AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರಕ್ಷಿತ ದಾಖಲೆಗಳ ಸಾಗಾಟಕ್ಕೆ ಕರ್ನಾಟಕವೇ ಕೀ ಪಾಯಿಂಟ್‌! ಬೆಂಗಳೂರು-ಮಂಗಳೂರು ಏರ್ ರೂಟ್ ಏಕೆ ಅಷ್ಟು ಮುಖ್ಯ?

ಮಂಗಳೂರು-ಬೆಂಗಳೂರು ವಿಮಾನ ಮಾರ್ಗವು ಭಾರತದ ಪ್ರಮುಖ ವಾಯುದಂಚೆ ಲಾಜಿಸ್ಟಿಕ್ಸ್ ಕಾರಿಡಾರ್ ಆಗಿ ಹೊರಹೊಮ್ಮಿದೆ. ಇಂಡಿಯಾ ಪೋಸ್ಟ್ ನಿರ್ವಹಿಸುವ ಸುರಕ್ಷಿತ ದಾಖಲೆಗಳು, ಪ್ರಶ್ನೆ ಪತ್ರಿಕೆಗಳು, ಕ್ರೆಡಿಟ್ ಕಾರ್ಡ್‌ಗಳ ಸಾಗಣೆಯಲ್ಲಿ ಇದು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಈ ಮಾರ್ಗವು ವೇಗದ ಮತ್ತು ವಿಶ್ವಾಸಾರ್ಹ ಸೇವೆಯನ್ನು ಒದಗಿಸುವ ಮೂಲಕ ಭಾರತದಾದ್ಯಂತ ಪ್ರಮುಖ ಅಂಚೆ ವಸ್ತುಗಳನ್ನು ತಲುಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ.

ಸುರಕ್ಷಿತ ದಾಖಲೆಗಳ ಸಾಗಾಟಕ್ಕೆ ಕರ್ನಾಟಕವೇ ಕೀ ಪಾಯಿಂಟ್‌! ಬೆಂಗಳೂರು-ಮಂಗಳೂರು ಏರ್ ರೂಟ್ ಏಕೆ ಅಷ್ಟು ಮುಖ್ಯ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Oct 19, 2026 | 10:51 AM

Share

ಮುಖ್ಯಾಂಶಗಳು

  • ಮಂಗಳೂರು–ಬೆಂಗಳೂರು ವಿಮಾನ ಮಾರ್ಗವು ದೇಶದಲ್ಲೇ ಅತಿಹೆಚ್ಚು ವಾಯುದಂಚೆ ಸಾಗಣೆ
  • ಪತ್ರಗಳು, ಪಾರ್ಸೆಲ್‌ಗಳು ಮತ್ತು ಅತಿ ಸುರಕ್ಷಿತ ದಾಖಲೆಗಳ ಸಾಗಣೆ
  • ಬೆಂಗಳೂರು ವಿಮಾನ ನಿಲ್ದಾಣಕ್ಕೆ ಒಟ್ಟು 3,238.09 ಟನ್ ವಾಯು ಸರಕು ಸಾಗಣೆ

ಮಂಗಳೂರು, ಅ.19: ಮಂಗಳೂರು–ಬೆಂಗಳೂರು ವಿಮಾನ ಮಾರ್ಗವು ದೇಶದಲ್ಲೇ ಅತಿಹೆಚ್ಚು ವಾಯುದಂಚೆ ಸಾಗಣೆ ಮಾಡುವ ಮೂಲಕ ಪ್ರಮುಖ ವಾಣಿಜ್ಯ ಹಾಗೂ ಲಾಜಿಸ್ಟಿಕ್ಸ್ ಕಾರಿಡಾರ್‌ ಆಗಿ ಹೊರಹೊಮ್ಮಿದೆ. ಪತ್ರಗಳು, ಪಾರ್ಸೆಲ್‌ಗಳು ಮತ್ತು ಅತಿ ಸುರಕ್ಷಿತ ದಾಖಲೆಗಳ ಸಾಗಣೆಯಲ್ಲಿ ಈ ಮಾರ್ಗವು ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. 2025ರ ಏಪ್ರಿಲ್‌ನಿಂದ 2026ರ ಮಾರ್ಚ್ ಅಂತ್ಯದವರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಒಟ್ಟು 3,238.09 ಟನ್ ವಾಯು ಸರಕು (Air Cargo) ಸಾಗಣೆಯಾಗಿದೆ. ಇದರ ವಿರುದ್ಧ ದಿಕ್ಕಿನಲ್ಲಿ 608 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಕಳುಹಿಸಲಾದ ಒಟ್ಟು ಸರಕಿನಲ್ಲಿ ಶೇ. 95ರಷ್ಟು ಅಂದರೆ ಬರೋಬ್ಬರಿ 3,076.19 ಟನ್‌ಗಳಷ್ಟು ಭಾಗವು ‘ಇಂಡಿಯಾ ಪೋಸ್ಟ್’ ನಿರ್ವಹಿಸುವ ವಾಯುದಂಚೆ ಆಗಿದೆ. ಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್‌ನಿಂದ ಸೆಪ್ಟೆಂಬರ್ ನಡುವೆ) ಈ ಮಾರ್ಗದಲ್ಲಿ ಒಟ್ಟು 1,806 ಮೆಟ್ರಿಕ್ ಟನ್ ವಾಯುದಂಚೆ ಸಾಗಣೆಯಾಗಿದೆ.

ದೇಶದ ಅತಿ ಸುರಕ್ಷಿತ ದಾಖಲೆಗಳನ್ನು ಸಾಗಿಸುವ ವಿಮಾನ ಮಾರ್ಗ:

ಬೆಂಗಳೂರು ಮೂಲಕ ದೇಶದ ವಿವಿಧ ಭಾಗಗಳಿಗೆ ಸಾಗಿಸಲ್ಪಡುವ ಅತಿ ಸುರಕ್ಷಿತ ದಾಖಲೆಗಳೇ ಈ ಅಧಿಕೃತ ದಟ್ಟನೆಗೆ ಪ್ರಮುಖ ಕಾರಣವಾಗಿದೆ. ಪರೀಕ್ಷಾ ಪ್ರಶ್ನೆ ಪತ್ರಿಕೆಗಳು, ಚೆಕ್ ಪುಸ್ತಕಗಳು, ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು ಮತ್ತು ಅತ್ಯಂತ ಸಂವೇದನಾಶೀಲ ಅಂಚೆ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಾಗಿಸಲು ಈ ವಿಮಾನ ಮಾರ್ಗವು ಪ್ರಮುಖ ಕೊಂಡಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ರೈಲ್ವೆ ಪ್ರಯಾಣಿಕರ ಗಮನಕ್ಕೆ: ರೈಲು ಸಂಖ್ಯೆ 16377, 16378, 16596, 16536 ವೇಳಾಪಟ್ಟಿಯಲ್ಲಿ ಬದಲಾವಣೆ

ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರ ಮಂಗಳೂರು–ಬೆಂಗಳೂರು ಮಾರ್ಗದಲ್ಲಿ 138 ಟನ್ ವಾಯುದಂಚೆ ಸಾಗಣೆಯಾಗುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ದೆಹಲಿ–ಮುಂಬೈ ಮಾರ್ಗವು 123 ಟನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ದೆಹಲಿ–ಲೇಹ್ ಮಾರ್ಗವು 105 ಟನ್‌ಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ. ಇಂಡಿಯಾ ಪೋಸ್ಟ್‌ನ ಲಾಜಿಸ್ಟಿಕ್ಸ್ ಜಾಲದಲ್ಲಿ ಮಂಗಳೂರು-ಬೆಂಗಳೂರು ವಿಮಾನ ಮಾರ್ಗವು ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರಮುಖ ದಾಖಲೆಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸಲು ಇದು ಅತ್ಯಂತ ವೇಗದ ಮಾಧ್ಯಮವಾಗಿ ಸಾಬೀತಾಗಿದೆ.

ಮಂಗಳೂರು ವಿಮಾನ ನಿಲ್ದಾಣದ ಚಳಿಗಾಲದ ವೇಳಾಪಟ್ಟಿ 

ಮಂಗಳೂರಿನಿಂದ ಹಾರಾಟ ನಡೆಸುವ ವಾರದ ವಿಮಾನಗಳ ಒಟ್ಟು ಸಂಚಾರ ಸಂಖ್ಯೆ 181ರಿಂದ ಬರೋಬ್ಬರಿ 195ಕ್ಕೆ ಏರಿಕೆಯಾಗಲಿದೆ. ಇದರೊಂದಿಗೆ ದೇಶೀಯ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳ ಸಂಪರ್ಕ ಇನ್ನಷ್ಟು ಬಲಗೊಳ್ಳಲಿದೆ. ‘ಫ್ಲೈ91’ (FLY91) ಸಂಸ್ಥೆಯು ಮಂಗಳೂರಿನಿಂದ ಲಕ್ಷದ್ವೀಪದ ಅಗತ್ತಿ ಹಾಗೂ ಮಹಾರಾಷ್ಟ್ರದ ಪುಣೆಗೆ ನೂತನ ದೈನಂದಿನ ವಿಮಾನಯಾನ ಸೇವೆ ಆರಂಭಿಸಲಿದೆ. ಈ ಎರಡು ಮಾರ್ಗಗಳಲ್ಲಿ ವಾರಕ್ಕೆ ಒಟ್ಟು 14 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಬೋಯಿಂಗ್ 737-8 ವಿಮಾನಗಳನ್ನು ಬಳಸಿ ಮಂಗಳೂರು-ಹೈದರಾಬಾದ್ ಮಾರ್ಗದಲ್ಲಿ ವಾರಕ್ಕೆ 3 ಬಾರಿ ವಿಮಾನ ಸೇವೆಯನ್ನು ಪುನರಾರಂಭಿಸಲಿದೆ.

ಇಂಡಿಗೋ ಸಂಸ್ಥೆಯು ಮುಂಬೈ ಮಾರ್ಗದಲ್ಲಿ ಹೆಚ್ಚುವರಿ ವಿಮಾನಗಳನ್ನು ಕಾರ್ಯಾಚರಣೆಗೊಳಿಸಲಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಿಗೆ ಸಂಪರ್ಕ ಜಾಲವನ್ನು ಮತ್ತಷ್ಟು ವಿಸ್ತರಿಸಲಿದೆ. ಪ್ರವಾಸಿಗರು ಹಾಗೂ ಅನಿವಾಸಿ ಕನ್ನಡಿಗರ ಬಹುದಿನಗಳ ಬೇಡಿಕೆಯಂತೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕುವೈಟ್‌ಗೆ ನೇರ ವಿಮಾನ ಸೇವೆಯನ್ನು ಪುನರಾರಂಭಿಸಲಿದೆ. ಬುಧಾಬಿ, ಬಹ್ರೇನ್ ಮತ್ತು ದುಬೈ ನಗರಗಳಿಗೆ ಹಾರಾಟ ನಡೆಸುವ ವಿಮಾನಗಳ ಆವರ್ತನವನ್ನು ಹೆಚ್ಚಿಸಲಾಗಿದೆ. ಇದರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಅಂತಾರಾಷ್ಟ್ರೀಯ ವಾರದ ನಿರ್ಗಮನಗಳ ಸಂಖ್ಯೆ 34ರಿಂದ 45ಕ್ಕೆ ಏರಿಕೆಯಾಗಲಿದೆ.

ಪ್ರತಿನಿತ್ಯ 5 ನೇರ ವಿಮಾನಗಳು, ಒಟ್ಟು 15ಕ್ಕೂ ಹೆಚ್ಚು ಹಾರಾಟಗಳ ಸೌಲಭ್ಯ

ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಗರಿ ಮಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಸಂಪರ್ಕ ಜಾಲವನ್ನು ಇನ್ನಷ್ಟು ಸುಲಭಗೊಳಿಸಿವೆ. ಪ್ರಸ್ತುತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ 4 ರಿಂದ 5 ನೇರ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಇದಲ್ಲದೆ, ಸಂಪರ್ಕಿತ ವಿಮಾನಗಳನ್ನು ಪರಿಗಣಿಸಿದರೆ ದಿನವೊಂದಕ್ಕೆ ಒಟ್ಟು 11 ರಿಂದ 15 ಕ್ಕೂ ಹೆಚ್ಚು ವಿಮಾನ ಯಾನ ಸೌಲಭ್ಯಗಳು ಪ್ರಯಾಣಿಕರಿಗೆ ಲಭ್ಯವಿವೆ. ಈ ಮಾರ್ಗದಲ್ಲಿ ಅತ್ಯಂತ ಹೆಚ್ಚಿನ ಸೇವೆ ಒದಗಿಸುತ್ತಿರುವ ಇಂಡಿಗೋ ದಿನವೊಂದಕ್ಕೆ 4 ನೇರ ವಿಮಾನಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೊರಡುವ ದಿನದ ಮೊದಲ ನೇರ ವಿಮಾನವು ಮುಂಜಾನೆ 07:15 ಕ್ಕೆ ನಿರ್ಗಮಿಸಲಿದೆ. ವಾರದಲ್ಲಿ 5 ದಿನಗಳ ಕಾಲ (ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ) ಪ್ರತಿನಿತ್ಯ 1 ನೇರ ವಿಮಾನದ ಸೇವೆಯನ್ನು ಒದಗಿಸುತ್ತಿದೆ. ನೇರ ವಿಮಾನಗಳ ಜೊತೆಗೆ ಇತರೆ ಪ್ರಮುಖ ವಿಮಾನಯಾನ ಸಂಸ್ಥೆಗಳು ವಿವಿಧ ನಗರಗಳ ಮೂಲಕ ಸಂಪರ್ಕ ಕಲ್ಪಿಸುವ 10ಕ್ಕೂ ಹೆಚ್ಚು ಕನೆಕ್ಟಿಂಗ್ ವಿಮಾನ ಸೇವೆಗಳನ್ನು ಒದಗಿಸುತ್ತಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:05 am, Mon, 19 October 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ