AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ20 ಸಭೆಯಲ್ಲಿ ತೋರಿದ ಬೆಂಬಲಕ್ಕೆ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ದಕ್ಷಿಣ ಆಫ್ರಿಕನ್ನರು

ಈ ಬಾರಿಯ ಜಿ20 ಶೃಂಗಸಭೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಹಲವಾರು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು. ದಕ್ಷಿಣ ಆಫ್ರಿಕಾಕ್ಕೆ ತಮ್ಮ 3 ದಿನಗಳ ಭೇಟಿಯನ್ನು ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ವಾಪಾಸಾಗಿದ್ದಾರೆ. ಈ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ಜನರು, ಅಧ್ಯಕ್ಷ ಸಿರಿಲ್ ರಾಮಾಫೋಸಾ ಮತ್ತು ದಕ್ಷಿಣ ಆಫ್ರಿಕಾ ಸರ್ಕಾರಕ್ಕೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ಮೋದಿಯವರ ರಾಜತಾಂತ್ರಿಕತೆಗೆ ದಕ್ಷಿಣ ಆಫ್ರಿಕಾದ ಜನರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಜಿ20 ಸಭೆಯಲ್ಲಿ ತೋರಿದ ಬೆಂಬಲಕ್ಕೆ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ದಕ್ಷಿಣ ಆಫ್ರಿಕನ್ನರು
Pm Modi In South Africa
ಸುಷ್ಮಾ ಚಕ್ರೆ
|

Updated on:Nov 24, 2025 | 3:24 PM

Share

ನವದೆಹಲಿ, ನವೆಂಬರ್ 24: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್​​​ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ (PM Modi) ಭಾರತಕ್ಕೆ ವಾಪಾಸಾಗಿದ್ದಾರೆ. ಈ ವೇಳೆ ಅವರು ದಕ್ಷಿಣ ಆಫ್ರಿಕಾದ ತಮ್ಮ 3 ದಿನಗಳ ಭೇಟಿಯ ಹೈಲೈಟ್ಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ದಕ್ಷಿಣ ಆಫ್ರಿಕಾದ ಬಳಕೆದಾರರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಮೋದಿಯವರ ಬಹುಪಕ್ಷೀಯ ಸಭೆಗಳು, ದಕ್ಷಿಣ ಆಫ್ರಿಕಾದ ಅಧ್ಯಕ್ಷರಿಗೆ ನೀಡಿದ ಸಲಹೆಗಳು, ಶೃಂಗಸಭೆಯಲ್ಲಿನ ಸಕ್ರಿಯ ಭಾಗವಹಿಸುವಿಕೆ, ಶೃಂಗಸಭೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ರೀತಿ, ರಾಜತಾಂತ್ರಿಕ ಕ್ರಮಗಳ ಬಗ್ಗೆ ದಕ್ಷಿಣ ಆಫ್ರಿಕನ್ನರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​​ನಲ್ಲಿ ದಕ್ಷಿಣ ಆಫ್ರಿಕಾದ ಜನರು ಈ ಬಗ್ಗೆ ಪೋಸ್ಟ್‌ಗಳನ್ನು ಹಾಕಿದ್ದಾರೆ. “ಜಿ20 ಉದ್ದಕ್ಕೂ ಭಾರತವು ದಕ್ಷಿಣ ಆಫ್ರಿಕಾ ಮತ್ತು ಖಂಡದ ಕಡೆಗೆ ಎಷ್ಟು ಬೆಂಬಲ ಮತ್ತು ದಯೆಯನ್ನು ಹೊಂದಿದೆ ಎಂಬುದು ವ್ಯಕ್ತವಾಯಿತು. ಭಾರತಕ್ಕೆ ನಮ್ಮಿಂದ ತುಂಬಾ ಪ್ರೀತಿಯನ್ನು ಕಳುಹಿಸುತ್ತಿದ್ದೇವೆ!” ಎಂದು ಕಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು ಬಳಕೆದಾರರು ಪ್ರಧಾನಿ ಮೋದಿಯವರನ್ನು “#G20SouthAfrica ಶೃಂಗಸಭೆಯ ಅಧಿಕೃತ ಪ್ರಭಾವಿ” ಎಂದು ಬಣ್ಣಿಸಿದ್ದಾರೆ. “ಮೋದಿ ಅವರು ಇಲ್ಲಿ ತಮ್ಮ ವಾಸ್ತವ್ಯದ ಉದ್ದಕ್ಕೂ ಸರಿಯಾದ ವಿಷಯದೊಂದಿಗೆ ಟೈಮ್‌ಲೈನ್ ಅನ್ನು ಹಾಕಿಕೊಂಡಿದ್ದರು. ಅವರು ಹಲವು ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು, ಅವರು ಸದಾ ಕಾರ್ಯಾಚರಣೆಯಲ್ಲಿದ್ದರು” ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಜಿ20 ಆತಿಥ್ಯ ಇಷ್ಟು ಕಷ್ಟ ಅಂತ ಗೊತ್ತಿದ್ದರೆ ಓಡಿ ಹೋಗುತ್ತಿದ್ದೆ: ಪ್ರಧಾನಿ ಮೋದಿಗೆ ತಮಾಷೆ ಮಾಡಿದ ಸೌತ್ ಆಫ್ರಿಕಾ ಅಧ್ಯಕ್ಷ

“ನನಗೆ ಪ್ರಧಾನಿ ಮೋದಿಯವರ ಈ ಹೈಲೈಟ್ಸ್ ಬಹಳ ಇಷ್ಟವಾಯಿತು. G20ನ ಅತ್ಯುತ್ತಮ ಪಿಆರ್” ಇದು ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಹಲವಾರು ಜನರು ಶೃಂಗಸಭೆಯಲ್ಲಿ ಭಾರತದ ಪಾತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬರು, “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು 1.4 ಶತಕೋಟಿಗೂ ಹೆಚ್ಚು ಜನರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ G20ಯಲ್ಲಿ ಭಾಗವಹಿಸಿದೆ. ದಕ್ಷಿಣ ಆಫ್ರಿಕಾ ಭಾರತವನ್ನು ಸ್ವಾಗತಿಸುತ್ತದೆ ಮತ್ತು ಪ್ರಪಂಚದ ಉಳಿದ ಭಾಗಗಳೊಂದಿಗೆ ನಿಮ್ಮ ರಚನಾತ್ಮಕ ತೊಡಗಿಸಿಕೊಳ್ಳುವಿಕೆಯನ್ನು ಕೂಡ ಸ್ವಾಗತಿಸುತ್ತದೆ” ಎಂದು ಹೇಳಿದ್ದಾರೆ.

“ಮೋದಿ ಈ ಶೃಂಗಸಭೆಯ MVP” ಎಂದು ಒಬ್ಬರು ಪೋಸ್ಟ್ ಮಾಡಿದ್ದರೆ. ಇನ್ನೊಬ್ಬರು “G20 ಅನ್ನು ಈ ಒಂದೇ ಎಕ್ಸ್​ ಖಾತೆಯಲ್ಲಿ ಸಂಕ್ಷಿಪ್ತವಾಗಿ ತೋರಿಸಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ: ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಿಸುವಂತೆ ಮನವಿ

ಮತ್ತೊಬ್ಬ ಬಳಕೆದಾರರು, “ನಾನು ಮೋದಿಯವರ ಅಭಿಮಾನಿಯಾಗಿ ಹೋದೆ. ಅವರು ದಕ್ಷಿಣ ಆಫ್ರಿಕಾದಲ್ಲಿ ಕಳೆದ ದಿನಗಳ ಬಹಳ ಅದ್ಭುತವಾಗಿದ್ದವು. ಅವರ ಶಕ್ತಿ ತುಂಬಾ ಚೈತನ್ಯದಾಯಕವಾಗಿದೆ. ಅವರು ನಮ್ಮನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದು ನಮಗೆ ಬಹಳ ಖುಷಿ ತಂದಿದೆ” ಎಂದು ಪೋಸ್ಟ್ ಮಾಡಿದ್ದಾರೆ.

ಈ ಪ್ರತಿಕ್ರಿಯೆಗಳು ಜಿ20 ಶೃಂಗಸಭೆಯಲ್ಲಿ ಭಾರತದ ಭಾಗವಹಿಸುವಿಕೆಯನ್ನು ಗಮನಿಸಿದ ದಕ್ಷಿಣ ಆಫ್ರಿಕನ್ನರ ಮೆಚ್ಚುಗೆಯನ್ನು ಪ್ರದರ್ಶಿಸಿದವು. ಪ್ರಧಾನಿ ಮೋದಿ ಇಂದು G20 ನಾಯಕರ ಶೃಂಗಸಭೆ ಮತ್ತು IBSA ಸಭೆಯಲ್ಲಿ ಭಾಗವಹಿಸಿದ ನಂತರ ಭಾರತಕ್ಕೆ ಮರಳಿದರು. ಅಲ್ಲಿ ಅವರು ಪ್ರಮುಖ ಜಾಗತಿಕ ಆದ್ಯತೆಗಳನ್ನು ಒತ್ತಿ ಹೇಳಿದರು. ಶೃಂಗಸಭೆಯ ಹೊರತಾಗಿ, ಪ್ರಧಾನಿ ಮೋದಿ ಅವರು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್, ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಜಪಾನಿನ ಪ್ರಧಾನಿ ಸನೇ ತಕೈಚಿ, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಸೇರಿದಂತೆ ಹಲವು ವಿಶ್ವ ನಾಯಕರೊಂದಿಗೆ ಮಾತುಕತೆ ನಡೆಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:24 pm, Mon, 24 November 25