Titanic Submarine: ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಐವರು ಪ್ರವಾಸಿಗರು ಜಲಸಮಾಧಿ

ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿದ್ದ ಟೈಟಾನಿಕ್(Titanic) ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಐವರು ಪ್ರವಾಸಿಗರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Titanic Submarine: ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಐವರು ಪ್ರವಾಸಿಗರು ಜಲಸಮಾಧಿ
ಟೈಟಾನಿಕ್ ಜಲಾಂತರ್ಗಾಮಿ
Follow us
ನಯನಾ ರಾಜೀವ್
|

Updated on: Jun 23, 2023 | 7:12 AM

ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿದ್ದ ಟೈಟಾನಿಕ್(Titanic) ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಐವರು ಪ್ರವಾಸಿಗರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಓರ್ವ ಪೈಲಟ್, ನಾಲ್ವರು ಮಹಾಸಾಗರದಲ್ಲಿ ಜಲ ಸಮಾಧಿಯಾಗಿದ್ದಾರೆ. ಬ್ರಿಟನ್​ನ ಹಮೀಶ್ ಹಾರ್ಡಿಂಗ್, ಸ್ಟೋಕ್ಟನ್ ರಶ್, ಪಾಲ್ ಹೆನ್ರಿ, ಪಾಕಿಸ್ತಾನದ ಉದ್ಯಮಿ ಶಹಜಾದ್ ದಾವೂದ್ ಹಾಗೂ ಪುತ್ರ ಸುಲೇಮಾನ್ ಮೃತಪಟ್ಟಿದ್ದಾರೆ.

ಕಳೆದ 3-4 ದಿನಗಳಿಂದ ಅಮೆರಿಕ ಹಾಗೂ ಕೆನಡಾ ಕರಾವಳಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಫಲ ಕೊಡಲಿಲ್ಲ, ಕೆನಡಾದ ನ್ಯೂಫೌಂಡ್​ಲ್ಯಾಂಡ್​ ಕರಾವಳಿಯ ಭಾಗದಿಂದ 400 ಮೈಲಿ ದೂರದಲ್ಲಿ ಹಡಗು ಟೈಟಾನಿಕ್​ನ ಅವಶೇಷಗಳು ಬಿದ್ದಿವೆ. ಇಲ್ಲಿನ ಅವಶೇಷಗಳನ್ನು ನೋಡಲು ಹೋಗಿದ್ದವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಓದಿ: ನಾಪತ್ತೆಯಾಗಿರುವ ಟೈಟಾನಿಕ್ ಸಬ್‌ಮೆರಿನ್​​ನಲ್ಲಿ ಖಾಲಿಯಾಗುತ್ತಾ ಬಂದಿದೆ ಆಕ್ಸಿಜನ್; ಪವಾಡಗಳು ನಡೆಯಬೇಕು ಎಂದ ತಜ್ಞರು

ಅಮೆರಿಕ ನೌಕಾಪಡೆಯ ಸಿಬ್ಬಂದಿಗೆ ನಾಪತ್ತೆಯಾಗಿರುವ ಟೈಟಾನಿಕ್ ಜಲಾಂತರ್ಗಾಮಿಯ ಅವಶೇಷಗಳು ಕಾಣಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾಪತ್ತೆಯಾಗಿರುವ ಹಡಗಿನಲ್ಲಿ ಆಮ್ಲಜನಕ ಖಾಲಿಯಾಗಿತ್ತು, ಅಲ್ಲಿದ್ದವರಿಗೆ ಉಸಿರಾಡಲು ನಿನ್ನೆ ಸಂಜೆ 7 ಗಮಟೆಯವರೆಗೆ ಸಾಕಾಗುವಷ್ಟು ಮಾತ್ರ ಆಮ್ಲಜನಕವಿತ್ತು.

ಕೆನಡಾದ ನ್ಯೂಫೌಂಡ್​ಲ್ಯಾಂಡ್​ನ ಕರಾವಳಿಯಿಂದ 400 ಮೈಲಿ ದೂರದಲ್ಲಿ ಟೈಟಾನಿಕ್​ ಹಡಗುಗಳ ಅವಶೇಷಗಳಿವೆ. 100 ವರ್ಷಕ್ಕೂ ಹೆಚ್ಚು ಕಾಲದಿಂದ ಸಮುದ್ರದ 12,600 ಅಡಿ ಆಳದಲ್ಲಿ ಟೈಟಾನಿಕ್ ಅವಶೇಷಗಳಿವೆ. 1912ರ ಏಪ್ರಿಲ್ 14ರಂದು ಬೃಹತ್ ಟೈಟಾನಿಕ್ ಹಡಗು ಅಪಘಾತಕ್ಕೀಡಾಗಿತ್ತು, 1,500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

ಹಾಗೆಯೇ 700 ಮಂದಿ ಮಾತ್ರ ಪ್ರಾಣ ಉಳಿಸಿಕೊಂಡಿದ್ದರು. 1982ರಲ್ಲಿ ಟೈಟಾನಿಕ್ ಅವಶೇಷಗಳು ಪತ್ತೆಯಾಗಿತ್ತು. ಈಗ ಅದನ್ನು ನೋಡಲು ತೆರಳಿದ್ದ ಜೀವಗಳು ಕೂಡ ನೀರಿನ ಪಾಲಾಗಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ