ಶ್ರೀಲಂಕಾ ಪ್ರವಾಸದ ವೇಳೆ ಪತ್ನಿ ಹಾಗೂ ಮಗ ಸಾವು, ಪತಿಗೆ 50 ಲಕ್ಷ ರೂ. ಪರಿಹಾರ ಪಾವತಿಸಲಿದೆ ಟ್ರಾವೆಲ್ ಏಜೆನ್ಸಿ

ಪ್ರವಾಸಕ್ಕೆಂದು ಶ್ರೀಲಂಕಾಗೆ ತೆರಳಿದ್ದ ತಾಯಿ, ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದರು, ಇದೀಗ ಮೃತ ಮಹಿಳೆಯ ಪತಿಗೆ 50 ಲಕ್ಷ ರೂ ಪರಿಹಾರ ನೀಡುವಂತೆ ಟ್ರಾವೆಲ್ ಏಜೆನ್ಸಿಗೆ ಆದೇಶಿಸಲಾಗಿದೆ.  2019ರ ಡಿಸೆಂಬರ್​ನಲ್ಲಿ ಕನುಪ್ರಿಯಾ ಸೈಗಲ್ ಅವರು ಇಂಗ್ಲಿಷ್ ಸುದ್ದಿವಾಹಿನಿಯ ನಿರೂಪಕಿಯಾಗಿದ್ದರು.

ಶ್ರೀಲಂಕಾ ಪ್ರವಾಸದ ವೇಳೆ ಪತ್ನಿ ಹಾಗೂ ಮಗ ಸಾವು, ಪತಿಗೆ  50 ಲಕ್ಷ ರೂ. ಪರಿಹಾರ ಪಾವತಿಸಲಿದೆ ಟ್ರಾವೆಲ್ ಏಜೆನ್ಸಿ
ಕಾನುಪ್ರಿಯImage Credit source: India.com
Follow us
ನಯನಾ ರಾಜೀವ್
|

Updated on:Aug 22, 2023 | 12:38 PM

ಪ್ರವಾಸಕ್ಕೆಂದು ಶ್ರೀಲಂಕಾಗೆ ತೆರಳಿದ್ದ ತಾಯಿ, ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದರು, ಇದೀಗ ಮೃತ ಮಹಿಳೆಯ ಪತಿಗೆ 50 ಲಕ್ಷ ರೂ ಪರಿಹಾರ ನೀಡುವಂತೆ ಟ್ರಾವೆಲ್ ಏಜೆನ್ಸಿಗೆ ಆದೇಶಿಸಲಾಗಿದೆ.  2019ರ ಡಿಸೆಂಬರ್​ನಲ್ಲಿ ಕನುಪ್ರಿಯಾ ಸೈಗಲ್ ಅವರು ಇಂಗ್ಲಿಷ್ ಸುದ್ದಿವಾಹಿನಿಯ ನಿರೂಪಕಿಯಾಗಿದ್ದರು. ಆಕೆಯ ಮಗ ಶ್ರೇಯಾ ಸೈಗಲ್ ಮತ್ತು ತಂದೆ, ಪ್ರಸಿದ್ಧ ಹಿಂದಿ ಸಾಹಿತಿ ಗಂಗಾ ಪ್ರಸಾದ್ ವಿಮಲ್ ಅವರು ಪ್ರಯಾಣಿಸುತ್ತಿದ್ದ ವ್ಯಾನ್ ಕೊಲಂಬೊದಲ್ಲಿ ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದಾಗ ಸಾವನ್ನಪ್ಪಿದ್ದರು.

ದುರಂತದಲ್ಲಿ ಅವರ ಪತಿ ಯೋಗೇಶ್ ಸೈಗಲ್ ಮತ್ತು ಅವರ ಪುತ್ರಿ ಐಶ್ವರ್ಯಾ ಸೈಗಲ್ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ 52 ವರ್ಷದ ವ್ಯಾನ್ ಚಾಲಕ ಕೂಡ ಸಾವನ್ನಪ್ಪಿದ್ದ. ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ನಾಲ್ಕು ವರ್ಷಗಳ ನಂತರ ಯೋಗೇಶ್ ಸೈಗಲ್ ಅವರಿಗೆ ಪರಿಹಾರ ನೀಡುವಂತೆ ಟ್ರಾವೆಲ್ ಏಜೆನ್ಸಿಗೆ ಆದೇಶಿಸಿದೆ.

ಅಪಘಾತದಲ್ಲಿ ಸೇಗಲ್ ಅವರಿಗೆ ಗಂಭೀರ ಗಾಯಗಳಾಗಿತ್ತು. ಸಾಕಷ್ಟು ದಿನಗಳ ಕಾಲ ಚಿಕಿತ್ಸೆ ಪಡೆದು ಬಳಿಕ ಚೇತರಿಸಿಕೊಂಡಿದ್ದರು. ತಮ್ಮ ಪತ್ನಿ ಮತ್ತು ಮಗನ ಸಮಾಧಿ ಮತ್ತು ಅಂತಿಮ ವಿಧಿವಿಧಾನಗಳಿಗಾಗಿ ದೆಹಲಿಗೆ ಹೋಗಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಓದಿ: ಐಸ್​ಕ್ರೀಂ ತಿನ್ನಿಸಲು ಮೂವರು ಮಕ್ಕಳನ್ನು ಬೈಕ್​ನಲ್ಲಿ ಕರೆದೊಯ್ಯುತ್ತಿದ್ದಾಗ, ಪಿಕ್​ಅಪ್​ ವ್ಯಾನ್ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ

ಮಗಳು ಹಾಗೂ ಗಂಡನನ್ನು ಕಳೆದುಕೊಂಡು ಅತ್ತೆಯ ದೈಹಿಕ ಮತ್ತು ಮಾನಸಿಕ ಸ್ಥಿತಿ ಹದಗೆಟ್ಟಿದೆ. ಮಗಳಿಗೂ ಕೂಡ ಮಾನಸಿಕವಾಗಿ ತುಂಬಾ ಆಘಾತವಾಗಿದೆ. ನಿದ್ರೆಯನ್ನೂ ಮಾಡುತ್ತಿಲ್ಲ ನಾಲ್ಕು ಜನರ ಜತೆ ಕುಳಿತು ಮಾತನಾಡುತ್ತಲೂ ಇಲ್ಲ.

ಟ್ರಾವೆಲ್ ಏಜೆಂಟ್‌ಗಳು 50 ಲಕ್ಷ ಪರಿಹಾರವನ್ನು ಮೂರು ತಿಂಗಳೊಳಗೆ ಪಾವತಿಸಬೇಕು, ಇಲ್ಲದಿದ್ದರೆ ಅವರು ಹೆಚ್ಚುವರಿ 10 ಲಕ್ಷವನ್ನು ಪಾವತಿಸಬೇಕು ಎಂದು ಫೋರಂ ಹೇಳಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:35 pm, Tue, 22 August 23

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ