
ರಷ್ಯಾ (Russia) ಪಡೆಯ ದಾಳಿಯ ಅಬ್ಬರಕ್ಕೆ ಉಕ್ರೇನ್ (Ukraine) ನಲುಗಿಹೋಗಿದೆ. ನಾಗರಿಕರು ದೇಶವನ್ನು ತೊರೆದು ಹೊರಡಲು ತಯಾರಾಗಿದ್ದಾರೆ. ಈಗಾಗಲೇ ನೂರಾರು, ಸೈನಿಕರು, ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಹಗಲು ರಾತ್ರಿ ಜೀವಭಯದಲ್ಲಿ ಬದುಕುತ್ತಿದ್ದಾರೆ. ಉಕ್ರೇನ್ ರಷ್ಯಾ ಯುದ್ಧದಿಂದ (Russia-Ukraine War) ಕೇವಲ ಅವರೆಡು ರಾಷ್ಟ್ರಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಹೊಡೆತ ಬಿದ್ದಿದೆ. ಉಕ್ರೇನ್ ದೇಶವು ಜಗತ್ತಿನ ಪುಟ್ಟ ರಾಷ್ಟರಗಳಲ್ಲಿ ಒಂದಾಗಿದ್ದರೂ ವಿವಿಧ ದೇಶಗಳಿಗೆ ಗೋದಿ, ಜೋಳ, ಸೂರ್ಯಕಾಂತಿ ಬೀಜ, ಬಾರ್ಲಿ, ಸಾಸಿವೆ ಹಾಗೂ ಸೋಯಾಬೀನ್ಗಳ ರಪ್ತಿನಲ್ಲಿ ಟಾಪ್ 10ನಲ್ಲಿದೆ. ಈಗ ಉಂಟಾಗುತ್ತಿರುವ ಬಿಕ್ಕಟ್ಟಿನಿಂದಾಗಿ ಉಕ್ರೇನ್ನಿಂದ ರಪ್ತಾಗುವ ಈ ಎಲ್ಲಾ ಪದಾರ್ಥಗಳಲ್ಲಿ ವ್ಯತ್ಯವಾಗುತ್ತದೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳಿ ಆರ್ಥಿಕತೆಗೂ ದೊಡ್ಡ ಪೆಟ್ಟು ಬೀಳಲಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ.
ಉಕ್ರೇನ್ ಸೂರ್ಯಕಾಂತಿ ಬೀಜಗಳನ್ನು ರಫ್ತು ಮಾಡುವ ಜಗತ್ತಿನ ಅತಿದೊಡ್ಡ ದೇಶವಾಗಿದೆ. ಇನ್ನು ಜೋಳ ಮತ್ತು ಬಾರ್ಲಿಯನ್ನು ರಫ್ತು ಮಾಡುವುದರಲ್ಲಿ 6 ನೇ ಅತಿದೊಡ್ಡ ದೇಶವಾಗಿದ್ದು, ಸಾಸಿವೆಯನ್ನು ಪೂರೈಸುವ 7 ನೇ ಅತಿದೊಡ್ಡ ಮತ್ತು ಗೋದಿ ಮತ್ತು ಸೋಯಾಬಿನ್ಪದಾರ್ಥಗಳನ್ನು ಪೂರೈಕೆ ಮಾಡುವ 9 ನೇ ಅತಿದೊಡ್ಡ ರಾಷ್ಟ್ರವಾಗಿದೆ. ವರದಿಯ ಪ್ರಕಾರ ರಷ್ಯಾ ಸುಮಾರು 170 ಲಕ್ಷ ಟನ್ಗಳಷ್ಟು ಸೂರ್ಯಕಾಂತಿ ಉತ್ಪನ್ನವನ್ನು ವಿವಿಧ ದೇಶಗಳಿಗೆ ಪೂರೈಕೆ ಮಾಡುತ್ತದೆ. ರಷ್ಯಾ ದಾಳಿಯಿಂದ ಉಕ್ರೇನ್ನ ವಿದೇಶಿ ರಫ್ತು ಸಂಪೂರ್ಣ ಹದಗೆಟ್ಟಿದೆ. ಈಗಾಗಲೇ ಹಲವು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಉಕ್ರೇನ್ನಿಂದ ರಫ್ತಾಗುತ್ತಿದ್ದ ಪದಾರ್ಥಗಳ ಬೆಲೆ ಗಗನಕ್ಕೇರುವುದರಲ್ಲಿ ಅನುಮಾನವಿಲ್ಲ ಎನ್ನುವಂತಾಗಿದೆ.
ಮುಖ್ಯವಾಗಿ ಸೂರ್ಯಕಾಂತಿ ಬೀಜ ಮತ್ತು ಸೂರ್ಯಕಾಂತಿ ಎಣ್ಣೆಗೆ ಭಾರತ ಉಕ್ರೇನ್ ದೇಶವನ್ನೇ ಅವಲಂಭಿಸಿದೆ. ಒಂದು ವರದಿಯ ಪ್ರಕಾರ ಶೆ.70ರಷ್ಟು ಸೂರ್ಯಕಾಂತಿ ಉತ್ಪನ್ನಗಳನ್ನು ಭಾರತಕ್ಕೆ ಉಕ್ರೇನ್ನಿಂದಲೇ ಪೂರೈಕೆಯಾಗುತ್ತದೆ. ರಷ್ಯಾ ಕೂಡ ಸೂರ್ಯಕಾಂತಿಯನ್ನು ಬೆಳೆಯುತ್ತದೆ. ಆದರೆ ಶೇ. 10ರಷ್ಟು ಮಾತ್ರ ಭಾರತಕ್ಕೆ ಪೂರೈಕೆಯಾಗುತ್ತದೆ. ಭಾರತಕ್ಕೆ ಪ್ರತೀ ತಿಂಗಳಿಗೆ ಸುಮಾರು 2ಲಕ್ಷ ಟನ್ಗಳಷ್ಟು ಸೂರ್ಯಕಾಂತಿ ಎಣ್ಣೆ ಉಕ್ರೇನ್ನಿಂದ ಫೂರೈಕೆಯಾಗುತ್ತದೆ. ಆದರೆ ಈಗ ಆ ಪೂರೈಕೆಗೆ ಬಹುದೊಡ್ಟ ಪೆಟ್ಟು ಬಿದ್ದಿದೆ. ಭಾರತೀಯ ಮಾರುಕಟ್ಟೆಗೆ ಇದರ ಬಿಸಿ ನೇರವಾಗಿ ತಟ್ಟಿದೆ. ಈ ಬಗ್ಗೆ ವಿಶ್ವ ಆಹಾರ ಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ. ಉಕ್ರೇನ್ನ ಬಿಕ್ಕಟ್ಟಿನಿಂದಾಗಿ ನೇರವಾಗಿ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತದೆ. ಇದನ್ನು ಸರಿ ಪಡಿಸುವ ಬಗೆಯ ಬಗ್ಗೆ ಆತಂಕವ್ಯಕ್ತಪಡಿಸಿ ಟ್ವೀಟ್ ಮಾಡಿದೆ.
ಉಕ್ರೇನ್ ವಿದ್ಯಾಭ್ಯಾಸಕ್ಕೂ ಹೆಸರುವಾಸಿ:
ಉಕ್ರೇನ್ ಪುಟ್ಟ ದೇಶವಾದರೂ ಸಮೃದ್ಧ ದೇಶವಾಗಿದೆ. ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಮಾತ್ರವಲ್ಲದೆ ಶಿಕ್ಷಣದಲ್ಲಿಯೂ ಮುಂದೆವರೆದ ರಾಷ್ಟ್ರ. ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನಗಳ ಆಧುನಿಕತೆಯನ್ನು ಅಳವಡಿಸಿಕೊಂಡಿರುವ ದೇಶ. ಹೀಗಾಗಿಯೇ ಭಾರತ ಸೇರಿದಂತೆ ಹಲವು ರಾಷ್ಟರಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಅರಸಿಕೊಂಡು ಉಕ್ರೇನ್ಗೆ ತೆರಳುತ್ತಾರೆ. ರಾಜಧಾನಿ ಕೈವ್ನಿಂದ ಸುಮಾರು 480 ಕಿಮೀ ದೂರದಲ್ಲಿರುವ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯವು ದೇಶದಲ್ಲಿ ಹೆಚ್ಚು ಬೇಡಿಕೆಯಿರುವ ವೈದ್ಯಕೀಯ ಶಾಲೆಯಾಗಿದೆ.
Published On - 11:21 am, Sat, 26 February 22