ಪ್ರಚಾರಕ್ಕೆ ಕಮಲಾ ಹ್ಯಾರಿಸ್ ಹೆಸರು ಬಳಸಬೇಡಿ; ಸೋದರ ಸಂಬಂಧಿ ಮೀನಾ ಹ್ಯಾರಿಸ್​ಗೆ ಶ್ವೇತಭವನದ ಅಧಿಕಾರಿಗಳ ಸೂಚನೆ

Kamala Harris and Meena Harris: ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ 8 ಲಕ್ಷ ಹಿಂಬಾಲಕರನ್ನು ಹೊಂದಿರುವ ಅವರು ರಾಜಕೀಯ ಸಂಬಂಧಿ ಪೋಸ್ಟ್​ಗಳನ್ನು ಸಹ ಬರೆಯುವ ರೂಢಿ ಹೊಂದಿದ್ದಾರೆ.

  • TV9 Web Team
  • Published On - 16:41 PM, 15 Feb 2021
ಪ್ರಚಾರಕ್ಕೆ ಕಮಲಾ ಹ್ಯಾರಿಸ್ ಹೆಸರು ಬಳಸಬೇಡಿ; ಸೋದರ ಸಂಬಂಧಿ ಮೀನಾ ಹ್ಯಾರಿಸ್​ಗೆ ಶ್ವೇತಭವನದ ಅಧಿಕಾರಿಗಳ ಸೂಚನೆ
ಮೀನಾ ಹ್ಯಾರಿಸ್ (ಎಡ), ಮತ್ತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (ಬಲ)

ವಾಷಿಂಗ್ಟನ್ ಡಿಸಿ: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಹೆಸರನ್ನು ತಮ್ಮ ಕಾರ್ಯಚಟುವಟಿಕೆಗಳಲ್ಲಿ ಬಳಸದಂತೆ ಕಮಲಾ ಹ್ಯಾರಿಸ್ ಸೋದರ ಸಂಬಂಧಿ ಮೀನಾ​ ಹ್ಯಾರಿಸ್​ಗೆ ಶ್ವೇತಭವನದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ತಮ್ಮ ಯಾವುದೇ ವ್ಯವಹಾರದಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೆಸರು ಬಳಸಿ ಬ್ರ್ಯಾಂಡ್ ವೃದ್ಧಿಸಿಕೊಳ್ಳದಂತೆ ಮೀನಾ ಹ್ಯಾರಿಸ್​ಗೆ ಅಧಿಕಾರಿಗಳು ಸೂಚಿಸಿದ್ದಾರೆ. ( Kamala Harris and Meena Harris)

ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದ ಮೀನಾ ಹ್ಯಾರಿಸ್ ಮೂಲತಃ ವಕೀಲೆ. ನಂತರ ನವೋದ್ಯಮಗಳತ್ತ ಮುಖಮಾಡಿದ ಅವರು ಹಲವು ಪುಸ್ತಕಗಳನ್ನೂ ರಚಿಸಿದ್ದಾರೆ. ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ 8 ಲಕ್ಷ ಹಿಂಬಾಲಕರನ್ನು ಹೊಂದಿರುವ ಅವರು ರಾಜಕೀಯ ಸಂಬಂಧಿ ಪೋಸ್ಟ್​ಗಳನ್ನು ಸಹ ಬರೆಯುವ ರೂಢಿ ಹೊಂದಿದ್ದಾರೆ.

ಕಮಲಾ ಹ್ಯಾರಿಸ್ ಹೆಸರು ಬಳಸಿ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕಿಂತ ತಮ್ಮ ಸ್ವಂತ ಹೆಸರಲ್ಲಿ ಬ್ರಾಂಡ್ ಬೆಳೆಸಿಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. Kamala And Maya’s Big Idea ಎಂಬ ಪ್ರಸಿದ್ಧ ಪುಸ್ತಕವನ್ನು ರಚಿಸಿರುವ ಅವರು ಕಮಲಾ ಹ್ಯಾರಿಸ್ ಹೆಸರು ಬಳಸದಂತೆ ತಡೆಯುವ ನಿಟ್ಟಿನಲ್ಲಿ ಕಠಿಣ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಕಮಲಾ ಹ್ಯಾರಿಸ್ ಎಂಬ ಸ್ಫೂರ್ತಿ ಕಥನ; ಅಮೆರಿಕದಲ್ಲಿ ಹಲವು ಪ್ರಥಮಗಳಿಗೆ ಕಮಲಾ ಕಾರಣ