ನನ್ನನ್ನು ಕೊಲೆ ಮಾಡಿದ್ರೆ, ಇರಾನ್ ಅನ್ನು ವಿಶ್ವದ ಭೂಪಟದಿಂದಲೇ ಅಮೆರಿಕ ಅಳಿಸಿ ಹಾಕುತ್ತೆ: ಟ್ರಂಪ್
ಡೊನಾಲ್ಡ್ ಟ್ರಂಪ್ ಇರಾನ್‌ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ನನ್ನನ್ನು ಕೊಲೆ ಮಾಡಲು ಯತ್ನಿಸಿದರೆ, ಅಮೆರಿಕ ಇರಾನ್ ಅನ್ನು ವಿಶ್ವ ಭೂಪಟದಿಂದಲೇ ಅಳಿಸಿಹಾಕುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿರುವಾಗ ಈ ಹೇಳಿಕೆ ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಇರಾನ್, ನಾಯಕರಿಗೆ ಕೈ ಚಾಚಿದರೆ ಇಡೀ ದೇಶವನ್ನೇ ಸುಟ್ಟು ಹಾಕುವುದಾಗಿ ಎಚ್ಚರಿಸಿದೆ.

ವಾಷಿಂಗ್ಟನ್, ಜನವರಿ 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೊಮ್ಮೆ ಇರಾನ್‌ಗೆ ಬಲವಾದ ಎಚ್ಚರಿಕೆ ನೀಡಿದ್ದಾರೆ. ಇರಾನ್ ತನ್ನನ್ನು ಕೊಲ್ಲಲು ಪ್ರಯತ್ನಿಸಿದರೆ, ಅಮೆರಿಕ ಇರಾನ್ ಅನ್ನು ವಿಶ್ವ ಭೂಪಟದಿಂದ ಅಳಿಸಿಹಾಕುತ್ತದೆ ಎಂದು ಡ್ರಂಪ್ ಹೇಳಿದ್ದಾರೆ. ನ್ಯೂಸ್ ನೇಷನ್ ನ ‘ಕೇಟೀ ಪಾವ್ಲಿಚ್ ಟುನೈಟ್’ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿರುವ ಸಮಯದಲ್ಲಿ ಟ್ರಂಪ್ ಅವರ ಈ ಹೇಳಿಕೆ ಬಂದಿದೆ.
ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಇರಾನ್ ಮಿಲಿಟರಿ ವಕ್ತಾರ ಜನರಲ್ ಅಬುಲ್ ಫಜಲ್ ಶೇಕರ್ಚಿ, ನಮ್ಮ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕಡೆಗೆ ಯಾರಾದರೂ ಕೆಟ್ಟ ಉದ್ದೇಶದಿಂದ ಕೈ ಚಾಚಿದರೆ, ನಾವು ಆ ಕೈಯನ್ನು ಕತ್ತರಿಸುವುದಲ್ಲದೆ, ಅವರ ಇಡೀ ದೇಶವನ್ನೇ ಸುಟ್ಟು ಹಾಕುತ್ತೇವೆ ಎಂದು ಟ್ರಂಪ್‌ಗೆ ತಿಳಿದಿದೆ ಎಂದು ಹೇಳಿದ್ದಾರೆ.
ಖಮೇನಿಯವರ ಸುಮಾರು 40 ವರ್ಷಗಳ ಆಡಳಿತವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಿದ ಟ್ರಂಪ್ ಅವರ ಹೇಳಿಕೆಯ ನಂತರ ಈ ಎಚ್ಚರಿಕೆ ಬಂದಿದೆ.ಟ್ರಂಪ್ ಈ ಹಿಂದೆ ಇರಾನ್‌ಗೆ ಎಚ್ಚರಿಕೆ ನೀಡಿದ್ದರು ಮತ್ತು ಇರಾನ್ ತನ್ನ ವಿರುದ್ಧ ಯಾವುದೇ ಹತ್ಯೆಗೆ ಸಂಚು ರೂಪಿಸಿದರೆ ಇರಾನ್ ಅನ್ನು ಸಂಪೂರ್ಣವಾಗಿ ನಾಶಮಾಡುವಂತೆ ತಮ್ಮ ಸಲಹೆಗಾರರಿಗೆ ಸೂಚಿಸಿದ್ದರು.
ಮತ್ತಷ್ಟು ಓದಿ: ಶಾಂತಿ ಪುರಸ್ಕಾರ ಇಲ್ಲ, ಶಾಂತಿ ನನ್ನ ಜವಾಬ್ದಾರಿಯಲ್ಲ ಎನ್ನುತ್ತಾ ಗಾಜಾ ಶಾಂತಿ ಮಂಡಳಿ ತೆರೆದ ಟ್ರಂಪ್, 2 ದಿನಗಳಲ್ಲಿ ಕೊಟ್ಟ ಹೇಳಿಕೆಗಳೇನು?
ಖಮೇನಿ ಅವರನ್ನು ಅಸ್ವಸ್ಥ ವ್ಯಕ್ತಿ ಎಂದು ಬಣ್ಣಿಸಿರುವ ಅವರು, ಅವರು ತನ್ನ ದೇಶವನ್ನು ಸರಿಯಾಗಿ ನಡೆಸಬೇಕು ಮತ್ತು ಜನರನ್ನು ಕೊಲ್ಲುವುದನ್ನು ನಿಲ್ಲಿಸಬೇಕು, ಇರಾನ್‌ಗೆ ಹೊಸ ನಾಯಕತ್ವ ಬೇಕು ಎಂದು ಹೇಳಿದ್ದಾರೆ.
ಡಿಸೆಂಬರ್ 28 ರಂದು ಪ್ರಾರಂಭವಾದ ಪ್ರತಿಭಟನೆಗಳ ನಂತರ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಇರಾನ್‌ನ ಕಳಪೆ ಆರ್ಥಿಕತೆಯ ವಿರುದ್ಧ ಈ ಪ್ರತಿಭಟನೆಗಳನ್ನು ಪ್ರಾರಂಭಿಸಲಾಯಿತು. ತಿಭಟನೆಗಳ ನಡುವೆ ಅಮೆರಿಕದ ಮಿಲಿಟರಿಯೂ ಸಕ್ರಿಯವಾಗಿದ್ದು, ಇದು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯ ನಿರಂತರ ಏರಿಕೆಗೆ ಕಾರಣವಾಗಿದೆ.
ನನಗೆ ನೊಬೆಲ್ ಶಾಂತಿ ಪುರಸ್ಕಾರ ಕೊಟ್ಟಿಲ್ಲ, ಶಾಂತಿ ಇನ್ನು ನನ್ನ ಜವಾಬ್ದಾರಿಯಲ್ಲ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರೆ ಅವರಿಗೆ ವೈಯಕ್ತಿಕವಾಗಿ ಕಳುಹಿಸಿದ ಪತ್ರದಲ್ಲಿ ನೊಬೆಲ್ ಪ್ರಶಸ್ತಿ ಸಿಗದಿರುವುದು ಎಷ್ಟು ನಿರಾಶೆಗೊಂಡಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಪತ್ರದ ವಿಷಯಗಳ ಬಗ್ಗೆ ಆಘಾತಕಾರಿ ಮಾಹಿತಿ ಸೋರಿಕೆಯಾಗಿದ್ದು, ಅದರಲ್ಲಿ ವಿಶ್ವ ಶಾಂತಿಯನ್ನು ಖಚಿತಪಡಿಸುವುದು ತಮ್ಮ ಜವಾಬ್ದಾರಿಯಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಟ್ರಂಪ್ ಅವರು ನೊಬೆಲ್ ಪ್ರಶಸ್ತಿ ನಿರಾಕರಿಸಲ್ಪಟ್ಟಾಗಿನಿಂದ ಜಾಗತಿಕ ವ್ಯವಹಾರಗಳ ಬಗ್ಗೆ ತಮ್ಮ ದೃಷ್ಟಿಕೋನ ಬದಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಗಾಜಾ ಶಾಂತಿ ಮಂಡಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಜಾ ಪಟ್ಟಿಯಲ್ಲಿ ಶಾಶ್ವತ ಶಾಂತಿ, ಪುನರ್ನಿರ್ಮಾಣ ಮತ್ತು ಪರಿವರ್ತನಾ ಆಡಳಿತವನ್ನು ಮೇಲ್ವಿಚಾರಣೆ ಮಾಡಲು ಶಾಂತಿ ಮಂಡಳಿಯನ್ನು ರಚಿಸುವುದಾಗಿ ಘೋಷಿಸಿದರು. ಈ ಗಾಜಾ ಶಾಂತಿ ಮಂಡಳಿಗೆ ಸೇರಲು ಪ್ರಪಂಚದಾದ್ಯಂತದ ಹಲವಾರು ದೇಶಗಳ ನಾಯಕರನ್ನು ಆಹ್ವಾನಿಸಿದ್ದಾರೆ.
ಫ್ರೆಂಚ್ ವೈನ್ ಮೇಲೆ ಶೇ.200ರಷ್ಟು ಸುಂಕ ಜಾಗತಿಕ ಸಂಘರ್ಷದ ಮಧ್ಯಸ್ಥಿಕೆ ವಹಿಸಲು ಟ್ರಂಪ್ ರಚಿಸಿದ ಶಾಂತಿ ಮಂಡಳಿಯಲ್ಲಿ ಕುಳಿತುಕೊಳ್ಳಲು ಮ್ಯಾಕ್ರನ್ ನಿರಾಕರಿಸಿದ ನಂತರ ಅಮೆರಿಕ ಅಧ್ಯಕ್ಷ ಈ ಪ್ರಸ್ತಾಪವಿಟ್ಟಿದ್ದಾರೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ 200% ಸುಂಕ ವಿಧಿಸಬಹುದು ಎಂದು ಹೇಳಿದ್ದಾರೆ. ಮ್ಯಾಕ್ರನ್ ಅವರ ಐದು ವರ್ಷಗಳ ಅಧ್ಯಕ್ಷೀಯ ಅವಧಿ ಮೇ 2027 ರಲ್ಲಿ ಕೊನೆಗೊಳ್ಳಲಿದ್ದು, ಫ್ರೆಂಚ್ ಕಾನೂನಿನ ಪ್ರಕಾರ ಅವರು ಮೂರನೇ ಅವಧಿಗೆ ಮತ್ತೆ ಸ್ಪರ್ಧಿಸಲು ಸಾಧ್ಯವಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
