
ಹೈದರಾಬಾದ್, ಅ.19: ಕತ್ತಲಾದ ಮೇಲೂ ಭೂಮಿಗೆ ಸೂರ್ಯನ ಬೆಳಕನ್ನು ತಲುಪಿಸುವ ವಿನೂತನ ಹಾಗೂ ವಿಶಿಷ್ಟ ಯೋಜನೆಗೆ ಭಾರತೀಯ ಬಾಹ್ಯಾಕಾಶ ಕ್ಷೇತ್ರ ಸಾಕ್ಷಿಯಾಗುತ್ತಿದೆ. ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace), ಅಮೆರಿಕದ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ರಿಫ್ಲೆಕ್ಟ್ ಆರ್ಬಿಟಲ್ (Reflect Orbital) ಜೊತೆಗೆ ಪ್ರಮುಖ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಸ್ಕೈರೂಟ್ ಸಂಸ್ಥೆಯ ತನ್ನ ಸ್ವದೇಶಿ ‘ವಿಕ್ರಮ್’ ಸರಣಿಯ ರಾಕೆಟ್‌ಗಳ ಮೂಲಕ ರಿಫ್ಲೆಕ್ಟ್ ಆರ್ಬಿಟಲ್‌ನ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ.
ರಿಫ್ಲೆಕ್ಟ್ ಆರ್ಬಿಟಲ್ ಸಂಸ್ಥೆಯು ವಿಶೇಷವಾದ ದೈತ್ಯ ಕನ್ನಡಿಗಳನ್ನು ಹೊಂದಿರುವ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ತಲುಪಿಸಲಿದೆ. ಈ ಉಪಗ್ರಹಗಳು ಸೂರ್ಯ ಮುಳುಗಿದ ನಂತರ ಭೂಮಿಯ ನಿರ್ದಿಷ್ಟ ಪ್ರದೇಶಗಳ ಕಡೆಗೆ ಸೂರ್ಯನ ಬೆಳಕನ್ನು ಮರುನಿರ್ದೇಶಿಸುವ ಮೂಲಕ ರಾತ್ರಿಯ ವೇಳೆಯೂ ಬೆಳಕು ಸಿಗುವಂತೆ ಮಾಡುತ್ತವೆ. ಪ್ರಕೃತಿಯ ಸೂರ್ಯನ ಬೆಳಕನ್ನೇ ಮರುಬಳಕೆ ಮಾಡುವುದರಿಂದ ಭೂಮಿಯ ಮೇಲೆ ಹೊಸದಾಗಿ ಲೈಟಿಂಗ್ ಮೂಲಸೌಕರ್ಯಗಳನ್ನು ನಿರ್ಮಿಸುವ ಅಗತ್ಯವಿರುವುದಿಲ್ಲ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
ಸೌರ ವಿದ್ಯುತ್ ಉತ್ಪಾದನೆ ಹೆಚ್ಚಳ: ಸೌರ ವಿದ್ಯುತ್ ಸ್ಥಾವರಗಳಿಗೆ ಸೂರ್ಯ ಮುಳುಗಿದ ನಂತರವೂ ಬೆಳಕು ಹಾಯಿಸುವುದರಿಂದ ವಿದ್ಯುತ್ ಉತ್ಪಾದನಾ ಅವಧಿಯನ್ನು ವಿಸ್ತರಿಸಬಹುದು.
ತುರ್ತು ಸಂದರ್ಭಗಳಲ್ಲಿ ಬಳಕೆ: ಜರೂರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು, ರಾತ್ರಿ ವೇಳೆ ನಡೆಯುವ ಮೂಲಸೌಕರ್ಯ ನಿರ್ಮಾಣ ಕಾರ್ಯಗಳಿಗೆ ಇದು ಸಹಕಾರಿಯಾಗಲಿದೆ.
ಖಗೋಳಶಾಸ್ತ್ರಜ್ಞರ ಆತಂಕ: ಕೃತಕ ಬೆಳಕಿನಿಂದಾಗಿ ಆಕಾಶ ವೀಕ್ಷಣೆ ಮಾಡುವ ಖಗೋಳಶಾಸ್ತ್ರಜ್ಞರಿಗೆ ತೊಂದರೆಯಾಗಬಹುದು ಹಾಗೂ ಬೆಳಕಿನ ಮಾಲಿನ್ಯ ಉಂಟಾಗಬಹುದು ಎಂಬ ಕಳವಳವೂ ವ್ಯಕ್ತವಾಗಿದೆ. ಈ ಬಗ್ಗೆ ವಿಜ್ಞಾನಿಗಳು ಮತ್ತು ನಿಯಂತ್ರಕರ ಜೊತೆ ಮಾತುಕತೆ ನಡೆಸುವುದಾಗಿ ರಿಫ್ಲೆಕ್ಟ್ ಆರ್ಬಿಟಲ್ ತಿಳಿಸಿದೆ.
ಇದನ್ನೂ ಓದಿ: ಪ್ರಶ್ನೆ ಪತ್ರಿಕೆ, ಬ್ಯಾಂಕ್ ಕಾರ್ಡ್ಗಳು ಸೇರಿ ಸೇರಿ ಮಹತ್ವದ ದಾಖಲೆಗಳ ಸಾಗಾಟದಲ್ಲಿ ನಂ.1 ಮಂಗಳೂರು-ಬೆಂಗಳೂರು ವಿಮಾನ ಮಾರ್ಗ
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
ಜುಲೈ 18 ರಂದು ಭಾರತದ ಶ್ರೀಹರಿಕೋಟಾದಿಂದ ವಿಕ್ರಮ್-1 ರಾಕೆಟ್ ಅನ್ನು ಯಶಸ್ವಿಯಾಗಿ ಕಕ್ಷೆಗೆ ತಲುಪಿಸುವ ಮೂಲಕ ಸ್ಕೈರೂಟ್ ಸಂಸ್ಥೆಯು ಸ್ವಂತ ಆರ್ಬಿಟಲ್ ರಾಕೆಟ್ ಉಡಾವಣೆ ಮಾಡಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಜರ್ಮನಿಯ ‘DCubed’ ಸಂಸ್ಥೆಯ ಉಡಾವಣೆಯ ಬಳಿಕ, ಈಗ ಅಮೆರಿಕದ ‘ರಿಫ್ಲೆಕ್ಟ್ ಆರ್ಬಿಟಲ್’ ಸಂಸ್ಥೆಯು ಸ್ಕೈರೂಟ್‌ನ ಎರಡನೇ ಪ್ರಮುಖ ಅಂತಾರಾಷ್ಟ್ರೀಯ ಗ್ರಾಹಕನಾಗಿದೆ. ಈ ಒಪ್ಪಂದವು ಭಾರತದ ಖಾಸಗಿ ಉಡಾವಣಾ ಸಾಮರ್ಥ್ಯದ ಮೇಲೆ ಜಾಗತಿಕ ಕಂಪನಿಗಳಿಗೆ ಇರುವ ನಂಬಿಕೆಯನ್ನು ಹೆಚ್ಚಿಸಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:08 am, Mon, 19 October 26