AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೊಬೆಲ್ ಶಾಂತಿ ಪುರಸ್ಕಾರದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಇಷ್ಟು ದಿನ ನೊಬೆಲ್ ಶಾಂತಿ ಪುರಸ್ಕಾರ(Nobel Peace Prize) ತನಗೇ ಬೇಕೆಂದು ಮಕ್ಕಳಂತೆ ಅಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಇದೀಗ ಸ್ವರ ಸ್ವಲ್ಪ ಬದಲಿಸಿದ್ದಾರೆ. ಯಾರಿಗೆ ಪುರಸ್ಕಾರ ಕೊಡುತ್ತಾರೋ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸುವ ಬಯಕೆಯನ್ನು ಒಂದೊಡೆ ವ್ಯಕ್ತಪಡಿಸಿದ್ದಾರೆ.

ನೊಬೆಲ್ ಶಾಂತಿ ಪುರಸ್ಕಾರದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಡೊನಾಲ್ಡ್​ ಟ್ರಂಪ್Image Credit source: Google
ನಯನಾ ರಾಜೀವ್
|

Updated on:Oct 10, 2025 | 9:00 AM

Share

ವಾಷಿಂಗ್ಟನ್, ಅಕ್ಟೋಬರ್ 20: ಇಷ್ಟು ದಿನ ನೊಬೆಲ್ ಶಾಂತಿ ಪುರಸ್ಕಾರ(Nobel Peace Prize) ತನಗೇ ಬೇಕೆಂದು ಮಕ್ಕಳಂತೆ ಅಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಇದೀಗ ಸ್ವರ ಸ್ವಲ್ಪ ಬದಲಿಸಿದ್ದಾರೆ. ಯಾರಿಗೆ ಪುರಸ್ಕಾರ ಕೊಡುತ್ತಾರೋ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸುವ ಬಯಕೆಯನ್ನು ಒಂದೊಡೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ  ಇತಿಹಾಸದಲ್ಲಿ ಯಾರೂ ತಾವು ಸಾಧಿಸಿದ್ದನ್ನು ಸಾಧಿಸಿಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಒಂದಲ್ಲ, ಎರಡಲ್ಲ, ಎಂಟು ಯುದ್ಧಗಳು ಕೇವಲ ಒಂಬತ್ತು ತಿಂಗಳಲ್ಲಿ ಕೊನೆಗೊಂಡಿವೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಯಾವುದೇ ಕಾರಣವಿಲ್ಲದೆ ಪ್ರಶಸ್ತಿಯನ್ನು ಪಡೆದರು ಎಂದು ಅವರು ದೂರಿದ್ದಾರೆ.

ಟ್ರಂಪ್ ತಮ್ಮ ವಿಶ್ವಾಸವನ್ನು ಉಳಿಸಿಕೊಂಡರೂ, ಥಿಯೋಡರ್ ರೂಸ್ವೆಲ್ಟ್, ವುಡ್ರೋ ವಿಲ್ಸನ್, ಜಿಮ್ಮಿ ಕಾರ್ಟರ್ ಮತ್ತು ಬರಾಕ್ ಒಬಾಮಾ ಅವರಂತಹ ಶಾಂತಿ ಪ್ರಶಸ್ತಿ ವಿಜೇತರ ಶ್ರೇಣಿಯನ್ನು ಸೇರುವುದು ಅವರಿಗೆ ಸುಲಭವಲ್ಲ ಎಂದು ತಜ್ಞರು ನಂಬುತ್ತಾರೆ.ಕಳೆದ ಕೆಲವು ತಿಂಗಳುಗಳಲ್ಲಿ ಆರರಿಂದ ಏಳು ಯುದ್ಧಗಳನ್ನು ಕೊನೆಗೊಳಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ, ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವೂ ಸೇರಿದೆ.

ಪಾಕಿಸ್ತಾನವು ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವ ಮೂಲಕ ಅವರ ಅಹಂಕಾರವನ್ನು ಹೆಚ್ಚಿಸಿದೆ, ಆದರೆ ಭಾರತ ಈ ಒತ್ತಡಕ್ಕೆ ಮಣಿದಿಲ್ಲ.ಅಮೆರಿಕ ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕವನ್ನು ವಿಧಿಸಿದೆ ಮತ್ತು ವ್ಯಾಪಾರ ಒಪ್ಪಂದವು ಅನಿಶ್ಚಿತವಾಗಿದೆ.

ಮತ್ತಷ್ಟು ಓದಿ: ಡೊನಾಲ್ಡ್​ ಟ್ರಂಪ್​ಗೆ ನೊಬೆಲ್ ಶಾಂತಿ ಪುರಸ್ಕಾರ ಬೇಡ, ಈ ಪ್ರಶಸ್ತಿ ಕೊಡಿ ಚೆನ್ನಾಗಿರುತ್ತೆ ಎಂದ ಕನ್ನಡಿಗರು

ತಜ್ಞರು ಹೇಳುವಂತೆ ಟ್ರಂಪ್ ಅವರ ಹೇಳಿಕೆಗಳು ನಿಜವಾದ ಶಾಂತಿ ಒಪ್ಪಂದಗಳಿಗಿಂತ ಹೆಚ್ಚಾಗಿ ಅಮೆರಿಕದೊಂದಿಗಿನ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆಗಳನ್ನು ಆಧರಿಸಿವೆ. ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಲಿಲ್ಲ. ಆದಾಗ್ಯೂ, ಈ ವರ್ಷದ ಜನವರಿಯಲ್ಲಿ ಪ್ರಾರಂಭವಾದ ತಮ್ಮ ಎರಡನೇ ಅವಧಿಯಲ್ಲಿ ಮಾಡಿಕೊಂಡ ಶಾಂತಿ ಒಪ್ಪಂದಗಳನ್ನು ಅವರು ಒತ್ತಿ ಹೇಳಿದರು.

ಡೊನಾಲ್ಡ್ ಟ್ರಂಪ್ ಅವರು ಶಾಂತಿ ಒಪ್ಪಂದಗಳನ್ನು ಬಹುಮಾನ ಗೆಲ್ಲಲು ಅಲ್ಲ, ಜೀವಗಳನ್ನು ಉಳಿಸಲು ಮಾಡಿಕೊಂಡರು ಎಂದು ಹೇಳಿದ್ದರಿಂದ ಅವರ ಸ್ವರದಲ್ಲಿನ ಬದಲಾವಣೆಯನ್ನು ಗಮನಿಸಬಹುದು. ಟ್ರಂಪ್ ಈ ಹಿಂದೆ ಎಲ್ಲಾ ಸಂದರ್ಭಗಳಲ್ಲಿಯೂ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಬಯಸಿದ್ದರು, ಆದರೆ ಈ ಬಾರಿ ಅವರು ಅಂತಹ ಹೇಳಿಕೆಯನ್ನು ನೀಡಲಿಲ್ಲ.

ಡೊನಾಲ್ಡ್ ಟ್ರಂಪ್ ಸ್ವತಃ ಹಲವಾರು ಸಂದರ್ಭಗಳಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. ಪ್ರಶಸ್ತಿಯನ್ನು ಸ್ವೀಕರಿಸದಿದ್ದರೆ ಅಮೆರಿಕಕ್ಕೆ ತೀವ್ರ ಅವಮಾನವಾಗುತ್ತದೆ ಎಂದು ಅವರು ಈ ಹಿಂದೆ ಹೇಳಿದ್ದರು.

ಪಾಕಿಸ್ತಾನ ಮತ್ತು ಇಸ್ರೇಲ್ ಸೇರಿದಂತೆ ಹಲವು ದೇಶಗಳು ಟ್ರಂಪ್ ಅವರ ನೊಬೆಲ್ ಪ್ರಶಸ್ತಿಗೆ ಬೆಂಬಲ ವ್ಯಕ್ತಪಡಿಸಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು AI ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿದರು. ಟ್ರಂಪ್ ಅವರ ನೊಬೆಲ್ ಆಸೆ ಈಡೇರುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಇಂದು ನೊಬೆಲ್ ಶಾಂತಿ ಪುರಸ್ಕಾರದ ಘೋಷಣೆಯಾಗಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:57 am, Fri, 10 October 25