AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾರಿಸ್ ಶೀಘ್ರದಲ್ಲೇ ಸಂಪೂರ್ಣ ಮುಸ್ಲಿಂ ನಗರವಾಗಲಿದೆ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ ವಿರುದ್ಧ ಡೊನಾಲ್ಡ್ ಟ್ರಂಪ್ ಗಂಭೀರ ವಾಗ್ದಾಳಿ

ಡೊನಾಲ್ಡ್ ಟ್ರಂಪ್ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ವಲಸೆ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಪ್ಯಾರಿಸ್ ಶೀಘ್ರದಲ್ಲೇ ಸಂಪೂರ್ಣ ಮುಸ್ಲಿಂ ನಗರವಾಗಲಿದೆ ಎಂದು ಎಚ್ಚರಿಸಿದ ಟ್ರಂಪ್, ಫ್ರಾನ್ಸ್ ಗಲಭೆಗೆ ಅತಿಯಾದ ವಲಸೆಯೇ ಕಾರಣ ಎಂದಿದ್ದಾರೆ. ಯುರೋಪ್ ತಕ್ಷಣವೇ ಗಡಿಗಳನ್ನು ಮುಚ್ಚಿ, ಗಲಭೆಕೋರ ವಲಸಿಗರನ್ನು ಗಡೀಪಾರು ಮಾಡದಿದ್ದರೆ ಸಂಪೂರ್ಣ ಕುಸಿತ ಎದುರಿಸಬೇಕಾಗುತ್ತದೆ ಎಂದು ಕಟುವಾಗಿ ಹೇಳಿದ್ದಾರೆ. ಮ್ಯಾಕ್ರನ್ ಆರ್ಥಿಕ ಸಮಸ್ಯೆಗಳನ್ನು ಕಾರಣವೆಂದಿದ್ದಾರೆ.

ಪ್ಯಾರಿಸ್ ಶೀಘ್ರದಲ್ಲೇ ಸಂಪೂರ್ಣ ಮುಸ್ಲಿಂ ನಗರವಾಗಲಿದೆ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ ವಿರುದ್ಧ ಡೊನಾಲ್ಡ್ ಟ್ರಂಪ್ ಗಂಭೀರ ವಾಗ್ದಾಳಿ
ಡೊನಾಲ್ಡ್​ ಟ್ರಂಪ್ Image Credit source: PTI
ನಯನಾ ರಾಜೀವ್
|

Updated on: Oct 20, 2026 | 7:28 AM

Share

ಪ್ಯಾರಿಸ್, ಅಕ್ಟೋಬರ್ 20: ಫ್ರಾನ್ಸ್‌ನ ಹಲವು ನಗರಗಳಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಅಶಾಂತಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಫ್ರಾನ್ಸ್ ಮತ್ತು ಇಡೀ ಯುರೋಪ್ ಖಂಡವು ತಕ್ಷಣವೇ ತಮ್ಮ ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚಿ, ಹಿಂಸಾಚಾರದಲ್ಲಿ ಭಾಗಿಯಾಗಿರುವ ವಲಸಿಗರನ್ನು ಗಡೀಪಾರು ಮಾಡದಿದ್ದರೆ ಇಡೀ ಯುರೋಪ್ ಸಂಪೂರ್ಣ ಕುಸಿತವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಕಟುವಾಗಿ ಎಚ್ಚರಿಸಿದ್ದಾರೆ.

ಶ್ವೇತಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ವಲಸೆ ನೀತಿಯನ್ನು ನೇರವಾಗಿ ಗುರಿಯಾಗಿಸಿ ಮಾತನಾಡಿ, “ಪ್ಯಾರಿಸ್ ಶೀಘ್ರದಲ್ಲೇ ಸಂಪೂರ್ಣ ಮುಸ್ಲಿಂ ನಗರವಾಗಲಿದೆ. ಇದು ಒಪ್ಪಿತ ಒಪ್ಪಂದವಾಗಿರಲಿಲ್ಲ. ನಿಮ್ಮ ಗಡಿಗಳನ್ನು ಕೂಡಲೇ ಮುಚ್ಚಿ ಎಂದು ನಾನು ಮ್ಯಾಕ್ರನ್‌ಗೆ ಹಿಂದೆಯೇ ಹೇಳಿದ್ದೆ” ಎಂದು ಗುಡುಗಿದ್ದಾರೆ.

ವಲಸೆಯೇ ಅಶಾಂತಿಯ ಮೂಲ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವು ಶೈಕ್ಷಣಿಕ, ಆರ್ಥಿಕ ಅಥವಾ ಸ್ಥಳೀಯ ಸರ್ಕಾರದ ನೀತಿಗಳಿಂದ ಉಂಟಾಗಿದೆ ಎಂಬ ವಾದವನ್ನು ಟ್ರಂಪ್ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. “ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ದುಃಖಕರ ಪರಿಸ್ಥಿತಿಗೆ ಏಕೈಕ ಕಾರಣ ಅತಿಯಾದ ವಲಸೆ. ಅವರು ತಮ್ಮ ದೇಶ, ಸಂಸ್ಕೃತಿ, ಕಲೆ ಮತ್ತು ಕಟ್ಟಡಗಳನ್ನು ಪ್ರೀತಿಸದ ಜನರನ್ನು ಮುಕ್ತವಾಗಿ ದೇಶದೊಳಗೆ ಬಿಡುತ್ತಿದ್ದಾರೆ” ಎಂದು ಕಿಡಿಕಾರಿದರು.

ಮ್ಯಾಕ್ರನ್‌ಗೆ ನೀಡಿದ್ದ ಹಳೆಯ ಎಚ್ಚರಿಕೆಯ ನೆನಪು:

ಮ್ಯಾಕ್ರನ್ ನನ್ನ ಸ್ನೇಹಿತ. ನಾನು ಅಧ್ಯಕ್ಷನಾಗಿದ್ದ ಮೊದಲ ಅವಧಿಯಲ್ಲೇ, ‘ನೀವು ಜಗತ್ತಿನ ಎಲ್ಲರನ್ನೂ ದೇಶದೊಳಗೆ ಬಿಡುವ ಮೂಲಕ ದೊಡ್ಡ ತಪ್ಪು ಮಾಡುತ್ತಿದ್ದೀರಿ, ತಕ್ಷಣ ಗಡಿಗಳನ್ನು ಮುಚ್ಚಿ’ ಎಂದು ಎಚ್ಚರಿಸಿದ್ದೆ. ಅಮೆರಿಕ ತನ್ನ ಗಡಿಗಳನ್ನು ರಕ್ಷಿಸಿಕೊಂಡಿದೆ, ಆದರೆ ಫ್ರಾನ್ಸ್ ಅದನ್ನು ಮಾಡದೆ ಈಗ ಬೆಲೆ ತೆರುತ್ತಿದೆ ಎಂದರು.

ಇದನ್ನೂ ಓದಿ: ಫ್ರಾನ್ಸ್‌ನಲ್ಲಿ ಹಣದುಬ್ಬರದ ಕಿಚ್ಚು: ಐತಿಹಾಸಿಕ ಟೌನ್ ಹಾಲ್ ಬೆಂಕಿಗಾಹುತಿ, ಬೀದಿಗಿಳಿದ ಜನ

ಸಾಮೂಹಿಕ ಗಡೀಪಾರಿಗೆ ಆಗ್ರಹ:

ಯುರೋಪ್ ಉಳಿಯಬೇಕಾದರೆ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿರುವ ವಿದೇಶಿ ನಾಗರಿಕರು ಮತ್ತು ಅಪರಾಧಿಗಳನ್ನು ಯಾವುದೇ ಮುಲಾಜಿಲ್ಲದೆ ಸಾಮೂಹಿಕವಾಗಿ ಗಡೀಪಾರು ಮಾಡಬೇಕು. ಇಲ್ಲದಿದ್ದರೆ ಯುರೋಪ್‌ಗೆ ಉಳಿಗಾಲವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಫ್ರಾನ್ಸ್ ವಾದವೇನು?

ಇನ್ನೊಂದೆಡೆ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಆಡಳಿತವು ದೇಶದಲ್ಲಿನ ಪ್ರಸ್ತುತ ಅಶಾಂತಿಗೆ ಜಾಗತಿಕ ಇಂಧನ ಬಿಕ್ಕಟ್ಟು, ಅಮೆರಿಕದ ವ್ಯಾಪಾರ ನೀತಿಗಳಿಂದ ಉಂಟಾದ ಆರ್ಥಿಕ ಒತ್ತಡ ಮತ್ತು ಸಾಮಾಜಿಕ ಸಮಸ್ಯೆಗಳು ಕಾರಣ ಎಂದು ವಿಶ್ಲೇಷಿಸುತ್ತಿದೆ. ಆದರೆ, ಮ್ಯಾಕ್ರನ್ ಅವರ ಈ ನಿಲುವನ್ನು ಟ್ರಂಪ್ ತಳ್ಳಿಹಾಕಿದ್ದು, ಸಮಸ್ಯೆ ಇರುವುದು ಗಡಿ ನಿಯಂತ್ರಣ ತಪ್ಪಿದ್ದರಲ್ಲಿ ಎಂದು ಒತ್ತಿಹೇಳಿದ್ದಾರೆ.

ಯುರೋಪ್‌ನಲ್ಲಿ ಹೆಚ್ಚುತ್ತಿರುವ ವಲಸೆ ಬಿಕ್ಕಟ್ಟು: ಕಳೆದ ಹಲವು ವರ್ಷಗಳಿಂದ ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶಗಳಿಂದ ನಿರಾಶ್ರಿತರ ಸಂಖ್ಯೆ ಯುರೋಪ್‌ಗೆ ವ್ಯಾಪಕವಾಗಿ ಹರಿದುಬರುತ್ತಿದೆ. ಇದರಿಂದಾಗಿ ಫ್ರಾನ್ಸ್, ಜರ್ಮನಿ ಮತ್ತು ಇಟಲಿಗಳಲ್ಲಿ ಜನಸಂಖ್ಯಾ ಸಮತೋಲನ, ಆಂತರಿಕ ಭದ್ರತೆ ಮತ್ತು ಸಂಸ್ಕೃತಿ ರಕ್ಷಣೆಯ ಕುರಿತು ತೀವ್ರ ರಾಜಕೀಯ ಚರ್ಚೆಗಳು ನಡೆಯುತ್ತಿವೆ.

ಬಲಪಂಥೀಯ ರಾಜಕೀಯದ ಬಲವರ್ಧನೆ: ಟ್ರಂಪ್ ಅವರ ಈ ಕಟು ಹೇಳಿಕೆಯು ಫ್ರಾನ್ಸ್‌ನ ಮರೀನ್ ಲೆ ಪೆನ್ ನೇತೃತ್ವದ ಬಲಪಂಥೀಯ ಪಕ್ಷಗಳಿಗೆ ರಾಜಕೀಯವಾಗಿ ಮತ್ತಷ್ಟು ಬಲ ತುಂಬುವ ಸಾಧ್ಯತೆಯಿದೆ. ಫ್ರಾನ್ಸ್‌ನಲ್ಲಿ ಇತ್ತೀಚೆಗೆ ನಡೆದ ದಂಗೆಗಳು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಹಾಗೂ ಪೋಲೀಸರ ಮೇಲಿನ ದಾಳಿಗಳ ಹಿನ್ನೆಲೆಯಲ್ಲಿ ದೇಶೀಯ ಕಾನೂನುಗಳನ್ನು ಬಿಗಿಗೊಳಿಸುವಂತೆ ನಾಗರಿಕರಿಂದಲೂ ಒತ್ತಡ ಹೆಚ್ಚುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಎಣ್ಣೆ ಪಾರ್ಟಿ ಮೆಲುಕು ಹಾಕಿ ಕಾರ್ಯಕ್ರಮವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು
ಎಣ್ಣೆ ಪಾರ್ಟಿ ಮೆಲುಕು ಹಾಕಿ ಕಾರ್ಯಕ್ರಮವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು
ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ನಾರಾಯಣ ಗೌಡ ಪ್ರತಿಕ್ರಿಯೆ
ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ನಾರಾಯಣ ಗೌಡ ಪ್ರತಿಕ್ರಿಯೆ
ದುರ್ಗಾ ಪೂಜೆ ವೇಳೆ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ದುರ್ಗಾ ಪೂಜೆ ವೇಳೆ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆ: ಕಾವ್ಯಾ
ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆ: ಕಾವ್ಯಾ
ಕಿತ್ತೂರು ಉತ್ಸವ ಸಂದರ್ಭದಲ್ಲೇ ರಾಣಿ ಚನ್ನಮ್ಮನ ಮೂರ್ತಿಗೆ ಹಾನಿ
ಕಿತ್ತೂರು ಉತ್ಸವ ಸಂದರ್ಭದಲ್ಲೇ ರಾಣಿ ಚನ್ನಮ್ಮನ ಮೂರ್ತಿಗೆ ಹಾನಿ
ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ
ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ
ಸಚಿವ ಶಿವಲಿಂಗೇಗೌಡರ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ
ಸಚಿವ ಶಿವಲಿಂಗೇಗೌಡರ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್