AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು; ಸರ್ಕಾರಗಳ ವಿರುದ್ಧ ತಿರುಗಿಬಿದ್ದ ಜನಸಾಮಾನ್ಯರು; ಈ ಆಕ್ರೋಶಕ್ಕಿರುವ ಕಾರಣಗಳು

ಭಾರತದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವಂತೆ ವಿಶ್ಯಾದ್ಯಂತ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವೆಡೆ ವಿದ್ಯಾರ್ಥಿಗಳಿಂದಲೇ ಪ್ರತಿಭಟನೆಯ ಕಿಡಿ ಹೊತ್ತಿದೆ. ಶಿಕ್ಷಣ ನಿರ್ಲಕ್ಷ್ಯ, ಬೆಲೆ ಏರಿಕೆ, ಜೀವನ ವೆಚ್ಚ ಏರಿಕೆ ಈ ಪ್ರತಿಭಟನೆಗಳಿಗೆ ಪ್ರಮುಖ ಕಾರಣಗಳಾಗಿವೆ. ಯೂರೋಪ್​ನ ಹಲವು ದೇಶಗಳಲ್ಲಿ ಜನಾಕ್ರೋಶ ತೀವ್ರಗೊಳ್ಳುತ್ತಿರುವುದು ವೇದ್ಯವಾಗಿದೆ.

ವಿಶ್ವಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು; ಸರ್ಕಾರಗಳ ವಿರುದ್ಧ ತಿರುಗಿಬಿದ್ದ ಜನಸಾಮಾನ್ಯರು; ಈ ಆಕ್ರೋಶಕ್ಕಿರುವ ಕಾರಣಗಳು
ಫ್ರಾನ್ಸ್​ನಲ್ಲಿ ಪ್ರತಿಭಟನೆImage Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 18, 2026 | 6:01 PM

Share

ನವದೆಹಲಿ, ಅಕ್ಟೋಬರ್ 18: ಸರ್ಕಾರ ಅಥವಾ ವ್ಯವಸ್ಥೆಗಳನ್ನು ಕದಲಿಸಲು ಜನಾಂದೋಲನ, ಪ್ರತಿಭಟನೆಗಳು ಪ್ರಮುಖ ಅಸ್ತ್ರಗಳಾಗಿವೆ. ಇತ್ತೀಚೆಗೆ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ದೇಶಗಳಲ್ಲಿ ಈ ಪ್ರತಿಭಟನೆಗಳು ನಡೆದಿರುವುದುಂಟು. ಐತಿಹಾಸಿಕವಾಗಿ ಇರಾನ್, ಫ್ರಾನ್ಸ್ ಇತ್ಯಾದಿ ಕಡೆ ಹಲವು ಕ್ರಾಂತಿ, ದಂಗೆ, ಪ್ರತಿಭಟನೆಗಳು ನಡೆದಿವೆ. ಕೆಲ ಸಕಾರಣಗಳಿವೆ, ಕೆಲ ವಿಕಾರಣಗಳಿವೆ, ಕೆಲ ಕಾಣದ ಕೈಗಳ ಸಂಚುಗಳಿವೆ. ಭಾರತದಲ್ಲೂ ಐದಾರು ವರ್ಷಗಳಿಂದ ಒಂದಲ್ಲ ಒಂದು ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈಗ ಯೂರೋಪ್ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಹಲವು ದೇಶಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಜನರ ಪ್ರತಿಭಟನೆಗಳು ನಡೆಯುತ್ತಿವೆ. ಫ್ರಾನ್ಸ್ ದೇಶದಲ್ಲಂತೂ ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಟೌನ್ ಹಾಲ್ ಕಟ್ಟಡಕ್ಕೇ ಜನರು ಬೆಂಕಿ ಇಟ್ಟಿದ್ದಾರೆ. ಎಲ್ಲೆಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎನ್ನುವ ಕುರಿತು ಒಂದು ವರದಿ ಇಲ್ಲಿದೆ:

ಫ್ರಾನ್ಸ್ ದೇಶದಲ್ಲಿ ಭಾರೀ ಹಿಂಸಾಚಾರ…

ವಿದ್ಯಾರ್ಥಿಗಳಿಂದ ಆರಂಭವಾದ ಪ್ರತಿಭಟನೆಯ ಕಿಡಿ ಇವತ್ತು ತೀವ್ರತರದ ಹಿಂಸಾಚಾರಗಳಿಗೆ ಎಡೆ ಮಾಡಿಕೊಟ್ಟಿದೆ. ಶಿಕ್ಷಣಕ್ಕೆ ಫಂಡಿಂಗ್ ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮುದಾಯ ಬೇಡಿಕೆ ಇಟ್ಟು ಸ್ಥಳೀಯವಾಗಿ ಕಳೆದ ತಿಂಗಳು ಪ್ರತಿಭಟನೆ ಆರಂಭಿಸಿದ್ದರು. ಅದು ಹೆಚ್ಚಿನ ಪ್ರದೇಶಗಳಿಗೆ ವ್ಯಾಪಿಸಿದೆ. ಶಾಲೆಗಳ ಸ್ಥಿತಿ ಸುಧಾರಿಸಬೇಕು ಎನ್ನುವ ಬೇಡಿಕೆಯೂ ಸೇರಿಕೊಂಡಿತು. ಇದರ ಜೊತೆಗೆ, ಹಣದುಬ್ಬರ ಅಸಮಾಧಾನವೂ ಸೇರಿಕೊಂಡು ಪ್ರತಿಭಟನೆಯ ಕಿಚ್ಚು ಹೆಚ್ಚಾಗಿದೆ.

ಪ್ಯಾರಿಸ್​ನ ಟೌನ್ ಹಾಲ್ ಕಟ್ಟಡವನ್ನು ಪ್ರತಿಭಟನಾಕಾರರು ಸುಟ್ಟುಹಾಕಿದ್ದಾರೆ. ಏಳು ಕೋಟಿ ಜನಸಂಖ್ಯೆಯ ಫ್ರಾನ್ಸ್​ನಲ್ಲಿ ಐದೂವರೆ ಲಕ್ಷ ಜನರು ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂದು ಅಲ್ಲಿಯ ಸರ್ಕಾರವೇ ಮಾಹಿತಿ ನೀಡಿದೆ.

ಬೆಲ್ಜಿಯಂನಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಕಿಡಿ

ಯೂರೋಪ್​ನ ಶ್ರೀಮಂತ ದೇಶವಾಗಿರುವ ಬೆಲ್ಜಿಯಂನಲ್ಲಿ ಬೆಲೆ ಏರಿಕೆ ಆಗುತ್ತಿರುವುದು ಜನರನ್ನು ಬೀದಿಗಿಳಿಯುವಂತೆ ಮಾಡಿದೆ. ಕುತೂಹಲವೆಂದರೆ, ಇಲ್ಲಿಯೂ ಪ್ರತಿಭಟನೆಯ ಕಿಡಿ ಹಾಕಿದ್ದು ವಿದ್ಯಾರ್ಥಿಗಳೇ. ಉನ್ನತ ಶಿಕ್ಷಣ, ಯೂನಿವರ್ಸಿಟಿ ನೊಂದಣಿ ಶುಲ್ಕ ಪಾವತಿಸಲು ನಿರಾಕರಿಸಿದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮೊದಲಿಟ್ಟರು. ಆ ಬಳಿಕ ಜನಸಾಮಾನ್ಯರೂ ಕೂಡ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಫ್ರಾನ್ಸ್‌ನಲ್ಲಿ ಹಣದುಬ್ಬರದ ಕಿಚ್ಚು: ಐತಿಹಾಸಿಕ ಟೌನ್ ಹಾಲ್ ಬೆಂಕಿಗಾಹುತಿ, ಬೀದಿಗಿಳಿದ ಜನ

ಪೋರ್ಚುಗಲ್​ನಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಪೋರ್ಚುಗಲ್ ದೇಶದಲ್ಲಿ ಜೀವನ ವೆಚ್ಚ ಹೆಚ್ಚುತ್ತಿದೆ. ವೇತನ ಕಡಿಮೆ ಇದೆ. ವಸತಿ ಸೌಲಭ್ಯ ದುಬಾರಿ ಇದೆ. ಸ್ವಂತ ಮನೆ ಹೊಂದಲು ಆಗುತ್ತಿಲ್ಲ. ಬಾಡಿಗೆಯೂ ದುಬಾರಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇದು ತೀವ್ರತರದ ಪ್ರತಿಭಟನೆಯಾಗಿಲ್ಲ.

ಇಟಲಿಯಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಇಟಲಿಯಲ್ಲಿ ಕಾರ್ಮಿಕರ ವೇತನ ಏರಿಕೆ ಆಗುತ್ತಿಲ್ಲದಿರುವುದು, ಹಣದುಬ್ಬರ ಏರುತ್ತಿರುವುದು ಜನಸಾಮಾನ್ಯರ ಪ್ರತಿಭಟನೆಗೆ ಕಾರಣವಾಗಿದೆ. ಪೋರ್ಚುಗಲ್​ನಂತೆ ಇಲ್ಲಿಯೂ ಹೆಚ್ಚಿನ ತೀವ್ರತೆಯಲ್ಲಿ ಗಲಾಟೆಗಳಾಗಿಲ್ಲ.

ಆಲ್ಬೇನಿಯಾದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಯೂರೋಪ್​ನ ಆಲ್ಬೇನಿಯಾ ದೇಶದಲ್ಲಿ ಯೂನಿವರ್ಸಿಟಿಗಳು ಕೆಟ್ಟ ಸ್ಥಿತಿಯಲ್ಲಿವೆ, ಶಿಕ್ಷಣ ವೆಚ್ಚ ದುಬಾರಿ ಇದೆ, ಪದವಿ ಬಳಿಕ ಉದ್ಯೋಗಾವಕಾಶ ಕಡಿಮೆ ಇದೆ, ಹಣಕಾಸು ನೆರವಿನ ವ್ಯವಸ್ಥೆ ಇಲ್ಲ ಇತ್ಯಾದಿ ನ್ಯೂನತೆಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಪ್ರತಿಭಟಿಸುತ್ತಿದೆ. ಕೆಲವೊಮ್ಮೆ ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದುಂಟು.

ಟರ್ಕಿಯಲ್ಲಿ ಕಾರ್ಮಿಕರ ಪ್ರತಿಭಟನೆ

ಯೂರೋಪ್​ನ ಟರ್ಕಿಯಲ್ಲಿ ಜೀವನ ವೆಚ್ಚ ಹೆಚ್ಚಾಗಿದೆ. ನಿವೃತ್ತರಿಗೆ ಸರಿಯಾದ ಪಿಂಚಣಿ ಸಿಗುತ್ತಿಲ್ಲ ಎಂದು ಆರೋಪಿಸಿ ನಿವೃತ್ತರು ಮತ್ತು ಕಾರ್ಮಿಕ ಸಂಘಟನೆಗಳು ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಫ್ಘಾನ್ ಬಾಲಕಿಯರ ಭವಿಷ್ಯಕ್ಕೆ ಕತ್ತರಿ: 5 ವರ್ಷದಲ್ಲಿ 26 ಲಕ್ಷ ಹೆಣ್ಣುಮಕ್ಕಳ ಶಾಲಾ ಕನಸು ನುಚ್ಚುನೂರು

ಅಮೆರಿಕದಲ್ಲಿ ಟ್ರಂಪ್ ವಿರುದ್ಧ ನೋ ಕಿಂಗ್ಸ್ ಪ್ರತಿಭಟನೆ

ಅಮೆರಿಕದಲ್ಲಿ ಅಲ್ಲಲ್ಲಿ ಟ್ರಂಪ್ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ‘ನೋ ಕಿಂಗ್ಸ್’ ನೆಟ್ವರ್ಕ್ ವತಿಯಿಂದ ಅಮೆರಿಕಾದ್ಯಂತ ಹಲವು ನಗರಗಳಲ್ಲಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಟ್ರಂಪ್ ಸರ್ಕಾರದ ಟ್ಯಾರಿಫ್ ನೀತಿ ಇತ್ಯಾದಿ ಕ್ರಮಗಳ ವಿರುದ್ಧ ಜನಾಕ್ರೋಶ ಇದಾಗಿದೆ.

ಅರ್ಜೆಂಟೀನಾದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರಿಂದ ಪ್ರತಿಭಟನೆ

ದಕ್ಷಿಣ ಅಮೆರಿಕ ಖಂಡದ ಅರ್ಜೆಂಟೀನಾ ದೇಶದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಸರಿಯಾಗಿ ವೆಚ್ಚ ಮಾಡುತ್ತಿಲ್ಲ ಎಂದು ಯೂನಿವರ್ಸಿಟಿಯ ಶಿಕ್ಷಕರು, ವಿದ್ಯಾರ್ಥಿಗಳು ಅಸಂತುಷ್ಟಗೊಂಡಿದ್ದಾರೆ. ಕಾರ್ಮಿಕ ಸಮುದಾಯವೂ ಕೂಡ ಈ ಪ್ರತಿಭಟನೆಗಳಿಗೆ ಕೈಜೋಡಿಸಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ