ಟೋಕಿಯೊದಿಂದ ಸ್ಥಳಾಂತರವಾಗುವ ಕುಟುಂಬಗಳಿಗೆ 10 ಲಕ್ಷ ಯೆನ್ ನೀಡಲಿದೆ ಜಪಾನ್ ಸರ್ಕಾರ, ಇದರ ಹಿಂದಿದೆ ಮಹತ್ತರವಾದ ಉದ್ದೇಶ

ಟೋಕಿಯೊ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಅರ್ಹ ಕುಟುಂಬಗಳು ಹಿಂದುಳಿದ ಸ್ಥಳೀಯ ಪ್ರದೇಶಕ್ಕೆ ತೆರಳಿದರೆ ಪ್ರತಿ ಮಗುವಿಗೆ 2023 ರ ಆರ್ಥಿಕ ವರ್ಷದಲ್ಲಿ 1 ಮಿಲಿಯನ್ ಯೆನ್ (7,700 ಡಾಲರ್) ಅನ್ನು ಪಡೆಯಲಿವೆ.

ಟೋಕಿಯೊದಿಂದ ಸ್ಥಳಾಂತರವಾಗುವ ಕುಟುಂಬಗಳಿಗೆ 10 ಲಕ್ಷ ಯೆನ್ ನೀಡಲಿದೆ ಜಪಾನ್ ಸರ್ಕಾರ, ಇದರ ಹಿಂದಿದೆ ಮಹತ್ತರವಾದ ಉದ್ದೇಶ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 04, 2023 | 1:51 PM

ದೇಶದ ಇತರ ಪ್ರದೇಶಗಳಲ್ಲಿ ಜನಸಂಖ್ಯೆಯನ್ನು ಸರಿದೂಗಿಸುವುದಕ್ಕಾಗಿ ರಾಜಧಾನಿಯಿಂದ ದೂರ ಸರಿಯಲು ಮನೆಗಳಿಗೆ ಹಣಕಾಸಿನ ಬೆಂಬಲವನ್ನು ಹೆಚ್ಚಿಸಲು ಜಪಾನ್ (Japan) ಯೋಜಿಸಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.ಟೋಕಿಯೊ (Tokyo ) ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಅರ್ಹ ಕುಟುಂಬಗಳು ಹಿಂದುಳಿದ ಸ್ಥಳೀಯ ಪ್ರದೇಶಕ್ಕೆ ತೆರಳಿದರೆ ಪ್ರತಿ ಮಗುವಿಗೆ 2023 ರ ಆರ್ಥಿಕ ವರ್ಷದಲ್ಲಿ 1 ಮಿಲಿಯನ್ ಯೆನ್ (7,700 ಡಾಲರ್) ಅನ್ನು ಪಡೆಯಲಿವೆ. ಇದು ಈಗಾಗಲೇ ಜಾರಿಯಲ್ಲಿರುವ 300,000 ಯೆನ್‌ಗಿಂತ ಮೂರು ಪಟ್ಟು ಹೆಚ್ಚು ಎಂದು ವರದಿಗಳು ತಿಳಿಸಿವೆ. ಕಡಿಮೆ ಜನನ ಪ್ರಮಾಣ ಮತ್ತು ದೀರ್ಘಾಯುಷ್ಯದೊಂದಿಗೆ ಜಪಾನ್ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಅಲ್ಲಿನ ಸರ್ಕಾರ ಹಣಕಾಸಿನ ಪ್ರೋತ್ಸಾಹ ನೀಡುತ್ತಿದೆ. ಯುವಕರು ನಗರಗಳಲ್ಲಿನ ಅವಕಾಶಗಳಿಗಾಗಿ ದೂರ ಸರಿಯುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನಸಂಖ್ಯೆ ಕುಸಿದಿದೆ. ಇಲ್ಲಿ ಮನೆಗಳು ಖಾಲಿಯಾಗಿದ್ದು ತೆರಿಗೆ ಆದಾಯ ಕ್ಷೀಣಿಸುತ್ತಿದೆ.

ಮಕ್ಕಳಿರುವ ಕುಟುಂಬಗಳು ಬೇರೆಡೆಗೆ ಹೋಗುವುದಾದರೆ 1 ಮಿಲಿಯನ್ ಯೆನ್‌ಗಿಂತ ಹೆಚ್ಚಿನ ಹಣ ನೀಡಲಾಗುತ್ತದೆ. ಹೊಸ ಪ್ರಸ್ತಾಪದ ಅಡಿಯಲ್ಲಿ, ಇಬ್ಬರು ಮಕ್ಕಳಿರುವ ಮನೆಯವರು ಟೋಕಿಯೊ ಪ್ರದೇಶವನ್ನು ತೊರೆದರೆ ಬೆಂಬಲವಾಗಿ 3 ಮಿಲಿಯನ್ ಯೆನ್ ಪಡೆಯಬಹುದು. ಜಪಾನ್‌ನ ರಾಷ್ಟ್ರೀಯ ಸರ್ಕಾರವು 2019 ರಲ್ಲಿ ಜನರನ್ನು ಪ್ರಾದೇಶಿಕ ಪ್ರದೇಶಗಳಿಗೆ ಆಕರ್ಷಿಸುವ ಉಪಕ್ರಮವನ್ನು ಪ್ರಾರಂಭಿಸಿತು.ಸೆಂಟ್ರಲ್ ಟೋಕಿಯೊ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಐದು ವರ್ಷಗಳ ಕಾಲ ವಾಸಿಸುವ ಕುಟುಂಬಗಳು ಸ್ಥಳಾಂತರಗೊಂಡರೆ ಬೆಂಬಲ ನಿಧಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು.

ಇದನ್ನೂ ಓದಿ: ಶರ್ಟ್ ಬಿಚ್ಚುವಂತೆ ಬೆಂಗಳೂರು ಏರ್ಪೋರ್ಟ್ ಸಿಬ್ಬಂದಿಯಿಂದ ಮಹಿಳೆಗೆ ಒತ್ತಾಯ, ಟ್ವೀಟ್ ಮಾಡಿ ಮಹಿಳೆ ಕಿಡಿ

ಕುಟುಂಬಗಳು ತಮ್ಮ ಪ್ರಸ್ತುತ ಕೆಲಸದಲ್ಲಿ ದೂರದಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಬಹುದು, ಸ್ಥಳೀಯ ಸಣ್ಣ ಅಥವಾ ಮಧ್ಯಮ ಗಾತ್ರದ ವ್ಯಾಪಾರದಲ್ಲಿ ಕೆಲಸ ಮಾಡಬಹುದು ಅಥವಾ ಸ್ಥಳೀಯ ಪ್ರದೇಶದಲ್ಲಿ ವ್ಯಾಪಾರವನ್ನು ಪ್ರಾರಂಭಿಸಬಹುದು. ಇದು ಅವರಿಗೆ ಇನ್ನಷ್ಟು ಹಣಕಾಸಿನ ಬೆಂಬಲಕ್ಕಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ.

ನಿಕ್ಕಿ ವರದಿ ಪ್ರಕರ ಈ ಯೋಜನೆಯು 2021 ರಲ್ಲಿ 1,184 ಕುಟುಂಬ ಭಾಗವಹಿಸಿದ್ದು ಈ ಯೋಜನೆ ಪ್ರಾರಂಭವಾದ ಮೊದಲ ವರ್ಷದಲ್ಲಿ 71 ಕುಟುಂಬಗಳು ಭಾಗವಹಿಸಿದ್ದವು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?