ಕೀವ್: ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿ (Ukraine) ಕನಿಷ್ಠ 816 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಮಾರ್ಚ್ 17 ರವರೆಗೆ ಉಕ್ರೇನ್‌ನಲ್ಲಿ ಕನಿಷ್ಠ 816 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,333 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವ ಸಂಸ್ಥೆ (United Nations) ಮಾಹಿತಿ ನೀಡಿದೆ. ಭಾರೀ ಫಿರಂಗಿ ಮತ್ತು ಶೆಲ್‌ಗಳಂತಹ ಸ್ಫೋಟಕ ಶಸ್ತ್ರಾಸ್ತ್ರಗಳಿಂದ, ಕ್ಷಿಪಣಿ ಮತ್ತು ವಾಯು ದಾಳಿಗಳಿಂದಾಗಿ ಹೆಚ್ಚಿನ ಹಾನಿಯಾಗಿದೆ ಎಂದು ತಿಳಿಸಿದೆ. ಮರಿಪೋಲ್ನಂತಹ ಅತಿಯಾಗಿ ಹಾನಿಗೊಳಗಾದ ನಗರಗಳಿಂದ ಅಪಘಾತದ ವರದಿಗಳನ್ನು ಪರಿಶೀಲಿಸಲು ಇನ್ನೂ ಸಾಧ್ಯವಾಗದ ಕಾರಣ ಯುದ್ಧದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ 60 ನಾಗರಿಕರು ಸೇರಿದಂತೆ ಉಕ್ರೇನ್‌ನ ಕೀವ್‌ನಲ್ಲಿ 222 ಮಂದಿ ಕೊಲ್ಲಲ್ಪಟ್ಟಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ರಾಜಧಾನಿ ಕೀವ್ ಒಂದರಲ್ಲೇ 60 ನಾಗರಿಕರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 222 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. 241 ನಾಗರಿಕರು ಸೇರಿದಂತೆ ಇನ್ನೂ 889 ಜನರು ಗಾಯಗೊಂಡಿದ್ದಾರೆ ಎಂದು ಕೀವ್ ನಗರಾಡಳಿತವು ಹೇಳಿಕೆಯಲ್ಲಿ ತಿಳಿಸಿದೆ.
Advisory to all Indian Nationals in Ukraine.@MEAIndia @PIB_India @DDNewslive @IndiainUkraine @IndiainPoland @PTI_News pic.twitter.com/oIeOLXb2Cb
— India in Ukraine (@IndiainUkraine) March 18, 2022
ಬಾಂಬ್ ದಾಳಿಗೊಳಗಾದ ಮರಿಪೋಲ್ ಥಿಯೇಟರ್‌ನಿಂದ 130 ಜನರನ್ನು ರಕ್ಷಿಸಲಾಗಿದೆ ಎಂದು ಉಕ್ರೇನ್ ಹೇಳಿದೆ. ರಷ್ಯಾದ ವೈಮಾನಿಕ ದಾಳಿಯಿಂದ ಮರಿಪೋಲ್ನ ಥಿಯೇಟರ್‌ನ ಅವಶೇಷಗಳಿಂದ 130 ಜನರನ್ನು ರಕ್ಷಿಸಲಾಗಿದೆ ಎಂದು ಉಕ್ರೇನಿಯನ್ ಮಾನವ ಹಕ್ಕುಗಳ ಓಂಬುಡ್ಸ್ವುಮನ್ ಲ್ಯುಡ್ಮಿಲಾ ಡೆನಿಸೋವಾ ಹೇಳಿದ್ದಾರೆ. ಉಕ್ರೇನಿಯನ್ ಅಧಿಕಾರಿಗಳ ಪ್ರಕಾರ, ಕಟ್ಟಡಕ್ಕೆ ಅಪ್ಪಳಿಸುವ ಮೊದಲು ಅನೇಕ ಜನರು ನೆಲದಡಿಯಲ್ಲಿ ಆಶ್ರಯ ಪಡೆದಿದ್ದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಉಕ್ರೇನ್ ಯುದ್ಧದ ಕುರಿತು ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಚೀನಾದ ಕ್ಸಿ ಜಿನ್‌ಪಿಂಗ್ ಇಂದು ಮಾತುಕತೆ ನಡೆಸಿದ್ದಾರೆ. ಶ್ವೇತಭವನವು ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣಕ್ಕೆ ಬೀಜಿಂಗ್ ಮಿಲಿಟರಿ ಅಥವಾ ಆರ್ಥಿಕ ನೆರವು ನೀಡುವುದನ್ನು ತಡೆಯಲು ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: Russia- Ukraine Crisis: ರಷ್ಯಾದಿಂದ ಕೈಕೊಡವಿ ಎದ್ದು ಬರೋದು ಈ ಬ್ರ್ಯಾಂಡ್ಗಳಿಗೆ ಸಲೀಸಿಲ್ಲ ಏಕೆ ಗೊತ್ತಾ?
Published On - 8:41 pm, Fri, 18 March 22