AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತಾಷ ಪುಟಿನ್ ತಮ್ಮ ಸೇನೆಯ ಉನ್ನತ ಅಧಿಕಾರಿಗಳ ಮೇಲೆ ರಾಜದ್ರೋಹದ ಆರೋಪ ಹೊರಿಸಿ ಬಂಧಿಸುತ್ತಿದ್ದಾರೆ!

ತನ್ನ ಸಾವಿರಾರು ಸೈನಿಕರ ಸಾವು ಮತ್ತು ಉಕ್ರೇನನ್ನು ವಶಪಡಿಸಿಕೊಳ್ಳಲು ಅಗುತ್ತಿರುವ ವಿಳಂಬದಿಂದ ಭಯಂಕರ ಕೋಪಗೊಂಡಿರುವ ಪುಟಿನ್ ಈ ವಾರ ತನ್ನ ಸೇನೆಯಲ್ಲಿರಬಹುದಾದ ದ್ರೋಹಿಗಳ ವಿರುದ್ಧ ಕೆಂಡಕಾರಿದ್ದು ರಷ್ಯನ್ ಟಿವಿಗಳಲ್ಲಿ ಬಿತ್ತರಗೊಂಡಿತ್ತು.

ಹತಾಷ ಪುಟಿನ್ ತಮ್ಮ ಸೇನೆಯ ಉನ್ನತ ಅಧಿಕಾರಿಗಳ ಮೇಲೆ ರಾಜದ್ರೋಹದ ಆರೋಪ ಹೊರಿಸಿ ಬಂಧಿಸುತ್ತಿದ್ದಾರೆ!
ವ್ಲಾದಿಮಿರ್ ಪುಟಿನ್
Follow us
TV9 Web
| Updated By: shivaprasad.hs

Updated on: Mar 19, 2022 | 7:15 AM

ತನ್ನ ಸೇನೆಯನ್ನು ಸಂಭಾವ್ಯ ದ್ರೋಹಿಗಳಿಂದ ಮುಕ್ತಮಾಡಲು ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅಣಿಯಾಗಿರುವ ಹಿನ್ನೆಲೆಯಲ್ಲಿ ಒಬ್ಬ ಉನ್ನತ ಸೇನಾಧಿಕಾರಿಯನ್ನು ಈ ವಾರದಲ್ಲಿ ಬಂಧಿಸಿರುವ ಮಾಹಿತಿ ಲಭ್ಯವಾಗಿದೆ. ಬೆಲ್ಲಿಂಗ್‌ಕ್ಯಾಟ್ (Belling cat) ಹೆಸರಿನ ತನಿಖಾ ಪತ್ರಿಕೋದ್ಯಮದ ಗುಂಪೊಂದು ಉಲ್ಲೇಖಿಸಿರುವ ಮೂಲಗಳ ಪ್ರಕಾರ, ರಾಷ್ಟ್ರೀಯ ಸಿಬ್ಬಂದಿಯ ಉಪ-ಮುಖ್ಯಸ್ಥ ಜನರಲ್ ರೋಮನ್ ಗವ್ರಿಲೋವ್ (Roman Guvrilov) ಅವರನ್ನು ಎಫ್‌ಎಸ್‌ಬಿ ರಾಜ್ಯ ಭದ್ರತಾ ಸೇವೆ ಮಿಲಿಟರಿ ಮತ್ತು ಗುಪ್ತಚರ ಮುಖ್ಯಸ್ಥರು ಬಂಧಿಸಿದ್ದಾರೆ. ಫೆಬ್ರವರಿ 24 ರಂದು ಉಕ್ರೇನ್ ಮೇಲೆ ಮಾಸ್ಕೋ ಆಕ್ರಮಣ ಪ್ರಾರಂಭಿಸಿದಾಗಿನಿಂದ ರಷ್ಯನ್ ಪಡೆಗಳು ವೊಲೊದಿಮಿರ್ ಜೆಲೆನ್ಸ್ಕಿಯ ಪಡೆಗಳಿಂದ ತೀವ್ರ ಸ್ವರೂಪದ ಪ್ರತಿರೋಧ ಎದುರಿಸುತ್ತಿವೆ. ಯುಎಸ್ ಏಜೆನ್ಸಿಗಳು ನೀಡಿರುವ ಮಾಹಿತಿಯ ಪ್ರಕಾರ ಇದುವರೆಗೆ ಕನಿಷ್ಟ 7,000 ರಷ್ಯನ್ ಯೋಧರು ಯುದ್ಧದಲ್ಲಿ ಮೃತರಾಗಿದ್ದಾರೆ. ಪ್ರಸಕ್ತ ವಾರದ ಆರಂಭದಲ್ಲಿ ವೊಲೊದಿಮಿರ್ ಜೆಲೆನ್ಸ್ಕಿ ನೀಡಿದ ಹೇಳಿಕೆಯ ಪ್ರಕಾರ 1,300 ಉಕ್ರೇನಿಯನ್ ಸೈನಿಕರು ಹೋರಾಡುತ್ತಾ ಹತರಾಗಿದ್ದಾರೆ.

ತನ್ನ ಸಾವಿರಾರು ಸೈನಿಕರ ಸಾವು ಮತ್ತು ಉಕ್ರೇನನ್ನು ವಶಪಡಿಸಿಕೊಳ್ಳಲು ಅಗುತ್ತಿರುವ ವಿಳಂಬದಿಂದ ಭಯಂಕರ ಕೋಪಗೊಂಡಿರುವ ಪುಟಿನ್ ಈ ವಾರ ತನ್ನ ಸೇನೆಯಲ್ಲಿರಬಹುದಾದ ದ್ರೋಹಿಗಳ ವಿರುದ್ಧ ಕೆಂಡಕಾರಿದ್ದು ರಷ್ಯನ್ ಟಿವಿಗಳಲ್ಲಿ ಬಿತ್ತರಗೊಂಡಿತ್ತು.

ತಮ್ಮ ಸಂಪುಟದ ಸದಸ್ಯರೊಂದಿಗೆ ಅನ್ಲೈನ್ ಸಭೆಯಲ್ಲಿ ಮಾತಾಡಿದ ಪುಟಿನ್, ‘ನಿಜವಾದ ರಾಷ್ಟ್ರಪ್ರೇಮಿಗಳು ಮತ್ತು ದ್ರೋಹಿಗಳು ಯಾರು ಅನ್ನುವುದನ್ನು ರಷ್ಯನ್ ಜನತೆ ಕಂಡುಹಿಡಿಯಲು ಶಕ್ತವಾಗಿದೆ. ಬಾಯಲ್ಲಿ ನೊಣವೊಂದು ಹೊಕ್ಕಾಗ ಥೂ ಅಂತ ಅದನ್ನು ಉಗಿದುಬಿಡುವ ಹಾಗೆ ಅವರು ಈ ದ್ರೋಹಿಗಳನ್ನು ದೂರ ಉಗಿದು ಬಿಡಬಲ್ಲರು,’ ಎಂದು ಹೇಳಿದ್ದರು.

‘ಒಂದು ಸಹಜ ಮತ್ತು ಅವಶ್ಯಕವಾಗಿರುವ ಸಮಾಜದ ಸ್ವಯಂ-ಶುದ್ಧೀಕರಣ ಪ್ರಕ್ರಿಯೆಯು ನಮ್ಮ ದೇಶವನ್ನು ಬಲಪಡಿಸಲಿದೆ ಎಂಬ ಅಂಶವನ್ನು ನಾನು ಮನಗಂಡಿದ್ದೇನೆ,’ ಎಂದು ಪುಟಿನ್ ಹೇಳಿದ್ದರು.

ಪುಟಿನ್ ಅವರ ಭಾಷೆ ದುರಭಿಮಾನವನ್ನು ಸೂಚಿಸುತ್ತದೆ ಮತ್ತು ಅದು ಅತ್ಯಂತ ಅಪಾಯಕಾರಿಯಾಗಿದೆಯೆಂದು ಯುನೈಟೆಡ್ ಕಿಂಗ್ಡಮ್ ಸಶಸ್ತ್ರ ಪಡೆಗಳ ಸಚಿವ ಜೇಮ್ಸ್ ಹೀಪ್ಪೀ ಹೇಳಿದ್ದಾರೆ.

‘ಪುಟಿನ್ ಹತಾಷರಾಗಿದ್ದಾರೆ ಮತ್ತು ಈ ಸ್ಥಿತಿಯೇ ಅವರಿಗೆ ಹುಚ್ಚು ನಿರ್ಣಯಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಗೆ ದೂಡಬಹುದು. ಅದು ಬಹಳ ಅಪಾಯಕಾರಿಯಾಗಲಿದೆ ಎಂದು ನಾವು ಭಾವಿಸುತ್ತೇವೆ,’ ಎಂದು ಟೆಲಿಗ್ರಾಫ್ ಪತ್ರಿಕೆಗೆ ಗುರುವಾರ ನೀಡಿರುವ ಹೇಳಿಕೆಯಲ್ಲಿ ಹೀಪ್ಪೀ ತಿಳಿಸಿದ್ದಾರೆ.

‘ಅವರ ಸದ್ಯದ ಮನಸ್ಥಿತಿ ಹಾಗೂ ಮುಂದೆ ಏನು ಮಾಡಬಲ್ಲರು ಎಂಬ ಯೋಚನೆ ನನ್ನಲ್ಲಿ ಕಳವಳವನ್ನು ಸೃಷ್ಟಿಸುತ್ತದೆ,’ ಎಂದು ಅವರು ಹೇಳಿದ್ದಾರೆ.

ಕ್ರೆಮ್ಲಿನ್ ನಲ್ಲಿ ಕಂಡುಬರುತ್ತಿರುವ ಬೆಳವಣಿಗೆಗಳು ರಷ್ಯಾದ ಉನ್ನತ ಮಿಲಿಟರಿ ವ್ಯವಸ್ಥೆಯಲ್ಲಿ ಉಂಟಾಗಿರುವ ಅವಿಶ್ವಾಸದ ಪ್ರತೀಕವಾಗಿವೆ ಎಂದು ಹೀಪ್ಪೀ ಹೇಳಿದರು.

ಬ್ರಿಟಿಷ್ ಗುಪ್ತಚರದ ವರದಿಯ ಪ್ರಕಾರ ಉಕ್ರೇನಿನ ಪಶ್ಚಿಮ ಭಾಗಕ್ಕಿರುವ ಲವೀವ್ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿಯನ್ನು ವಿಸ್ತರಿಸಿದೆಯಾದರೂ ಪುಟಿನ್ ಆರಂಭಿಸಿದ ಸೇನಾ ಕಾರ್ಯಾಚರಣೆ ಈ ವಾರ ನಗಣ್ಯವೆನಿಸುವಷ್ಟು ಪ್ರಗತಿ ಸಾಧಿಸಿದೆ.

ಶುಕ್ರವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹೀಪ್ಪೀ ಅವರು ಉಕ್ರೇನ್‌ನಲ್ಲಿ ಬೇರೆಡೆಯಿಂದ ಆಶ್ರಯ ಪಡೆದಿರುವ ನಗರದ ಮೇಲೆ ರಷ್ಯಾ ಮುಂಜಾನೆ ದಾಳಿ ಮಾಡುವ ಮೂಲಕ ತನ್ನ ಆಕ್ರಮಣವನ್ನು ವಿಸ್ತರಿಸುತ್ತಿದೆ ಎಂದು ಹೇಳಿದರು.

ರಷ್ಯಾದ ಹಲವಾರು ಕ್ಷಿಪಣಿಗಳು ಲವೀವ್ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಮಿಲಿಟರಿ ವಿಮಾನಗಳನ್ನು ದುರಸ್ತಿ ಮಾಡುವ ಕೇಂದ್ರದ ಮೇಲೆ ದಾಳಿ ನಡೆಸಿ ಅದನ್ನು ಹಾಳು ಮಾಡಿವೆ ಮತ್ತು ಮತ್ತು ಬಸ್ ರಿಪೇರಿ ಮಾಡುವ ಫೆಸಿಲಿಟಿಯೊಂದನ್ನು ಧ್ವಂಸಗೊಳಿಸಿವೆ ಎಂದು ನಗರದ ಮೇಯರ್ ಆಂಡ್ರಿ ಸಡೋವಿ ಹೇಳಿದರು.

ಪ್ರಾಣ ರಕ್ಷಣೆಗಾಗಿ ಉಕ್ರೇನ್ನಿಂದ ನೆರೆ ರಾಷ್ಟ್ರಗಳಿಗೆ ಪಲಾಯನ ಮಾಡಿದವರ ಸಂಖ್ಯೆ 34 ಲಕ್ಷ ದಾಟುತ್ತಿದ್ದಂತೆ ಶುಕ್ರವಾವರದಂದು ರಾಜಧಾನಿ ಕೀವ್ ಮೇಲೂ ಅವ್ಯಾಹತವಾಗಿ ಶೆಲ್ಲಿಂಗ್ ನಡೆಯಿತು.

ಇದನ್ನೂ ಓದಿ:   Ukraine Crisis: ಯುದ್ಧ ನಿಲ್ಲಿಸಲು ಪುಟಿನ್ ಮುಂದಿಟ್ಟ ಬೇಡಿಕೆಗಳು ಬಹಿರಂಗ; ಉಕ್ರೇನ್​ಗೆ ಆತಂಕವೇಕೆ? ಇಲ್ಲಿದೆ ಮಾಹಿತಿ

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು