Ukraine Crisis: ಉಕ್ರೇನ್ ನಿರ್ಮಿತ ವಿಶ್ವದ ಬೃಹತ್​ ಸರಕು ಸಾಗಣೆ ವಿಮಾನ ಸುಟ್ಟು ಭಸ್ಮ

| Updated By: ganapathi bhat

Updated on: Feb 27, 2022 | 11:15 PM

ಇತ್ತ ರಷ್ಯಾ-ಉಕ್ರೇನ್‌ ನಿಯೋಗದಿಂದ ಶಾಂತಿ ಮಾತುಕತೆ ಆರಂಭವಾಗಿದೆ. ಗೋಮೆಲ್ ಪ್ರದೇಶದಲ್ಲಿ ಶಾಂತಿ ಮಾತುಕತೆ ನಡೆಯುತ್ತಿದೆ. ಉಕ್ರೇನ್‌ ಹಾಗೂ ಬೆಲಾರಸ್​​ನ ಗಡಿ ಪ್ರದೇಶ ಗೋಮೆಲ್ ಎಂಬಲ್ಲಿ ಯುದ್ಧ ಆರಂಭ ಬಳಿಕ ಮೊದಲ ಬಾರಿಗೆ ಶಾಂತಿ ಮಾತುಕತೆ ನಡೆಸಲಾಗುತ್ತಿದೆ.

Ukraine Crisis: ಉಕ್ರೇನ್ ನಿರ್ಮಿತ ವಿಶ್ವದ ಬೃಹತ್​ ಸರಕು ಸಾಗಣೆ ವಿಮಾನ ಸುಟ್ಟು ಭಸ್ಮ
Antonove 225
Follow us on

ಉಕ್ರೇನ್: ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದ್ದು ರಷ್ಯಾದ ಶೆಲ್ ದಾಳಿಯಲ್ಲಿ ಉಕ್ರೇನ್ ನಿರ್ಮಿತ ವಿಶ್ವದ ಬೃಹತ್​ ಸರಕು ಸಾಗಣೆ ವಿಮಾನ ಸುಟ್ಟು ಭಸ್ಮವಾಗಿದೆ. ಉಕ್ರೇನ್​ ನಿರ್ಮಿತ ಆಂಟೊನೊವ್-225 ಸುಟ್ಟು ಭಸ್ಮವಾಗಿದೆ. ವಿಶ್ವದ ಅತಿ ದೊಡ್ಡ ಸರಕು ಸಾಗಣೆ ವಿಮಾನ ರಷ್ಯಾ ದಾಳಿಗೆ ಭಸ್ಮವಾಗಿರುವ ಬಗ್ಗೆ ಉಕ್ರೇನ್ ತಿಳಿಸಿದೆ. ನಾವು ಈ ವಿಮಾನವನ್ನು ಮತ್ತೆ ತಯಾರಿಸುತ್ತೇವೆ. ನಾವು ಸದೃಢ, ಸ್ವತಂತ್ರ ಮತ್ತು ಪ್ರಜಾಪ್ರಸತ್ತಾತ್ಮಕ ಉಕ್ರೇನ್​ ಕನಸನ್ನು ನನಸು ಮಾಡುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.

ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ ಸೇನೆ ಬಗ್ಗೆ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ನ್ಯಾಟೋ ಮುಖ್ಯಸ್ಥರು ಕಿಡಿ​ಕಾರಿದ್ದಾರೆ. ನ್ಯೂಕ್ಲೀಯರ್​ ಅಲರ್ಟ್ ಬೇಜವಾಬ್ದಾರಿತನದಿಂದ ಕೂಡಿದೆ. ಅಪಾಯಕಾರಿ ಹಾಗೂ ಬೇಜವಾಬ್ದಾರಿತನದಿಂದ ಕೂಡಿದೆ. ಇದು ಬೇಜವಾಬ್ದಾರಿತನದ ವಾರ್ನಿಂಗ್ ಎಂದು ನ್ಯಾಟೋ ಮುಖ್ಯಸ್ಥ ಹೇಳಿದ್ದಾರೆ. ಪರಮಾಣು ಪ್ರತಿಬಂಧಕ ಪಡೆಗೆ ಪುಟಿನ್ ಅಲರ್ಟ್​ ಹಿನ್ನೆಲೆ ರಷ್ಯಾ ಅಧ್ಯಕ್ಷ ಪುಟಿನ್​ ವಿರುದ್ಧ ಅಮೆರಿಕ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬೆದರಿಕೆ ತಂತ್ರಗಾರಿಕೆ ಹೆಣೆಯುತ್ತಿದೆ ಎಂದು US ಆರೋಪ ಮಾಡಿದೆ.

ಉಕ್ರೇನ್​ಗೆ ಯುರೋಪಿಯನ್​ ಒಕ್ಕೂಟದಿಂದ ನೆರವು ಘೋಷಿಸಲಾಗಿದೆ. ಶಸ್ತ್ರಾಸ್ತ್ರ ಖರೀದಿಗಾಗಿ ಆರ್ಥಿಕ ನೆರವು ಘೋಷಣೆ ಮಾಡಲಾಗಿದೆ. ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ಹಿನ್ನೆಲೆ ರಷ್ಯಾದ ವಿಮಾನಗಳಿಗೆ ಯುರೋಪ್​ ಒಕ್ಕೂಟ ನಿರ್ಬಂಧ ವಿಧಿಸಿದೆ. ಈ ಮಧ್ಯೆ, ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ನಾಳೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ನಡೆಸಲಿದೆ ಎಂದು ಮಾಹಿತಿ ಲಭಿಸಿದೆ.

ಇತ್ತ ರಷ್ಯಾ-ಉಕ್ರೇನ್‌ ನಿಯೋಗದಿಂದ ಶಾಂತಿ ಮಾತುಕತೆ ಆರಂಭವಾಗಿದೆ. ಗೋಮೆಲ್ ಪ್ರದೇಶದಲ್ಲಿ ಶಾಂತಿ ಮಾತುಕತೆ ನಡೆಯುತ್ತಿದೆ. ಉಕ್ರೇನ್‌ ಹಾಗೂ ಬೆಲಾರಸ್​​ನ ಗಡಿ ಪ್ರದೇಶ ಗೋಮೆಲ್ ಎಂಬಲ್ಲಿ ಯುದ್ಧ ಆರಂಭ ಬಳಿಕ ಮೊದಲ ಬಾರಿಗೆ ಶಾಂತಿ ಮಾತುಕತೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Ukraine Crisis: ಉಕ್ರೇನ್‌ನಿಂದ ಕನ್ನಡಿಗರ ಏರ್‌ಲಿಫ್ಟ್; ರಾತ್ರಿ 8 ಗಂಟೆಯವರೆಗೆ 30 ಕನ್ನಡಿಗ ವಿದ್ಯಾರ್ಥಿಗಳ ಆಗಮನ

ಇದನ್ನೂ ಓದಿ: Indians in Ukraine: ಆಶ್ರಯ ಕೊಟ್ಟ ಮನೆ ಮಾಲೀಕರನ್ನು ಕಾಪಾಡಲೆಂದು ಉಕ್ರೇನ್​ನಲ್ಲೇ ಉಳಿದ ಭಾರತದ ಹುಡುಗಿ