AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವಾರು ಬ್ರಿಟಿಷ್ ಪ್ರಜೆಗಳನ್ನು ಅಫ್ಘಾನಿಸ್ತಾನದಲ್ಲಿ ಸೆರೆಹಿಡಿದಿಡಲಾಗಿದೆ ಎನ್ನುತ್ತಿದೆ ಯುಕೆ ಸರ್ಕಾರ

‘ಅಫ್ಘಾನಿಸ್ತಾನದಲ್ಲಿ ಬಂಧನಲ್ಲಿರುವ ಅನೇಕ ಬ್ರಿಟಿಷ್ ಪ್ರಜೆಗಳ ಕುಟುಂಬಗಳಿಗೆ ನಾವು ಬೆಂಬಲ ಒದಗಿಸುತ್ತಿದ್ದೇವೆ,’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆಯಾದರೂ ನಿರ್ದಿಷ್ಟವಾಗಿ ಎಷ್ಟು ಜನರನ್ನು ಹಿಡಿದಿಟ್ಟುಕೊಳ್ಳಲಾಗಿದೆ ಮತ್ತು ಅವರು ಯಾರ ವಶದಲ್ಲಿದ್ದಾರೆ ಎನ್ನುವುದನ್ನು ಸ್ಪಷ್ಪಡಿಸಿಲ್ಲ.

ಹಲವಾರು ಬ್ರಿಟಿಷ್ ಪ್ರಜೆಗಳನ್ನು ಅಫ್ಘಾನಿಸ್ತಾನದಲ್ಲಿ ಸೆರೆಹಿಡಿದಿಡಲಾಗಿದೆ ಎನ್ನುತ್ತಿದೆ ಯುಕೆ ಸರ್ಕಾರ
ತಾಲಿಬಾನ್ ನಾಯಕರು
TV9 Web
| Edited By: |

Updated on: Feb 13, 2022 | 7:29 AM

Share

ಅಫ್ಘಾನಿಸ್ತಾನದಲ್ಲಿ ಹಲವಾರು ಬ್ರಿಟಿಷ್ ಪ್ರಜೆಗಳನ್ನು (British Nationals) ಹಿಡಿದಿrಸಿಕೊಳ್ಳಲಾಗಿದೆ ಮತ್ತು ಸದರಿ ವಿಷಯವನ್ನು ಅಲ್ಲಿನ ತಾಲಿಬಾನ್ ಸರ್ಕಾರದ (Taliban Regime) ಗಮನಕ್ಕೆ ತರಲಾಗಿದೆ ಎಂದು ಯುನೈಟೆಡ್ ಕಿಂಗ್ಡಮ್ ಸರ್ಕಾರ (UK Government) ಶನಿವಾರ ಹೇಳಿದೆ. ತಾಲಿಬಾನ್ ಒಬ್ಬ ಬಿಬಿಸಿ ವರದಿಗಾರ ಸೇರಿದಂತೆ ಇಬ್ಬರು ಪತ್ರಕರ್ತರನ್ನು ಬಿಡುಗಡೆ ಮಾಡಿದ ಒಂದು ದಿನ ನಂತರ ಯುಕೆ ವಿದೇಶಾಂಗ ಸಚಿವಾಲಯವು ಎ ಎಫ್ ಪಿ ಸುದ್ದಿಸಂಸ್ಥೆಗೆ ಬ್ರಿಟಿಷ್ ಪ್ರಜೆಗಳನ್ನು ಸೆರೆ ಹಿಡಿದಿಟ್ಟುಕೊಂಡಿರುವ ಸಂಗತಿಯನ್ನು ತಿಳಿಸಿದೆ. ‘ಅಫ್ಘಾನಿಸ್ತಾನದಲ್ಲಿ ಬಂಧನಲ್ಲಿರುವ ಅನೇಕ ಬ್ರಿಟಿಷ್ ಪ್ರಜೆಗಳ ಕುಟುಂಬಗಳಿಗೆ ನಾವು ಬೆಂಬಲ ಒದಗಿಸುತ್ತಿದ್ದೇವೆ,’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆಯಾದರೂ ನಿರ್ದಿಷ್ಟವಾಗಿ ಎಷ್ಟು ಜನರನ್ನು ಹಿಡಿದಿಟ್ಟುಕೊಳ್ಳಲಾಗಿದೆ ಮತ್ತು ಅವರು ಯಾರ ವಶದಲ್ಲಿದ್ದಾರೆ ಎನ್ನುವುದನ್ನು ಸ್ಪಷ್ಪಡಿಸಿಲ್ಲ. ‘ಅವಕಾಶ ಸಿಕ್ಕಾಗಲೆಲ್ಲ ಈ ವಿಷಯವನ್ನು ತಾಲಿಬಾನ್ ಸರ್ಕಾರದೊಂದಿಗೆ ಯುಕೆ ಅಧಿಕಾರಿ ವರ್ಗ ಪ್ರಸ್ತಾಪ ಮಾಡಿದೆ. ಈ ವಾರ ಯುಕೆಯ ನಿಯೋಗವೊಂದು ಕಾಬೂಲ್ ಹೋಗಿದ್ದಾಗಲೂ ವಿಷಯವನ್ನು ಪ್ರಸ್ತಾಪಿಸಲಾಗಿದೆ,’ ಎಂದು ಸಚಿವಾಲಯ ಹೇಳಿದೆ.

ಯುಕೆಯ ಅಫ್ಘಾನಿಸ್ತಾನ ಮಿಶನ್ ಅಗಿದ್ದರೂ ಕತಾರ್ ನಲ್ಲಿ ನೆಲೆಸಿರುವ ಹ್ಯೂಗೋ ಶಾರ್ಟರ್ ನೇತೃತ್ವದ ಬ್ರಿಟಿಷ್ ನಿಯೋಗವೊಂದು ಈ ವಾರದ ಆರಂಭದಲ್ಲಿ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಆಮಿರ್ ಖಾನ್ ಮುತ್ತಾಕಿ ಅವರನ್ನು ಭೇಟಿಯಾಗಿತ್ತು. ಭೇಟಿಯ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ತಲೆದೋರಿರುವ ಮಾನವೀಯ ಬಿಕ್ಕಟ್ಟು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತಾಲಿಬಾನ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಶಾರ್ಟರ್ ಹೇಳಿದರು.

ಶುಕ್ರವಾರ, ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ವರದಿಯಾಗಿರುವ ಮಾಹಿತಿಯ ಪ್ರಕಾರ ಅಫ್ಘಾನಿಸ್ತಾನದಲ್ಲಿ ಕನಿಷ್ಠ ಆರು ಬ್ರಿಟಿಷ್ ನಾಗರಿಕರನ್ನು ಬಂಧಿಸಲಾಗಿದೆ, ಮಾಜಿ ಬಿಬಿಸಿ ವರದಿಗಾರ ಆಂಡ್ರ್ಯೂ ನಾರ್ತ್ ಅವರನ್ನು ಅವತ್ತಿನ ದಿನ ಸಾಯಂಕಾಲ ಬಿಡುಗಡೆ ಮಾಡಲಾಯಿತು. ಎಎಫ್‌ಪಿ ಸುದ್ದಿಸಂಸ್ಥೆ ತಾಲಿಬಾನ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಅಫ್ಘಾನಿಸ್ತಾನದಲ್ಲಿ ಹಿಡಿದಿಟ್ಟುಕೊಂಡಿರಲಾಗಿರುವ ಜನರ ಪೈಕಿ ಪೀಟರ್ ಜುವೆನೆಲ್ ಸಹ ಒಬ್ಬರಾಗಿದ್ದಾರೆ. ಪೀಟರ್ ಕಳೆದ ಡಿಸೆಂಬರ್ ನಿಂದ ಬಂಧನದಲ್ಲಿದ್ದಾರೆ ಎಂದು ಅವರ ಸ್ನೇಹಿತರು ಹೇಳಿದ್ದಾರೆ. ಮೊದಲು ಪತ್ರಕರ್ತರಾಗಿದ್ದ ಬಿಸಿನೆಸ್ಮನ್ ಪೀಟರ್, ಜರ್ಮನಿಯ ಪೌರತ್ವ ಸಹ ಹೊಂದಿದ್ದು ಅವರ ಪತ್ನಿ ಅಫ್ಘಾನಿಸ್ತಾನದವರಾಗಿದ್ದಾರೆ. ಅವರನ್ನು ಪ್ರಮಾದ್ ವಶಾತ್ ಬಂಧಿಸಿರಬಹುದು; ಯಾಕೆಂದರೆ, ಅವರು ಅಫ್ಘಾನಿಸ್ತಾನದ ಗಣಿಗಾರಿಕೆ ಉದ್ದಿಮೆಯಲ್ಲಿ ಹಣ ಹೂಡುವ ಬಗ್ಗೆ ಚರ್ಚಿಸಲು ಅಲ್ಲಿಗೆ ಹೋಗಿದ್ದರು ಎಂದು ಅವರ ಸ್ನೇಹಿತರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಯಾವುದೇ ಆರೋಪಗಳಿಲ್ಲದೆ ಅವರನ್ನು ಹಿಡಿದಿಡಲಾಗಿದೆ ಮತ್ತು ಕುಟುಂಬದ ಸದಸ್ಯರನ್ನಾಗಲೀ, ಅವರ ವಕೀಲರನ್ನಾಗಲೀ ಸಂಪರ್ಕಿಸುವ ಅವಕಾಶವನ್ನು ನೀಡಿಲ್ಲ ಎಂದು ತಿಳಿಸುವ ಅವರ ಹೇಳಿಕೆಯು 1997ರಲ್ಲಿ ಅಲ್-ಖೈದಾ ಸಂಸ್ಥಾಪಕ ಒಸಮಾ ಬಿನ್ ಲಾದೆನ್ ನನ್ನು ಸಿ ಎನ್ ಎನ್ ಅಫ್ಘಾನಿಸ್ತಾನದಲ್ಲಿ ಸಂದರ್ಶನ ನಡೆಸಿದಾಗ ಪೀಟರ್ ಕೆಮೆರಾಮನ್ ಆಗಿದ್ದರು ಎಂಬ ವಿಷಯವನ್ನು ಸಹ ತಿಳಿಸಿದೆ.

ಬಂಧನಕ್ಕೆ ಮೊದಲು ಪೀಟರ್ ಅಫ್ಘಾನಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದರು ಮತ್ತು ತಾಲಿಬಾನ್ ಪ್ರಮುಖ ಅಧಿಕಾರಿಗಳೊಂದಿಗೆ ಮೇಲಿಂದ ಮೇಲೆ ಮೀಟಿಂಗ್ ನಡೆಸುತ್ತಿದ್ದರು ಎಂದು ಸ್ನೇಹಿತರ ಹೇಳಿಕೆ ತಿಳಿಸುತ್ತದೆ.

ಶುಕ್ರವಾರದಂದು ತಾಲಿಬಾನ್ ನಾರ್ಥ್ ಮತ್ತು ಮತ್ತೊಬ್ಬ ವಿದೇಶಿ ಮೂಲದ ಪತ್ರಕರ್ತನನ್ನು ಬಿಡುಗಡೆ ಮಾಡಿತು. ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ನಿರಾಶ್ರಿತರ ಏಜೆನ್ಸಿಯೊಂದಕ್ಕೆ ಕೆಲಸ ಮಾಡುತ್ತಿದ್ದಾಗ ಇವರಿಬ್ಬರನ್ನು ತಾಲಿಬಾನ್ ಬಂಧಿಸಿತ್ತು. ಅವರನ್ನು ಯಾವಾಗ ಬಂಧಿಸಲಾಗಿತ್ತು ಎನ್ನುವುದನ್ನು ಏಜೆನ್ಸಿ ಸ್ಪಷ್ಟಪಡಿಸಿಲ್ಲವಾದರೂ ಇಬ್ಬರು ಅಫ್ಘಾನ್ ಸಹೋದ್ಯೋಗಿಗಳು ಮುಕ್ತವಾಗಿರುವುದು ನಿರಾಳತೆ ಉಂಟುಮಾಡಿದೆ ಎಂದು ಹೇಳಿದೆ.

ಅವರಿಬ್ಬರಲ್ಲಿ ಅಧಿಕೃತ ಐಡೆಂಟಿಟಿ ಕಾರ್ಡ್ ಮತ್ತು ಇತರ ಕಾಗದ ಪತ್ರಗಳು ಇರದಿದ್ದ ಕಾರಣ ಬಂಧಿಸಲಾಗಿತ್ತು ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಯುಲ್ಲಾಹ್ ಮುಜಾಹಿದ್ ಹೇಳಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ತನ್ನ ವಿರೋಧಿಗಳನ್ನು ಮಟ್ಟಹಾಕಿದೆ, ಪ್ರತಿಭಟನೆಗಿಳಿದಿದ್ದ ಮಹಿಳೆಯರನ್ನು ಬಲವಂತದಿಂದ ಚದುರಿಸಿದೆ, ಸರ್ಕಾರ ವಿರುದ್ಧ ಟೀಕೆ ಮಾಡಿದವರನ್ನು ಸೆರೆಗೆ ತಳ್ಳಿದೆ ಮತ್ತು ಕೆಲವು ಸಲ ಆಫ್ಘನ್ ಪತ್ರಕರ್ತರನ್ನು ಥಳಿಸಿದೆ.

ಇದನ್ನೂ ಓದಿ:   Afghanistan: ಲಾಡೆನ್​ನ​ ಮಗನಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಜತೆ ಚರ್ಚೆ; ವಿಶ್ವಸಂಸ್ಥೆ ಬಹಿರಂಗ ಮಾಡಿದೆ ಆಸಕ್ತಿಕರ ಸಂಗತಿಗಳು​

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ