Watch: ಕೆನಡಾದ ರಸ್ತೆ ಮಧ್ಯೆ ಹೊತ್ತಿ ಉರಿದ ಟೆಸ್ಲಾ ಮಾಡೆಲ್ ವೈ; ಕಿಟಕಿ ಒಡೆದು ಅಪಾಯದಿಂದ ಪಾರಾದ ಮಾಲೀಕ
ಟೊರೊಂಟೊ ಮೂಲದ ಆನ್‌ಲೈನ್ ಆಟೋಮೊಬೈಲ್ ನಿಯತಕಾಲಿಕೆಯಾದ ಡ್ರೈವಿಂಗ್ ಪ್ರಕಾರ, ಮಾಲೀಕ ಜಮಿಲ್ ಜುಥಾ ಎಂಬವರು ಬ್ರಿಟಿಷ್ ಕೊಲಂಬಿಯಾದ ಉತ್ತರ ವ್ಯಾಂಕೋವರ್‌ನಲ್ಲಿರುವ ಗಾಲ್ಫ್ ಕೋರ್ಸ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಕೆನಡಾದಲ್ಲಿ (Canada) ಶುಕ್ರವಾರ ಟೆಸ್ಲಾ (Tesla Model Y )ಮಾಲೀಕರು ತಮ್ಮ 2021 ಮಾಡೆಲ್ ವೈ ಅನ್ನು ಚಾಲನೆ ಮಾಡುತ್ತಿದ್ದಾಗ, ಕಾರು ದೋಷದ ಬಗ್ಗೆ ಎಚ್ಚರಿಕೆ ರವಾನೆಯಾಯಿತು. ಪವರ್ ಡೌನ್ ಆಯ್ತು. ಒಳಗೆ ಲಾಕ್ ಆಗಿರುವ ಮಾಲೀಕ. ತಕ್ಷಣವೇ ದಟ್ಟವಾದ ಹೊಗೆ ಬರಲು ಶುರುವಾಯ್ತು. ಈ ಹೊತ್ತಲ್ಲಿ ವಾಹನದಿಂದ ಹೊರಬರಲು ಕಾರಿನ ಕಿಟಕಿಯನ್ನು ಒಡೆಯುವುದನ್ನು ಬಿಟ್ಟರೆ ಮಾಲೀಕರಿಗೆ ಬೇರೆ ದಾರಿ ಇರಲಿಲ್ಲ. ಟೊರೊಂಟೊ ಮೂಲದ ಆನ್‌ಲೈನ್ ಆಟೋಮೊಬೈಲ್ ನಿಯತಕಾಲಿಕೆಯಾದ ಡ್ರೈವಿಂಗ್ ಪ್ರಕಾರ, ಮಾಲೀಕ ಜಮಿಲ್ ಜುಥಾ ಎಂಬವರು ಬ್ರಿಟಿಷ್ ಕೊಲಂಬಿಯಾದ ಉತ್ತರ ವ್ಯಾಂಕೋವರ್‌ನಲ್ಲಿರುವ ಗಾಲ್ಫ್ ಕೋರ್ಸ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯನ್ನು ರೆಕಾರ್ಡ್ ಮಾಡಿ ಅದರ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಸುಮಾರು ಐದು ನಿಮಿಷಗಳನ್ನು ತೆಗೆದುಕೊಂಡರು. ಬಾಗಿಲು ತೆರೆಯಲಾಗಲಿಲ್ಲ ಎಂದು ಜೂಥಾ ಹೇಳಿರುವುದಾಗಿ ಕೆನಡಾದ ಸುದ್ದಿ ಸಂಸ್ಥೆಯಾದ ಸಿಟಿವಿ ನ್ಯೂಸ್‌ನಿಂದ ಉಲ್ಲೇಖಿಸಿದೆ. ಕಿಟಕಿಗಳನ್ನು ಕೆಳಗಿಳಿಸಿಲು ಆಗುತ್ತಿರಲಿಲ್ಲ ನೀವು ಸಿಕ್ಕಿಬಿದ್ದಿರುವಾಗ ಒಂದು ಕ್ಷಣದಲ್ಲಿ ಭಯಭೀತರಾಗಿ ಬಿಡುತ್ತೀರಿ. ನಾನು ಕಿಟಕಿಯನ್ನು ಒಡೆದುಹೊರಬಂದೆ ತಕ್ಷಣವೇ 911 ಗೆ ಕರೆ ಮಾಡಿದೆ, ”ಎಂದು ಜೂಥಾ ಹೇಳಿದರು.
ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿನ ಕಥೆಗಳನ್ನು ಒಳಗೊಂಡಿರುವ ವೆಬ್‌ಸೈಟ್ ಎಲೆಕ್ಟ್ರೆಕ್ ಪ್ರಕಾರ ಜುಥಾ ಕೇವಲ ಎಂಟು ತಿಂಗಳ ಹಿಂದೆ ವಾಹನವನ್ನು ಖರೀದಿಸಿದ್ದಾರೆ. ಟೆಸ್ಲಾ ವಾಹನದ ಬಾಗಿಲುಗಳನ್ನು ತನ್ನಿಂದತಾನೇ ಕಾರ್ಯ ನಿರ್ವಹಿಸುವವು ಆಗಿದ್ದರೂ ವಿದ್ಯುತ್ ಕಡಿತದ ಸಂದರ್ಭದಲ್ಲಿ ಅವು ಕಾರ್ಯನಿರ್ವಹಿಸುವುದಿಲ್ಲ. ಇವುಗಳನ್ನು ಕೈಯಿಂದಲೂ ತೆರೆಯಲು ಸಾಧ್ಯ ಆಟೋಮೊಬೈಲ್ ಬಗ್ಗೆ ಪರಿಚಯವಿಲ್ಲದ ವ್ಯಕ್ತಿಗಳಿಗೆ ಇದು ಆಗಾಗ ಸಮಸ್ಯೆಯಾಗಿದೆ. ಏಕೆಂದರೆ ಅವರು ಕಾರಿನ ಬಾಗಿಲು ತಂತಾನೇ ತೆರೆಯುವ ಬದಲಿಗೆ ಕೈಯಿಂದ ತೆರೆಯುತ್ತಾರೆ ಎಂದು ಎಲೆಕ್ಟ್ರೆಕ್ ವರದಿ ಹೇಳಿದೆ.