NFT: ನಾನ್​ ಫಂಜಿಬಲ್ ಟೋಕನ್​ಗಳನ್ನು ಪರಿಚಯಿಸಲು ಮುಂದಾದ ಕೊಲೆಕ್ಸಿನ್ ಕಂಪನಿ

Salim Marchant, Sulieman Marchant,: ಕೊಲೆಕ್ಸಿನ್ ಸಂಸ್ಥೆ ಇದೇ ಮೊದಲ ಬಾರಿಗೆ ವರ್ಚುವಲ್ ಎನ್​ಎಫ್​ಟಿ ( ನಾನ್​ ಫಂಗೇಬಲ್ ಟೋಕನ್​)ಗಳ ಮ್ಯೂಸಿಯಂ ತೆರೆಯಲು ಮುಂದಾಗಿದೆ.

NFT: ನಾನ್​ ಫಂಜಿಬಲ್ ಟೋಕನ್​ಗಳನ್ನು ಪರಿಚಯಿಸಲು ಮುಂದಾದ ಕೊಲೆಕ್ಸಿನ್ ಕಂಪನಿ
Follow us
TV9 Web
| Updated By: Digi Tech Desk

Updated on: Dec 04, 2021 | 7:19 PM

ಖ್ಯಾತ ಸಂಗೀತ ಸಂಯೋಜಕ ಸಹೋದರರಾದ ಸಲೀಂ ಮರ್ಚಂಟ್​ ಹಾಗೂ ಸುಲೈಮಾನ್ ಮರ್ಚಂಟ್ ಅವರ ಮೂಲಕ ಕೊಲೆಕ್ಸಿನ್ ಸಂಸ್ಥೆ ಇದೇ ಮೊದಲ ಬಾರಿಗೆ ವರ್ಚುವಲ್ ಎನ್​ಎಫ್​ಟಿ ( ನಾನ್​ ಫಂಜಿಬಲ್ ಟೋಕನ್​)ಗಳ ಮ್ಯೂಸಿಯಂ ತೆರೆಯಲು ಮುಂದಾಗಿದೆ. ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಡಿಜಿಟಲ್​ ಟೋಕನ್​ಗಳನ್ನು ವರ್ಚುವಲ್ ಮೂಲಕ​ ನೀಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಕೊಲೆಕ್ಸಿನ್ ಸಂಸ್ಥೆ ಸಿಇಒ ತಿಳಿಸಿದ್ದಾರೆ.  ಸಲೀಂ ಮರ್ಚಂಟ್​ ಹಾಗೂ ಸುಲೈಮಾನ್ ಮರ್ಚಂಟ್  ಕೊಲೆಕ್ಸಿನ್ ಕಂಪನಿಯ ಎನ್​​ಎಫ್​ಟಿಯನ್ನು  ಬಿಡುಗಡೆಗೊಳಿಸುತ್ತಿದ್ದಾರೆ. 

ನಾನ್​ ಫಂಜಿಬಲ್ ಟೋಕನ್​ಗಳನ್ನು ವರ್ಚುವಲ್​ ಮೂಲಕ ನೀಡಲು ಸಲೀಂ ಮರ್ಚಂಟ್​ ಹಾಗೂ ಸುಲೈಮಾನ್ ಮರ್ಚಂಟ್ ಕೊಲೆಕ್ಸಿನ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕುರಿತು ಕೊಲೆಕ್ಸಿನ್ ಸಿಇಒ ಅಭಯ್ ಅಗರ್ವಾಲ್, ಮೌಲ್ಯವರ್ಧಿತ ಡಿಜಿಟಲ್​ ಟೋಕನ್ ವ್ಯಾಪಾರದಿಂದ ಕಲಾವಿದರು ಮತ್ತು ಅಭಿಮಾನಿಗಳ ನಡುವೆ ಸೌಹಾರ್ದಯುತ ಸಂಬಂಧ ಏರ್ಪಡಲಿದೆ. ಡಿಜಿಟಲ್​ ವ್ಯಾಪಾರಕ್ಕೆ ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಜಗತ್ತಿನ ಎಲ್ಲ ಸೆಲೆಬ್ರಿಟಿಗಳು ವರ್ಚುವಲ್​ ಆಯ್ಕೆಗೆ ನಮ್ಮನ್ನು ಬಳಸುವಂತೆ ಮಾಡುತ್ತೇವೆ ಎಂದಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಸುಲೈಮಾನ್ ಮರ್ಚಂಟ್ ನಾವು ನಮ್ಮ ಸಂಗೀತದ ಮೂಲಕ ಅತೀ ಹೆಚ್ಚು ಜನರನ್ನು ತಲುಪಲು ಈ ವರ್ಚುವಲ್ ವೇದಿಕೆ ಸಹಾಯ ಮಾಡಲಿದೆ ಎಂದಿದ್ದಾರೆ. ಕೊಲೆಕ್ಸಿನ್ ಸಂಸ್ಥೆಯು ಸೆಲೆಬ್ರಿಟಿಗಳಿಗಾಗಿ ವರ್ಚುವಲ್ ಎನ್​ಎಫ್​ಟಿ ನೀಡುವ ಜಗತ್ತಿನ ಮೊದಲ ಕಂಪನಿಯಾಗಿದೆ. ಇದರ ಮೂಲಕ ಅಭಿಮಾನಿಗಳು ಕೊಲೆಕ್ಸಿನ್ ಪ್ರವೇಶಿಸಿ ತಮ್ಮಿಷ್ಟದ ಸೆಲೆಬ್ರಿಟಿಗಳ ಬಗೆಗೆ ತಿಳಿದುಕೊಳ್ಳಬಹುದು.

ಎನ್​ಎಫ್​ಟಿ ಎಂದರೆ ಇದೊಂದು ಡಿಜಿಟಲ್ ಡಾಟಾ ಸೇವಿಂಗ್​ ಪ್ಲಾಟ್​ಫಾರ್ಮ್. ಇದರಲ್ಲಿ ಹಾಕಲಾದ ಫೋಟೋ ವಿಡಿಯೋ, ಆಡಿಯೋಗಳು ಅಥವಾ ಸಂಗೀತ ಕಾರ್ಯಕ್ರಮಗಳಿಗೆ ಕಾಪಿರೈಟ್​ನೀಡಲಾಗುತ್ತದೆ. ಎನ್​ಎಫ್​ಟಿಯಲ್ಲಿ ಹಾಕಲಾದ ವಿಷಯಗಳನ್ನು ಬೇರೆ ಯಾರೂ ಕೂಡ ಅನಧಿಕೃತವಾಗಿ ಬಳಸಿಕೊಳ್ಳುವಂತಿಲ್ಲ. ಹೀಗಾಗಿ ಎನ್​ಎಫ್​ಟಿಯಲ್ಲಿನ ಮಾಹಿತಿಗಳಿಗೆ ಹೆಚ್ಚಿನ ಭದ್ರತೆ ಇರುತ್ತದೆ.  ಈ ರೀತಿಯ ಎನ್​ಎಫ್​ಟಿಗಳನ್ನು ಇದೀಗ ಕೊಲೆಕ್ಸಿನ್ ಕಂಪನಿ ನೀಡುತ್ತಿದೆ. ಈ ಕಂಪನಿ ಇದೇ ಮೊದಲ ಬಾರಿಗೆ ಈ ರೀತಿ ಯೋಜನೆ ಪರಿಚಯಿಸುತ್ತಿದ್ದು, ಅದರಲ್ಲಿ ಸಲೀಂ ಮರ್ಚಂಟ್​ ಹಾಗೂ ಸುಲೈಮಾನ್ ಮರ್ಚಂಟ್ ಅವರ ಸಂಗೀತವನ್ನು ಮೊದಲ ಬಾರಿಗೆ ಅಭಿಮಾನಿಗಳೆದುರು ತರುತ್ತಿದೆ.