ಯುವತಿಯೊಂದಿಗೆ ಸೆಕ್ಸ್​ ಚಾಟ್​, ಅಸಭ್ಯ ವಿಡಿಯೋ ಶೇರ್​ ಮಾಡಿದ ಆರೋಪ; ಬಾಂಗ್ಲಾ ಡೆಪ್ಯೂಟಿ ಹೈಕಮಿಷನ್​ ಹಿರಿಯ ಅಧಿಕಾರಿ ವಾಪಸ್​

ಯುವತಿಯೊಂದಿಗೆ ಸೆಕ್ಸ್​ ಚಾಟ್​, ಅಸಭ್ಯ ವಿಡಿಯೋ ಶೇರ್​ ಮಾಡಿದ ಆರೋಪ; ಬಾಂಗ್ಲಾ ಡೆಪ್ಯೂಟಿ ಹೈಕಮಿಷನ್​ ಹಿರಿಯ ಅಧಿಕಾರಿ ವಾಪಸ್​
ಸಾಂಕೇತಿಕ ಚಿತ್ರ

ಯುವತಿಯೊಬ್ಬಳು ಜನವರಿ 16ರಂದು, ಅಧಿಕಾರಿ ಖಾದರ್​ ಮಾಡಿದ್ದಾರೆ ಎನ್ನಲಾದ ಒಂದಷ್ಟು ಅಶ್ಲೀಲ ವಾಟ್ಸ್​ಆ್ಯಪ್​ ಚಾಟ್​ಗಳನ್ನು ಮತ್ತು ಅಸಭ್ಯ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು.

TV9kannada Web Team

| Edited By: Lakshmi Hegde

Jan 30, 2022 | 2:42 PM

ಕೋಲ್ಕತ್ತ: ಇಲ್ಲಿರುವ ಬಾಂಗ್ಲಾದೇಶದ ಡೆಪ್ಯೂಟಿ ಹೈಕಮಿಷನ್ (Deputy High commission​ ಕಚೇರಿಯಲ್ಲಿದ್ದ  ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ಹಗರಣದಲ್ಲಿ ಸಿಲುಕಿದ್ದು, ಸದ್ಯ ಅವರನ್ನು ಭಾರತದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಢಾಕಾಗೆ ವಾಪಸ್​ ಕಳಿಸಿದೆ. ಭಾರತದ ಮಹಿಳೆಯೊಬ್ಬರ ಜತೆ ಅಶ್ಲೀಲ ಚಾಟ್​ ಮಾಡಿದ್ದಾರೆಂಬ ಆರೋಪ ಕೇಳಿಬಂದ ಬೆನ್ನಲ್ಲೇ ಅವರನ್ನು ವಾಪಸ್​ ಕಳಿಸಲಾಗಿದೆ.  ಅಷ್ಟೇ ಅಲ್ಲ, ಇಂಥ ಆರೋಪಗಳ ಹೊತ್ತಿರುವವರನ್ನು ಸೂಕ್ತ ತನಿಖೆಗೆ ಒಳಪಡಿಸುವ ಅಗತ್ಯವಿದೆ ಎಂದು ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಇಲಾಖೆ ಕೂಡ ಹೇಳಿದೆ.

ಹೀಗೆ ಆರೋಪ ಹೊತ್ತು, ಢಾಕಾಕ್ಕೆ ಮರಳಿದ ಬಾಂಗ್ಲಾ ಅಧಿಕಾರಿಯ ಹೆಸರು ಮುಹಮ್ಮದ್ ಸನಿಯುಲ್ ಖಾದರ್. ಕೋಲ್ಕತ್ತದಲ್ಲಿರುವ ಬಾಂಗ್ಲಾದೇಶ ಡೆಪ್ಯೂಟಿ ಹೈಕಮಿಷನ್​ ಕಚೇರಿಯಲ್ಲಿ ರಾಜಕೀಯ ವಿಭಾಗದ ಪ್ರಥಮ ಕಾರ್ಯದರ್ಶಿಯಾಗಿದ್ದರು. ಇವರ ವಿರುದ್ಧ ಲೈಂಗಿಕ ಹಗರಣದ ಆರೋಪ ಕೇಳಿಬರುತ್ತಿದ್ದಂತೆ ಬಾಂಗ್ಲಾದೇಶ ವಿದೇಶಾಂಗ ಇಲಾಖೆಯ ಸಹಾಯಕ ಕಾರ್ಯದರ್ಶಿ  ಮೊಹಮ್ಮದ್ ಮಹಮ್ಮದುಲ್ ಹಕ್ ಆದೇಶ ಪತ್ರ ಹೊರಡಿಸಿದ್ದು, 24ಗಂಟೆಯಲ್ಲಿ ಕೋಲ್ಕತ್ತದಿಂದ ಹಿಂದಿರುಗುವಂತೆ ಸನಿಯಲ್​ ಖಾದರ್​ಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಲ್ಕತ್ತದಲ್ಲಿರುವ ಬಾಂಗ್ಲಾದೇಶ ಡೆಪ್ಯೂಟಿ ಹೈ ಕಮಿಷನರ್​  ತೌಫೀಕ್ ಹಸನ್​, ಇದು ತುಂಬ ಸೂಕ್ಷ್ಮವಾದ ವಿಷಯ. ಇಂಥ ಆರೋಪಗಳ ವಿಚಾರದಲ್ಲಿ ನಮ್ಮದು ಶೂನ್ಯ ಸಹಿಷ್ಣುತೆ ಧ್ಯೇಯ. ಸದ್ಯ ಆರೋಪ ಎದುರಿಸುತ್ತಿರುವ ಅಧಿಕಾರಿಯನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳಿಸಿದ್ದು, ತನಿಖೆ ನಡೆಯುತ್ತಿದೆ. ತನಿಖೆ ಸಂಪೂರ್ಣಗೊಂಡ ನಂತರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.  ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿರುವ ಅಧಿಕಾರಿ ಮುಹಮ್ಮದ್ ಸನಿಯುಲ್ ಖಾದರ್, ಜನವರಿ 19 ರಂದು ಬೆಳಗ್ಗೆ 11.40ರಹೊತ್ತಿಗೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣಗ ಜಿಲ್ಲೆಯಲ್ಲಿರುವ ಪೆಟ್ರಾಪೋಲ್-ಬೆನಾಪೋಲ್ ಗಡಿ ಮೂಲಕ ವಾಪಸ್ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ.

ಏನಿದು ಪ್ರಕರಣ?  ಬಾಂಗ್ಲಾದೇಶದ ಡೆಪ್ಯೂಟಿ ಹೈಕಮಿಷನ್​ ಕಚೇರಿಯ ಫೇಸ್​ಬುಕ್ ಖಾತೆಗೆ ಪ್ರವೇಶಾನುಮತಿ ಹೊಂದಿರುವ ಅಂದರೆ, ಈ ಪೇಜ್​​ನಿಂದ ಯಾವುದೇ ಪೋಸ್ಟ್​ಗಳನ್ನು ಮಾಡಲು ಅನುಮತಿ ಪಡೆದಿರುವ ಯುವತಿಯೊಬ್ಬಳು ಜನವರಿ 16ರಂದು, ಅಧಿಕಾರಿ ಖಾದರ್​ ಮಾಡಿದ್ದಾರೆ ಎನ್ನಲಾದ ಒಂದಷ್ಟು ಅಶ್ಲೀಲ ವಾಟ್ಸ್​ಆ್ಯಪ್​ ಚಾಟ್​ಗಳನ್ನು ಮತ್ತು ಅಸಭ್ಯ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲ, ಫೇಸ್​​ಬುಕ್ ಪೇಜ್​​ನ ಮೆಸೆಂಜರ್​​ನಲ್ಲಿ ಕೂಡ ಮತ್ತೊಂದಿಷ್ಟು ಇಂಥದ್ದೇ ವಿಡಿಯೋ, ಚಾಟ್​ಗಳನ್ನು ಕಳಿಸಿದ್ದರು. ಕೂಡಲೇ ನಮ್ಮ ಪ್ರಧಾನಕಚೇರಿಯಿಂದ ಢಾಕಾದಲ್ಲಿರುವ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ನೀಡಲಾಯಿತು. ಅದನ್ನು ಗಂಭೀರವಾಗಿ ಪರಿಗಣಿಸಿದ ಪಿಎಂಒ, ಖಾದರ್​​ರನ್ನು ಕೂಡಲೇ ವಾಪಸ್ ಕರೆಸುವಂತೆ ಆದೇಶಿಸಿದೆ ಎಂದು ಡೆಪ್ಯೂಟಿ ಹೈ ಕಮಿಷನರ್​  ತೌಫೀಕ್ ಹಸನ್​ ಮಾಹಿತಿ ನೀಡಿದ್ದಾರೆ. ಅಂದಹಾಗೇ,  ಮುಹಮ್ಮದ್ ಸನಿಯುಲ್ ಖಾದರ್ ಕಳೆದ ವರ್ಷವಷ್ಟೇ ಡೆಪ್ಯೂಟಿ ಹೈಕಮಿಷನ್ ಕಚೇರಿಗೆ ನೇಮಕಗೊಂಡಿದ್ದರು.

ಇದನ್ನೂ ಓದಿ: ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಬೇಕು: ಅರವಿಂದ ಕೇಜ್ರಿವಾಲ್

Follow us on

Related Stories

Most Read Stories

Click on your DTH Provider to Add TV9 Kannada