಲ್ಗಾಮ್ ಹತ್ಯಾಕಾಂಡದ ನಂತರ ಭಾರತ ನಡೆಸಿದ ಪ್ರತೀಕಾರದ ಆಪರೇಷನ್ ಸಿಂಧೂರ್ ದಾಳಿಯಲ್ಲಿ ಹತರಾದ ಹಲವಾರು ಉನ್ನತ ಮಟ್ಟದ ಭಯೋತ್ಪಾದಕ ಕಾರ್ಯಕರ್ತರಲ್ಲಿ ಮುದಸ್ಸಿರ್ ಅಹ್ಮದ್ ಒಬ್ಬ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಪಟ್ಟಿಯಲ್ಲಿ 32 ನೇ ಸ್ಥಾನದಲ್ಲಿರುವ ತಲ್ಹಾ ಸಯೀದ್, ಈ ರ್‍ಯಾಲಿಯಲ್ಲಿ ಜಿಹಾದಿ ಘೋಷಣೆಗಳು ಮತ್ತು ನಾರಾ-ಎ-ತಕ್ಬೀರ್ಗಳಿಂದ ತುಂಬಿದ ಉದ್ರಿಕ್ತ ಭಾಷಣ ಮಾಡಿದರು.
🚨🇵🇰👹 Exclusive
Alert : Lengthy 20 min hate speech
After going into hiding for several days following #OperationSindoor , Lashkar-E-Tayiba Deputy Chief Saifullah Kasuri asserts that India wrongfully implicated him in the Pahalgam attack. He even goes so far as to say that… pic.twitter.com/QTWafflJ2l
— OsintTV 📺 (@OsintTV) May 28, 2025
ಪಾಕಿಸ್ತಾನದ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಲಾಹೋರ್‌ನ NA-122 ಸ್ಥಾನದಿಂದ ಸಂಸತ್ತಿಗೆ ಸ್ಪರ್ಧಿಸಿ ವಿಫಲರಾದ ಸಯೀದ್, ನಿಷೇಧಿತ ಎಲ್‌ಇಟಿಯ ರಾಜಕೀಯ ಪಕ್ಷವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಪಿಎಂಎಂಎಲ್‌ನೊಂದಿಗೆ ತನ್ನ ಸಾರ್ವಜನಿಕ ಸಂಬಂಧವನ್ನು ಮುಂದುವರೆಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








