ಭಾರತ ಹೇಗೆ ಸಾಗಬೇಕು? ಮಲೇಷ್ಯಾವಾ, ಕೊರಿಯಾವಾ? ಭಾರತದ 16 ವರ್ಷದ ಜೀನಿಯಸ್ ಬಾಲಕ ಹೇಳೋದೇನು ಗೊತ್ತಾ?
Raul John Aju, 16 year old Kerala genius says India at crossroad: ಕೇರಳದ ರೌಲ್ ಜಾನ್ ಅಜು ಅವರು ದೇಶದ ಯುವಜನರು ಅಂಕಗಳ ಬದಲು ಕೌಶಲ್ಯಾಭಿವೃದ್ಧಿಗೆ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದ್ದಾರೆ. 16 ವರ್ಷದ ಕೇರಳ ಬಾಲಕ ಭಾರತ ಈಗ ಕವಲುದಾರಿಯಲ್ಲಿದೆ ಎಂದಿದ್ದಾರೆ. ಮಲೇಷ್ಯಾ ರೀತಿ ಬೆಳೆಯಬೇಕಾ ಅಥವಾ ದಕ್ಷಿಣ ಕೊರಿಯಾ ರೀತಿ ಬೆಳೆಯಬೇಕಾ ಎಂದು ನಿರ್ಧರಿಸುವ ಕಾಲ ಎಂದಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 14: ಆರ್ ಅಂಡ್ ಡಿ ಕ್ಷೇತ್ರಕ್ಕೆ ಹೂಡಿಕೆ ಮಾಡುವುದು ಬಹಳ ಮುಖ್ಯ. ಭಾರತದ ಭವಿಷ್ಯವನ್ನು ಸುಭದ್ರಗೊಳಿಸಬೇಕಾದರೆ ಯುವಕರಿಗೆ ಕೌಶಲ್ಯ ಹೆಚ್ಚಿಸಬೇಕು. ಅದಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಾಡುವುದೂ ಬಹಳ ಮುಖ್ಯ ಎಂದು ಕೇರಳದ 16 ವರ್ಷದ ರೌಲ್ ಜಾನ್ ಅಜು (Raul John Aju) ಸಲಹೆ ನೀಡಿದ್ದಾರೆ. ಕೊಯಮತ್ತೂರಿನಲ್ಲಿ ಇತ್ತೀಚೆಗೆ ನಡೆದ ಖಾಸಗಿ ವಾಹಿನಿಯೊಂದರ ದಕ್ಷಿಣ ಕಾಂಕ್ಲೇವ್ 2025 (India Today Conclave South 2025) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರೌಲ್ ಜಾನ್, ಇವತ್ತಿನ ಶಿಕ್ಷಣ ವ್ಯವಸ್ಥೆ ವಿಚಾರದಲ್ಲಿ ಕೆಲ ಅಮೂಲ್ಯ ಮಾತುಗಳನ್ನಾಡಿದ್ದಾರೆ. ಇವತ್ತಿನ ಯುವಜನರು ಕೌಶಲ್ಯ ಮತ್ತು ಸೃಜನಶೀಲತೆಗೆ ಆದ್ಯತೆ ಕೊಡಬೇಕೇ ಹೊರತು ಅಂಕಗಳು ಮತ್ತು ಪದವಿಗಳಿಗಲ್ಲ ಎಂದಿದ್ದಾರೆ. ಸ್ವಂತ ಕಲಿಕೆ (self learning) ಮತ್ತು ಪ್ರಾಯೋಗಿಕ ಅನುಭವದ ಬಳಕೆ ಎಷ್ಟು ಮುಖ್ಯ ಎಂಬುದನ್ನೂ ತಿಳಿಸಿದ್ದಾರೆ.
16 ವರ್ಷದ ರೌಲ್ ಜಾನ್ ಅಜು ಅವರು ಎಐ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಪೋರ. ಆರ್ಮ್ ಟೆಕ್ನಾಲಜೀಸ್ ಎನ್ನುವ ಎಐ ಶಕ್ತ ಕಂಪನಿಯೊಂದರ ಸ್ಥಾಪಕ. ತಮ್ಮ ಸ್ವಂತ ತಂದೆಯನ್ನೇ ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿದ್ದಾರೆ. ಪ್ರಾಜೆಕ್ಟ್ ಜಸ್ಟ್ಈಸ್ ಯೋಜನೆಯಲ್ಲಿ ಈತ ದುಬೈ ಮತ್ತು ಕೇರಳ ಸರ್ಕಾರಗಳ ಜೊತೆ ಸಹಭಾಗಿತ್ವದಲ್ಲಿ ನೆರವಾಗುತ್ತಿದ್ದಾರೆ. ತಮ್ಮ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ ಸಾಮಾಜಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತೊಲಗಿಸಲು ಯತ್ನಿಸುವುದು ಈ ಪ್ರಾಜೆಕ್ಟ್ನ ಉದ್ದೇಶ.
ಇದನ್ನೂ ಓದಿ: ಮುಂದಿನ ಅನೇಕ ದಶಕಗಳು ಭಾರತದ ಪಾರಮ್ಯಕ್ಕೆ ಅವಕಾಶ: ಮಾರುತಿ ಸುಜುಕಿ ಸಿಇಒ
ಮಲೇಷ್ಯಾವಾ ಅಥವಾ ಸೌತ್ ಕೊರಿಯಾವಾ?
ಭಾರತ ಸದ್ಯ ಒಂದು ಕವಲು ದಾರಿಯಲ್ಲಿ ಇದೆ ಎಂದು ಹೇಳುವ ರೌಲ್ ಜಾನ್ ಅಜು, ದೇಶದ ಮುಂದಿನ ದಾರಿ ಯಾವುದು ಎಂಬುದನ್ನು ನಿರ್ಧರಿಸುವ ಕಾಲ ಎಂದಿದ್ದಾರೆ.
‘ಮ್ಯಾನುಫ್ಯಾಕ್ಚರಿಂಗ್ ಮೇಲೆ ಗಮನ ಹರಿಸಿ ಮಲೇಷ್ಯಾ ರೀತಿ ನಿಶ್ಚಲ ಆರ್ಥಿಕತೆಯಂತೆ ಬೆಳೆಯಬಹುದು. ಅಥವಾ ದಕ್ಷಿಣ ಕೊರಿಯಾ ರೀತಿ ಇನ್ನೋವೇಶನ್ ಮೂಲಕ ಬೆಳೆಯಬಹುದು’ ಎಂದು 16 ವರ್ಷದ ಬಾಲಕ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಉಕ್ರೇನ್-ರಷ್ಯಾ ಯುದ್ಧದಿಂದ ಹೆಚ್ಚು ಲಾಭ ಮಾಡುತ್ತಿರೋದು ಭಾರತವಲ್ಲ, ಚೀನಾವಲ್ಲ; ಅಮೆರಿಕಕ್ಕೆ ಹಣದ ಹೊಳೆ?
ರೌಲ್ ಅವರು 6ನೇ ವಯಸ್ಸಿನಿಂದಲೇ ಎಐ ಅನುಭವ ಗಳಿಸಲು ಆರಂಭಿಸಿದ್ದರು. ವಿಬೋಟ್ ಎನ್ನುವ ತನ್ನದೇ ತದ್ರೂಪಿಯನ್ನು ಸೃಷ್ಟಿಸಿರುವ ರೌಲ್, ಯೂಟ್ಯೂಬ್ ಚಾನಲ್ನಲ್ಲಿ ಈ ರೋಬೋ ಬಳಸಿ ವಿವರಣೆ ನೀಡುತ್ತಾರೆ. ನಿತ್ಯ ಜೀವನದಲ್ಲಿ ಎಐ ಬಳಕೆ ಹೇಗೆ ಎಂಬಿತ್ಯಾದಿ ವಿಚಾರಗಳನ್ನು ಅವರು ಯೂಟ್ಯೂಬ್ ವಿಡಿಯೋಗಳಲ್ಲಿ ನೀಡುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




