ಮುಂಬೈ: ಸೆಲ್ಫೀ (Selfie) ಅಥವಾ ಫೋಟೋ ಕ್ರೇಜ್ ಕೆಲವೊಮ್ಮೆ ನಮ್ಮ ಜೀವವನ್ನೇ ಬಲಿ ಪಡೆದುಬಿಡುತ್ತದೆ. ಒಮನ್ನಲ್ಲಿರುವ ಸಮುದ್ರಕ್ಕೆ ತೆರಳಿದ್ದ ಮಹಾರಾಷ್ಟ್ರದ ಸಾಂಗ್ಲಿ (Sangli) ಜಿಲ್ಲೆಯ ಫ್ಯಾಮಿಲಿಯೊಂದು ಸಂತೋಷದಿಂದ ಎಂಜಾಯ್ ಮಾಡುತ್ತಿರುವಾಗಲೇ ಅಪ್ಪಳಿಸಿದ ಬೃಹತ್ ಅಲೆಯೊಂದು 5 ಜನರನ್ನು ಬಲಿಪಡೆದಿದೆ. ಫೋಟೋ ತೆಗೆಸಿಕೊಳ್ಳಲು ಸಮುದ್ರದ ತೀರದಲ್ಲಿ ಬಂಡೆಯ ಮೇಲೆ ನಿಂತಿದ್ದ 7 ಜನರು ನೀರಿನ ಅಲೆಯ ಹೊಡೆತಕ್ಕೆ ಕೊಚ್ಚಿ ಹೋಗಿದ್ದರು. ಅದರಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಉಳಿದ ಐವರು ಮೃತಪಟ್ಟಿದ್ದಾರೆ.
ರಜೆಯ ಮಜಾಗಾಗಿ ಹೋಗಿದ್ದ ಕುಟುಂಬದ ಐವರು ದುರಂತ ಅಂತ್ಯ ಕಂಡಿದ್ದಾರೆ. 42 ವರ್ಷದ ವ್ಯಕ್ತಿ ಮತ್ತು ಅವರ 6 ವರ್ಷದ ಮಗ ಭಾನುವಾರ ಓಮನ್‌ನ ಬೀಚ್‌ನಲ್ಲಿ ಆಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ದಡದಲ್ಲಿದ್ದವರನ್ನು ಅಲೆ ಎಳೆದುಕೊಂಡು ಹೋಗಿದೆ. ಮೃತರನ್ನು ಶಶಿಕಾಂತ ಮಾಮನೆ ಮತ್ತು ಅವರ ಪುತ್ರ ಶ್ರೇಯಸ್ ಎಂದು ಗುರುತಿಸಲಾಗಿದೆ. ಇನ್ನೂ ಮೂವರು ಶವ ಪತ್ತೆಯಾಗಿಲ್ಲ. ಈ ಇಡೀ ಘಟನೆಯನ್ನು ಬೇರೊಬ್ಬರು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Shocking Video: ನದಿಯಲ್ಲಿ ಸ್ನಾನ ಮಾಡುವಾಗ ಹೆಂಡತಿಗೆ ಮುತ್ತು ಕೊಟ್ಟ ಗಂಡನಿಗೆ ಹಿಗ್ಗಾಮುಗ್ಗ ಥಳಿಸಿದ ಜನ!
ನೋಡ ನೋಡುತ್ತಿದ್ದಂತೆ ಕ್ಯಾಮೆರಾಗೆ ಪೋಸ್ ಕೊಟ್ಟು ನಿಂತಿದ್ದ ಮೂವರು ಯುವತಿಯರ ಮೇಲೆ ಸಮುದ್ರದ ಬೃಹತ್ ಅಲೆ ಅಪ್ಪಳಿಸಿದೆ. ಅವರು ಸಹಾಯಕ್ಕಾಗಿ ಕೈ ನೀಡುತ್ತಿದ್ದಾಗಲೇ ಆ ಅಲೆ ಅವರನ್ನು ಎಳೆದುಕೊಂಡು ಹೋಗಿದೆ. ಆಗ ಅಸಹಾಯಕತೆಯಿಂದ ಕುಟುಂಬಸ್ಥರು ಜೋರಾಗಿ ಕಿರುಚಾಡುತ್ತಿದ್ದಾರೆ. ಈ ವಿಡಿಯೋವನ್ನು ಮತ್ತೊಬ್ಬ ಪ್ರವಾಸಿಗರು ತೆಗೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
Your “Life” is more important than your “Likes”. pic.twitter.com/3XNjyirbwJ
— Dipanshu Kabra (@ipskabra) July 13, 2022
ಒಮಾನ್‌ನ ಧೋಫರ್ ಗವರ್ನರೇಟ್‌ನ ಅಲ್ ಮುಗ್ಸೈಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಾಮನೆ ಅವರ ಒಂಬತ್ತು ವರ್ಷದ ಮಗಳು ಶ್ರೇಯಾ ಸೇರಿದಂತೆ ಮೂವರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈ ವ್ಯಕ್ತಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾತ್ ಪಟ್ಟಣದವರು. ಅವರು ದುಬೈನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಭಾನುವಾರ ಒಂದು ದಿನದ ಪ್ರವಾಸಕ್ಕಾಗಿ ಒಮನ್ಗೆ ತೆರಳಿದ್ದರು.
Visuals of Oman,terrifying & disheartening?.High tides absolutely not for fun.Warning if given one should be extra careful or avoid visiting the shore.Accidents happen in a blink of an eye,joy turns into grief.Sorry?for the families.Prayers for the departed souls.?Om Shanti.?
— Shwetambari Rajput (@ShwetambariRaj3) July 13, 2022
ಇದನ್ನೂ ಓದಿ: ಕೊಪ್ಪಳದಲ್ಲಿ ಕಿರು ಸೇತುವೆ ಮೇಲೆ ಯುವಕ- ಯುವತಿಯರ ಹುಚ್ಚಾಟ; ಸ್ಥಳಕ್ಕೆ ಆಗಮಿಸಿದ ಇಇಯಿಂದ ಯುವಕನಿಗೆ ಕಪಾಳಮೋಕ್ಷ
ಖುಷಿಯಿಂದ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬಲವಾದ ಅಲೆ ದಡಕ್ಕೆ ಅಪ್ಪಳಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಮಾಮನೆ ಅವರ ಸಹೋದರನ ಪ್ರಕಾರ, ಅವರು ದುಬೈನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಾಮನೆ ಮತ್ತು ಅವರ ಮಗನ ಶವಗಳನ್ನು ಒಮನ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತನ್ನ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ನೀರಿನ ರಭಸಕ್ಕೆ ಮಾಮನೆ ಕೂಡ ನೀರುಪಾಲಾಗಿದ್ದಾರೆ. ನಾಪತ್ತೆಯಾಗಿರುವವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
Disturbing Video Shows Eight People DRAGGED Into Raging Sea in Oman
Authorities are continuing to search for the people were swept into the sea at Mughsail Beach in the country’s South.
Three bodies were recovered, including one child, and two people were found alive. pic.twitter.com/iA0yzkW9ze— Samuel Mamotheti (@sam_mamotheti) July 13, 2022
ಈ ವಿಡಿಯೋ ನೋಡಿದ ನೆಟ್ಟಿಗರು ಸೋಷಿಯಲ್ ಮೀಡಿಯಾದ ಲೈಕ್ಗಿಂತ ಲೈಫ್ ಬಹಳ ಮುಖ್ಯವಾದುದು. ಜೀವದ ಜೊತೆ ಹುಡುಗಾಟ ಆಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
Published On - 11:26 am, Thu, 14 July 22