ನ್ಯೂಜಿಲೆಂಡ್ನಲ್ಲಿ ಅಗ್ನಿ ದುರಂತ, 4 ಅಂತಸ್ತಿನ ಹಾಸ್ಟೆಲ್ ಕಟ್ಟಡದಲ್ಲಿದ್ದ 10 ಜನ ಸಜೀವ ದಹನ
ಅವಘಡ ಸಂಭವಿಸಿದ ವೆಲ್ಲಿಂಗ್ಟನ್‌ನ ಲೋಫರ್ಸ್ ಲಾಡ್ಜ್ ಹಾಸ್ಟೆಲ್‌ನಲ್ಲಿಂದ ಐವತ್ತೆರಡು ಜನರನ್ನು ರಕ್ಷಿಸಲಾಗಿದ್ದು ಅಗ್ನಿಶಾಮಕ ದಳದವರು ಇನ್ನೂ ಇತರರಿಗಾಗಿ ಹುಡುಕುತ್ತಿದ್ದಾರೆ.

ವೆಲ್ಲಿಂಗ್ಟನ್: ನ್ಯೂಜಿಲೆಂಡ್ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು(Fire Break Out At New Zealand) ಘಟನೆಯಲ್ಲಿ 10 ಜನ ಸಜೀವ ದಹನವಾಗಿದ್ದಾರೆ. ವೆಲ್ಲಿಂಗ್ಟನ್ ನಗರದಲ್ಲಿರುವ 4 ಅಂತಸ್ತಿನ ಹಾಸ್ಟೆಲ್ ಕಟ್ಟಡದಲ್ಲಿ ಮಂಗಳವಾರ ಅಗ್ನಿ ದುರಂತ ಸಂಭವಿಸಿದ್ದು 10 ಜನರು ಸಾವನ್ನಪ್ಪಿದ್ದಾರೆ ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ. ನಗರ ಶೋಧ ಮತ್ತು ರಕ್ಷಣಾ ಸಿಬ್ಬಂದಿಗಳು ವೆಲ್ಲಿಂಗ್ಟನ್ ಹಾಸ್ಟೆಲ್‌ನ ಹೊಗೆಯಾಡುತ್ತಿರುವ ಅವಶೇಷಗಳಲ್ಲಿ ಬದುಕುಳಿದಿರುವವರನ್ನು ಉಳಿಸಲು ಶೋಧ ಕಾರ್ಯ ಆರಂಭಿಸಿದ್ದಾರೆ.
ಇನ್ನು ಪ್ರಧಾನ ಮಂತ್ರಿ ಕ್ರಿಸ್ ಹಿಪ್ಕಿನ್ಸ್ ಅವರು ದುರಂತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ದೃಢಪಡಿಸಿದ್ದಾರೆ ಮತ್ತು ಇನ್ನೂ ಹೆಚ್ಚಿನವರು ಗಾಯಗೊಂಡಿರುವ ಸಾಧ್ಯತೆಯಿದೆ ಎಂದು ಘಟನೆ ನಡೆದ ಕೆಲ ಗಂಟೆಗಳ ಬಳಿಕ ಮಾಹಿತಿ ನೀಡಿದ್ದರು. ಆದರೆ ಈಗ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ನಾಲ್ಕು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ತಡರಾತ್ರಿ 12:30 ರ ಸುಮಾರಿಗೆ ಲೋಫರ್ಸ್ ಲಾಡ್ಜ್ ಹಾಸ್ಟೆಲ್‌ಗೆ ತುರ್ತು ಸೇವೆಗಳನ್ನು ಕರೆಯಲಾಯಿತು. ಕಟ್ಟಡದಲ್ಲಿ ಯಾರೂ ಇಲ್ಲ ಎಂದು ಅಧಿಕಾರಿಗಳು ಇಂದು ಬೆಳಿಗ್ಗೆ ದೃಢಪಡಿಸಿದ್ದಾರೆ. ಮತ್ತು ಇನ್ನೂ 20 ಜನರು ಪತ್ತೆಯಾಗಿಲ್ಲ ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.
ಇದನ್ನೂ ಓದಿ: ಭಾರತದಲ್ಲಿ ತಾಲಿಬಾನ್ನ ಹೊಸ ಉಸ್ತುವಾರಿ ಅಧಿಕಾರಿ ನೇಮಕ ವರದಿ ತಿರಸ್ಕರಿಸಿದ ಅಫ್ಘಾನಿಸ್ತಾನ ರಾಯಭಾರ ಕಚೇರಿ
ಅವಘಡ ಸಂಭವಿಸಿದ ವೆಲ್ಲಿಂಗ್ಟನ್‌ನ ಲೋಫರ್ಸ್ ಲಾಡ್ಜ್ ಹಾಸ್ಟೆಲ್‌ನಲ್ಲಿಂದ ಐವತ್ತೆರಡು ಜನರನ್ನು ರಕ್ಷಿಸಲಾಗಿದ್ದು ಅಗ್ನಿಶಾಮಕ ದಳದವರು ಇನ್ನೂ ಇತರರಿಗಾಗಿ ಹುಡುಕುತ್ತಿದ್ದಾರೆ ಎಂದು ವೆಲ್ಲಿಂಗ್ಟನ್ ಅಗ್ನಿಶಾಮಕ ಮತ್ತು ತುರ್ತು ಜಿಲ್ಲಾ ವ್ಯವಸ್ಥಾಪಕ ನಿಕ್ ಪ್ಯಾಟ್ ತಿಳಿಸಿದ್ದಾರೆ. ತಡರಾತ್ರಿ 12:30 ರ ಸುಮಾರಿಗೆ ಹಾಸ್ಟೆಲ್‌ಯಲ್ಲಿ ಬೆಂಕಿ ಬಿದ್ದಿದೆ ಎಂದು ಫೋನ್ ಬಂದಿತ್ತು ಎಂದು ಅವರು ಹೇಳಿದರು.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ಮತ್ತು ತುರ್ತು ಅಧಿಕಾರಿಗಳ ಜೊತೆಯಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ವೆಲ್ಲಿಂಗ್ಟನ್ ಸಿಟಿ ಕೌನ್ಸಿಲ್ ವಕ್ತಾರ ರಿಚರ್ಡ್ ಮ್ಯಾಕ್ಲೀನ್ ಅವರು ಬೆಂಕಿಯಿಂದ ಪಾರಾದ ಜನರಿಗೆ ಸಹಾಯ ಮಾಡುತ್ತಿದ್ದಾರೆ ಮತ್ತು ಈಗ ತುರ್ತು ಕೇಂದ್ರದಲ್ಲಿ ಕೌನ್ಸಿಲ್ ಶವರ್ ಮತ್ತು ಇತರ ಸೌಲಭ್ಯಗಳನ್ನು ಹೊಂದಿರುವ ಸ್ಥಳೀಯ ಟ್ರ್ಯಾಕ್‌ನಲ್ಲಿ ಸ್ಥಾಪಿಸಿದ್ದಾರೆ.
ವಿದೇಶದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ




