ನಾಪತ್ತೆಯಾಗಿರುವ ಟೈಟಾನಿಕ್ ಸಬ್ಮೆರಿನ್ನಲ್ಲಿ ಖಾಲಿಯಾಗುತ್ತಾ ಬಂದಿದೆ ಆಕ್ಸಿಜನ್; ಪವಾಡಗಳು ನಡೆಯಬೇಕು ಎಂದ ತಜ್ಞರು
12,500 ಅಡಿ ಆಳದಲ್ಲಿರುವ ಟೈಟಾನಿಕ್ ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಜಲಾಂತರ್ಗಾಮಿ ಭಾನುವಾರ ಬೆಳಿಗ್ಗೆ ಮುಳುಗಡೆಯಾಗಿತ್ತು .ಸುಮಾರು ಒಂದು ಗಂಟೆ ಮತ್ತು 45 ನಿಮಿಷಗಳ ನಂತರ, ಟೈಟಾನಿಕ್ ಪೋಲಾರ್ ಪ್ರಿನ್ಸ್ ಹಡಗಿನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು.
ನಾಪತ್ತೆಯಾಗಿರುವ ಟೈಟಾನಿಕ್ ಸಬ್ಮೆರಿನ್ನಲ್ಲಿ (Missing Titanic submersible) ಈಗ ಕೇವಲ ನಾಲ್ಕು ಗಂಟೆಗಳಿಗಿಂತಲೂ ಕಡಿಮೆ ಹೊತ್ತು ಬಳಸಲು ಸಾಕಾಗುವಷ್ಟು ಮಾತ್ರ ಆಮ್ಲಜನಕ (oxygen) ಬಾಕಿ ಉಳಿದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಮುಳುಗಡೆಯಾಗಿರುವ ಜಲಾಂತರ್ಗಾಮಿ ಟೈಟಾನಿಕ್ನಲ್ಲಿ ಸಂಜೆ 7:15 ವರೆಗೆ ಸಾಕಾಗುವಷ್ಟು ಆಮ್ಲಜನಕ ಉಳಿದಿದೆ. ಇದು ಭಾನುವಾರ ಮಧ್ಯಾಹ್ನ ಕಾಣೆಯಾಗಿದ್ದು, ಗರಿಷ್ಠ 96 ಗಂಟೆಗಳ ಕಾಲ ತುರ್ತು ಆಮ್ಲಜನಕವನ್ನು ಹೊಂದಿದೆ. ನೀರಿನ ಅಡಿಯಲ್ಲಿ ಬೇರೊಂದು ಶಬ್ದವೂ ಕೇಳಿಸಿದೆಯಂತೆ. ಅಟ್ಲಾಂಟಿಕ್ ಮಹಾಸಾಗರದಲ್ಲಿ ಜಲಾಂತರ್ಗಾಮಿಗಾಗಿ ಹುಡುಕುತ್ತಿರುವ ಕೆನಡಾದ ವಿಮಾನವು ಅದರ ಕೊನೆಯ ತಿಳಿದಿರುವ ಸ್ಥಳದ ಸಮೀಪದಿಂದ ಬಡಿಯುತ್ತಿರುವಂಥಾ ಸದ್ದು ಪತ್ತೆ ಹಚ್ಚಿದೆ. ಆದಾಗ್ಯೂ ಅಮೆರಿಕ ಕರಾವಳಿ ರಕ್ಷಣಾ ಪಡೆ ಶಬ್ದದ ಮೂಲ ತಿಳಿದಿಲ್ಲ ಎಂದಿದ್ದಾರೆ.
ಜಲಾಂತರ್ಗಾಮಿ ಹುಡುಕಾಟ ನಡೆಸುತ್ತಿರುವ ಸಿಬ್ಬಂದಿ ಮಂಗಳವಾರ ಪ್ರತಿ 30 ನಿಮಿಷಗಳಿಗೊಮ್ಮೆ ಮತ್ತು ಬುಧವಾರ ನಾಲ್ಕು ಗಂಟೆಗಳ ನಂತರ ಬಡಿಯುವ ಶಬ್ದಗಳನ್ನು ಪತ್ತೆಹಚ್ಚಿದರು. ಗುರುವಾರ ಯುಕೆ ಸಮಯ ಮಧ್ಯಾಹ್ನ 1 ಗಂಟೆಗೆ ಆಮ್ಲಜನಕದ ಪೂರೈಕೆ ಮುಗಿಯುವ ನಿರೀಕ್ಷೆಯೊಂದಿಗೆ, ಹುಡುಕಾಟಕ್ಕೆ ಸಹಾಯ ಮಾಡಲು ಇಂದು ಬೆಳಿಗ್ಗೆ ಹೆಚ್ಚುವರಿ ಬೆಂಬಲ ನೀಡಲಾಗಿದೆ ಎಂದು ಅಮೆರಿಕ ಕೋಸ್ಟ್ ಗಾರ್ಡ್ ಹೇಳಿರುವುದಾಗಿ ದಿ ಇಂಡಿಪೆಂಡೆಂಟ್ ವರದಿ ಮಾಡಿದೆ
ನಾಪತ್ತೆಯಾಗಿರುವ ಸಬ್ ಮೆರಿನ್ನಲ್ಲಿ ಸಿಇಒ ಮತ್ತು ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಸ್ಟಾಕ್‌ಟನ್ ರಶ್ ಸಂಸ್ಥಾಪಕ, ಬ್ರಿಟಿಷ್ ಬಿಲಿಯನೇರ್ ಪರಿಶೋಧಕ ಹಮೀಶ್ ಹಾರ್ಡಿಂಗ್, ಹೆಸರಾಂತ ಫ್ರೆಂಚ್ ಡೈವರ್ ಪಾಲ್-ಹೆನ್ರಿ ನಾರ್ಜಿಯೊಲೆಟ್ ಮತ್ತು ಪಾಕಿಸ್ತಾನಿ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ 19 ವರ್ಷದ ಮಗ ಸುಲೇಮಾನ್ ದಾವೂದ್ ಇದ್ದಾರೆ.
12,500 ಅಡಿ ಆಳದಲ್ಲಿರುವ ಟೈಟಾನಿಕ್ ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಜಲಾಂತರ್ಗಾಮಿ ಭಾನುವಾರ ಬೆಳಿಗ್ಗೆ ಮುಳುಗಡೆಯಾಗಿತ್ತು .ಸುಮಾರು ಒಂದು ಗಂಟೆ ಮತ್ತು 45 ನಿಮಿಷಗಳ ನಂತರ, ಟೈಟಾನಿಕ್ ಪೋಲಾರ್ ಪ್ರಿನ್ಸ್ ಹಡಗಿನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು.
ಪವಾಡ ಸಂಭವಿಸಬೇಕಿದೆ
‘We need a miracle at this point but miracles do happen’
‘The noises are repetitive… there isn’t anything in the natural world which would have that cycle’
Dr David Gallo, Deep-sea explorer and close friend of the sub’s pilot pic.twitter.com/6dC4aiSQaK
— Good Morning Britain (@GMB) June 22, 2023
ಈ ಹಂತದಲ್ಲಿ ನಮಗೆ ಪವಾಡ ಬೇಕು. ಪವಾಡಗಳು ಸಂಭವಿಸಲೂ ಬಹುದು.ಶಬ್ದಗಳು ಪುನರಾವರ್ತಿತವಾಗಿವೆ ನೈಸರ್ಗಿಕ ಜಗತ್ತಿನಲ್ಲಿ ಪುನರಾವರ್ತನೆಯನ್ನು ಹೊಂದರದೇ ಇರುವುದು ಯಾವುದೂ ಇಲ್ಲ ಎಂದು ಸಬ್ ಮರೀನ್ ಪೈಲಟ್ ನ ಆಪ್ತ ಸ್ನೇಹಿತ, ಸಮುದ್ರದಾಳದ ಪರಿಶೋಧಕ ಡಾ ಡೇವಿಡ್ ಗ್ಯಾಲೊ ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Thu, 22 June 23