AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬ್ಲೂಟೂತ್ ಹೆಡ್ ಫೋನ್ ಬಳಸಲ್ಲ; ಇದಕ್ಕೂ ಇದೆ ಕಾರಣ

Kamala Harris ಕಮಲಾ ಹ್ಯಾರಿಸ್ ಬುದ್ಧಿವಂತೆ ಮತ್ತು ಆಕೆಗೆ ಅಪಾಯಗಳ ಬಗ್ಗೆ ತಿಳಿದಿದೆ ಎಂದು ಸಿಟಿಜನ್ ಲ್ಯಾಬ್ಸ್‌ನ ಹಿರಿಯ ಸಂಶೋಧಕ ಜಾನ್ ಸ್ಕಾಟ್ ರೇಟನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಬ್ಲೂಟೂತ್ ಅನ್ನು ಆಫ್ ಮಾಡುವ ಮೂಲಕ ಕಮಲಾ ಅಪಾಯವನ್ನು ಬಹಳಷ್ಟು ಕಡಿಮೆ ಮಾಡಿದ್ದಾರೆ.

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬ್ಲೂಟೂತ್ ಹೆಡ್ ಫೋನ್ ಬಳಸಲ್ಲ; ಇದಕ್ಕೂ ಇದೆ ಕಾರಣ
ಕಮಲಾ ಹ್ಯಾರಿಸ್
TV9 Web
| Edited By: |

Updated on: Dec 13, 2021 | 9:25 AM

Share

ಅಮೆರಿಕದ (United States)ಇತಿಹಾಸದಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳಾ ಉಪಾಧ್ಯಕ್ಷರಾಗಿದ್ದಾರೆ ಕಮಲಾ ಹ್ಯಾರಿಸ್ (Kamala Harris). ಅಂದು ಚುನಾವಣೆಯಲ್ಲಿ ಗೆದ್ದ ನಂತರ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡನ್ (Joe Biden) ಅವರಲ್ಲಿ ಕಮಲಾ, ‘ನಾವು ಅದನ್ನು ಸಾಧಿಸಿದೆವು’  (we did it, Joe) ಎಂದು ಫೋನ್ ಮೂಲಕ ಹೇಳಿದ್ದು ಗಮನ ಸೆಳೆದಿತ್ತು. ಫೋನ್‌ನಲ್ಲಿ ಮಾತನಾಡುತ್ತಿದ್ದರೂ ಕಮಲಾ ಹ್ಯಾರಿಸ್ ಆ ಸಮಯದಲ್ಲಿ ವಯರ್ಡ್ ಹೆಡ್‌ಸೆಟ್ (wired earphones) ಬಳಸಿದ್ದರು. ಅಷ್ಟೇ ಅಲ್ಲ ಕಮಲಾ ಹ್ಯಾರಿಸ್ ಹಲವು ಸಂದರ್ಭಗಳಲ್ಲಿ ವಯರ್ಡ್ ಹೆಡ್ ಸೆಟ್ ಬಳಸುತ್ತಿರುವುದು ಕಾಣಿಸಿದೆ. ಕಮಲಾ ಈ ರೀತಿ ವಯರ್ಡ್ ಹೆಡ್ ಸೆಟ್ ಬಳಸುತ್ತಿರುವುದಕ್ಕೂ ಕಾರಣವಿದೆ ಎಂದು ಪೊಲಿಟಿಕೊ ವರದಿ ಮಾಡಿದೆ. ಈ ವರದಿ ಪ್ರಕಾರ ಕಮಲಾ ಅವರು ತಂತ್ರಜ್ಞಾನ ಮತ್ತು ಭದ್ರತೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ.ಬ್ಲೂಟೂತ್ (Bluetooth) ಸಂಪರ್ಕಗಳನ್ನು ಹ್ಯಾಕ್ ಮಾಡಬಹುದು ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಹೇಳುತ್ತಾರೆ. ಸೈಬರ್ ಅಪರಾಧಿಗಳು ಬ್ಲೂಟೂತ್ ಸಂಪರ್ಕವನ್ನು ಹ್ಯಾಕ್ ಮಾಡಬಹುದು ಮತ್ತು ಸಾಧನದ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ವರದಿ ಹೇಳುತ್ತದೆ. ಬ್ಲೂಟೂತ್ ಮೂಲಕ  ದುರುದ್ದೇಶಪೂರಿತ ಕೋಡ್ ಅನ್ನು ಇನ್​​ಸ್ಟಾಲ್ ಮಾಡಬಹುದು ಮತ್ತು ಸಂಭಾಷಣೆಗಳನ್ನು ಆಲಿಸಬಹುದು ಅಂತಾರೆ ತಜ್ಞರು.

ಕಮಲಾ ಹ್ಯಾರಿಸ್ ಬುದ್ಧಿವಂತೆ ಮತ್ತು ಆಕೆಗೆ ಅಪಾಯಗಳ ಬಗ್ಗೆ ತಿಳಿದಿದೆ ಎಂದು ಸಿಟಿಜನ್ ಲ್ಯಾಬ್ಸ್‌ನ ಹಿರಿಯ ಸಂಶೋಧಕ ಜಾನ್ ಸ್ಕಾಟ್ ರೇಟನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಬ್ಲೂಟೂತ್ ಅನ್ನು ಆಫ್ ಮಾಡುವ ಮೂಲಕ ಕಮಲಾ ಅಪಾಯವನ್ನು ಬಹಳಷ್ಟು ಕಡಿಮೆ ಮಾಡಿದ್ದಾರೆ

ಕ್ಲೋಸ್ ಆಕ್ಸೆಸ್ ಅಟ್ಯಾಕ್ಸ್, ಬ್ಲೂಟೂತ್ ಟ್ರ್ಯಾಕಿಂಗ್ ಮೊದಲಾದವುಗಳನ್ನು  ತಜ್ಞರು ಎತ್ತಿ ತೋರಿಸುತ್ತಾರೆ. ಈ ವರ್ಷ ಜುಲೈನಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯು ಬ್ಲೂಟೂತ್ ತಂತ್ರಜ್ಞಾನದ ಬೆದರಿಕೆಗಳನ್ನು ವಿವರಿಸುವ ಸೈಬರ್ ಭದ್ರತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು.

ಬ್ಲೂಟೂತ್ ತಂತ್ರಜ್ಞಾನವು ಕಡಿಮೆ ದೂರದಲ್ಲಿ ಸಾಧನಗಳ ನಡುವೆ ನಿಸ್ತಂತುವಾಗಿ ಮಾಹಿತಿಯನ್ನು ರವಾನಿಸುತ್ತದೆ. ಈ ಸೌಲಭ್ಯವು ವೈಯಕ್ತಿಕ ಬಳಕೆಗೆ ತುಂಬಾ ಅನುಕೂಲಕರವಾಗಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಬ್ಲೂಟೂತ್ ಫೀಚರ್ ಬಳಸುವುದರಿಂದ ಸೈಬರ್ ಭದ್ರತಾ ಬೆದರಿಕೆಯನ್ನು ಉಂಟುಮಾಡಬಹುದು. ಸೈಬರ್ ಅಪರಾಧಿಗಳು ಸಕ್ರಿಯ ಬ್ಲೂಟೂತ್ ಸಂಕೇತಗಳನ್ನು ಸ್ಕ್ಯಾನ್ ಮಾಡಬಹುದು. ಆ ರೀತಿಯಲ್ಲಿ ಅವರು ಗುರಿ ಸಾಧನಕ್ಕೆ ಸಂಬಂಧಿಸಿದ ಮಾಹಿತಿಗೆ ಪ್ರವೇಶವನ್ನು ಹೊಂದಬಹುದು ಎಂದು ಎನ್ಎಸ್​​ಎ ಹೇಳುತ್ತದೆ.

ಪಾಸ್‌ವರ್ಡ್‌ಗಳು ಮತ್ತು ಅಂತಹ ಸೂಕ್ಷ್ಮ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಬ್ಲೂಟೂತ್ ಅನ್ನು ಬಳಸಬಾರದು ಎಂದು ಎನ್ಎಸ್ಎ ಹೇಳುತ್ತದೆ. ಈ ಕಾರಣದಿಂದಲೇ  ಕಮಲಾ ಹ್ಯಾರಿಸ್ ಅತೀವ ಜಾಗರೂಕರಾಗಿದ್ದು, ಬ್ಲೂಟೂತ್ ಹೆಡ್ ಸೆಟ್ ಬಳಸಲ್ಲ ಎಂದು ವರದಿ  ಹೇಳಿದೆ.

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ