AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇರೆ ದೇಶಗಳಿಗೆ ಹೋದಾಗ ಅಲ್ಲಿನ ಸ್ಟ್ರೀಟ್ ಫುಡ್ ತಿನ್ನುವ ಮುನ್ನ ಎಚ್ಚರ, ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು

ಟರ್ಕಿಯಲ್ಲಿ ರಜೆ ಕಳೆಯಲೆಂದು ಜರ್ಮನಿಯಿಂದ ಹೋಗಿದ್ದ ನಾಲ್ವರ ಪುಟ್ಟ ಕುಟುಂಬ ಮಸಣ ಸೇರಿದೆ. ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಇಸ್ತಾನ್‌ಬುಲ್‌ನ ಓರ್ಟಕೋಯ್ ಜಿಲ್ಲೆಯಲ್ಲಿ ಬಾಸ್ಫರಸ್ ಸೇತುವೆಯ ಬಳಿ ಇರುವ ಸ್ಟ್ರೀಟ್​​ನಲ್ಲಿ ಆಹಾರ(Food) ಸೇವಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಮಹಿಳೆ ಆಕೆಯ ಪತಿ ಹಾಗೂ ಚಿಕ್ಕ ಮಕ್ಕಳಿಬ್ಬರು ಆಹಾರ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದರು. ಕುಟುಂಬವು ರಜೆಗಾಗಿ ಜರ್ಮನಿಯಿಂದ ಪ್ರಯಾಣಿಸಿತ್ತು ಎಂದು ಪೀಪಲ್ ವರದಿ ಮಾಡಿದೆ.

ಬೇರೆ ದೇಶಗಳಿಗೆ ಹೋದಾಗ ಅಲ್ಲಿನ ಸ್ಟ್ರೀಟ್ ಫುಡ್ ತಿನ್ನುವ ಮುನ್ನ ಎಚ್ಚರ, ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು
ಟರ್ಕಿImage Credit source: NDTV
ನಯನಾ ರಾಜೀವ್
|

Updated on: Nov 20, 2025 | 9:45 AM

Share

ಇಸ್ತಾನ್​ಬುಲ್, ನವೆಂಬರ್ 20: ಟರ್ಕಿಯಲ್ಲಿ ರಜೆ ಕಳೆಯಲೆಂದು ಜರ್ಮನಿಯಿಂದ ಹೋಗಿದ್ದ ನಾಲ್ವರ ಪುಟ್ಟ ಕುಟುಂಬ ಮಸಣ ಸೇರಿದೆ. ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಇಸ್ತಾನ್‌ಬುಲ್‌ನ ಓರ್ಟಕೋಯ್ ಜಿಲ್ಲೆಯಲ್ಲಿ ಬಾಸ್ಫರಸ್ ಸೇತುವೆಯ ಬಳಿ ಇರುವ ಸ್ಟ್ರೀಟ್​​ನಲ್ಲಿ ಆಹಾರ(Food) ಸೇವಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಮಹಿಳೆ ಆಕೆಯ ಪತಿ ಹಾಗೂ ಚಿಕ್ಕ ಮಕ್ಕಳಿಬ್ಬರು ಆಹಾರ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದರು. ಕುಟುಂಬವು ರಜೆಗಾಗಿ ಜರ್ಮನಿಯಿಂದ ಪ್ರಯಾಣಿಸಿತ್ತು ಎಂದು ಪೀಪಲ್ ವರದಿ ಮಾಡಿದೆ.

ಘಟನೆಯ ನಂತರ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ದುರಂತವೆಂದರೆ 6 ವರ್ಷದ ಕದಿರ್ ಮತ್ತು 3 ವರ್ಷದ ಮಸಾಲ್ ಎಂಬ ಮಕ್ಕಳು ಸಾವನ್ನಪ್ಪಿವೆ. ಮರುದಿನವೇ ಮಕ್ಕಳ ತಾಯಿ ಸಿಗ್ಡೆಮ್ ಬೊಸೆಕ್ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ತಂದೆ ಸರ್ವೆಟ್ ಬೊಸೆಕ್ ಕೂಡ ಹಲವಾರು ದಿನಗಳ ತೀವ್ರ ನಿಗಾ ಘಟಕದಲ್ಲಿ ಕಳೆದ ನಂತರ ಸೋಮವಾರ ನಿಧನರಾದರು.

ಇಸ್ತಾನ್‌ಬುಲ್‌ನ ಪ್ರಾದೇಶಿಕ ಆರೋಗ್ಯ ಮುಖ್ಯಸ್ಥ ಡಾ. ಅಬ್ದುಲ್ಲಾ ಎಮ್ರೆ ಗುನರ್ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿ ಫಾತಿಹ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬೋಸೆಕ್ ಕುಟುಂಬದ ಎಲ್ಲರೂ ಮೃತಪಟ್ಟಿದ್ದಾರೆ. ಕೂಡಲೇ ಚಿಕಿತ್ಸೆ ನೀಡಲಾಗಿದ್ದರೂ ಕೂಡ ಕುಟುಂಬದ ಮುಖ್ಯಸ್ಥ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: Food Sanctity: ಊಟ ಮಾಡುವಾಗ ಈ ತಪ್ಪು ಮಾಡಲೇಬೇಡಿ; ರೋಗರುಜಿನೆಗಳ ಕಾಟ ತಪ್ಪಿದ್ದಲ್ಲ!

ಬೋಸೆಕ್ ಕುಟುಂಬವು ನವೆಂಬರ್ 9 ರಂದು ಟ್ರಿಪ್​ಗೆಂದು ಜರ್ಮನಿಯ ಹ್ಯಾಂಬರ್ಗ್‌ನಿಂದ ಇಸ್ತಾನ್‌ಬುಲ್‌ಗೆ ಪ್ರಯಾಣ ಬೆಳೆಸಿತ್ತು. ಪ್ರವಾಸದ ಸಮಯದಲ್ಲಿ, ಅನ್ನ, ಬೇಯಿಸಿದ ಆಲೂಗಡ್ಡೆ, ಬೇಯಿಸಿದ ಕುರಿ ಮರಿಗಳ ಕರುಳಿನ ಖಾದ್ಯವನ್ನು ಸೇವಿಸಿದ್ದರು ಎಂದು ವರದಿಯಾಗಿದೆ.

ಸ್ವಲ್ಪ ಸಮಯದ ಬಳಿಕ ಇಬ್ಬರು ಮಕ್ಕಳಿಗೆ ವಾಂತಿ ಶುರುವಾಗಿತ್ತು, ಪೋಷಕರಲ್ಲೂ ಇಂಥದ್ದೇ ಲಕ್ಷಣಗಳು ಕಾಣಿಸಿಕೊಂಡಿದ್ದವು. ನವೆಂಬರ್ 12 ರಂದು ಕುಟುಂಬವು ಆಸ್ಪತ್ರೆಗೆ ತೆರಳಿದ್ದರು.ಅದೇ ದಿನ ಬಿಡುಗಡೆಗೊಂಡು ಮನೆಗೆ ತೆರಳಿದ್ದರು. ನವೆಂಬರ್ 13ರಂದು ನಿಧನರಾಗಿದ್ದಾರೆ. ಆದರೆ ಹಲವರು ಈ ಸಾವು ಆಹಾರದಿಂದಾಗಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

ಹೋಟೆಲ್​​ನಲ್ಲಿ ಕೀಟನಾಶಕಗಳ ಸ್ಪ್ರೇ ಮಾಡಿದ್ದು, ಅದಕ್ಕೆ ಇವರು ಒಗ್ಗಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಇಸ್ತಾನ್‌ಬುಲ್‌ನ ಪ್ರಾಂತೀಯ ಆರೋಗ್ಯ ನಿರ್ದೇಶನಾಲಯ ಮತ್ತು ಮುಖ್ಯ ಸಾರ್ವಜನಿಕ ಅಭಿಯೋಜಕರ ಕಚೇರಿ ತನಿಖೆ ನಡೆಸುತ್ತಿದ್ದರೆ, ವಿಧಿವಿಜ್ಞಾನ ವೈದ್ಯಕೀಯ ಸಂಸ್ಥೆಯು ಕುಟುಂಬದ ಸಾವಿಗೆ ಕಾರಣವನ್ನು ನಿರ್ಧರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ