Syria Earthquake: ಹುಟ್ಟು ಸಾವು ಎಲ್ಲವೂ ದೈವಿಚ್ಛೆ: ಅವಶೇಷಗಳಡಿ ಹುಟ್ಟಿ, ತಾಯಿ ಮೃತಪಟ್ಟರೂ ಹೊಕ್ಕುಳ ಬಳ್ಳಿ ಸಮೇತ ಬದುಕಿ ಬಂದ ಕೂಸು

ಹುಟ್ಟು ಸಾವು ಎಲ್ಲವೂ ದೈವಿಚ್ಛೆ ಎನ್ನುವ ಮಾತು ಅಕ್ಷರಶಃ ನಿಜವಾಗಿದೆ. ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ, ಇನ್ನೂ ಸಾವಿರಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಆದರೆ ಅದೇ ಅವಶೇಷಗಳಡಿ ಮಗುವೊಂದು ಜನಿಸಿದ್ದು, ಹೊಕ್ಕುಳ ಬಳ್ಳಿ ಕತ್ತರಿಸುವ ಮುನ್ನವೇ ತಾಯಿ ಮೃತಪಟ್ಟಿದ್ದು, ಮಗುವನ್ನು ಜೀವಂತವಾಗಿ ಹೊರತೆಗೆಯಲಾಗಿದೆ.

Syria Earthquake: ಹುಟ್ಟು ಸಾವು ಎಲ್ಲವೂ ದೈವಿಚ್ಛೆ: ಅವಶೇಷಗಳಡಿ ಹುಟ್ಟಿ, ತಾಯಿ ಮೃತಪಟ್ಟರೂ ಹೊಕ್ಕುಳ ಬಳ್ಳಿ ಸಮೇತ ಬದುಕಿ ಬಂದ ಕೂಸು
ಸಿರಿಯಾ ಭೂಕಂಪ

Updated on: Feb 08, 2023 | 8:50 AM

ಹುಟ್ಟು ಸಾವು ಎಲ್ಲವೂ ದೈವಿಚ್ಛೆ ಎನ್ನುವ ಮಾತು ಅಕ್ಷರಶಃ ನಿಜವಾಗಿದೆ. ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ, ಇನ್ನೂ ಸಾವಿರಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಆದರೆ ಅದೇ ಅವಶೇಷಗಳಡಿ ಮಗುವೊಂದು ಜನಿಸಿದ್ದು, ಹೊಕ್ಕುಳ ಬಳ್ಳಿ ಕತ್ತರಿಸುವ ಮುನ್ನವೇ ತಾಯಿ ಮೃತಪಟ್ಟಿದ್ದು, ಮಗುವನ್ನು ಜೀವಂತವಾಗಿ ಹೊರತೆಗೆಯಲಾಗಿದೆ.

ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಭಾರತದಿಂದ ಪರಿಹಾರ ಮತ್ತು ರಕ್ಷಣಾ ತಂಡಗಳು ಟರ್ಕಿ ತಲುಪಿವೆ. ವೈದ್ಯಕೀಯ ತಂಡವೂ ಇದೆ.

ಅವಶೇಷಗಳಡಿ ಇನ್ನೂ ಸಾವಿರಾರು ಜನರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ರಕ್ಷಣಾ ಕಾರ್ಯ ವೇಗವಾಗಿ ನಡೆಯುತ್ತಿದೆ. ಜನರು ರಾತ್ರಿಯಿಡೀ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಲೇ ಇದ್ದಾರೆ.

ಮತ್ತಷ್ಟು ಓದಿ:Footballer Death: ಟರ್ಕಿ ಭೂಕಂಪದಲ್ಲಿ ಫುಟ್ಬಾಲ್ ಆಟಗಾರ ಅಹ್ಮತ್ ಎಯುಪ್ ಟುರ್ಕಾಸ್ಲಾನ್ ಸಾವು

ಅವಶೇಷಗಳ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜೀವಂತವಾಗಿರಬಹುದು, ಅದಕ್ಕಾಗಿಯೇ ರಕ್ಷಣಾ ತಂಡವು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಇದೇ ವೇಳೆ ಭೂಕಂಪನದ ಅನಾಹುತದ ಇಂತಹ ಕೆಲವು ಕಥೆಗಳು ಮುನ್ನೆಲೆಗೆ ಬಂದಿದ್ದು, ಕೇಳಿ ಎಲ್ಲರ ಮನದಲ್ಲಿ ತುಂಬಿಕೊಂಡಿದೆ.

ಅವಶೇಷಗಳಡಿ ಸಿಲುಕಿದ್ದ ಗರ್ಭಿಣಿ ಹೆಣ್ಣುಮಗುವಿಗೆ ಜನ್ಮ ನೀಡಿ ಪ್ರಾಣಬಿಟ್ಟಿದ್ದಾರೆ. 34 ವರ್ಷದ ಖಲೀಲ್ ಅಲ್ ಶಮಿ, ಸೋಮವಾರ ಸಿರಿಯಾದ ಜಿಂಡರೆಸ್ ನಗರದಲ್ಲಿ ಸಂಭವಿಸಿದ ಭೂಕಂಪದಿಂದ ತನ್ನ ಸಹೋದರನ ಮನೆಯೂ ನಾಶವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾ, ಕುಟುಂಬದ ಸದಸ್ಯರನ್ನು ಹುಡುಕಲು ಅವಶೇಷಗಳನ್ನು ಒಂದೊಂದಾಗಿಯೇ ಬದಿಗೆ ಸರಿಸುತ್ತಾ ಹೋಗುತ್ತಿದ್ದರು.

ಆ ಸಂದರ್ಭದಲ್ಲಿ ತನ್ನ ಅತ್ತಿಗೆಯ ಹೊಕ್ಕುಳ ಬಳ್ಳಿಗೆ ಜೋಡಿಸಲಾದ ಸುಂದರವಾದ ಹೆಣ್ಣುಮಗುವನ್ನು ಕಂಡು ಮನಸ್ಸು ತುಂಬಿ ಬಂದಿತ್ತು, ಆದರೆ ಮಗುವು ಜೀವಂತವಾಗಿರುವುದು ಕಂಡುಬಂದಿತ್ತು, ಆಗ ತಕ್ಷಣವೇ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿ ಮಗುವನ್ನು ಹೊರತೆಗೆಯಲಾಯಿತು. ಆದರೆ ತಾಯಿ ಮೃತಪಟ್ಟಿದ್ದಾರೆ. ಅತ್ತಿಗೆ ತುಂಬು ಗರ್ಭಿಣಿಯಾಗಿದ್ದರು, ಒಂದು ಅಥವಾ ಎರಡು ದಿನಗಳಲ್ಲಿ ಹೆರಿಗೆಯಾಗುತ್ತಿತ್ತು ಎಂದು ಖಲೀಲ್ ತಿಳಿಸಿದ್ದಾರೆ.

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us