AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Omicron: ಲಸಿಕೆಯ ದಕ್ಷತೆಯನ್ನು ಕುಗ್ಗಿಸಲಿದೆ ಒಮಿಕ್ರಾನ್​, ಪ್ರಸರಣದ ವೇಗ ಡೆಲ್ಟಾಕ್ಕಿಂತಲೂ ಹೆಚ್ಚು: ಡಬ್ಲ್ಯೂಎಚ್​ಒ

ಒಮಿಕ್ರಾನ್​ ಲಸಿಕೆಯ ದಕ್ಷತೆಯನ್ನು ಕಡಿಮೆ ಮಾಡುವುದು ಸ್ಪಷ್ಟವಾಗಿದೆ. ಆದರೆ ಇದರ ಲಕ್ಷಣಗಳು ಅಷ್ಟೊಂದು ಗಂಭೀರ ಸ್ವರೂಪದ್ದಲ್ಲ ಎಂಬುದನ್ನು ನಮ್ಮ ಡಾಟಾ ಹೇಳುತ್ತದೆ ಎಂದು ಡಬ್ಲ್ಯೂಎಚ್​ಒ ಹೇಳಿದೆ.

Omicron: ಲಸಿಕೆಯ ದಕ್ಷತೆಯನ್ನು ಕುಗ್ಗಿಸಲಿದೆ ಒಮಿಕ್ರಾನ್​, ಪ್ರಸರಣದ ವೇಗ ಡೆಲ್ಟಾಕ್ಕಿಂತಲೂ ಹೆಚ್ಚು: ಡಬ್ಲ್ಯೂಎಚ್​ಒ
ಕೊರೊನಾ ಟೆಸ್ಟ್​ ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Dec 13, 2021 | 8:58 AM

Share

ಸದ್ಯ ವಿಶ್ವಕ್ಕೆ ತಲೆನೋವಾಗಿರುವುದು ಕೊರೊನಾ ವೈರಸ್​​(Coronavirus)ನ ಹೊಸ ರೂಪಾಂತರವಾದ ಒಮಿಕ್ರಾನ್​. ಒಮಿಕ್ರಾನ್ (Omicron) ಇದೀಗ ಭಾರತ ಸೇರಿ 63 ದೇಶಗಳಿಗೆ ವ್ಯಾಪಿಸಿದೆ. ಈ ತಳಿ ಡೆಲ್ಟಾದಷ್ಟು ಮಾರಣಾಂತಿಕ ಅಲ್ಲದೆ ಇದ್ದರೂ, ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಭಾನುವಾರ ಹೇಳಿದೆ. ಕೊರೊನಾ ಸೋಂಕು ಮತ್ತು ಹರಡುವಿಕೆಯನ್ನು ತಡೆಗಟ್ಟಲು ಈಗಾಗಲೇ ಹಾಕಿರುವ ಲಸಿಕೆಯ ದಕ್ಷತೆಯನ್ನು ಒಮಿಕ್ರಾನ್​ ಸೋಂಕು ಕಡಿಮೆ ಮಾಡುತ್ತದೆ ಎಂಬುದು ಪ್ರಾಥಮಿಕ ಪುರಾವೆಗಳಿಂದಲೇ ಸಾಬೀತಾಗಿದೆ ಎಂದೂ ಕೂಡ ಡಬ್ಲ್ಯೂಎಚ್​ಒ ತಿಳಿಸಿದೆ.  ಡೆಲ್ಟಾವೇ ಪ್ರಸರಣ ಸಮುದಾಯ ಮಾಡುವಷ್ಟು ಬಲಶಾಲಿಯಾಗಿದೆ. ಆದರೆ ಈ ಒಮಿಕ್ರಾನ್​ ಅದನ್ನೂ ಮೀರಿಸುವಷ್ಟು ಮಟ್ಟದಲ್ಲಿ ಹರಡಲಿದೆ ಎಂದು ಹೇಳಿದೆ. 

ಒಮಿಕ್ರಾನ್​ ಲಸಿಕೆಯ ದಕ್ಷತೆಯನ್ನು ಕಡಿಮೆ ಮಾಡುವುದು ಸ್ಪಷ್ಟವಾಗಿದೆ. ಆದರೆ ಇದರ ಲಕ್ಷಣಗಳು ಅಷ್ಟೊಂದು ಗಂಭೀರ ಸ್ವರೂಪದ್ದಲ್ಲ ಎಂಬುದನ್ನು ನಮ್ಮ ಡಾಟಾ ಹೇಳುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಒಮಿಕ್ರಾನ್​ ಲಕ್ಷಣ ಸೌಮ್ಯವಾಗಿದೆ ಅಥವಾ ಕೆಲವರಿಗೆ ಯಾವುದೇ ಲಕ್ಷಣಗಳೂ ಇಲ್ಲ ಎಂದು ಡಬ್ಲ್ಯೂಎಚ್​ಒ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಈಗಾಗಲೇ 63 ದೇಶಗಳಲ್ಲಿ ಒಮಿಕ್ರಾನ್​ ಕಾಣಿಸಿಕೊಂಡಿದ್ದರೂ ಕೂಡ ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್​ನಲ್ಲಿ ಪ್ರಸರಣದ ಪ್ರಮಾಣ ಸಿಕ್ಕಾಪಟೆ ಹೆಚ್ಚಾಗಿದೆ ಎಂದು ಹೇಳಿದೆ. ಹಾಗೇ, ಒಮಿಕ್ರಾನ್​ ಪ್ರತಿರಕ್ಷಣಾ ಪ್ರತಿಕ್ರಿಯೆಗೆ ಒಳಪಡುವ ಮಟ್ಟ ಕಡಿಮೆ ಇದೆ ಮತ್ತು ಪ್ರಸರಣದ ವೇಗ ಅಧಿಕವಾಗಿದೆ ಅಥವಾ ಎರಡರ ಸಂಯೋಜನೆಯಾಗಿದೆ. ಹಾಗಾಗಿ ಒಮಿಕ್ರಾನ್​ಗೆ ಸಂಬಂಧಪಟ್ಟ ದತ್ತಾಂಶದ ಕೊರತೆ ಇದೆ ಎಂದು ಹೇಳಿದೆ.

ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಲಕ್ಷಣಗಳು ಹೇಗಿವೆ? ಭಾರತದಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಹೆಚ್ಚು. ಅದನ್ನು ಬಿಟ್ಟರೆ, ದೆಹಲಿ, ಕೇರಳ, ಕರ್ನಾಟಕ, ಚಂಡಿಗಢ, ಆಂಧ್ರಪ್ರದೇಶದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಒಮಿಕ್ರಾನ್ ಪ್ರಕರಣಗಳು ಎಲ್ಲಾ ವಯೋಮಾನದವರಲ್ಲೂ ಕಂಡುಬರುತ್ತಿವೆ. ಒಂದೂವರೆ ವರ್ಷ ಹಾಗೂ ಮೂರು ವರ್ಷದ ಮಕ್ಕಳಲ್ಲೂ ಸೋಂಕು ಕಂಡುಬಂದಿದೆ. ಒಮಿಕ್ರಾನ್ ಪ್ರಕರಣಗಳಲ್ಲಿ ರೋಗಿಗಳಿಗೆ ಬಹುತೇಕ ಬಾರಿ ಯಾವುದೇ ಲಕ್ಷಣಗಳಿರುವುದಿಲ್ಲ. ಇದ್ದರೂ ಸೌಮ್ಯ ಪ್ರಮಾಣದಲ್ಲಿರುತ್ತದೆ. ಹೆಚ್ಚಿನ ರೋಗಿಗಳು ವಾರದೊಳಗೆ ಚೇತರಿಸಿಕೊಳ್ಳಲು ಆರಂಭಿಸುತ್ತಾರೆ. ಒಮಿಕ್ರಾನ್​ನ ಸಾಮಾನ್ಯ ಲಕ್ಷಣ ಲಘು ಜ್ವರ ಮತ್ತು ತೀವ್ರ ಸುಸ್ತು. ಭಾರತದಲ್ಲಿ ಕೆಲವು ಪ್ರಕರಣಗಳನ್ನು ಹೊರತುಪಡಿಸಿ, ಹೆಚ್ಚಿನ ಒಮಿಕ್ರಾನ್ ರೋಗಿಗಳು ವಿದೇಶಿ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ.

ಇದನ್ನೂ ಓದಿ: ಕ್ರಿಸ್​ಮಸ್​ಗೆ ಮನೆಯಲ್ಲೇ ಸುಲಭವಾಗಿ ಚಾಕೊಲೇಟ್ ಕೇಕ್ ಮಾಡಿ; ವಿಧಾನ ಹೀಗಿದೆ

Published On - 8:57 am, Mon, 13 December 21

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ