ಮ್ಯಾನೇಜರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದ ಚೀನಾದ ಅಲಿಬಾಬಾ ಕಂಪನಿ
ನನ್ನ ಆರೋಪವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮತ್ತು ತನಿಖೆ ನಡೆಸುವುದಾಗಿ ಕಂಪನಿ ಹೇಳಿತ್ತು. ಆದರೆ ನಂತರ ನವೆಂಬರ್ ಅಂತ್ಯದಲ್ಲಿ ಏಕಾಏಕಿ ನನಗೆ ನೋಟಿಫಿಕೇಶನ್ ಕೊಟ್ಟು, ಕೆಲಸದಿಂದ ತೆಗೆದ ಬಗ್ಗೆ ಹೇಳಿದರು ಎಂದು ಝೌ ಹೇಳಿಕೊಂಡಿದ್ದಾರೆ.
ಮ್ಯಾನೇಜರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಮಹಿಳಾ ಉದ್ಯೋಗಿಯನ್ನು ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಕೆಲಸದಿಂದ ವಜಾಗೊಳಿಸಿದೆ. ಇ-ಕಾಮರ್ಸ್, ಚಿಲ್ಲರೆ ವ್ಯಾಪಾರ, ಇಂಟರ್ನೆಟ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಚೀನಾ ಮೂಲದ ಅಲಿಬಾಬಾ ಕಂಪನಿಯಲ್ಲಿ ಈ ಝೌ ಎಂಬ ಸರ್ನೇಮ್ ಇರುವ ಮಹಿಳೆ ಕೆಲಸ ಮಾಡುತ್ತಿದ್ದರು. ಅವರೇ ವಜಾಗೊಂಡ ಉದ್ಯೋಗಿಯಾಗಿದ್ದಾರೆ. ಈ ಬಗ್ಗೆ ದಹೆ ಡೈಲಿ ಎಂಬ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ನನ್ನ ಮೇಲೆ ಹಿರಿಯ ಮ್ಯಾನೇಜರ್ವೊಬ್ಬರು ಅತ್ಯಾಚಾರ ಮಾಡಿದ್ದರು. ಈ ಬಗ್ಗೆ ದೂರು ನೀಡಿದ್ದೆ. ಆದರೆ ಕಂಪನಿ ನನ್ನನ್ನು ವಜಾಗೊಳಿಸಿತು. ನವೆಂಬರ್ ಅಂತ್ಯದಲ್ಲಿ ಹಿರಿಯ ಮ್ಯಾನೇಜರ್ ವಿರುದ್ಧ ಸುಳ್ಳುಸುದ್ದಿ ಹಬ್ಬಿಸಿದ ಕಾರಣ ಕೆಲಸದಿಂದ ತೆಗೆಯುತ್ತಿರುವುದಾಗಿ ಕಂಪನಿ ಹೇಳಿತು ಎಂದು ಝೌ ತಿಳಿಸಿದ್ದಾರೆ. ಹಾಗೇ, ಈ ಬಗ್ಗೆ ಕಂಪನಿ ಕೊಟ್ಟ ಮೆಮೋವನ್ನೂ ಕೂಡ ಝೌ ಹಂಚಿಕೊಂಡಿದ್ದಾರೆ.
ನನ್ನ ಆರೋಪವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮತ್ತು ತನಿಖೆ ನಡೆಸುವುದಾಗಿ ಕಂಪನಿ ಹೇಳಿತ್ತು. ಆದರೆ ನಂತರ ನವೆಂಬರ್ ಅಂತ್ಯದಲ್ಲಿ ಏಕಾಏಕಿ ನನಗೆ ನೋಟಿಫಿಕೇಶನ್ ಕೊಟ್ಟು, ಕೆಲಸದಿಂದ ತೆಗೆದ ಬಗ್ಗೆ ಹೇಳಿದರು ಎಂದು ಝೌ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಝೌರನ್ನು ವಜಾಗೊಳಿಸಿದ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲೂ ಸಿಕ್ಕಾಪಟೆ ಚರ್ಚೆಗೆ ಕಾರಣವಾಗಿತ್ತು. ಅಂದಹಾಗೆ ಕೆಲಸದ ಟ್ರಿಪ್ಗೆ ಹೋಗಿದ್ದಾಗ ಮ್ಯಾನೇಜರ್ ಕುಡಿದ ಮತ್ತಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸುಮಾರು 8000 ಶಬ್ದಗಳ ಆರೋಪವನ್ನು ಈ ಮಹಿಳೆ ಮಾಡಿದ್ದರು. ಹಾಗೇ, ಕೆಲಸದಿಂದ ತೆಗೆಯುವಾಗ ಕಂಪನಿಯವರು ನೀಡಿದ ಪತ್ರದಲ್ಲಿ, ಮಹಿಳೆ ಹಿರಿಯ ಅಧಿಕಾರಿ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ಭಾರತೀಯ ಕ್ರೈಸ್ತ ಒಕ್ಕೂಟ ವಿರೋಧ; ಒಕ್ಕೂಟದಿಂದ ಉಪವಾಸ ಸತ್ಯಾಗ್ರಹ
Published On - 4:32 pm, Mon, 13 December 21