AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್​ಮಸ್​ಗೆ ಮನೆಯಲ್ಲೇ ಸುಲಭವಾಗಿ ಚಾಕೊಲೇಟ್ ಕೇಕ್ ಮಾಡಿ; ವಿಧಾನ ಹೀಗಿದೆ

ಮೊದಲು ಒಂದು ಮಧ್ಯಮ ಗಾತ್ರದ ಕುಕ್ಕರ್ ತೆಗೆದುಕೊಳ್ಳಿ. ಅದನ್ನ ಗ್ಯಾಸ್ ಮೇಲೆ ಇಡಿ. ಉರಿ ಸಣ್ಣದಾಗಿರಲಿ. ಅದಕ್ಕೆ ಅರ್ಧ ಕಪ್ ಪುಡಿ ಉಪ್ಪು ಹಾಕಿ. ಪುಡಿ ಉಪ್ಪು ಹಾಕಿದ ಬಳಿಕ ಉಪ್ಪಿನ ಮೇಲೆ ರಂಧ್ರವಿರುವ ಸ್ಟೀಲ್ ತಟ್ಟೆಯಿಂದ ಮುಚ್ಚಿ.

ಕ್ರಿಸ್​ಮಸ್​ಗೆ ಮನೆಯಲ್ಲೇ ಸುಲಭವಾಗಿ ಚಾಕೊಲೇಟ್ ಕೇಕ್ ಮಾಡಿ; ವಿಧಾನ ಹೀಗಿದೆ
ಚಾಕೊಲೇಟ್ ಕೇಕ್
Follow us
TV9 Web
| Updated By: sandhya thejappa

Updated on: Dec 13, 2021 | 8:45 AM

ಕೇಕ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಚಾಕೊಲೇಟ್ ಕೇಕ್ ಅಂದರೆ ಬಾಯಲ್ಲಿ ನೀರು ಬರುತ್ತೆ. ಈ ಬಾರಿ ಕ್ರಿಸ್ಮಸ್ ಪ್ರಯುಕ್ತ ನಿಮ್ಮ ಮನೆಯಲ್ಲಿ ಸ್ಪೆಷಲ್ ಆಗಿ ಚಾಕೊಲೇಟ್ ಕೇಕ್ ಮಾಡಿ. ವಿಧಾನ ಕೂಡಾ ಸುಲಭವಾಗಿದೆ. ಹಬ್ಬಕ್ಕೆ ಚಾಕೊಲೇಟ್ ಕೇಕ್ ಮಾಡುವ ಮೂಲಕ ಕ್ರಿಸ್ಮಸ್ ಸಂಭ್ರಮವನ್ನು ಹೆಚ್ಚಿಸಿ. ಚಾಕೊಲೇಟ್ ಕೇಕ್ ಮಾಡಲು ಬೇಕಾಗುವ ಸಾಮಾಗ್ರಿಗಳನ್ನ ಮತ್ತು ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

ಹಂತ- 1 ಮೊದಲು ಒಂದು ಮಧ್ಯಮ ಗಾತ್ರದ ಕುಕ್ಕರ್ ತೆಗೆದುಕೊಳ್ಳಿ. ಅದನ್ನ ಗ್ಯಾಸ್ ಮೇಲೆ ಇಡಿ. ಉರಿ ಸಣ್ಣದಾಗಿರಲಿ. ಅದಕ್ಕೆ ಅರ್ಧ ಕಪ್ ಪುಡಿ ಉಪ್ಪು ಹಾಕಿ. ಪುಡಿ ಉಪ್ಪು ಹಾಕಿದ ಬಳಿಕ ಉಪ್ಪಿನ ಮೇಲೆ ರಂಧ್ರವಿರುವ ಸ್ಟೀಲ್ ತಟ್ಟೆಯಿಂದ ಮುಚ್ಚಿ. ಬಳಿಕ ಕುಕ್ಕರ್ ಮುಚ್ಚಳವನ್ನು ರಬ್ಬರ್ ಮತ್ತು ವಿಶಲ್ ಹಾಕದೇ ಮುಚ್ಚಿ. ಸ್ವಲ್ಪ ಹೊತ್ತು ಪ್ರೀ ಹೀಟ್ ಮಾಡಬೇಕು.

ಹಂತ -2 ನಂತರ ಇನ್ನೊಂದು ಕೇಕ್ ಆಕಾರ ಬರುವ ಪಾತ್ರೆಯನ್ನು ತೆಗೆದುಕೊಳ್ಳಿ. ಅದರ ಒಳಗೆ ವೃತ್ತಾಕಾರವಾಗಿ ಕತ್ತರಿಸಿದ ಟಿಶ್ಯು ಪೇಪರ್ ಹಾಕಿ.

ಹಂತ- 3 ಮತ್ತೊಂದು ಬೌಲ್​ಗೆ ಒಂದೂವರೆ ಕಪ್ ಮೈದಾ ಹಿಟ್ಟು ಹಾಕಿ. ಅದಕ್ಕೆ ಒಂದು ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್ ಹಾಕಿ. ಒಂದು ಟೇಬಲ್ ಸ್ಪೂನ್ ಬೇಕಿಂಗ್ ಪೌಡರ್, ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡ ಹಾಕಿ. ಮೂರು ಟೇಬಲ್ ಸ್ಪೂನ್ ಕೊಕೊ ಪೌಡರ್ ಹಾಕಿ. ಇವೆಲ್ಲವನ್ನೂ ಜರಡಿಯಿಂದ ಸೋಸಿಕೊಳ್ಳಬೇಕು. ಕಾರಣ ಪುಡಿಗಳಲ್ಲಿ ಉಂಡೆ ಉಂಡೆಯಿದ್ದರೆ ಕೇಕ್ ಚೆನ್ನಾಗಿರುವುದಿಲ್ಲ.

ಹಂತ- 4 ಒಂದು ಬೌಲ್​ಗೆ 1 ಕಪ್ ಸಕ್ಕರ್, 1/4 ಕಪ್ ಮೊಸರು, 1/4 ಕಪ್ ಹಾಲು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ 1/4 ಕಪ್ ಅಡುಗೆ ಎಣ್ಣೆ ಹಾಕಿ. ಬಳಿಕ ಚಾಕೊಲೇಟ್ ಸಿರಪ್ ಹಾಕಿ, ವೆನಿಲ್ಲಾ ಸಾರ ಒಂದು ಟೇಬಲ್ ಸ್ಪೂನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮೂರನೇ ಹಂತದಲ್ಲಿ ಸಿದ್ಧಪಡಿಸಿದ ಮಿಶ್ರಣಕ್ಕೆ ಹಾಕಿ. ನಂತರ ಮತ್ತೆ ಚೆನ್ನಾಗಿ ಕಲೆಸಬೇಕು. ಮೆಲ್ಟ್ ಆಗಿರುವ ಚಾಕೊಲೇಟ್ನಂತೆ ಮಿಶ್ರಣ ಸಿದ್ಧವಾಗುತ್ತದೆ. ನಂತರ ಸ್ವಲ್ಪ ಹಾಲು, ಒಂದು ಟೇಬಲ್ ಸ್ಪೂನ್ ವೆನಿಗಾರ್ ಹಾಕಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ.

ಹಂತ-5 ಮೇಲಿನ ಮಿಶ್ರಣವನ್ನು ಕೇಕ್ ಮಾಡಲು ಸಿದ್ಧಪಡಿಸಿ ಪಾತ್ರೆಗೆ ಹಾಕಿ. ನಂತರ ಇದನ್ನು ಉಪ್ಪು ಹಾಕಿದ್ದ ಕುಕ್ಕರ್ ಒಳಗೆ ಇಡೀ. 35ರಿಂದ 40 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುಕ್ಕರ್​ನಲ್ಲಿ ಬೇಯಿಸಬೇಕು. (ಕುಕ್ಕರ್​ಗೆ ವಿಶಲ್ ಮತ್ತು ಬೆಲ್ಟ್ ಹಾಕಬಾರದು)

ಹಂತ- 6 ಒಂದು ಬೌಲ್​ಗೆ 100 ml ಅಮುಲ್ ಫ್ರೆಶ್ ಕ್ರೀಮ್ ಹಾಕಿಕೊಳ್ಳಿ. ಇದನ್ನು ಸಣ್ಣ ಉರಿಯಲ್ಲಿ ಒಂದು ಕುದಿ ಬರುವವರೆಗೆ ಬೇಯಿಸಬೇಕು. ಇನ್ನೊಂದು ಬೌಲ್​ಗೆ 100 ಗ್ರಾಮ್​ಗೆ ಚಾಕೊ ಚಿಪ್ಸ್ ಹಾಕಿ. ಈ ಚೋಕೊ ಚಿಪ್ಸ್ಗೆ ಬಿಸಿ ಮಾಡಿದ ಫ್ರೆಶ್ ಕ್ರೀಮಮ್ನ ಹಾಕಿ. ಎರಡು ನಿಮಿಷ ಒಂದು ಪ್ಲೇಟ್ನಿಂದ ಮುಚ್ಚಿಡಬೇಕು. ಎರಡು ನಿಮಿಷದ ಬಳಿಕ ಒಂದು ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ. ಚಾಕೊ ಚಿಪ್ಸ್ ಕರುಗುತ್ತದೆ. ಇದಕ್ಕೆ ಒಂದು ಚಮಚ ಬೆಣ್ಣೆ ಹಾಕಿ ಎರಡು ಗಂಟೆಗಳ ಕಾಲ ರೂಮ್ ಟೆಂಪ್ರೆಚರ್​ನಲ್ಲಿ ತಣ್ಣಗಾಗಲು ಬಿಡಿ.

ಹಂತ- 7 ಕುಕ್ಕರ್​ನಲ್ಲಿ ಹಾಕಿದ ಮಿಶ್ರಣ ಕೇಕ್ ರೀತಿ ಬಂದಾಗ ಅದನ್ನು ಹೊರಗೆ ತೆಗೆದು 5 ನಿಮಿಷ ಹಾಗೇ ಬಿಡಿ. ತಣ್ಣಗಾದ ಬಳಿಕ ಮೇಲಿನ ಒಂದು ಲೇಯರ್ ಚಾಕುವಿನಿಂದ ಕತ್ತರಿಸಿ. ಕೆಳಗಿನ ಲೇಯರ್​ಗೆ ಆರನೇ ಹಂತದಲ್ಲಿ ಸಿದ್ಧಪಡಿಸಿದ ಚಾಕೊಲೇಟ್ ಮಿಶ್ರಣವನ್ನು ಹಾಕಿ. ಪುನಃ ಎರಡು ಲೇಯರ್ನ ಜೋಡಿಸಿ. ಮೇಲಿಂದ ಕೇಕ್ ಮೇಲೆ ಚಾಕೊಲೇಟ್ ಮಿಶ್ರಣವನ್ನು ಸುರಿಯಿರಿ. 3 ಗಂಟೆಗಳ ಕಾಲ ಪ್ರಿಡ್ಜ್​ನಲ್ಲಿ ಇಡಿ. ನಂತರ ಕತ್ತರಿಸಿ ಮನೆಯವರೊಂದಿಗೆ ತಿನ್ನಿ.

ಇದನ್ನೂ ಓದಿ

Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು

Diet Tips: ಡಯೆಟ್​ ಸಮಯದಲ್ಲಿ ಹಸಿವನ್ನು ನಿವಾರಿಸಿಕೊಳ್ಳಲು ಈ ಆಹಾರವನ್ನು ಸೇವಿಸಿ

ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!