ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆರೋಗ್ಯಕ್ಕೇನಾಯ್ತು, ಕುತ್ತಿಗೆ ಮೇಲೆ ಕಾಣಿಸಿಕೊಂಡ ಕೆಂಪು ಕಲೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುತ್ತಿಗೆಯ ಮೇಲೆ ಕಾಣಿಸಿಕೊಂಡ ಕೆಂಪು ಕಲೆ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಶ್ವೇತಭವನವು ಇದು ಚರ್ಮದ ಕ್ರೀಮ್ ಬಳಕೆಯಿಂದ ಉಂಟಾಗಿದೆ ಎಂದು ಸ್ಪಷ್ಟಪಡಿಸಿದೆ, ಹಿಂದೆ ಮೊಮೆಟಾಸೋನ್ ಬಳಸುತ್ತಿದ್ದರು ಎಂದು ವರದಿಯಾಗಿತ್ತು. 79 ವರ್ಷದ ಟ್ರಂಪ್ ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಇತ್ತೀಚಿನ ಪರೀಕ್ಷೆಗಳು ಅವರು ಉತ್ತಮ ಆರೋಗ್ಯದಲ್ಲಿದ್ದಾರೆ ಎಂದು ದೃಢಪಡಿಸಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆರೋಗ್ಯಕ್ಕೇನಾಯ್ತು, ಕುತ್ತಿಗೆ ಮೇಲೆ ಕಾಣಿಸಿಕೊಂಡ ಕೆಂಪು ಕಲೆ
ಡೊನಾಲ್ಡ್​ ಟ್ರಂಪ್

Updated on: Mar 03, 2026 | 10:49 AM

ವಾಷಿಂಗ್ಟನ್, ಮಾರ್ಚ್​ 03: ಇರಾನ್ ಮೇಲೆ ಇಸ್ರೇಲ್ ಜತೆ ಸೇರಿ ಡೊನಾಲ್ಡ್​ ಟ್ರಂಪ್(Donald Trump) ಸಮರ ಸಾರಿದ್ದು, ಇದೀಗ ವಿಶ್ವದಾದ್ಯಂತ ಅವರದ್ದೇ ಮಾತು. ಪ್ರತಿಯೊಂದು ನಡೆಯನ್ನೂ ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದೀಗ ಆವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿವೆ. ಟ್ರಂಪ್ ಕುತ್ತಿಗೆ ಭಾಗದಲ್ಲಿ ಕೆಂಪು ದದ್ದು ಕಾಣಿಸಿಕೊಂಡಿದ್ದು, ಅವರ ಆರೋಗ್ಯದ ಬಗ್ಗೆ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ ಶ್ವೇತಭವನವು ಅವರು ಬಳಸುತ್ತಿದ್ದ ಕ್ರೀಂನಿಂದಾಗಿ ಈ ಕಲೆಯಾಗಿದೆ ಎಂದು ಹೇಳಿಕೊಂಡಿದೆ.

ಅಧ್ಯಕ್ಷ ಟ್ರಂಪ್ ಅವರ ಕಿವಿಯ ಕೆಳಗೆ ಕುತ್ತಿಗೆಯ ಮೇಲಿನ ಕೆಂಪು ಗುರುತು ಇರುವ ಫೋಟೋ ಪ್ರಪಂಚದ ಗಮನ ಸೆಳೆಯಿತು. ಟ್ರಂಪ್ ಒಂದು ವಾರದಿಂದ ಈ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಮತ್ತು ಮುಂದಿನ ಕೆಲವು ವಾರಗಳವರೆಗೆ ಈ ಗುರುತು ಉಳಿಯುವ ನಿರೀಕ್ಷೆಯಿದೆ ಎಂದಿದ್ದಾರೆ.

ಆದರೆ ಅವರು ಯಾವ ಕ್ರೀಂ, ಯಾಕಾಗಿ ಬಳಸುತ್ತಿದ್ದರು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ, ಫೆಬ್ರವರಿ 19 ರಂದು ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್‌ನಲ್ಲಿ ನಡೆದ ಶಾಂತಿ ಮಂಡಳಿಯ ಸಭೆಯಲ್ಲಿ ತೆಗೆದ ಟ್ರಂಪ್ ಫೋಟೊದಲ್ಲಿ ಕಲೆ ಕಾಣಿಸಿಕೊಂಡಿತ್ತು. ಕಳೆದ ವರ್ಷ ಏಪ್ರಿಲ್‌ನಲ್ಲಿ ಅಧ್ಯಕ್ಷ ಟ್ರಂಪ್ ಅವರ ಆರೋಗ್ಯ ವರದಿಯಲ್ಲಿ, ಅವರು ಚರ್ಮದ ಸಮಸ್ಯೆ ನಿವಾರಿಸಲು ಮೊಮೆಟಾಸೋನ್ ಬಳಸುತ್ತಿದ್ದಾರೆ ಎಂದು ಹೇಳಲಾಗಿತ್ತು.

ಮತ್ತಷ್ಟು ಓದಿ:
Video: ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ: ಟ್ರಂಪ್

ಕಳೆದ ಜನವರಿಯಲ್ಲಿ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದಾಗ 79 ವರ್ಷದ ಟ್ರಂಪ್ ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷರಾದರು. ಅವರಿಗೆ ವಯಸ್ಸಾಗಿರುವ ಕಾರಣ, ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಅಕ್ಟೋಬರ್‌ನಲ್ಲಿ ಅವರ ಹೃದಯ ಮತ್ತು ಹೊಟ್ಟೆಯ ಎಂಆರ್‌ಐ ಇಮೇಜಿಂಗ್‌ಗೆ ಒಳಗಾಗಿದ್ದರು ಮತ್ತು ಫಲಿತಾಂಶಗಳು ಸಂಪೂರ್ಣವಾಗಿ ಸಾಮಾನ್ಯವಾಗಿದ್ದವು ಎಂದು ಡಾ. ಸೀನ್ ಬಾರ್ಬೆಲ್ಲಾ ಡಿಸೆಂಬರ್‌ನಲ್ಲಿ ಹೇಳಿದ್ದರು. ಅಕ್ಟೋಬರ್‌ನಲ್ಲಿ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ನಡೆಸಲಾದ ದೈಹಿಕ ಪರೀಕ್ಷೆಯಲ್ಲಿ ಟ್ರಂಪ್ ಒಟ್ಟಾರೆ ಉತ್ತಮ ಆರೋಗ್ಯದಲ್ಲಿದ್ದಾರೆ ಎಂದು ಕಂಡುಬಂದಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:46 am, Tue, 3 March 26

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us