AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರನ ಮೇಲ್ಮೈ ಮೇಲೆ ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆ ಪತನ ಸುದ್ದಿ ತಿಳಿಯುತ್ತಿದ್ದಂತೆ ಅನಾರೋಗ್ಯ, ಆಸ್ಪತ್ರೆಗೆ ದಾಖಲಾದ ವಿಜ್ಞಾನಿ

ಇಸ್ರೋದ ಚಂದ್ರಯಾನ-3 ಬೆನ್ನಲ್ಲೇ ರಷ್ಯಾ ಕೂಡ ಕೈಗೊಂಡಿದ್ದ ಚಂದ್ರಯಾನ ನೌಕೆ ಲೂನಾ ತಾಂತ್ರಿಕ ದೋಷದಿಂದ ಚಂದ್ರನ ಮೇಲ್ಮೈ ಮೇಲೆ ಪತನಗೊಂಡಿತ್ತು, ಈ ಸುದ್ದಿ ತಿಳಿಯುತ್ತಿದ್ದಂತೆ ಆಘಾತಗೊಂಡ ವಿಜ್ಞಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಒಂದು ದಿನ ಮೊದಲೇ ರಷ್ಯಾದ ಲೂನಾ 25 ಬಾಹ್ಯಾಕಾಶ ನೌಕೆ ಪತನಗೊಂಡಿತ್ತು. ಮಿಖಾಯಿಲ್ ಮಾರೊವ್, 90, ಮಿಷನ್ ವಿಫಲವಾದ ನಂತರ ಅವರ ಆರೋಗ್ಯದಲ್ಲಿ ತೀವ್ರ ಹದಗೆಟ್ಟ ಕಾರಣ ಶನಿವಾರ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಚಂದ್ರನ ಮೇಲ್ಮೈ ಮೇಲೆ ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆ ಪತನ ಸುದ್ದಿ ತಿಳಿಯುತ್ತಿದ್ದಂತೆ ಅನಾರೋಗ್ಯ, ಆಸ್ಪತ್ರೆಗೆ ದಾಖಲಾದ ವಿಜ್ಞಾನಿ
ಲೂನಾ 25
ನಯನಾ ರಾಜೀವ್
|

Updated on: Aug 22, 2023 | 10:11 AM

Share

ಇಸ್ರೋದ ಚಂದ್ರಯಾನ-3 ಬೆನ್ನಲ್ಲೇ ರಷ್ಯಾ ಕೂಡ ಕೈಗೊಂಡಿದ್ದ ಚಂದ್ರಯಾನ ನೌಕೆ ಲೂನಾ ತಾಂತ್ರಿಕ ದೋಷದಿಂದ ಚಂದ್ರನ ಮೇಲ್ಮೈ ಮೇಲೆ ಪತನಗೊಂಡಿತ್ತು, ಈ ಸುದ್ದಿ ತಿಳಿಯುತ್ತಿದ್ದಂತೆ ಆಘಾತಗೊಂಡ ವಿಜ್ಞಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಒಂದು ದಿನ ಮೊದಲೇ ರಷ್ಯಾದ ಲೂನಾ 25 ಬಾಹ್ಯಾಕಾಶ ನೌಕೆ ಪತನಗೊಂಡಿತ್ತು. ಮಿಖಾಯಿಲ್ ಮಾರೊವ್, 90, ಮಿಷನ್ ವಿಫಲವಾದ ನಂತರ ಅವರ ಆರೋಗ್ಯದಲ್ಲಿ ತೀವ್ರ ಹದಗೆಟ್ಟ ಕಾರಣ ಶನಿವಾರ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ವಿಜ್ಞಾನಿ ಸೋವಿಯತ್ ಒಕ್ಕೂಟದ ಹಿಂದಿನ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿದ್ದರು. ಚಂದ್ರನಲ್ಲಿ ಘನೀಕರಣಗೊಂಡಿರುವ ನೀರು ಹಾಗೂ ಅಮೂಲ್ಯ ಅಂಶಗಳ ಕುರಿತು ಅನ್ವೇಷಣೆ ಮಾಡುವ ಉದ್ದೇಶದಿಂದ ಲೂನಾ 25 ನೌಕೆಯನ್ನು ಆಗಸ್ಟ್​ 11 ರಂದು ರಷ್ಯಾ ಉಡಾವಣೆ ಮಾಡಿತ್ತು. ನೌಕೆಯು ಆಗಸ್ಟ್ 21 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿತ್ತು.

ಹಾಗಾಗಿ ಶನಿವಾರ ಫ್ರೀ ಲ್ಯಾಂಡಿಂಗ್ ಕಕ್ಷೆಯ ನೌಕೆಯನ್ನು ತರುವ ಕೆಲಸ ನಡೆದಿತ್ತು, ಸುಮಾರು 11 ಗಂಟೆ ವೇಳೆಗೆ ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಯೋಜಿತ ಕಕ್ಷೆಗೆ ಹೋಗಲು ವಿಫಲವಾಗಿತ್ತು. ಆಗಸ್ಟ್ 23 ರಂದು ಇಸ್ರೋದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ.

ಮತ್ತಷ್ಟು ಓದಿ: ಮುಗ್ಗರಿಸಿದ ರಷ್ಯಾದ ಚಂದ್ರಾನ್ವೇಷಣಾ ಮಹತ್ವಾಕಾಂಕ್ಷೆ: ವೈಫಲ್ಯ ಕಂಡ ಲೂನಾ-25 ಯೋಜನೆ

ಅದಕ್ಕೆ ಇಳಿಯು ಎರಡು ಗಂಟೆಗಳ ಮೊದಲು ಲ್ಯಾಂಡರ್ ಮಾಡ್ಯೂಲ್​ ಸ್ಥಿತಿ ಹಾಗೂ ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ಆ ಸಮಯದಲ್ಲಿ ಲ್ಯಾಂಡಿಂಗ್ ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ.

ಯಾವುದೇ ಒಂದು ಅಂಶದಲ್ಲಿ ಅನುಕೂಲಕರವಾಗಿಲ್ಲ ಎಂದೆನಿಸಿದರೆ ಆಗಸ್ಟ್​ 27 ರಂದು ಮಾಡ್ಯೂಲ್ ಅನ್ನು ಚಂದ್ರನ ಮೇಲೆ ಇಳಿಸುತ್ತೇವೆ ಎಂದು ಇಸ್ರೋ ತಿಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ