Imran Khan Arrest: ಇಮ್ರಾನ್ ಖಾನ್ ಬಂಧನ ಸಾಧ್ಯತೆ; ಪಿಟಿಐ ಬೆಂಬಲಿಗರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ ಪೊಲೀಸ್

ತೋಶಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಬಂಧನವನ್ನು ತಡೆಯಲು ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ನಿವಾಸದ ಹೊರಗೆ ಜಮಾಯಿಸಿದ ಬೆಂಬಲಿಗರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದ್ದಾರೆ

Imran Khan Arrest: ಇಮ್ರಾನ್ ಖಾನ್ ಬಂಧನ ಸಾಧ್ಯತೆ; ಪಿಟಿಐ ಬೆಂಬಲಿಗರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ ಪೊಲೀಸ್
ಇಮ್ರಾನ್ ಖಾನ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 14, 2023 | 8:31 PM

ಲಾಹೋರ್‌ನಲ್ಲಿರುವ ಇಮ್ರಾನ್ ಖಾನ್ (Imran Khan) ಅವರ ಮನೆಯ ಕಾಂಪೌಂಡ್‌ಗೆ ಪೊಲೀಸರು ಮಂಗಳವಾರ ಅಶ್ರುವಾಯು ಪ್ರಯೋಗಿಸಿದ್ದಾರೆ. ತೋಶಖಾನಾ ಪ್ರಕರಣದಲ್ಲಿ (Toshakhana case )ಅವರ ಬಂಧನವನ್ನು ತಡೆಯಲು ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ನಿವಾಸದ ಹೊರಗೆ ಜಮಾಯಿಸಿದ ಬೆಂಬಲಿಗರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದ್ದಾರೆ. ಪಾಕಿಸ್ತಾನದ ಪೊಲೀಸರು ಮತ್ತು ಇಮ್ರಾನ್ ಖಾನ್ ಅವರ ಬೆಂಬಲಿಗರು ಮಂಗಳವಾರ ಲಾಹೋರ್‌ನ ಪೂರ್ವ ನಗರದಲ್ಲಿರುವ ಮಾಜಿ ಪ್ರಧಾನಿ  ಮನೆಯ ಹೊರಗೆ ಮುಖಮುಖಿಯಾಗಿದ್ದು ಅವರ ಸಂಭವನೀಯ ಬಂಧನಕ್ಕೆ ಮುಂಚಿತವಾಗಿ ಹಲವರು ಗಾಯಗೊಂಡಿದ್ದಾರೆ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.

ಪೊಲೀಸರು ಬೆಂಬಲಿಗರ ಮೇಲೆ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಶೆಲ್ ಗಳನ್ನು ಪ್ರಯೋಗಿಸಿದರು. ಮಂಗಳವಾರ ಸಂಜೆ ಖಾನ್ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು ತಾನು ಜೈಲಿಗೆ ಹೋದರೂ ಸಹ ಪ್ರಧಾನಿ ಶೆಹಬಾಜ್ ಷರೀಫ್ ಅವರ ಆಡಳಿತ ಪಕ್ಷಕ್ಕೆ ಸವಾಲು ಹಾಕುವುದನ್ನು ಮುಂದುವರಿಸಲು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ನನ್ನನ್ನು ಬಂಧಿಸಲು ಪೊಲೀಸರು ಬಂದಿದ್ದಾರೆ. ಇಮ್ರಾನ್ ಖಾನ್ ಜೈಲಿಗೆ ಹೋದರೆ ಜನ ನಿದ್ದೆ ಹೋಗುತ್ತಾರೆ ಎಂದು ಭಾವಿಸುತ್ತಾರೆ. ನೀವು ಅವರನ್ನು ತಪ್ಪು ಎಂದು ಸಾಬೀತುಪಡಿಸಬೇಕು, ಜನರು ಜೀವಂತವಾಗಿದ್ದಾರೆ ಎಂದು ನೀವು ಸಾಬೀತುಪಡಿಸಬೇಕು ಎಂದಿದ್ದಾರೆ ಖಾನ್. ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಕಾರ್ಯಕರ್ತರು ಹಿಂಸಾಚಾರವನ್ನು ಪ್ರಾರಂಭಿಸಿದ್ದು ಇದರಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳಿಗೆ ಗಾಯವಾಗಿದೆ ಎಂದು ಸರ್ಕಾರದ ವಕ್ತಾರ ಅಮೀರ್ ಮಿರ್ ರಾಯಿಟರ್ಸ್​​ಗೆ ತಿಳಿಸಿದ್ದಾರೆ. “ಇಮ್ರಾನ್ ಖಾನ್ ನ್ಯಾಯಾಲಯದಲ್ಲಿ ತನ್ನ ಉಪಸ್ಥಿತಿಯನ್ನು ಖಾತ್ರಿಪಡಿಸಿದರೆ ಒಳ್ಳೆಯದು, ಇಲ್ಲದಿದ್ದರೆ ಕಾನೂನು ಅದರ ರೀತಿಯಲ್ಲಿ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Galwan Clash: ಭಾರತವನ್ನು ಎದುರಿಸಲು ಗುಟ್ಟುಗುಟ್ಟಾಗಿ ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ತೊಡಗಿದ ಚೀನಾ

ಖಾನ್ ತಮ್ಮ ಬೆಂಬಲಿಗರಿಗೆ ಕಾನೂನಿನ ಪರಮಾಧಿಕಾರಕ್ಕಾಗಿ ನಿಲ್ಲುವಂತೆ ಮತ್ತು ನಿಜವಾದ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಕರೆ ನೀಡಿದರು.

ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಅರೆಸೇನಾ ಪಡೆಗಳನ್ನು ಕರೆಸಿದೆ ಎಂದು ಮಿರ್ ಹೇಳಿದರು.

ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದಾಗ ಖಾನ್ ಅವರ ಹಲವಾರು ಬೆಂಬಲಿಗರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಳೆದ ವಾರವೂ ಇದೇ ರೀತಿಯ ಘರ್ಷಣೆಗಳು ನಡೆದಿದ್ದವು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:03 pm, Tue, 14 March 23

ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ