AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾದ ಬೃಹತ್ ತೈಲ ಘಟಕದ ಮೇಲೆ 361 ಡ್ರೋನ್​ಗಳಿಂದ ಉಕ್ರೇನ್ ದಾಳಿ

Ukraine drone attack on Russia's big oil refinery: ರಷ್ಯಾದ ಅತಿದೊಡ್ಡ ತೈಲ ಸಂಸ್ಕರಣಾಗಾರಗಳಲ್ಲಿ ಒಂದಾದ ಕಿರಿಶಿ ಮೇಲೆ ಉಕ್ರೇನ್ ಭಾರೀ ಡ್ರೋನ್ ದಾಳಿ ಮಾಡಿದೆ. ಈ ಕಿರಿಶಿ ಆಯಿಲ ರಿಫೈನರಿಗೆ ಎಷ್ಟು ಘಾಸಿಯಾಗಿದೆ ಎನ್ನುವ ಮಾಹಿತಿ ಗೊತ್ತಾಗಿಲ್ಲ. ತಾನು ಡ್ರೋನ್ ದಾಳಿ ಮಾಡುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಉಕ್ರೇನ್ ಹೇಳಿದೆ.

ರಷ್ಯಾದ ಬೃಹತ್ ತೈಲ ಘಟಕದ ಮೇಲೆ 361 ಡ್ರೋನ್​ಗಳಿಂದ ಉಕ್ರೇನ್ ದಾಳಿ
ಕಿರಿಶಿ ತೈಲ ಸಂಸ್ಕರಣಾ ಘಟಕ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 14, 2025 | 6:03 PM

Share

ನವದೆಹಲಿ, ಸೆಪ್ಟೆಂಬರ್ 14: ಉಕ್ರೇನ್ ಮತ್ತು ರಷ್ಯಾ ನಡುವೆ ದಾಳಿ ಪ್ರತಿದಾಳಿಗಳು ನಿಲ್ಲುತ್ತಲೇ ಇಲ್ಲ. ಹೊಂಚಿ ಹಾಕಿ ಹೊಂಚಿ ಹಾಕಿ ಪರಸ್ಪರರ ಮೇಲೆ ದಾಳಿಗಳಾಗುತ್ತಿವೆ. ರಷ್ಯಾದ ಬೃಹತ್ ಕಿರಿಶಿ ತೈಲ ಸಂಸ್ಕರಣಾ ಘಟಕದ (Surgutneftegaz’s Kirishinefteorgsintez refinery of Russia) ಮೇಲೆ ಉಕ್ರೇನ್ ರಾತ್ರೋರಾತ್ರಿ ನೂರಾರು ಡ್ರೋನ್​ಗಳಿಂದ ದಾಳಿ ಮಾಡಿದೆ. ಬರೋಬ್ಬರಿ 361 ಡ್ರೋನ್​ಗಳಿಂದ ಆದ ಈ ದಾಳಿಯಿಂದಾಗಿ ಕಿರಿಶಿ ಆಯಿಲ್ ರಿಫೈನರಿ ಘಟಕ ಕೆಲ ಹೊತ್ತು ಹೊತ್ತಿ ಉರಿದಿದೆ. ಆದರೆ, ಹೆಚ್ಚಿನ ಅವಘಡ ಸಂಭವಿಸುವುದು ತಪ್ಪಿದೆ. ಆದರೆ, ಘಟಕಕ್ಕೆ ಎಷ್ಟು ಹಾನಿಯಾಗಿದೆ ಎನ್ನುವ ನಿಖರ ಮಾಹಿತಿ ಸಿಕ್ಕಿಲ್ಲ.

ಉಕ್ರೇನ್​ನ ಡ್ರೋನ್ ಘಟಕವು ಈ ದಾಳಿಯನ್ನು ತಾನೇ ಮಾಡಿದ್ದು ಎಂದು ಸ್ಪಷ್ಟಪಡಿಸಿದ್ದು, ತಮ್ಮ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದೆ. ವಿಶ್ವದ ಎರಡನೇ ಅತಿದೊಡ್ಡ ತೈಲ ರಫ್ತುದಾರ ದೇಶವೆನಿಸಿದ ರಷ್ಯಾದಲ್ಲಿ ಇರುವ ಅತಿದೊಡ್ಡ ತೈಲ ಸಂಸ್ಕರಣಾ ಘಟಕಗಳಲ್ಲಿ ಕಿರಿಶಿಯದ್ದೂ ಒಂದು.

ಇದನ್ನೂ ಓದಿ: ಭಾರತ ಹೇಗೆ ಸಾಗಬೇಕು? ಮಲೇಷ್ಯಾವಾ, ಕೊರಿಯಾವಾ? ಭಾರತದ 16 ವರ್ಷದ ಜೀನಿಯಸ್ ಬಾಲಕ ಹೇಳೋದೇನು ಗೊತ್ತಾ?

ಕಿರಿಶಿಯಲ್ಲಿ ರಷ್ಯಾದ ಶೇ. 6.4ರಷ್ಟು ಕಚ್ಚಾ ತೈಲದ ಸಂಸ್ಕರಣೆ ಆಗುತ್ತದೆ. ದಿನಕ್ಕೆ 3.55 ಲಕ್ಷ ಬ್ಯಾರಲ್ ತೈಲದ ರಿಫೈನಿಂಗ್ ನಡೆಯುತ್ತದೆ. ವರ್ಷಕ್ಕೆ ಸುಮಾರು 17.7 ದಶಲಕ್ಷ ಮೆಟ್ರಿಲ್ ಟನ್​ಗಳಷ್ಟು ತೈಲದ ಸಂಸ್ಕರಣೆ ಆಗುತ್ತದೆ. ಇಲ್ಲಿ ಉಕ್ರೇನ್ ಡ್ರೋನ್ ದಾಳಿ ನಡೆಸಿರುವುದು ಗಮನಾರ್ಹ.

ರಷ್ಯಾಗೆ ಸದ್ಯ ಪ್ರಮುಖ ಆದಾಯ ಮೂಲವೆಂದರೆ ತೈಲ ರಫ್ತು. ಹೀಗಾಗಿ, ತೈಲ ಘಟಕವನ್ನೇ ಉಕ್ರೇನ್ ತನ್ನ ಟಾರ್ಗೆಟ್ ಆಗಿ ಮಾಡಿಕೊಂಡು ದಾಳಿ ಮಾಡಿರಬಹುದು. ಉಕ್ರೇನ್​ನಿಂದ ಎಷ್ಟು ಡ್ರೋನ್​ಗಳ ದಾಳಿಯಾಗಿದೆ ಎಂಬುದು ನಿಖರವಾಗಿ ಗೊತ್ತಿ್ಲಲ. ಆದರೆ, ರಷ್ಯಾದ ಏರ್ ಡಿಫೆನ್ಸ್ ಸಿಸ್ಟಂಗಳು 361ಕ್ಕೂ ಹೆಚ್ಚು ಡ್ರೋನ್​ಗಳನ್ನು ಹೊಡೆದುರುಳಿಸಿವೆ ಎಂದು ಅಲ್ಲಿಯ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ಇದರಲ್ಲಿ ಅಮೆರಿಕದ HIMARS ಕ್ಷಿಪಣಿಯೂ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಮುಂದಿನ ಅನೇಕ ದಶಕಗಳು ಭಾರತದ ಪಾರಮ್ಯಕ್ಕೆ ಅವಕಾಶ: ಮಾರುತಿ ಸುಜುಕಿ ಸಿಇಒ

ಯೂರೋಪ್ ಮೇಲೆ ಅಮೆರಿಕ ಒತ್ತಡ

ರಷ್ಯಾದೊಂದಿಗಿನ ಎಲ್ಲಾ ರೀತಿಯ ತೈಲ ವ್ಯವಹಾರದಿಂದ ಹಿಂದಕ್ಕೆ ಸರಿಯುವಂತೆ ಯೂರೋಪಿಯನ್ ದೇಶಗಳಿಗೆ ಅಮೆರಿಕ ತಾಕೀತು ಮಾಡುತ್ತಿದೆ. ರಷ್ಯಾ ಮೇಲೆ ಮತ್ತಷ್ಟು ಹೊಸ ಇಂಧನ ನಿಷೇಧಗಳನ್ನು ಹಾಕಲು ತಾನು ಸಿದ್ಧ ಇದ್ದೇನೆ. ಆದರೆ, ನ್ಯಾಟೋ ಮೈತ್ರಿಪಡೆಯ ಎಲ್ಲಾ ದೇಶಗಳು ರಷ್ಯಾದ ತೈಲದ ಖರೀದಿಯನ್ನು ನಿಲ್ಲಿಸಿದಾಗ ಮಾತ್ರ ತಾನು ಹೆಜ್ಜೆ ಇಡುವುದಾಗಿ ಅಮೆರಿಕ ತಿಳಿಸಿದೆ.

ಆದರೆ, ರಷ್ಯಾದ ತೈಲ ಮತ್ತು ಅನಿಲ ಖರೀದಿಯನ್ನು ಹಂತಹಂತವಾಗಿ ಕಡಿಮೆಗೊಳಿಸುತ್ತಾ ಹೋಗಿ ನಿಲ್ಲಿಸುತ್ತೇವೆ. ಆದರೆ, 2028ರವರೆಗೂ ಕಾಲಾವಕಾಶ ಬೇಕು ಎಂದು ಯೂರೋಪಿಯನ್ ಯೂನಿಯನ್ ಹೇಳುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ