ಇಸ್ರೇಲ್: ಯಹೂದಿಯರ ಧಾರ್ಮಿಕ ಸ್ಥಳದಲ್ಲಿ ಕಾಲ್ತುಳಿತ; 44 ಮಂದಿ ಸಾವು

Israel Stampede: ಕ್ರೀಡಾಂಗಣದ ಒಂದು ಭಾಗ ಕುಸಿದು ಕೆಲವು ಜನರು ಸಾವಿಗೀಡಾದರು. ಇವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಆರಂಭವಾದಾದ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಘಟನಾ ಸ್ಥಳದಲ್ಲಿ 38 ಮಂದಿ ಮೃತಪಟ್ಟಿದ್ದಾರೆ, ಆಸ್ಪತ್ರೆಯಲ್ಲಿ ಹೆಚ್ಚಿನವರು ದಾಖಲಾಗಿದ್ದಾರೆ.

ಇಸ್ರೇಲ್: ಯಹೂದಿಯರ ಧಾರ್ಮಿಕ ಸ್ಥಳದಲ್ಲಿ ಕಾಲ್ತುಳಿತ; 44 ಮಂದಿ ಸಾವು
ಇಸ್ರೇಲ್​ನಲ್ಲಿ ಕಾಲ್ತುಳಿತ ದುರಂತ
Follow us
ರಶ್ಮಿ ಕಲ್ಲಕಟ್ಟ
|

Updated on:Apr 30, 2021 | 11:57 AM

ಮೆರೊನ್: ಉತ್ತರ ಇಸ್ರೇಲ್ ನಲ್ಲಿರುವ ಯಹೂದಿ ಧಾರ್ಮಿಕ ಸ್ಥಳವೊಂದಲ್ಲಿ ಶುಕ್ರವಾರ ಕಾಲ್ತುಳಿತ ದುರಂತ ಸಂಭವಿಸಿದ್ದು ಕನಿಷ್ಠ 44 ಮಂದಿ ಸಾವಿಗೀಡಾಗಿದ್ದಾರೆ. ಯಾತ್ರಾರ್ಥಿಗಳಿಂದ ತುಂಬಿ ತುಳುಕಿದ ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಲು ಕಾರ್ಯಕರ್ತರು ಹರಸಾಹಸ ಪಡುತ್ತಿದ್ದಾರೆ. ಎರಡನೇ ಶತಮಾನದ ಟಾಲ್ಮುಡಿಕ್ ಸಂತ ರಬ್ಬಿ ಶಿಮೋನ್ ಬಾರ್ ಯೋಚೈ ಅವರ ಸಮಾಧಿ ಸ್ಥಳವಾದ ಮೆರಾನ್ ನಲ್ಲಿ ಲಾಗ್ ಬವೋಮರ್ ಆಚರಣೆಗಾಗಿ ಸಂಪ್ರದಾಯವಾದಿ ಯಹೂದಿ ಯಾತ್ರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಸೇರಿರುವಾಗ ಕಾಲ್ತುಳಿತ ದುರಂತ ಸಂಭವಿಸಿದೆ.

ಕೊರೊನಾವೈರಸ್ ನಿಯಂತ್ರಣ ಕ್ರಮವಾಗಿ ಕಳೆದ ವರ್ಷ ಈ ಧಾರ್ಮಿಕ ಸ್ಥಳವನ್ನು ಮುಚ್ಚಲಾಗಿದ್ದು, ಈ ಬಾರಿ ತೆರೆಯಲಾಗಿದೆ.  ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಇಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಸೇರಿದ್ದು, ಮೂರು ಪಟ್ಟು ಹೆಚ್ಚು ಜನರು ಅಲ್ಲಿದ್ದಾರೆ ಎಂದು ವರದಿಗಳಲ್ಲಿ ಹೇಳಲಾಗಿದೆ.

ಕ್ರೀಡಾಂಗಣದ ಒಂದು ಭಾಗ ಕುಸಿದು ಕೆಲವು ಜನರು ಸಾವಿಗೀಡಾದರು. ಇವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಆರಂಭವಾದಾದ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಘಟನಾ ಸ್ಥಳದಲ್ಲಿ 38 ಮಂದಿ ಮೃತಪಟ್ಟಿದ್ದಾರೆ, ಆಸ್ಪತ್ರೆಯಲ್ಲಿ ಹೆಚ್ಚಿನವರು ದಾಖಲಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಕಾರ್ಯಚರಣೆ ವಕ್ತಾರ ಮ್ಯಾಗನ್ ಡೇವಿಡ್ ಅಡೋಮ್ ವಕ್ತಾರ ಹೇಳಿರುವುದಾಗಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಉತ್ತರ ಜಿವ್ ಆಸ್ಪತ್ರೆಯ ಮೂಲವೊಂದು, ಹಲವಾರು ಸಾವು ನೋವು ಇಲ್ಲಿ ಸಂಭವಿಸಿದ್ದು, ಕನಿಷ್ಠ ಆರು ಸಾವು ಸಂಭವಿಸಿದೆ ಎಂದು ಎಎಫ್‌ಪಿಗೆ ತಿಳಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದನ್ನು ಭಾರಿ ವಿಪತ್ತು ಎಂದು ಹೇಳಿದ್ದು ಗಾಯಾಳುಗಳಿಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದಿದ್ದಾರೆ.

ಗಾಯಗೊಂಡವರನ್ನು ರಕ್ಷಿಸಲು ಸೇನಾ ಪಡೆ ಮತ್ತು ತುರ್ತು ಸೇವಾ ಕಾರ್ಯಕರ್ತರು ಹೆಲಿಕಾಪ್ಟರ್ ನ್ನು ನಿಯೋಜಿಸಿದ್ದಾರೆ. ಅಪಘಾತದ ಕೆಲವು ಗಂಟೆಗಳ ನಂತರ ಮೆರಾನ್‌ನ ದೃಶ್ಯಗಳು ಅಲ್ಟ್ರಾ-ಆರ್ಥೊಡಾಕ್ಸ್ ಯಹೂದಿ ಗುಂಪನ್ನು ಸಂಕಷ್ಟದಲ್ಲಿರುವುದನ್ನು ತೋರಿಸುತ್ತವೆ . ಬದುಕುಳಿದ ಕೆಲವರು ಸಾವಿಗೀಡಾದವರಿಗಾಗಿ ಮೇಣದ ಬತ್ತಿಗಳನ್ನು ಬೆಳಗಿಸಿದರೆ, ಇತರರು ಹತ್ತಿರದ ಗೋಡೆಯ ಬಳಿ ಪ್ರಾರ್ಥಿಸುವ ದೃಶ್ಯ ಕಾಣುತ್ತಿತ್ತು.  ಇಸ್ರೇಲಿ ಮಾಧ್ಯಮಗಳು ನೆಲದ ಮೇಲೆ ಪ್ಲಾಸ್ಟಿಕ್ ಚೀಲಗಳಲ್ಲಿ ಮುಚ್ಚಿದ ಮೃತ ದೇಹಗಳ ಚಿತ್ರವನ್ನು ಪ್ರಕಟಿಸಿವೆ.

ಇದು ನಾನು ನೋಡಿದ ಅತ್ಯಂತನ ಭೀಕರ ದುರಂತಗಳಲ್ಲಿ ಒಂದಾಗಿದೆ ಎಂದು ಘಟನಾ ಸ್ಥಳದಲ್ಲಿದ್ದ ಯುನೈಟೆಡ್ ಹಟ್ಜಾಲಾ ಸ್ವಯಂಸೇವಕ ರಕ್ಷಣಾ ಸೇವೆಯ ಲಾಜರ್ ಹೈಮನ್ ಹೇಳಿದ್ದಾರೆ. ತುರ್ತು ಔಷಧ ಕ್ಷೇತ್ರಕ್ಕೆ ಪ್ರವೇಶಿಸಿದಾಗಿನಿಂದ ನಾನು ಈ ರೀತಿ ಏನನ್ನೂ ನೋಡಿಲ್ಲ ಎಂದು ಅವರು ಹೇಳಿದರು. ಕುಸಿತದ ಸಮಯದಲ್ಲಿ ಡಜನ ಗಟ್ಟಲೆ ಜನರು ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ ಎಂದು ಯೆಹುಡಾ ಗೊಟ್ಲಿಬ್ ಹೇಳಿದ್ದಾರೆ. ಇದು ಭಯಾನಕ ವಿಪತ್ತು ಎಂದು ವಿಷಾದಿಸಿದ ಪ್ರತಿಪಕ್ಷದ ನಾಯಕ ಯೇರ್ ಲ್ಯಾಪಿಡ್ ಇದು ದೇಶಕ್ಕೆ “ದುಃಖ” ರಾತ್ರಿ ಎಂದಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​​ ಧರಿಸುವುದು ಕಡ್ಡಾಯವಲ್ಲ; ಅಚ್ಚರಿಯ ನಿಲುವು ತಳೆದ ಇಸ್ರೇಲ್​ ದೇಶ

(Stampede At Israel Jewish Pilgrimage Site At Least 44 Killed)

Published On - 11:56 am, Fri, 30 April 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್