ಟ್ವಿಟರ್ ವಾಕ್ ಸ್ವಾತಂತ್ರ್ಯವನ್ನು ನಂಬುವುದಿಲ್ಲ,ಕಚೇರಿ ರಾಜಕೀಯವು ಎಡಪಕ್ಷದ ಒಲವು ಹೊಂದಿದೆ: ರಹಸ್ಯ ರೆಕಾರ್ಡಿಂಗ್ನಿಂದ ಮಾಹಿತಿ ಬಯಲು
ಮಸ್ಕ್ ಟ್ವಿಟರ್ ಖರೀದಿಸಿದ ಸುದ್ದಿಗೆ ಅವರ ಸಹೋದ್ಯೋಗಿಗಳು ಹೇಗೆ ಪ್ರತಿಕ್ರಿಯಿಸಿದರು ಎಂಬ ಪ್ರಶ್ನೆಗೆ ಮುರುಗೇಶನ್ ಅವರು " ಇದು ಸಂಭವಿಸಿದರೆ ಇದು ನನ್ನ ಕೊನೆಯ ದಿನವಾಗಿರುತ್ತದೆ" ಎಂಬಂತೆ ಪ್ರತಿಕ್ರಿಯಿಸಿದ್ದರು ಎಂದಿದ್ದಾರೆ.
ವಾಷಿಂಗ್ಟನ್: ಟ್ವಿಟರ್ (Twitter) ವಾಕ್ ಸ್ವಾತಂತ್ರ್ಯವನ್ನು ನಂಬುವುದಿಲ್ಲ ಮತ್ತು ಕಂಪನಿಯಲ್ಲಿ ಕೆಲಸ ಮಾಡುವ ಜನರು ಕಂಪನಿಯ ಮೇಲೆ ಹಿಡಿತ ಸಾಧಿಸಲು ಎಲೋನ್ ಮಸ್ಕ್ (Elon Musk) ಅವರ 44 ಶತಕೋಟಿ ಯುಎಸ್ಡಿ ಬಿಡ್ ಅನ್ನು ದ್ವೇಷಿಸುತ್ತಿದ್ದರು ಎಂದು ಟ್ವಿಟರ್‌ನ ಹಿರಿಯ ಎಂಜಿನಿಯರೊಬ್ಬರು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ಅಮೆರಿಕದ ಬಲಪಂಥೀಯ ಕಾರ್ಯಕರ್ತ ಗುಂಪು ಪ್ರಾಜೆಕ್ಟ್ ವೆರಿಟಾಸ್ (Project Veritas) ಒಂದು ವಿಡಿಯೊವನ್ನು ಬಿಡುಗಡೆ ಮಾಡಿದ್ದು, ಹಿರಿಯ ಟ್ವಿಟರ್ ಎಂಜಿನಿಯರ್ ಸಿರು ಮುರುಗೇಶನ್ ಕಂಪನಿಯು ಬಲವಾದ ಎಡಪಂಥೀಯ ಪಕ್ಷಪಾತವನ್ನು ಹೊಂದಿದ್ದು, ಬಲಪಂಥೀಯರನ್ನು ಬಹಿರಂಗವಾಗಿ ಸೆನ್ಸಾರ್ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಟ್ವಿಟರ್‌ನಲ್ಲಿನ ಕಂಪನಿ ಸಂಸ್ಕೃತಿಯು ಎಡಪಂಥೀಯ ಆಗಿದೆ ಎಂದು ಮುರುಗೇಶನ್ ಅವರು ಹೇಳುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ಉದ್ದೇಶಿತ ಸ್ವಾಧೀನವನ್ನು ಅವರ ಸಹೋದ್ಯೋಗಿಗಳು ತೀವ್ರವಾಗಿ ದ್ವೇಷಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಮುರುಗೇಶನ್ ಅವರ ಪ್ರಕಾರ, ಟ್ವಿಟರ್‌ನ ಕಚೇರಿ ರಾಜಕೀಯವು ಎಡ-ಒಲವು ಹೊಂದಿದ್ದು, ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಕೆಲಸ ಮಾಡುವ ಜನರು ಚಾಲ್ತಿಯಲ್ಲಿರುವ ವಾತಾವರಣಕ್ಕೆ ಹೊಂದಿಕೊಳ್ಳಲು ತಮ್ಮ ಮೂಲ ದೃಷ್ಟಿಕೋನಗಳನ್ನು ಬದಲಾಯಿಸಿದ್ದಾರೆ. ಟ್ವಿಟರ್ ಇತ್ತೀಚೆಗೆ ಟೆಸ್ಲಾ ಸಿಇಒ ಜತೆ 44 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಒಪ್ಪಂದದಲ್ಲಿ ಸ್ವಾಧೀನಪಡಿಸಿಕೊಳ್ಳಲು ಒಪ್ಪಿಕೊಂಡಿತು. ಆದರೂ ಇದು ಇನ್ನೂ ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ. ಆದಾಗ್ಯೂ, ಮೈಕ್ರೋ-ಬ್ಲಾಗಿಂಗ್ ಸೈಟ್‌ನ 44 ಶತಕೋಟಿ ಅಮೆರಿಕನ್ ಡಾಲರ್ ಸ್ವಾಧೀನ ಬಿಡ್ ಅನ್ನು ತಡೆಹಿಡಿಯಲಾಗಿದೆ ಎಂದು ಎಲೋನ್ ಮಸ್ಕ್ ಘೋಷಿಸಿದರು. ಮಸ್ಕ್ ಸ್ವತಃ ಟ್ವಿಟರ್‌ನಲ್ಲಿ ಎಡಪಂಥೀಯ ಪಕ್ಷಪಾತದ ಬಗ್ಗೆ ಆಗಾಗ್ಗೆ ದೂರಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನಿಷೇಧಿಸುವ ಟ್ವಿಟರ್ ನಿರ್ಧಾರವು ತಪ್ಪಾಗಿದೆ ಮತ್ತು ಸಾಮಾಜಿಕ ಮಾಧ್ಯಮ ಕಂಪನಿಯನ್ನು ತನ್ನ ಸ್ವಾಧೀನಪಡಿಸಿಕೊಳ್ಳುವುದು ಯಶಸ್ವಿಯಾದರೆ ಅದನ್ನು ಹಿಂತೆಗೆದುಕೊಳ್ಳುವುದಾಗಿ ಅವರು ಹೇಳಿದ್ದರು.
Twitter executive calling Elon Musk mentally handicapped, “special” and saying he has “aspergers.”
ಇದನ್ನೂ ಓದಿThis Twitter exec goes on to say that Twitter is “not here to give people free speech” @elonmusk is going to want to see this one too…pic.twitter.com/dQZamaLiC8
— Benny Johnson (@bennyjohnson) May 18, 2022
ಮಸ್ಕ್ ಟ್ವಿಟರ್ ಖರೀದಿಸಿದ ಸುದ್ದಿಗೆ ಅವರ ಸಹೋದ್ಯೋಗಿಗಳು ಹೇಗೆ ಪ್ರತಿಕ್ರಿಯಿಸಿದರು ಎಂಬ ಪ್ರಶ್ನೆಗೆ ಮುರುಗೇಶನ್ ಅವರು ” ಇದು ಸಂಭವಿಸಿದರೆ ಇದು ನನ್ನ ಕೊನೆಯ ದಿನವಾಗಿರುತ್ತದೆ” ಎಂಬಂತೆ ಪ್ರತಿಕ್ರಿಯಿಸಿದ್ದರು ಎಂದಿದ್ದಾರೆ.
ಏಪ್ರಿಲ್‌ನಲ್ಲಿ ಮಸ್ಕ್ ಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗಿನಿಂದ ಬಹಳಷ್ಟು ಬದಲಾಗಿದೆ ಎಂದಿದ್ದಾರೆ ಮುರುಗೇಶನ್. ಉದ್ಯೋಗಿಗಳು ತಮ್ಮ ಉದ್ಯೋಗದ ಬಗ್ಗೆ ಚಿಂತಿತರಾಗಿದ್ದರು, ಏಕೆಂದರೆ ಅವರ ಕಂಪನಿಗಳು ಟ್ವಿಟರ್‌ನ ‘ಸಮಾಜವಾದಿ’ ಕಾರ್ಯಸ್ಥಳಕ್ಕೆ ವ್ಯತಿರಿಕ್ತವಾಗಿ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. “ಅವರು ಬಂಡವಾಳಶಾಹಿ ಮತ್ತು ನಾವು ನಿಜವಾಗಿಯೂ ಬಂಡವಾಳಶಾಹಿಗಳಾಗಿ ಕಾರ್ಯನಿರ್ವಹಿಸುತ್ತಿಲ್ಲ, ನಾವು ಸಮಾಜವಾದಿಗಳು. Like we’re all commie as f***.”
ಕಂಪನಿಯ ಕಾರ್ಯಾಚರಣಾ ಕಾರ್ಯವಿಧಾನಗಳು ಅತ್ಯಂತ ಸಡಿಲವಾಗಿವೆ. ಪ್ರತಿಯೊಬ್ಬರೂ ಅವರು ಬಯಸಿದದನ್ನು ಮಾಡಲು ಬಯಸುತ್ತಾರೆ” ಎಂದು ಮುರುಗೇಶನ್ ಹೇಳಿದ್ದಾರೆ. ಸ್ವಾಧೀನವನ್ನು ತಡೆಯಲು ಅನೇಕ ಸಿಬ್ಬಂದಿ ಬಹಿರಂಗವಾಗಿ ಪ್ರಯತ್ನಿಸಿದ್ದಾರೆ ಮತ್ತು ಬಹಳಷ್ಟು ನೌಕರರು ಅದರ ವಿರುದ್ಧ ಬಂಡಾಯವೆದ್ದರು ಎಂದಿದ್ದಾರೆ ಮುರುಗೇಶನ್. ಮಸ್ಕ್ ಟ್ವಿಟರ್ ಸ್ವಾಧೀನವನ್ನು ಘೋಷಿಸಿದ ನಂತರ “ಉದ್ಯೋಗಿಗಳು ಸಿಬ್ಬಂದಿಗಳ ‘ನಿರ್ಗಮನ’ದ ಬಗ್ಗೆ ಎಚ್ಚರಿಸಿದ್ದಾರೆ ಎಂದಿದ್ದಾರೆ. “ನಾವು ಅದರ ವಿರುದ್ಧ ಬಂಡಾಯವೇಳುವುದಕ್ಕೆ ನಮ್ಮಿಂದ ಸಾಧ್ಯವಾಗುವುದನ್ನು ಮಾಡಿದ್ದೇವೆ ಎಂದು ಮುರುಗೇಶನ್ ಹೇಳಿದ್ದಾರೆ.
Published On - 2:00 pm, Tue, 17 May 22