ಯೆಮೆನ್ನಲ್ಲಿ ಏಡೆನ್ ರಾಜ್ಯಪಾಲರನ್ನು ಗುರಿಯಾಗಿಸಿ ಬಾಂಬ್ ದಾಳಿ; 6 ಮಂದಿ ಸಾವು
ಕಾರು ಬಾಂಬ್ ದಾಳಿ ನಡೆದದ್ದು ಏಡೆನ್ ರಾಜ್ಯಪಾಲರನ್ನು ಗುರಿಯಾಗಿಸಿಕೊಂಡು. ಆದರೆ ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. ಆದರೆ ರಾಜ್ಯಪಾಲರ ಮಾಧ್ಯಮ ಕಾರ್ಯದರ್ಶಿ ಮತ್ತು ಅವರ ಫೋಟೋ ಗ್ರಾಫರ್ ಇಬ್ಬರೂ ಮೃತಪಟ್ಟಿದ್ದಾರೆ.
ಏಡೆನ್: ಯೆಮೆನ್ನ ದಕ್ಷಿಣ ನಗರವಾದ ಏಡೆನ್ನಲ್ಲಿ ಅಲ್ಲಿನ ರಾಜ್ಯಪಾಲರ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ಕಾರ್ ಬಾಂಬ್ ದಾಳಿ ನಡೆದಿದ್ದು, ಈ ದುರ್ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ. 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ಸಚಿವಾಲಯ ತಿಳಿಸಿದೆ. ಬಾಂಬ್ ದಾಳಿಯಲ್ಲಿ ಗವರ್ನರ್ ಅಹ್ಮದ್ ಲಾಮ್ಲಾಸ್ ಮತ್ತು ಕೃಷಿ ಸಚಿ ಸೇಲಂ ಸುಖಾತ್ರಿ ಇಬ್ಬರೂ ಪಾರಾಗಿದ್ದಾರೆ. ಇವರಿಬ್ಬರೂ ದಕ್ಷಿಣ ಪ್ರತ್ಯೇಕತಾ ಗುಂಪಿಗೆ ಸೇರಿದವರಾಗಿದ್ದು, ಸದ್ಯದ ಭಯೋತ್ಪಾದನಾ ದಾಳಿಯಿಂದ ಇಬ್ಬರೂ ಪಾರಾಗಿದ್ದಾರೆ ಎಂದು ಹೇಳಿದೆ.
ಕಾರು ಬಾಂಬ್ ದಾಳಿ ನಡೆದದ್ದು ಏಡೆನ್ ರಾಜ್ಯಪಾಲರನ್ನು ಗುರಿಯಾಗಿಸಿಕೊಂಡು. ಆದರೆ ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. ಆದರೆ ರಾಜ್ಯಪಾಲರ ಮಾಧ್ಯಮ ಕಾರ್ಯದರ್ಶಿ ಮತ್ತು ಅವರ ಫೋಟೋ ಗ್ರಾಫರ್ ಇಬ್ಬರೂ ಮೃತಪಟ್ಟಿದ್ದಾರೆ. ಇನ್ನುಳಿದಂತೆ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಘಟನೆ ನಡೆದ ಸ್ಥಳದ ಆಡಳಿತ ತಿಳಿಸಿದೆ. ಯೆಮೆನ್ ಕೇಂದ್ರ ಸರ್ಕಾರ 2014ರಲ್ಲಿ ರಾಜಧಾನಿ ಸನಾದಿಂದ ಏಡೆನ್ಗೆ ಸ್ಥಳಾಂತರಗೊಂಡಿದೆ. ಅಂದಿನಿಂದಲೂ ಸೌದಿ ಬೆಂಬಲಿತ ಯೆಮೆನ್ ಸರ್ಕಾರದ ವಿರುದ್ಧ ಇರಾನ್ ಬೆಂಬಲಿತ ಹುತಿ ಬಂಡುಕೋರರು ಹೋರಾಟೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಾಪತ್ತೆ ಆಗಿರುವ 4 ಮಕ್ಕಳು ಮಂಗಳೂರಿನತ್ತ ಪ್ರಯಾಣಿಸಿರುವ ಶಂಕೆ; ಏನೇನು ತರಬೇಕು ಎಂದು ಮಾಡಿದ್ದ ಪಟ್ಟಿ ಲಭ್ಯ
ಅಂತರಿಕ್ಷಯಾನಿ ಬ್ಯಾಹ್ಯಾಕಾಶದಲ್ಲಿ ಸತ್ತರೆ ಮೃತದೇಹ ಭೂಮಿಗೆ ತರಲಾಗದು, ಅದು ಅಲ್ಲೇ ತೇಲಾಡುತ್ತಿರುತ್ತದೆ!